HOMENews

135ನೇ ಅಂಬೇಡ್ಕರ್ ಜಯಂತಿ: ಬಲಗೈ ಸಮುದಾಯಗಳ ಒಕ್ಕೂಟದಿಂದ ಭವ್ಯ ಕಾರ್ಯಕ್ರಮ

ವರದಿ: ರವಿಚಂದ್ರ ಬೂದಿತಿಟ್ಟು

ಪಿರಿಯಾಪಟ್ಟಣ: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜನ್ಮದಿನೋತ್ಸವವನ್ನು  ತಾಲೂಕು ಆಡಳಿತದ ಜೊತೆಗೆ ಬಲಗೈ ಸಮುದಾಯಗಳ  ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ ಎಂದು ಈರಯ್ಯ   ತಿಳಿಸಿದರು.

ಪಟ್ಟಣದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಕಾರ್ಯಕ್ರಮಕ್ಕೆ ಬಹುಜನ ಜ್ಞಾನಪ್ರಕಾಶ ಸ್ವಾಮೀಜಿ, ಬೋಧಿ ರತ್ನ ಬಂತೇಜಿರವರು, ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವರಾದ ಕೆ. ವೆಂಕಟೇಶ್, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಹಚ್. ಸಿ ಮಾದೇವಪ್ಪ, ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಸಚಿವರಾದ ಎಂ. ಪ್ರಿಯಾಂಕ ಖರ್ಗೆ, ವಿಧಾನಪರಿಷತ್ ಸದಸ್ಯರಾದ  ಕೆ. ಶಿವಕುಮಾರ್, ಅರಗು ಮತ್ತು ಬಣ್ಣದ ಕಾರ್ಖಾನೆ ನಿಗಮ ಮಂಡಳಿ ಅಧ್ಯಕ್ಷರಾದ ಹಚ್. ಡಿ ಗಣೇಶ್, ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ನಿತಿನ್ ವೆಂಕಟೇಶ್, ಸೇರಿದಂತೆ ಹಲವು ಮುಖಂಡರು ಭಾಗವಹಿಸಲಿದ್ದಾರೆ , ಈ ಕಾರ್ಯಕ್ರಮಕ್ಕೆ  ತಾಲೂಕಿನ ಬಲಗೈ ಸಮುದಾಯದ  ಹಳ್ಳಿಯಲ್ಲಿರುವಂತಹ ಎಲ್ಲಾ ಮಹಿಳಾ ಸಂಘದವರು, ಎಲ್ಲಾ ಹಿರಿಯರು ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಅಭಿಮಾನಿಗಳು ಏಪ್ರಿಲ್ 29 ನೇ ತಾರೀಕು ನಡೆಯಲಿರುವ ಅಂಬೇಡ್ಕರ್ ಅವರ 135 ನೇ ಜಯಂತೋತ್ಸವದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ತಿಳಿಸಿದರು.

ಐಲಾಪುರ ರಾಮು ಮಾತನಾಡಿ  ಗ್ರಾಮೀಣ ಪ್ರದೇಶ ಮತ್ತು ನಗರ ಪ್ರದೇಶದಲ್ಲಿರುವ ನಮ್ಮ ಸಮಾಜದ ಬಂಧುಗಳಲ್ಲಿ ಮನವಿ ಏಪ್ರಿಲ್ 29 ನೇ ತಾರೀಕು  ಬೆಳಿಗ್ಗೆ 10:30 ಗಂಟೆಗೆ ಸರಿಯಾಗಿ ಎಲ್ಲರೂ ಪಟ್ಟಣದ ಎಪಿಎಂಸಿ ಆವರಣದ ಬಳಿ ಸೇರಬೇಕು ಆನಂತರ   ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರದೊಂದಿಗೆ  ವಿವಿಧ ಕಲಾತಂಡಗಳ ಜೊತೆಯಲ್ಲಿ ಭವ್ಯ ಮೆರವಣಿಗೆಯ ಮೂಲಕ ವೇದಿಕೆ ಕಾರ್ಯಕ್ರಮಕ್ಕೆ ಆಗಮಿಸಲಾಗುವುದು ಈ ಸಂದರ್ಭದಲ್ಲಿ ಎಲ್ಲರೂ ಅತ್ಯಂತ ಸಿಸ್ತುಬದ್ಧವಾಗಿ  ಬಂದು ವೇದಿಕೆ ಕಾರ್ಯಕ್ರಮದಲ್ಲಿ  ಎಲ್ಲರೂ ಭಾಗವಹಿಸ  ಬೇಕು , ಈ ಕಾರ್ಯಕ್ರಮದಲ್ಲಿ ನಮ್ಮ ಸ್ವಾಮೀಜಿಯವರ  ಸಮ್ಮುಖದಲ್ಲಿ ಮಾನ್ಯ ರಾಜ್ಯ ಸರ್ಕಾರದ  ನಾಯಕರ ಮುಂದೆ ನಮ್ಮ ಹಲವು ಬೇಡಿಕೆಗಳನ್ನ ಮನವಿ ಮಾಡಿಕೊಳ್ಳಬೇಕಾಗಿದೆ ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಸಮುದಾಯದ ಜನರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ಸಿಗೊಳಿಸಬೇಕು ಎಂದು ಮನವಿ ಮಾಡಿದರು.

