
ಮೇಷ: ನ್ಯಾಯವಾದಿಗಳಿಗೆ ಸ್ವಪ್ರಯತ್ನದಿಂದ ಕಾರ್ಯದಲ್ಲಿ ಮುನ್ನಡೆ. ಮಕ್ಕಳ ವಿಚಾರವಾಗಿ ವಾದ-ವಿವಾದಗಳು ಹೆಚ್ಚಾಗಬಹುದು. ಶುಭಸಂಖ್ಯೆ:3
ವೃಷಭ: ಮುಕ್ತ ಭಾವನೆಯಿಂದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ. ಆಶ್ಚರ್ಯಕರ ರೀತಿಯಲ್ಲಿ ವಿರೋಧಿಗಳು ಬೆಂಬಲಿಸುವರು. ಶುಭಸಂಖ್ಯೆ: 9
ಮಿಥುನ: ಹಿರಿಯರ ಸಕಾಲಿಕ ಸಲಹೆಗಳಿಂದ ನಷ್ಟ ತಪ್ಪಿಸಿಕೊಳ್ಳುವಿರಿ. ಮಕ್ಕಳ ಆರೋಗ್ಯದ ಕಡೆ ಗಮನ ಅಗತ್ಯ. ಹಣದ ಒಳಹರಿವು ವೃದ್ಧಿ. ಶುಭಸಂಖ್ಯೆ:1
ಕಟಕ: ಪದೇಪದೆ ನಿರ್ಧಾರಗಳನ್ನು ಬದಲಿಸುವ ನಡವಳಿಕೆಯಿಂದಾಗಿ ಕುಟುಂಬದಲ್ಲಿ ಅಸಹನೆ. ಹೂವು ವ್ಯಾಪಾರದಲ್ಲಿ ಅಧಿಕ ಲಾಭ. ಶುಭಸಂಖ್ಯೆ:7
ಸಿಂಹ: ಯಾವುದೇ ವಿಚಾರದಲ್ಲಿ ಆತುರದ ನಿರ್ಧಾರ ಬೇಡ. ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸುವ ಅವಕಾಶ ದೊರೆಯುತ್ತದೆ. ಶುಭಸಂಖ್ಯೆ:3
ಕನ್ಯಾ: ಸ್ನೇಹಿತರೊಂದಿಗೆ ವಿಚಾರ ವಿನಿಮಯ ಮಾಡಿ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳಿ. ಸಾಲ ಮರು ಪಾವತಿ ಮಾಡಿ ನಿರಾಳರಾಗುವಿರಿ. ಶುಭಸಂಖ್ಯೆ: 6
ತುಲಾ: ಸಂಪನ್ಮೂಲ ಕ್ರೋಡೀಕರಿಸಲು ಹಲವು ಪ್ರಯತ್ನಗಳನ್ನು ಮಾಡುವಿರಿ. ಸ್ವಯಂ ಉದ್ಯೋಗ ಮಾಡುವವರಿಗೆ ಉತ್ತಮ ಆದಾಯ. ಶುಭಸಂಖ್ಯೆ:6
ವೃಶ್ಚಿಕ: ಅನಿರೀಕ್ಷಿತ ಮೂಲಗಳಿಂದ ಆರ್ಥಿಕ ಸಹಾಯ. ಬಾಹ್ಯಾಕಾಶ ಸಂಸ್ಥೆಯಲ್ಲಿ ಕೆಲಸ ಮಾಡುವವರಿಗೆ ಬಡ್ತಿ. ಸರ್ಕಾರಿ ಕೆಲಸ ನಿಧಾನ. ಶುಭಸಂಖ್ಯೆ: 4
ಧನಸ್ಸು: ಮನೆಯಲ್ಲಿ ಸಮಾಧಾನ ಚಿತ್ತದಿಂದ ವ್ಯವಹರಿಸಿ. ಬ್ಯಾಂಕ್ ವ್ಯವಹಾರದಲ್ಲಿ ಮುನ್ನಡೆ. ಕೃಷಿಕರಿಗೆ ಬೆಳೆಯಿಂದ ಹೆಚ್ಚಿನ ಹಣ. ಶುಭಸಂಖ್ಯೆ: 1
ಮಕರ: ಪಾಲುದಾರಿಕೆಯ ಆಂತರಿಕ ಗೊಂದಲಕ್ಕೆ ಪರಿಹಾರ. ಹಣಕಾಸಿನ ವಿಷಯದಲ್ಲಿ ಜಾಗರೂಕತೆ ಅಗತ್ಯ. ಉದ್ದಿಮೆಗಳಲ್ಲಿ ಪ್ರಗತಿ. ಶುಭಸಂಖ್ಯೆ: 7
ಕುಂಭ: ಕೃಷಿ ಯಂತ್ರಗಳ ಬಾಡಿಗೆಯಿಂದ ಹೆಚ್ಚಿನ ಆದಾಯ. ಪ್ರೇಮಿಗಳಿಗೆ ಹಿನ್ನಡೆ. ವಿದೇಶಿ ವ್ಯವಹಾರಗಳನ್ನು ಮಾಡುವವರಿಗೆ ಮುನ್ನಡೆ. ಶುಭಸಂಖ್ಯೆ: 9
ಮೀನ: ವೈಯಕ್ತಿಕ ಆರೋಗ್ಯದ ಬಗ್ಗೆ ನಿಗಾ ಇರಲಿ. ಸರ್ಕಾರಿ ಕೆಲಸದಲ್ಲಿ ಮಂದಗತಿ. ಒಡಹುಟ್ಟಿದವರೊಡನೆ ಜಿಜ್ಞಾಸೆ ನಡೆಯಬಹುದು. ಶುಭಸಂಖ್ಯೆ:



