ವರದಿ:-ವಡ್ಡರಕೊಪ್ಪಲು ಶಿವರಾಮು.
ಕೆ ಆರ್ ನಗರ. ಜ. 27:- ಭ್ರಷ್ಟ ಕಾಂಗ್ರೆಸ್ ಸರ್ಕಾರ ರಾಜ್ಯದ ಖಜನೆ ಲೂಟಿ ಮಾಡಿದ್ದಲ್ಲದೆ 8 ಲಕ್ಷ ಕೋಟಿ ಸಾಲ ಮಾಡಿ ರಾಜ್ಯದ ಆಸ್ತಿಯನ್ನು ಅಡವಿಟ್ಟಿದ್ದಾರೆ ಎಂದು ಮಾಜಿ ಸಚಿವ ಸಾರಾ ಮಹೇಶ್ ಕಾಂಗ್ರೆಸ್ ಸರ್ಕಾರ ಮತ್ತು ಮುಖ್ಯಮಂತ್ರಿಯ ವಿರುದ್ಧ ಗುಡಿಗಿದರು.

ಪಟ್ಟಣದ ಈಶ್ವರ ನಗರದಲ್ಲಿ ನಡೆದ ಮರಳಿ ಮತ್ತೆ ಮನೆಗೆ ಎಂಬ ಕಾರ್ಯಕ್ರಮದಲ್ಲಿ ದಲಿತ ಮುಖಂಡ ಮತ್ತು ಪುರಸಭಾ ಮಾಜಿ ಅಧ್ಯಕ್ಷೆ ಗೀತಾ ಮಹೇಶ್ ಹಾಗೂ ಮಹೇಶ್ ಇಬ್ಬರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಮಾತನಾಡಿದ ಅವರು ರಾಜ್ಯದ ಇತಿಹಾಸದಲ್ಲಿ ದಿವಂಗತ ದೇವರಾಜ್ ಅರಸು ರವರ ದಾಖಲೆಯನ್ನು ಮುರಿದು ದಾಖಲೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಪ್ರತಿಯೊಬ್ಬ ಪ್ರಜೆಗೂ ಒಂದು ಲಕ್ಷಕ್ಕೂ ಹೆಚ್ಚು ಸಾಲದ ಹೊರೆಯನ್ನು ಹೊರಿಸಿದ ಸಾಧನೆ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು.
ಹಾಸನದಲ್ಲಿ ನಡೆದ ಒಂದು ಜೆಡಿಎಸ್ ಸಮಾವೇಶಕ್ಕೆ ಬಂದ ಜನಸಾಗರವನ್ನು ನೋಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಒಪ್ಪಿಕೊಂಡಿದ್ದಾರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಬಿಜೆಪಿ ಸಮ್ಮಿಶ್ರ ಸರ್ಕಾರ ಬರಲಿದೆ ಎಂದು ಆದರೆ ಎಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವುದಿಲ್ಲ ಎಂಬ ಹೇಳಿಕೆಯಿಂದಲೇ ತಿಳಿಯುತ್ತದೆ ಈ ಕಾಂಗ್ರೆಸ್ ಸರ್ಕಾರ ಮತ್ತು ಮುಖ್ಯಮಂತ್ರಿ ಸೇರಿದಂತೆ ಸಚಿವ ಸಂಪುಟದ ಸಚಿವರು ಹತಾಶರಾಗಿ ದಿನಕ್ಕೊಂದು ಹೇಳಿಕೆಯನ್ನು ನೀಡುತ್ತಾ ಲೂಟಿ ಹೊಡೆಯುವುದರಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದು ಟೀಕಿಸಿದರು.
ಕೆ ಆರ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕುಂಠಿತಗೊಂಡಿದ್ದು ವರ್ಗಾವಣೆ ಸೇರಿದಂತೆ ಹಣ ಮಾಡುವುದರಲ್ಲಿ ಕಾಲ ಕಳೆಯುತ್ತಿದ್ದು ನನ್ನ ಟೀಕಿಸುವ ಬರದಲ್ಲಿ 400 ಜನ ಹೊರಗುತ್ತಿಗೆದಾರರನ್ನು ಹೊರಗುತ್ತಿಗೆದಾರರನ್ನು ತೆಗೆದಿರುವ ಕಳಪೆ ಕಾಮಗಾರಿಯ ಬಗ್ಗೆ ಪ್ರತಿಭಟಿಸಿ ಪ್ರಶ್ನಿಸಿದರೆ ನಮ್ಮ ಅಭಿವೃದ್ಧಿಯನ್ನು ಸಹಿಸುತ್ತಿಲ್ಲ ಎಂದು ಹೇಳುತ್ತಾರೆ ನಾನು ಸುಮ್ಮನಿದ್ದರೆ ಸೋತ ನಂತರ ಕ್ಷೇತ್ರದಲ್ಲಿ ಇಲ್ಲ ಎನ್ನುತ್ತಾರೆ ಹೀಗಾದರೆ ವಿರೋಧ ಪಕ್ಷ ಪ್ರಶ್ನೆ ಮಾಡಬಾರದೇ ಎಂದು ಪ್ರಶ್ನಿಸಿದರು.
