HOMENews

ಮಹಾರಾಣಿ ಮಹಿಳಾ ಕಲಾ ಕಾಲೇಜಿಗೆ 10 ಹೊಸ ಕೊಠಡಿ, ಅಂಧ ವಿದ್ಯಾರ್ಥಿಗಳಿಗೆ 23 ಕಂಪ್ಯೂಟರ್ ಹಸ್ತಾಂತರ – ಶಾಸಕ ಕೆ. ಹರೀಶ್ ಗೌಡ

ಮೈಸೂರು :- ಮಹಾರಾಣಿ ಮಹಿಳಾ ಕಲಾ ಕಾಲೇಜಿಗೆ 10 ಹೊಸ ಕೊಠಡಿಗಳನ್ನು ಹಾಗೂ ಅಂಧ ವಿದ್ಯಾರ್ಥಿಗಳ ಕಲಿಕೆಗಾಗಿ 23 ಕಂಪ್ಯೂಟರ್, ಟೇಬಲ್, ಕುರ್ಚಿಗಳನ್ನು ಹಸ್ತಾಂತರ ಮಾಡಿದ – ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ. ಹರೀಶ್ ಗೌಡ

ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ. ಹರೀಶ್ ಗೌಡ ರವರು ಮಹಾರಾಣಿ ಮಹಿಳಾ ಕಲಾ ಕಾಲೇಜಿನಲ್ಲಿ ದಿನಾಂಕ: 19-02-2026 ರಂದು ಕಾಲೇಜು ಅಭಿವೃದ್ಧಿ ಮಂಡಳಿ (ಸಿ.ಡಿ.ಸಿ) ಯನ್ನು ನಡೆಸಿದರು.  ಈ ಸಂದರ್ಭದಲ್ಲಿ ಕಾಲೇಜಿನ ಅಧ್ಯಾಪಕರು ಹಾಗೂ ವಿದ್ಯಾರ್ಥಿನಿಯರು ಕೊಠಡಿಗಳ ಸಮಸ್ಯೆ ಬಗ್ಗೆ ಸಿ.ಡಿ.ಸಿ ಅಧ್ಯಕ್ಷರೂ ಆದ ಕೆ. ಹರೀಶ್ ಗೌಡ ರವರ ಬಳಿ ಹೇಳಿಕೊಂಡರು.  ಸಭೆಯಲ್ಲಿ ಹಾಜರಿದ್ದ ಕರ್ನಾಟಕ ಹೌಸಿಂಗ್ ಬೋರ್ಡ್ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಕೃಷ್ಣಪ್ಪ ರವರಿಗೆ ಹೊಸ ಕಟ್ಟಡದಲ್ಲಿ ಪೂರ್ಣಗೊಂಡಿರುವ ಕೊಠಡಿಗಳನ್ನು ಕೂಡಲೇ ಹಸ್ತಾಂತರಿಸಲು ಕ್ರಮ ವಹಿಸುವಂತೆ ಸೂಚಿಸಿದರು.

ಕಾಲೇಜಿನ ದಿವ್ಯಾಂಗ ವಿದ್ಯಾರ್ಥಿನಿಯರ ಬಳಕೆಗಾಗಿ ಮೈಸೂರು ಮಹಾನಗರ ಪಾಲಿಕೆಯ ವತಿಯಿಂದ ವಿಕಲಚೇತನರ ಸಮುದಾಯ ಕಾರ್ಯಕ್ರಮ ಶೇ. 5 ರ ಅನುದಾನದಡಿಯಲ್ಲಿ 23 ಕಂಪ್ಯೂಟರ್, ಟೇಬಲ್, ಕುರ್ಚಿ ಗಳನ್ನು ನೀಡಲು ಬಾಕಿ ಇದ್ದು, ಅವುಗಳನ್ನು ಕೂಡಲೇ ಕೊಡಿಸಿಕೊಡಲು ಕ್ರಮವಹಿಸುವಂತೆ ದಿವ್ಯಾಂಗ ವಿದ್ಯಾರ್ಥಿನಿಯರ ಕೋರಿದ್ದರು.

ಅದರಂತೆ, ಈ ದಿನ, ದಿನಾಂಕ: 24-02-2026, ಮಂಗಳವಾರ ದಂದು ಮಹಾರಾಣಿ ಮಹಿಳಾ ಕಲಾ ಕಾಲೇಜಿಗಾಗಿ ಸುಮಾರು 14.00 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸುತ್ತಿರುವ ಹೊಸ ಕಟ್ಟಡದಲ್ಲಿ 24 ಕೊಠಡಿಗಳ ಪೈಕಿ ಈಗಾಗಲಿ ಸಂಪೂರ್ಣಗೊಂಡಿರುವ 10 ಕೊಠಡಿಗಳನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಅನಿತಾ ರವರಿಗೆ ಕರ್ನಾಟಕ ಹೌಸಿಂಗ್ ಬೋರ್ಡ್ ಅಭಿಯಂತರರುಗಳ ಮುಖಾಂತರ ಹಸ್ತಾಂತರಿಸಿದರು.

ಮೈಸೂರು ಮಹಾನಗರ ಪಾಲಿಕೆಯ ವತಿಯಿಂದ ವಿಕಲಚೇತನರ ಸಮುದಾಯ ಕಾರ್ಯಕ್ರಮ ಶೇ. 5 ರ ಅನುದಾನದಡಿಯಲ್ಲಿ ಕಂಪ್ಯೂಟರ್, ಟೇಬಲ್,  ಚೇರ್ಗಳನ್ನು – 23 ಸಂಖ್ಯೆ ಯನ್ನು ಪಾಲಿಕೆಯ ಎಡಿಸಿ ಯಾದ ಶ್ರೀಮತಿ ಕುಸುಮಾಕುಮಾರಿ ರವರ ಸಮಕ್ಷಮ ಕಾಲೇಜಿನ ಪ್ರಾಂಶುಪಾಲರಾದ ಡಾ. ಅನಿತಾ ರವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಪಾಲಿಕೆಯ ಎಡಿಸಿ ಯಾದ ಶ್ರೀಮತಿ ಕುಸುಮಾಕುಮಾರಿ, ಕರ್ನಾಟಕ ಹೌಸಿಂಗ್ ಬೋರ್ಡ್ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಕೃಷ್ಣಪ್, ಕಾಲೇಜಿನ ಪ್ರಾಂಶುಪಾಲರಾದ ಡಾ. ಅನಿತಾ, ಬೋಧಕ ವರ್ಗದವರು ಸಿಡಿಪಿ ಸದಸ್ಯರುಗಳು, ದೇವರಾಜ ಬ್ಲಾಕ್ ಅಧ್ಯಕ್ಷರಾದ ಶ್ರೀ ನಾಗಭೂಷಣ್ ಡಿ, ಮಾಜಿ ನಗರಪಾಲಿಕೆ ಸದಸ್ಯರು, ಇಂದಿರಾ ಗಾಂಧಿ ಬ್ಲಾಕ್ ಅಧ್ಯಕ್ಷರಾದ ಶ್ರೀ ರವಿ ಮಂಚೇಗೌಡನಕೊಪ್ಪಲು ರವರುಗಳು ಭಾಗಿಯಾಗಿದ್ದರು

Leave a Reply