HOMENews

ಹಳ್ಳಿ ಹಳ್ಳಿಗಳಲ್ಲಿ ಕಪ್ಪು ಪಟ್ಟಿ ಕಟ್ಟಿ ಭಾರತ ಅಮೆರಿಕ ವ್ಯಾಪಾರ ಒಪ್ಪಂದ ಪತ್ರ ಸುಡುವ ಚಳುವಳಿ

ಮೈಸೂರು. 11:- ಇದೇ 15 ರಂದು  ದೇಶಾದ್ಯಂತ ಹಳ್ಳಿ ಹಳ್ಳಿಗಳಲ್ಲಿ ಕಪ್ಪು ಪಟ್ಟಿ ಕಟ್ಟಿ ಭಾರತ ಅಮೆರಿಕ ವ್ಯಾಪಾರ ಒಪ್ಪಂದ ಪತ್ರ ಸುಡುವ ಚಳುವಳಿ – ರಾಷ್ಟ್ರೀಯ ನಾಯಕ ಜಗಜಿತ್ ಸಿಂಗ್  ದಲೈವಾಲಾ

ಸಂಯುಕ್ತ ಕಿಸಾನ್ ಮೋರ್ಚ ರೈತ ಜಾಗೃತಿ ಯಾತ್ರೆಯ ಸ್ವಾಗತ ಸಮಾವೇಶ ಸಚ್ಚಿದಾನಂದ  ಆಶ್ರಮದಲ್ಲಿ ನಡೆಯಿತು ಶ್ರೀ ಸಚ್ಚಿದಾನಂದ ಸ್ವಾಮೀಜಿ ಆರಂಭದಲ್ಲಿ ಮಾತನಾಡಿ ರೈತರು ದೇಶದ ಬೆನ್ನೆಲುಬು ರೈತರ ಆಹಾರವನ್ನು ಸೈನಿಕರು ಉಪಯೋಗಿಸಿಕೊಂಡು ದೇಶ ಕಾಯುತ್ತಾರೆ ರೈತರು ಸೈನಿಕರು ಎರಡು ಕಣ್ಣು ಗಳಂತೆ. ರೈತರ ಸಂಕಷ್ಟದ ನಿವಾರಣೆ ಸರ್ಕಾರ ಗಳು ವಿಶೇಷ ಗಮನ ಹರಿಸಬೇಕು ಎಂದರು

ಪ್ರಾಸ್ತಾವಿಕವಾಗಿ ಮಾತಾಡಿದ ಕುರುಬೂರು ಶಾಂತಕುಮಾರ್ ರೈತ ಜಾಗೃತಿ ಯಾತ್ರೆಯ ಉದ್ದೇಶದ ಬಗ್ಗೆ ತಿಳಿಸಿದರುಸ್ವಾತಂತ್ರ ಪೂರ್ವದಲ್ಲಿ ವ್ಯಾಪಾರಕ್ಕಾಗಿ ಬಂದ ಬ್ರಿಟಿಷರು ದೇಶ  ಆಳಿದರು ಈಗ ನಮ್ಮವರಿಂದಲೇ ಅಮೆರಿಕ ಜೊತೆ ವ್ಯಾಪಾರದ ಒಪ್ಪಂದ ಮಾಡಿ ರೈತರ ಮರಣ ಶಾಸನ ಬರೆಯುತ್ತಿದ್ದಾರೆ

ದೆಹಲಿ ಗಡಿಯಲ್ಲಿ ಒಂದು ವರ್ಷ ಚಳುವಳಿ ನಡೆಸಿದಾಗ 5 ಸಭೆ 5 ಗಂಟೆಗಳ ಕಾಲ ನಡೆಸಿದ ಕೇಂದ್ರ ಸಚಿವ ಪಿಯುಸ ಗೋಯಿಲ್, 5 ಕೃಷಿ ಉತ್ಪನ್ನಗಳಿಗೆ ಖಾತರಿಕೊಡುತ್ತೇನೆ ಎಂದು ಹೇಳಿ ಹೇಳಿದರು ನಾವು ಒಪ್ಪಲಿಲ್ಲ ಈ ಬಗ್ಗೆ ಏನು ಮಾಡಲಿಲ್ಲ

ಕಳೆದ ವರ್ಷ ಜಗಜಿತ್ ಸಿಂಗ್  ತಲೆ ವಾಲಾ ಹೋರಾಟ ನಡೆಸಿದಾಗ ಸರ್ವೋಚ್ಚ ನ್ಯಾಯಾಲಯ  ನವಾಬ್ಸಿಂಗ್ ಅಧ್ಯಕ್ಷತೆಯಲ್ಲಿ ಸಮಿತಿ ಮಾಡಿತು ಈ ಸಮಿತಿ ರೈತರ ಪರವಾಗಿ ವರದಿ ಸಲ್ಲಿಸಿದೆ ಯಾವುದೇ ತೀರ್ಮಾನ ಆಗಿಲ್ಲ

31 ಜನರ ಸಂಸದೀಯ ಸಮಿತಿ ಸರ್ಕಾರಕ್ಕೆ ವರದಿ ಕೊಟ್ಟಿದೆ ಎಂಎಸ್ಪಿ ಗ್ಯಾರಂಟಿ ಕಾನೂನು ಅವಶ್ಯಕತೆ ಇದೆ ಎಂದು ವರದಿ ನೀಡಿದೆ ಯಾವುದೇ ತೀರ್ಮಾನ ಆಗಿಲ್ಲಹಿಂದೆ ಮನಮೋಹನ್ ಸಿಂಗ್ ಸರ್ಕಾರ ಡಾ. ಸ್ವಾಮಿನಾಥನ್ ಅಧ್ಯಕ್ಷತೆಯಲ್ಲಿ ಸಮಿತಿ  ರಚಿಸಿತು ಈ ವರದಿ 2007ರಲ್ಲಿ  ಸಲ್ಲಿಸಲಾಗಿತ್ತು

2014ರಲ್ಲಿ ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ತರುವ ಭರವಸೆ ನೀಡಿ ಪ್ರಧಾನಿ ಮೋದಿ ಅವರು ಅಧಿಕಾರಕ್ಕೆ ಬಂದರು ನಂತರ ಜಾರಿ ಮಾಡಲು ಸಾಧ್ಯವಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯಕ್ಕೆ  ಮುಚ್ಚಳಿಕೆ  ಬರೆದು ಕೊಟ್ಟಿದ್ದಾರೆ.

ಸ್ವತಂತ್ರ ಪೂರ್ವದಲ್ಲಿ . ರೈತರು ಚಳುವಳಿ ಮಾಡುವ ಎಚ್ಚರಿಕೆ ನೀಡಿದರೆ  ಬ್ರಿಟಿಷ್ ಆಡಳಿತ ತಕ್ಷಣವೇ ಸ್ಪಂದಿಸಿ ಸಮಸ್ಯೆ ಬಗೆಹರಿಸುತ್ತಿತ್ತು ಆದರೆ ಇಂದಿನ ನಮ್ಮ ಸರ್ಕಾರಗಳು ನಾಟಕೀಯವಾಗಿ ವರ್ತಿಸುತ್ತಿವೆ ಇದರ ವಿರುದ್ಧ ರೈತರು ನಿಲ್ಲಲೇ ಬೇಕು. ಅದಕ್ಕಾಗಿ ಮಾರ್ಚ್ 19 ರಂದು ದೆಹಲಿಯಲ್ಲಿ ರಾಮಲೀಲಾ ಮೈದಾನದಲ್ಲಿ ಬೃಹತ್ ರೈತರ ಸಮಾವೇಶ ನಡೆಸಲಾಗುವುದು ಎಲ್ಲಾ ರೈತರು ಬನ್ನಿ ಸರ್ಕಾರಕ್ಕೆ ಬಿಸಿ   ಮುಚ್ಚಿಸೋಣ

ಕಳೆದ ಐದು ದಿನಗಳಲ್ಲಿ ಆರಂಭವಾದ ರೈತ ಜಾಗೃತಿ ಯಾತ್ರೆ 40 ದಿನಗಳ ಕಾಲ ದೇಶವನ್ನು ಸುತ್ತಿ ರೈತರ ಸಹಿ ಪಡೆದು ಪ್ರಧಾನಮಂತ್ರಿಗೆ ದೇಶದ  ರೈತರ ಸಹಿ ಇರುವ ಪತ್ರ ನೀಡಿ ಒತ್ತಾಯಿಸಲು ತಾವೆಲ್ಲ ದೆಹಲಿಗೆ ಬನ್ನಿ ಎಂದು ಕರೆ ನೀಡಿದರು

ರೈತ ಮುಖಂಡ ರಾಷ್ಟ್ರೀಯ  ಸಹ ಸಂಚಾಲಕ  ಕುರುಬೂರು ಶಾಂತಕುಮಾರ್  .  ಹರಿಯಾಣದ ಅಭಿಮನ್ಯು ಕೋಹರ್.ಉತ್ತರ ಪ್ರದೇಶ ನಿತಿನ್ ಬಾಲ್ಯನ ರಾಜಸ್ಥಾನ್  ಇಂದ್ರಜಿತ್ ಪಲ್ಲಿವಾನ್, ಮಧ್ಯಪ್ರದೇಶದ ಲೀಲಾಧರ್ ರಜಪೂತ್. ಅರುಣ್ ಪಟೇಲ್  ಪಂಜಾಬ್ ಹರ್ಸುಲಿಂದರ್ ಸಿಂಗ್ ಹತ್ತಳ್ಳಿ ದೇವರಾಜ್. ಬಡನಪುರ ನಾಗರಾಜ್ ಬಲ್ಲೂರು ರವಿಕುಮಾರ್ . ಲಕ್ಷ್ಮೀದೇವಿ ಸಾವಿರಾರು ಜನರು ಪಾಲ್ಗೊಂಡಿದ್ದರು

Leave a Response