ಸಭಾ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಅವರ ಜೀವನ, ವಿಚಾರಧಾರೆ ಮತ್ತು ಸಂವಿಧಾನದ ಮಹತ್ವದ ಕುರಿತು ತಜ್ಞರಿಂದ ವಿಶೇಷ ಉಪನ್ಯಾಸ  ವಿದ್ದು  ಅಂಬೇಡ್ಕರ್ ಅವರ ವಿಚಾರವಾದಗಳನ್ನು ತಿಳಿದು ಜೀವನದಲ್ಲಿ ಅನುಸರಿಸಿಕೊಳ್ಳಬೇಕೆಂದು ತಿಳಿಸಿದರು.

ನಂತರ ಮಾತನಾಡಿದ ಧನರಾಜ್ ಈಗಾಗಲೇ  ಎಲ್ಲ ಪದಾಧಿಕಾರಿಗಳು ವ್ಯಾಲೆಂಟರಿಯಾಗಿ ಪ್ರತಿ ಹಳ್ಳಿಗಳಿಗೆ ಭೇಟಿ ನೀಡಿ ಕಾರ್ಯಕ್ರಮದ ರೂಪರೇಷಗಳನ್ನು ತಿಳಿಸಿ  ಎಲ್ಲರನ್ನೂ ಆಹ್ವಾನಿಸಿ ದಾರೆ ಬಾಬಾಸಾಹೇಬರ ವಿಚಾರಗಳು ಕೇವಲ ಒಂದು ಸಮುದಾಯಕ್ಕೆ ಸೀಮಿತವಲ್ಲ, ಅವು ಇಡೀ ಮಾನವಕುಲಕ್ಕೆ ದಾರಿದೀಪ. ಈ ಹಿನ್ನೆಲೆಯಲ್ಲಿ ಜಾತಿ-ಮತ ಭೇದ ಮರೆತು ತಾಲೂಕಿನ ಎಲ್ಲಾ ಅಂಬೇಡ್ಕರ್ ಅಭಿಮಾನಿಗಳು ಈ ಜಯಂತಿ ಉತ್ಸವದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು, ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಿ. ತಮ್ಮಣ್ಣಯ್ಯ, ದೊಡ್ಡ ಹರವೆ ರಾಜಯ್ಯ, ಪಿ. ಮಹದೇವ್, ಶೇಖರ್, ಎ. ಎಸ್ ಸೋಮಶೇಖರ್, ಪಿ.ಪಿ ಮಹದೇವ್, ಕಾಂತರಾಜ್, ಗಿರೀಶ್ ಭೀಮ್ ಆರ್ಮಿ, ರಾಜು ಟಿ .ಎಸ್, ರಾಜೇಶ್ ಮೇಲೂರು, ಮಹದೇವ್ ಆರ್. ಡಿ, ಜಗದೀಶ್, ದೇವೇಂದ್ರ, ಶಿವರಾಜು ಸೆರಿದಂತೆ ಸಮಾಜದ ಹಲವು ಮುಖಂಡರು ಭಾಗವಹಿಸಿದ್ದರು.

Leave a Reply