ಪುರಸಭೆ ಮಾಜಿ ಅಧ್ಯಕ್ಷೆ ಗೀತಾ ಮಹೇಶ್ ಮಾತನಾಡಿ ಪಟ್ಟಣದ ಪುರಸಭೆಗೆ 25 ವರ್ಷಗಳಿಂದ ಒಬ್ಬ ದಲಿತರನ್ನು ಅಧ್ಯಕ್ಷರನ್ನಾಗಿ ಮಾಡಿರಲಿಲ್ಲ ಆದರೆ ಸಾರಾ ಮಹೇಶ್ ಪುರಸಭೆಗೆ ಮೂರು ಜನ ದಲಿತರನ್ನು ಅಧ್ಯಕ್ಷರನ್ನಾಗಿ ಮಾಡುವ ಮೂಲಕ ನಮ್ಮನ್ನು ಮುಖ್ಯವಾಹಿನಿಗೆ ತಂದರು ಅಂತವರಿಂದ ದೂರವಾಗಿ ಬಹಳ ನೋವನ್ನು ಅನುಭವಿಸಿದ್ದೇನೆ ಆದ್ದರಿಂದ ನನ್ನನ್ನು ಕ್ಷಮಿಸಿಬಿಡಿ ಮಹೇಶಣ್ಣ ನನಗೆ ಯಾವುದೇ ಅಧಿಕಾರ ಹುದ್ದೆ ಬೇಡ ಒಬ್ಬ ಸಾಮಾನ್ಯ ಜೆಡಿಎಸ್ ಕಾರ್ಯಕರ್ತಯಾಗಿ ನಿಮ್ಮ ಅಭಿಮಾನಿಯಾಗಿ ನಿಮ್ಮ ಜೊತೆಯಲ್ಲಿ ಇರುತ್ತೇನೆ ಎಂದು ತಿಳಿಸಿದರು.
ಚುನಾವಣಾ ಸಂದರ್ಭದಲ್ಲಿ ಆಸೆ ಆಕಾಂಕ್ಷೆಗಳನ್ನು ಒಡ್ಡುವ ಜತೆಗೆ ಕೈ ಕಾಲು ಕಟ್ಟಿ ಅನುಕಂಪ ಗಿಟಿಸಿ ನಮ್ಮನ್ನು ಮರಳು ಮಾಡಿ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಂಡು ಈಗ ಜನ ಪರವಾಗಿ ಆಡಳಿತ ನಡೆಸದೆ ಅಧಿಕಾರಶಾಹಿ ವರ್ತನೆಯಿಂದ ಬೇಸತ್ತು ನಮ್ಮ ತಾತ ಮುತ್ತಾತರ ಕಾಲದಿಂದಲೂ ಇದ್ದ ಮಾತೃ ಪಕ್ಷ ಜೆಡಿಎಸ್ ಪಕ್ಷ ಹಾಗೂ ಮಾಜಿ ಸಚಿವ ಸಾರಾ ಮಹೇಶ್ ಅಣ್ಣನವರ ನೇತೃತ್ವದಲ್ಲಿ ಪಕ್ಷ ಸಂಘಟನೆ ಮಾಡುವ ಜವಾಬ್ದಾರಿಯನ್ನು ಹೊರುತ್ತೇನೆ ಎಂದು ತಿಳಿಸಿದರು.
ನವನಗರ ಅರ್ಬನ್ ಬ್ಯಾಂಕಿನ ಅಧ್ಯಕ್ಷ ಕೆ ಎನ್ ಬಸ್ಸಂತ್ ಮಾತನಾಡಿ ಇನ್ನು ಎರಡು ವರ್ಷ ಅಧಿಕಾರವಿರುವ ಮುಂಚಿತವಾಗಿ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಶಾಸಕರು ಮತ್ತು ಅವರ ತಂದೆಯ ದುರ್ವರ್ತನೆಯಿಂದ ಬೇಸತ್ತು ಜೆಡಿಎಸ್ ಪಕ್ಷಕ್ಕೆ ಸೇರುತ್ತಿರುವುದು ಆತಂಕಕಾರಿ ವಿಷಯವಾಗಿದ್ದರು ಯಾವುದೇ ಆಸೆ ಆಮಿಷಗಳಿಲ್ಲದೆ ಕೆ ಆರ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ತಂಡ ತಂಡೋಪ್ಪವಾಗಿ ಕುರುಬರು ದಲಿತರು ಸೂಕ್ಷ್ಮತೆ ಸೂಕ್ಷ್ಮ ಸಮಾಜದ ಯುವಕರು ಜೆಡಿಎಸ್ ಪಕ್ಷಕ್ಕೆ ಸೇರುತ್ತಿರುವುದು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಗೆಲುವು ನಿಶ್ಚಿತ ಎಂದು ಘೋಷಣೆ ಮಾಡಿದರು.
ಕಲಿಯುಗದ ಬಿಸ್ಮ ಎಂದು ಬಿಂಬಿತರಾಗಿರುವ ಮಾಜಿ ಪ್ರಧಾನ ಮಂತ್ರಿ ಎಚ್ ಡಿ ದೇವೇಗೌಡರು ಈ ವಯಸ್ಸಿನಲ್ಲಿ ಪಕ್ಷ ಸಂಘಟನೆ ಮತ್ತು ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಮಾಡುತ್ತಿರುವ ಹೋರಾಟ ಸಂಘಟನೆ ನಮ್ಮಂತ ಯುವಕರಿಗೆ ಹುರುಪು ತಂದಿದೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅದರ ನೇತೃತ್ವ ವಹಿಸುವುದು ಶತಸಿದ್ಧ ಅದೇ ರೀತಿ ಅವರ ಸಂಪುಟದಲ್ಲಿ ಸಾರಾ ಮಹೇಶ್ ಸಚಿವರಾಗುವುದು ಅಷ್ಟೇ ಸತ್ಯ ಎಂದು ನುಡಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷ ಅಚ್ಯುತಾನಂದ ಮಾಜಿ ಸದಸ್ಯ ಅಮಿತ್ ವಿ ದೇವರಟ್ಟಿ ದಲಿತ ಮುಖಂಡ ಹನೋ ಸೋಗೆ ನಾಗರಾಜ್ ತಾಲೂಕ್ ಜೆಡಿಎಸ್ ಅಧ್ಯಕ್ಷ ಹಂಪಾಪುರ ಕುಮಾರ್ ರಾಜ್ಯ ಜೆಡಿಎಸ್ ಕಾರ್ಯದರ್ಶಿ ಚಂದ್ರಶೇಖರ್ ಜಿಲ್ಲಾ ಮಹಿಳಾಅಧ್ಯಕ್ಷೆ ಅಧ್ಯಕ್ಷಾಯಿಣಿ ಮಾಜಿ ತಾಲೂಕ್ ಪಂಚಾಯತಿ ಸದಸ್ಯ ತಮ್ಮಣ್ಣ ನಗರ ಜೆಡಿಎಸ್ ಅಧ್ಯಕ್ಷ ಸಂತೋಷ್ ಗೌಡ ಜೆಡಿಎಸ್ ವಕ್ತಾರ ಕೆ ಎಲ್ ರಮೇಶ್ ವಕೀಲ ಅಂಕನಹಳ್ಳಿ ತಿಮ್ಮಪ್ಪ ಪುರಸಭಾ ಮಾಜಿ ಅಧ್ಯಕ್ಷ ಕಾಂತರಾಜು ಮುಖಂಡರುಗಳಾದ ಹೆಬ್ಬಾಳ ಶಿವಣ್ಣ ಕೃಷ್ಣ ಶೆಟ್ಟಿ ಪ್ರಕಾಶ್ ಸುರೇಶ್ ಸೋಮು ಡೈರಿ ಪ್ರಕಾಶ್ ಮಹದೇವ್ ಮುಂಡೂರು ಮನು ಗೌಡ ಅವಿನಾಶ್ ದೇವೇಂದ್ರ ರಮೇಶ ಜಗದೀಶ್ ಚಂದ್ರು ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.
