HOMENews

28ರ ಜಿಮ್ ಟ್ರೈನರ್‌ಗೆ 42ರ ಆಂಟಿ ಜೊತೆ ಸಂಬಂಧ : ವಿವಾಹಿತೆಯ ಬ್ಲ್ಯಾಕ್‌ಮೇಲ್ ಆರೋಪ, ತನಿಖೆ ಆರಂಭ

ನೆಲಮಂಗಲ, ಏಪ್ರಿಲ್ 13: ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ವಾಜರಹಳ್ಳಿಯಲ್ಲಿ 28 ವರ್ಷದ ಜಿಮ್ ಟ್ರೈನರ್ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಾಹಿತೆಯೊಂದಿಗಿನ ವೈಯಕ್ತಿಕ ಸಂಬಂಧ ಮತ್ತು ಅದರ ನಂತರ ಉಂಟಾದ ಬ್ಲ್ಯಾಕ್‌ಮೇಲ್ ಆರೋಪಗಳು ಬೆಳಕಿಗೆ ಬಂದಿದ್ದು, ಪ್ರಕರಣ ಈಗ ಗಂಭೀರ ತಿರುವು ಪಡೆದಿದೆ.

ಮೃತ ಯುವಕನನ್ನು ದಿಲೀಪ್ (28) ಎಂದು ಗುರುತಿಸಲಾಗಿದೆ. ಅವರು ವಾಜರಹಳ್ಳಿಯಲ್ಲಿ ಜಿಮ್ ಟ್ರೈನರ್ ಆಗಿ ಕೆಲಸ ಮಾಡುತ್ತಿದ್ದರು. ಸ್ಥಳೀಯವಾಗಿ ಉತ್ತಮ ಪರಿಚಯ ಹೊಂದಿದ್ದ ದಿಲೀಪ್, ತನ್ನ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರೂ, ಇತ್ತೀಚಿನ ದಿನಗಳಲ್ಲಿ ಮಾನಸಿಕ ಒತ್ತಡದಲ್ಲಿದ್ದರೆಂದು ಕುಟುಂಬಸ್ಥರು ತಿಳಿಸಿದ್ದಾರೆ.

ಮಾಹಿತಿ ಪ್ರಕಾರ, ದಿಲೀಪ್‌ಗೆ ಜಿಮ್‌ಗೆ ಬರುತ್ತಿದ್ದ 42 ವರ್ಷದ ವಿವಾಹಿತ ಮಹಿಳೆಯೊಂದಿಗಿನ ಪರಿಚಯ ಬೆಳೆದಿತ್ತು. ಆ ಪರಿಚಯ ನಂತರ ಆತ್ಮೀಯ ಸಂಬಂಧಕ್ಕೆ ತಿರುಗಿಕೊಂಡಿತ್ತು ಎನ್ನಲಾಗುತ್ತಿದೆ. ಆದರೆ, ಇದೇ ಸಂಬಂಧ ನಂತರ ಸಮಸ್ಯೆಗೆ ಕಾರಣವಾಗಿದ್ದು, ಆ ಮಹಿಳೆ ದಿಲೀಪ್ ಅವರನ್ನು ಬ್ಲ್ಯಾಕ್‌ಮೇಲ್ ಮಾಡಲು ಆರಂಭಿಸಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

“ಹಣ ಹಾಗೂ ವೈಯಕ್ತಿಕ ವಿಷಯಗಳನ್ನು ನೆಪವಿಟ್ಟು ನಿರಂತರವಾಗಿ ಒತ್ತಡ ಹೇರಲಾಗುತ್ತಿತ್ತು. ಇದರಿಂದ ಮಾನಸಿಕವಾಗಿ ಕುಗ್ಗಿದ ದಿಲೀಪ್ ಈ ದುರಂತ ನಿರ್ಧಾರ ಕೈಗೊಂಡಿದ್ದಾರೆ” ಎಂದು ಕುಟುಂಬ ಸದಸ್ಯರು ಕಣ್ಣೀರಿನಿಂದ ಆರೋಪಿಸಿದ್ದಾರೆ.

ಘಟನೆ ನಡೆದ ದಿನ ದಿಲೀಪ್ ತಮ್ಮ ಪರಿಚಯಸ್ಥರಾದ ಸುನಿತಾ ಎಂಬವರಿಗೆ ಕರೆ ಮಾಡಿ ತನ್ನ ಪರಿಸ್ಥಿತಿ ವಿವರಿಸಿದ್ದಾನೆ ಎನ್ನಲಾಗಿದ್ದು, ಬಳಿಕ ತಮ್ಮ ವಾಸಸ್ಥಳದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಪ್ರಕರಣ ಬೆಳಕಿಗೆ ಬಂದಿದ್ದು ಕೂಡ ಆಘಾತಕಾರಿ ರೀತಿಯಲ್ಲಿ. ದಿಲೀಪ್ ಜೊತೆ ಸಂಬಂಧ ಹೊಂದಿದ್ದರೆಂದು ಹೇಳಲಾಗುತ್ತಿರುವ ಮಹಿಳೆ, ಇನ್‌ಸ್ಟಾಗ್ರಾಮ್ ಮೂಲಕ ದಿಲೀಪ್ ಸಹೋದರನಿಗೆ “ನಿನ್ನ ಸಹೋದರ ರೂಮಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ” ಎಂದು ಸಂದೇಶ ಕಳುಹಿಸಿದ್ದಾಳೆ. ಇದನ್ನು ನೋಡಿ ತಕ್ಷಣ ಸ್ಥಳಕ್ಕೆ ಧಾವಿಸಿದ ಸಹೋದರ, ಬಾಗಿಲು ಮುರಿದು ಒಳಗೆ ಹೋಗಿ

Leave a Reply