HOMENews

ಜಿಂಬಾಬ್ವೆಯ ಚಮತ್ಕಾರ ಪ್ರದರ್ಶನ: ಟಿ20 ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ 23 ರನ್ ಜಯ

ಕೋಲಂಬೊ: ಟಿ20 ವಿಶ್ವಕಪ್ ಟೂರ್ನಿಯ 19ನೇ ಪಂದ್ಯದಲ್ಲಿ ಜಿಂಬಾಬ್ವೆ ತಂಡವು ಭರ್ಜರಿ ಪ್ರದರ್ಶನ ನೀಡಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು 23 ರನ್ಗಳಿಂದ ಮಣಿಸಿದೆ. ಕೋಲಂಬೊದ ಆರ್. ಪ್ರೇಮದಾಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಜಿಂಬಾಬ್ವೆ ನೀಡಿದ್ದ 169 ರನ್ಗಳ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ನಿರೀಕ್ಷಿತ ಪ್ರದರ್ಶನ ನೀಡದೆ 146 ರನ್ಗಳಿಗೆ ಆಲೌಟ್ ಆಗಿ ಸೋಲನುಭವಿಸಿತು. ಈ ಜಯದೊಂದಿಗೆ ಜಿಂಬಾಬ್ವೆ ತಂಡ ಟೂರ್ನಿಯಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಂಡಿದೆ.

ಆಸ್ಟ್ರೇಲಿಯಾ ತಂಡಕ್ಕೆ  ಆರಂಭದಲ್ಲೇ ಸಂಕಷ್ಟ

ಜಿಂಬಾಬ್ವೆ ನೀಡಿದ್ದ 169 ರನ್ಗಳ ಗುರಿ ಬೆನ್ನಟ್ಟಲು ಕಣಕ್ಕಿಳಿದ ಆಸ್ಟ್ರೇಲಿಯಾ ತಂಡಕ್ಕೆ ಆರಂಭವೇ ಆಘಾತ ಎದುರಾಗಿತ್ತು. ಕೇವಲ 29 ರನ್ ಆಗುವಷ್ಟರಲ್ಲಿ ಪ್ರಮುಖ ನಾಲ್ಕು ವಿಕೆಟ್ಗಳನ್ನು ಕಳೆದುಕೊಂಡಿತು. ಆರಂಭಿಕ ಆಟಗಾರ ಜೋಶ್ ಇಂಗ್ಲಿಸ್ ಕೇವಲ 8 ರನ್ ಗಳಿಸಿ ನಿರ್ಗಮಿಸಿದರೆ,  ಟ್ರಾವಿಸ್ ಹೆಡ್ 17 ರನ್ ಗಳಿಸಿ ಪೆವಿಲಿಯನ್ ಹಿಂದಿರುಗಿದರು. ಕೆಮೆರೂನ್ ಗ್ರೀನ್ ಹಾಗೂ ಟಿಮ್ ಡೇವಿಡ್ ಕೇವಲ ಶೂನ್ಯಕ್ಕೆ ಔಟ್ ಆಗಿರುವುದು ತಂಡಕ್ಕೆ ದೊಡ್ಡ ಹೊಡೆತ ಬಿದ್ದಂತಾಯಿತು.

ಪಂದ್ಯದ ಆರಂಭದಲ್ಲೇ ಹಿನ್ನಡೆ ಅನುಭವಿಸಿದ ಆಸ್ಟ್ರೇಲಿಯಾ ತುಂಬಾ ಒತ್ತಡಕ್ಕೆ ಒಳಗಾಯಿತು. ಮಧ್ಯಮ ಕ್ರಮದಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ ಮತ್ತು ಮ್ಯಾಥ್ಯೂ ರೆನ್ಶಾ ತಂಡವನ್ನು ಪುನಶ್ಚೇತನಗೊಳಿಸುವ ಪ್ರಯತ್ನ ನಡೆಸಿದರು. ಇವರಿಬ್ಬರೂ ಐದನೇ ವಿಕೆಟ್ಟಿಗೆ  79 ರನ್ಗಳ ಮಹತ್ವದ ಜೊತೆಯಾಟವಾಡಿ ತಂಡವನ್ನು 100ರ ಗಡಿಗೆ ತಲುಪಿಸಿದರು.