ಫೋಟೋ. 01.02:- ಪುರಸಭಾ ಮಾಜಿ ಅಧ್ಯಕ್ಷ ಗೀತಾ ಮಹೇಶ್ ಮಾಜಿ ಸಚಿವ ಸಾರಾ ಮಹೇಶ್ ನೇತೃತ್ವದಲ್ಲಿ ಜೆಡಿಎಸ್ ಪಕ್ಷ ಸೇರ್ಪಡೆಯಾಗುತ್ತಿರುವುದು.
ಕೆ ಆರ್ ನಗರ. ಜ. 27:- ಕಾಂಗ್ರೆಸ್ ಪಕ್ಷ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರಿಗೆ ರಾಜಕೀಯ ಸ್ಥಾನಮಾನ ಸೇರಿದಂತೆ ಯಾವುದೇ ಹುದ್ದೆಯನ್ನು ನೀಡದೆ ಅವಮಾನ ಮಾಡಿದರೆ ಕಾಂಗ್ರೆಸ್ ಪಕ್ಷದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ದಲಿತ ಸಮುದಾಯಕ್ಕೆ ಮೀಸಲಾತಿ ಸೌಲಭ್ಯ ಸಿಗದಂತೆ ಮುಂದೆ 25 ವರ್ಷಗಳ ತನಕ ಒಬ್ಬ ದಲಿತ ಯುವಕನಿಗೆ ಅಧಿಕಾರ ಮತ್ತು ಉದ್ಯೋಗ ಸಿಗದಂತೆ ಮಾಡಿದ್ದಾರೆ ಎಂದು ಜಿಲ್ಲಾ ಪಂಚಾಯತಿಯ ಸ್ಥಾಯಿ ಸಮಿತಿ ಅಧ್ಯಕ್ಷ ಅಚ್ಚುತಾನಂದ್ ಕಾಂಗ್ರೆಸ್ ಪಕ್ಷ ಮತ್ತು ಮುಖ್ಯಮಂತ್ರಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಅವರು ಪಟ್ಟಣದಲ್ಲಿ ಜೆಡಿಎಸ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿ ಎಸ್ಸಿ ಸಮುದಾಯಕ್ಕೆ ಮೀಸಲಿಟ್ಟ 45 ಸಾವಿರ ಕೋಟಿ ಹಣವನ್ನು ಗ್ಯಾರೆಂಟಿಗೆ ಬಳಸಿಕೊಂಡಿದ್ದಾರೆ ಅಲ್ಲದೆ ಮೀಸಲಾತಿ ನೀಡುವ ವೇಳೆ ನಮ್ಮಲ್ಲಿಯೇ ತಾರತಮ್ಯ ಮಾಡುವ ಮೂಲಕ ಒಡೆದಾಳುವ ತಂತ್ರವನ್ನು ಅನುಸರಿಸಿದ್ದು ಈ ಮೀಸಲಾತಿ ನಮ್ಮ ನಮ್ಮ ದಲಿತ ವರ್ಗಕ್ಕೆ ಮಾರಕವಾಗಿದ್ದು ಇದರ ವಿರುದ್ಧ ಸಂಘಟಿತರಾಗಿ ಹೋರಾಟ ಮಾಡಲು ತಯಾರಾಗುವಂತೆ ತಿಳಿಸಿದರು.
ದಲಿತರು ಎಚ್ಚೆತ್ತುಕೊಳ್ಳದಿದ್ದರೆ ನಮ್ಮ ಹಳ್ಳವನ್ನು ನಾವೇ ತೋಡಿಕೊಂಡಂತಾಗುತ್ತದೆ ಅಹಿಂದ ವರ್ಗದ ಹೆಸರೇಳಿಕೊಂಡು ನಮ್ಮ ದಲಿತ ಸಮುದಾಯದ ಮತವನ್ನು ಪಡೆದು ನಮಗೆ ದ್ರೋಹ ವಂಚನೆ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನ ವಿರುದ್ಧ ಹೋರಾಟ ಮಾಡಲು ನಮ್ಮ ಸ್ವಾಮೀಜಿಯವರ ನೇತೃತ್ವದಲ್ಲಿ ಈ ಭಾಗದ ಎಲ್ಲಾ ದಲಿತ ಮುಖಂಡರ ಸಭೆಯನ್ನು ಕರೆಯಲಾಗುವುದು ಎಂದು ತಿಳಿಸಿದರು.
ಮೈಸೂರು ಜಿಲ್ಲೆಯಲ್ಲಿ ಅತ್ಯಂತ ಕೋಟಿಗಟ್ಟಲೆ ಬೆಲೆ ಬಾಳುವ ಆಸ್ತಿಯನ್ನು ನಮ್ಮ ಸಮುದಾಯಕ್ಕೆ ನೀಡಿರುವ ಮಾಜಿ ಸಚಿವ ಸಾರಾ ಮಹೇಶ್ ಅವರ ನಿರ್ಧಾರವನ್ನು ಶ್ಲಾಘಿಸಿದ ಅಚ್ಯುತಾ ನಂದ ಸಾರಾ ಮಹೇಶ್ ಅವರ ಅವಧಿಯಲ್ಲಿ ಅಂಬೇಡ್ಕರ್ ಸಮುದಾಯ ಭವನಕ್ಕೆ ನೀಡಿದ ಎರಡು ಕೋಟಿ ಹಣವನ್ನು ಬಿಟ್ಟರೆ ಇಲ್ಲಿಯ ತನಕ ಒಂದೇ ಒಂದು ರೂಪಾಯಿ ಹಣವನ್ನು ಈಗಿನ ಶಾಸಕ ಡಿ ರವಿಶಂಕರ್ ನೀಡಿಲ್ಲ ಹಾಗೂ ಈಗ ನೀಡಿರುವ ಒಂದು ಕೋಟಿ ಅನುದಾನ ನಿರ್ಮಿತ ಕೇಂದ್ರಕ್ಕೆ ನೀಡಿರುವುದನ್ನು ಖಂಡಿಸುತ್ತೇವೆ ಆ ಹಣ ಲೋಕೋಪಯೋಗಿ ಇಲಾಖೆಯ ವತಿಯಿಂದಲೇ ಸಮುದಾಯ ಭವನದ ಕೆಲಸ ಮಾಡಿಸಲಿ ಎಂದು ತಿಳಿಸಿದರು.
ಅಂಬೇಡ್ಕರ್ ಸಮುದಾಯ ಭವನದ ಸ್ಥಳವನ್ನು ಒತ್ತುವರಿ ಮಾಡಿಕೊಂಡ ಖಾಸಿಗೆ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳದೆ ಇದ್ದಿದ್ದು ಏಕೆ ನಮ್ಮ ಸಮುದಾಯದ ಮುಖಂಡರ ಜೊತೆಗೂಡಿ ಖಾಸಿಗೆ ವ್ಯಕ್ತಿಯು ಹಾಕಿಕೊಂಡಿದ್ದ ತಂತಿ ಬೇಲಿಯನ್ನು ಕಿತ್ತಸೆದು ಸಮುದಾಯ ಭವನಕ್ಕೆ ಶಾಶ್ವತ ತಡೆಗೋಡೆ ನಿರ್ಮಿಸಲು ಸಮುದಾಯದ ಮುಖಂಡರಿಂದ ಸಹಾಯ ಪಡೆದಿದ್ದು ನಾವೇ ವಿನಃ ಶಾಸಕರಲ್ಲ ಎಂದು ಶಾಸಕ ಡಿ ರವಿಶಂಕರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮುಂಬರುವ ಚುನಾವಣೆಗಳಲ್ಲಿ ನನ್ನ ಸಹೋದರರು ಮತ್ತು ಸಮುದಾಯದವರು ನಮ್ಮ ಬಗ್ಗೆ ಕಾಳಜಿ ಇಲ್ಲದ ವ್ಯಕ್ತಿ ತಮ್ಮ ಭಾಷಣಗಳ ಮೂಲಕ ವೇದಿಕೆಗಳಲ್ಲಿ ಡಾ. ಬಿಆರ್ ಅಂಬೇಡ್ಕರ್ ಅವರು ನಮ್ಮ ಮನೆಯ ದೇವರು ಎಂದು ಹೇಳಿದರೆ ಒಪ್ಪಲು ಸಾಧ್ಯವೇ ಆದ್ದರಿಂದ ಅಂಥವರನ್ನು ನಮ್ಮ ಗ್ರಾಮಗಳಿಗೆ ಭೇಟಿ ನೀಡಿದರೆ ಗೆರವು ಮಾಡಿ ಎಂದು ದಲಿತ ಸಮುದಾಯಕ್ಕೆ ಕರೆ ನೀಡಿದರು.




