
ವರದಿ :-ವಡ್ಡರಕೊಪ್ಪಲು ಶಿವರಾಮು.
ಕೆ.ಆರ್.ನಗರ : ಕ್ಷೇತ್ರದ ವ್ಯಾಪ್ತಿಯ ವಿವಿಧ ನಾಲೆಗಳ ಆಧುನೀಕರಣ ಮತ್ತು ಅಭಿವೃದ್ದಿಗೆ 166 ಕೋಟಿ ಅನುದಾನ ತಂದಿದ್ದು ಹಂತ ಹಂತವಾಗಿ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ರೈತರಿಗೆ ಅನುಕೂಲ ಕಲ್ಪಿಸುವುದಾಗಿ ಶಾಸಕ ಡಿ.ರವಿಶಂಕರ್ ಹೇಳಿದರು.
ತಾಲೂಕಿನ ಕಗ್ಗೆರೆ ಗ್ರಾಮದ ಬಳಿ ಕೈಗೊಂಡಿರುವ ರಾಮಸಮುದ್ರ ಉಪ ನಾಲೆಗೆ 43 ಕೋಟಿ ರೂಗಳ ವೆಚ್ಚದಲ್ಲಿ ಕೈಗೊಂಡಿರುವ ಆಧುನೀಕರಣ ಕಾಮಗಾರಿ ಪರಿಶೀಲಿಸಿ ನಂತರ ನಡೆದ ಕಾಮಗಾರಿಯಲ್ಲಿ ಮಾತನಾಡಿದ ಅವರು ಈ ಅನುದಾನದಲ್ಲಿ 16 ಕಿ.ಮೀ ಕಾಮಗಾರಿ ಮಾಡಲಾಗುತ್ತಿದೆ ಎಂದರು.

ಸರ್ಕಾರದಿಂದ ಜಲಸಂಪನ್ಮೂಲ ಇಲಾಖೆಯ ಮೂಲಕ ರಾಜ್ಯದ 224 ಕ್ಷೇತ್ರಗಳಿಗೆ 6 ಸಾವಿರ ಕೋಟಿ ರೂ ಅನುದಾನ ಬಿಡುಗಡೆ ಮಾಡಿದ್ದು ಆ ಪೈಕಿ ನಮ್ಮ ಕ್ಷೇತ್ರಕ್ಕೆ 166 ಕೋಟಿ ರೂ ಬಿಡುಗಡೆಯಾಗಿದ್ದು 43 ಕೋಟಿ ರೂಗಲ ವೆಚ್ಚದ ಕಾಮಗಾರಿಪ್ರಗತಿಯಲ್ಲಿದ್ದು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಆಧ್ಯತೆ ಮೇರೆಗೆ ಕೆಲಸಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ರೈತರು ಸುಭಿಕ್ಷವಾಗಿರುವ ದೇಶ ಅಭಿವೃದ್ದಿ ಪಥದ ಸಾಗಿ ಆಹಾರ ಭದ್ರತೆಯಲ್ಲಿ ಸ್ವಾಬಲಂನೆ ಸಾಧಿಸಲು ಸಾಧ್ಯವಾಗುವುದಿಂದ ನಮ್ಮ ಸರ್ಕಾರ ಅವರ ಅನುಕೂಲ ಮತ್ತು ಏಳಿಗೆಗೆ ವಿವಿಧ ಇಲಾಖೆಯ ಗಳ ಮೂಲಕ ಹತ್ತಾರು ಸಾವಿರ ಕೋಟಿ ರೂಗಳನ್ನು ನೀಡುತ್ತಿದ್ದು ಇತರ ರಾಜ್ಯಗಳಿಗೆ ಮಾದರಿಯಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಲೋಕೋಪಯೋಗಿ ಇಲಾಖೆ ವತಿಯಿಂದ ಕ್ಷೇತ್ರದ ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕುಗಳ ವಿವಿಧ ಗ್ರಾಮಗಳ ಪರಿಮಿತಿ ರಸ್ತೆಯ ಅಭಿವೃದ್ಧಿಗೆ ಎಸ್ ಸಿಪಿ ಎಸ್ ಟಿಪಿ ಯೋಜನೆಯಡಿ 3 ಕೋಟಿ ರೂ ನೀಡಲಾಗಿದ್ದು ಮುಂದಿನ ದಿನಗಳಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಅನುದಾನ ಒದಗಿಸುವ ಭರವಸೆಯನ್ನು ಸಚಿವರಾದ ಹೆಚ್.ಸಿ.ಮಹದೇವಪ್ಪನವರು ನೀಡಿದ್ದಾರೆ ಎಂದು ಪ್ರಕಟಿಸಿದರು.
ಜನಸಂಪನ್ಮೂಲ ಇಲಾಖೆಯ ಅಧಿಕಾರಿಗಳು ನಾಲೆಯ ಮೇಲೆ ಸಂಚರಿಸಿ ರೈತರೊಂದಿಗೆ ಸಂಪರ್ಕ ಸಾಧಿಸಿ ಅವರ ಜಮೀನುಗಳ ಕೊನೆಯ ಭಾಗದವರೆಗೂ ಸರಾಗವಾಗಿ ನೀರು ಹರಿಯುವಂತೆ ನೋಡಿಕೊಳ್ಳಬೇಕು ಎಂದು ಶಾಸಕರು ತಾಕೀತು ಮಾಡಿದರು.

ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಹೆಚ್ಚು ಹಣ ಮತ್ತು ಆಧ್ಯತೆ ನೀಡಿದ್ದರಿಂದ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ತರಲು ವಿಳಂಬವಾಗಿತ್ತು ಆದರೆ ಈಗ ಅಗತ್ಯ ಹಣ ಬಿಡುಗಡೆಯಾಗುತ್ತಿದ್ದು ಜನತೆ ಮುಂದಿನ ದಿನಗಳ ಇದೇ ರೀತಿ ಸಹಕಾರ ನೀಡಬೇಕು ಮನವಿ ಮಾಡಿದರು.
ಫ್ಲೆಕ್ಸ್ ಹರಿದಿದ್ದಕ್ಕೆ ಪ್ರತಿಕ್ರಿಯೆ: ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಆಳವಡಿಸಿದ್ದ ತಮ್ಮ ಭಾವ ಚಿತ್ರವಿದ್ದ ಫ್ಲೆಕ್ಸ್ ಹರಿದಿದ್ದಕ್ಕೆ ತಣ್ಣನೆಯ ಪ್ರತಿಕ್ರಿಯೆ ನೀಡಿದ ಶಾಸಕ ಡಿ.ರವಿಶಂಕರ್ ರಾಜಕೀಯ ನಾಯಕರುಗಳು ಸಭೆ ಸಮಾರಂಭ ನಡೆಸುವಾಗ ಮತ್ತು ಅಭಿವೃದ್ಧಿ ಕೆಲಸ ಮಾಡುವಾಗ ಫ್ಲೆಕ್ಸ್ ಆಳವಡಿಸುವುದು ಸಹಜ ಆದ್ದರಿಂದ ಯಾವ ಪಕ್ಷದವರು ಅವರಿವರ ಫ್ಲೆಕ್ಸ್ ಗಳನ್ನು ಹರಿಯಬಾರದು ಎಂದು ಸೂಚ್ಯವಾಗಿ ನುಡಿದರಲ್ಲದೆ ಕಳೆದ ಒಂದು ತಿಂಗಳ ಹಿಂದೆ ಬೇರೆ ಪಕ್ಷದವರ ಫ್ಲೆಕ್ಸ್ ಅನ್ನು ನಮ್ಮ ಪಕ್ಷದವರು ಹರಿದು ಹಾಕಿದ್ದಾರೆಂದು ರಾಜ್ಯ ಮಟ್ಟದಲ್ಲಿ ಪ್ರಚಾರ ಮಾಡಿಸಲಾಯಿತ್ತು ಆದರೆ ಅಂತಹ ಕೆಲಸವನ್ನು ನಾನು ಮಾಡಲ್ಲ ಎಂದರು.

ಟಿಎಪಿಸಿಎಂಸಿ ಮಾಜಿ ಅಧ್ಯಕ್ಷ ಎಸ್.ಸಿದ್ದೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಸ್.ಮಹದೇವ್, ಉದಯಶಂಕರ್, ತಾಲೂಕು ಕಾಂಗ್ರೆಸ್ ಎಸ್ ಟಿ ಘಟಕದ ಅಧ್ಯಕ್ಷ ಮಹದೇವನಾಯಕ, ವಕ್ತಾರ ಸೈಯದ್ ಜಾಬೀರ್, ಒಬಿಸಿ ಘಟಕದ ಅಧ್ಯಕ್ಷ ದೆಗ್ಗನಹಳ್ಳಿಆನಂದ್ ಯುವ ಕಾಂಗ್ರೆಸ್ ಅಧ್ಯಕ್ಷ ಹೇಮಂತ್, ತಾಲೂಕು ಕುರುಬರ ಸಂಘದ ಅಧ್ಯಕ್ಷ ಜೆ.ಶಿವಣ್ಣ, ಜಲಸಂಪನ್ಮೂಲ ಇಲಾಖೆಯ ಕಾರ್ಯಪಾಲಕ ಅಭಿಯಂತರ ಕುಶುಕುಮಾರ್, ಸಹಾಯಕ ಕಾರ್ಯಪಾಲಕ ಅಭಿಯಂತರ ಆಯಾಜ್ ಪಾಷ, ಸಹಾಯಕ ಅಭಿಯಂತರ ಕಿರಣ್, ಮುಖಂಡರಾದ ರಾಜೇಗೌಡ, ದೇವರಾಜು, ಬಸವೇಶ, ಸಂಜಯ್ ತಿಲಕ್, ಸುನೀಲ್, ಪುಟ್ಟರಾಜು, ತಾಂಡವಮೂರ್ತಿ, ಅಶೋಕ್, ಮಹದೇವಯ್ಯ ಮತ್ತಿತರರು ಇದ್ದರು.