ಆದರೆ ಅನಂತರ ಬಂದ ಮ್ಯಾಕ್ಸ್ವೆಲ್ 31 ರನ್ ಗಳಿಸಿ ಔಟ್ ಆದ ನಂತರ ಆಸ್ಟ್ರೇಲಿಯಾದ ಪತನ ಮತ್ತೆ ವೇಗ ಹೆಚ್ಚಾಯಿತು. ತದನಂತರ ಬಂದ  ಕ್ರೀಸ್ಗೆ ಬಂದ ಬ್ಯಾಟರ್ಗಳಲ್ಲಿ ಯಾರೂ ಸಹ ಜಿಂಬಾಜೆ ಬೌಲಿಂಗ್ ಗೆ ದಿಟ್ಟ ಹೋರಾಟ ತೋರಿಸಲು ಆಗಲಿಲ್ಲ. ಮಾರ್ಕಸ್ ಸ್ಟೋಯಿನಿಸ್ ಕೇವಲ 6ರನ್ , ಬೆನ್ ಡ್ವಾರ್ಶಿಯಸ್ 6ರನ್ , ನಾಥನ್ ಎಲ್ಲಿಸ್ 7 ರನ್ ಹಾಗೂ ಆಡಮ್ ಜಾಂಪಾ 2 ರನ್ ಗಳಿಸಿ ಔಟಾದರು.

ಇದನ್ನೂ ಓದಿ:- ಅರಮನೆ ಆವರಣದಲ್ಲಿ ಶಿವರಾತ್ರಿ ಸಂಭ್ರಮ: ತ್ರಿನೇಶ್ವರನಿಗೆ ಚಿನ್ನದ ಮುಖವಾಡ ಧಾರಣೆ

ಆಸ್ಟ್ರೇಲಿಯಾ ಪರ ಮ್ಯಾಥ್ಯೂ ರೆನ್ಶಾ ಹೋರಾಟ ವ್ಯರ್ಥ

ಆಸ್ಟ್ರೇಲಿಯಾ ಪರ ಮ್ಯಾಥ್ಯೂ ರೆನ್ಶಾ ಮಾತ್ರ ಏಕಾಂಗಿ ಹೋರಾಟ ನಡೆಸಿದರು. ಅವರು 44 ಎಸೆತಗಳಲ್ಲಿ 65 ರನ್ ಗಳಿಸಿ ತಂಡವನ್ನು ಪೈಪೋಟಿಯಲ್ಲಿ ಉಳಿಸಲು ತುಂಬಾ ಪ್ರಯತ್ನಿಸಿದರು. ಐದು ಬೌಂಡರಿ ಹಾಗೂ ಒಂದು ಸಿಕ್ಸರ್ ಅವರ ಇನ್ನಿಂಗ್ಸ್ಗೆ ಹೊಳಪು ತಂದುಕೊಟ್ಟವು. ಆದರೂ ಇತರ ಬ್ಯಾಟರ್ಗಳಿಂದ ಬೆಂಬಲದ ಕೊರತೆಯಿಂದ ಪಂದ್ಯವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ.

ಜಿಂಬಾಬ್ವೆ ಪರ ಬೌಲಿಂಗ್ನಲ್ಲಿ ಬ್ಲೆಸ್ಸಿಂಗ್ ಮುಜರ್ಬಾನಿ ನಾಲ್ಕು ವಿಕೆಟ್ ಕಿತ್ತು ಆಸ್ಟ್ರೇಲಿಯಾ ಪತನಕ್ಕೆ ಕಾರಣರಾದರು. ಬ್ರಾಡ್ ಇವನ್ಸ್ ಮೂರು ವಿಕೆಟ್ ಪಡೆದು ಮಹತ್ವದ ಕೊಡುಗೆ ನೀಡಿದರು. ಅವರ ಕಟ್ಟುನಿಟ್ಟಾದ ದಾಳಿ ಆಸ್ಟ್ರೇಲಿಯಾ ಬ್ಯಾಟಿಂಗ್ ಸಾಲನ್ನು ಸಂಪೂರ್ಣ ಅಸ್ತವ್ಯಸ್ತಗೊಳಿಸಿತು.

ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ಬ್ಯಾಟಿಂಗ್ ಸ್ಥಿರತೆ

ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ಸಮತೋಲನದ ಇನ್ನಿಂಗ್ಸ್ ಕಟ್ಟಿತು. ಆರಂಭಿಕ ಆಟಗಾರರು ತಂಡಕ್ಕೆ ಉತ್ತಮ ನೆಲೆಯೊದಗಿಸಿದರು. ಬ್ರಿಯನ್ ಬೆನ್ನೆಟ್ ಮತ್ತು ಮಾರುಮನಿ ಮೊದಲ ವಿಕೆಟ್ಗೆ 61 ರನ್ಗಳ ಜೊತೆಯಾಟವಾಡಿದರು. ಮಾರುಮನಿ 35 ರನ್ ಗಳಿಸಿ ಔಟ್ ಆದರೂ ತಂಡಕ್ಕೆ ಉತ್ತಮ ಆರಂಭ ದೊರಕಿಸಿಕೊಟ್ಟರು.

ನಂತರ ರಿಯಾನ್ ಬರ್ಲ್ 35 ರನ್ ಗಳಿಸಿ ಮಧ್ಯಮ ಕ್ರಮದಲ್ಲಿ ಸ್ಥಿರತೆ ತಂದರು. ಇನ್ನೊಂದು ಕಡೆ ಆರಂಭಿಕ ಆಟಗಾರ ಬ್ರಿಯನ್ ಬೆನ್ನೆಟ್ ಕೊನೆಯವರೆಗೂ ಅಜೇಯವಾಗಿ ಉಳಿದು ತಂಡದ ಮೊತ್ತ ಹೆಚ್ಚಿಸಿದರು. ಅವರು 56 ಎಸೆತಗಳಲ್ಲಿ 64 ರನ್ ಗಳಿಸಿ ಏಳು ಬೌಂಡರಿಗಳನ್ನು ಬಾರಿಸಿದರು.

ಕೊನೆಯ ಹಂತದಲ್ಲಿ ಸಿಕಂದರ್ ರಜಾ ವೇಗವಾಗಿ ರನ್ ಸೇರಿಸಿ ತಂಡದ ಮೊತ್ತವನ್ನು 160ರ ಗಡಿ ದಾಟಿಸಿದರು. ಅವರು 13 ಎಸೆತಗಳಲ್ಲಿ 25 ರನ್ ಗಳಿಸಿ ಇನ್ನಿಂಗ್ಸ್ಗೆ ವೇಗ ತುಂಬಿದರು. ಇದರ ಫಲವಾಗಿ ಜಿಂಬಾಬ್ವೆ 20 ಓವರ್ಗಳಲ್ಲಿ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತು.

ಇದನ್ನೂ ಓದಿ:- ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅಂತರರಾಷ್ಟ್ರೀಯ ಬಿಗ್ ಕ್ಯಾಟ್ ಶೃಂಗಸಭೆ ಯಶಸ್ವಿ

ಜಿಂಬಾಬ್ವೆ ತಂಡಕ್ಕೆ ವಿಶೇಷ ಮಹತ್ವದ ಇತಿಹಾಸ ಮರುಕಳಿಸಿದ ಗೆಲುವು

ಈ ಜಯ ಜಿಂಬಾಬ್ವೆ ತಂಡಕ್ಕೆ ವಿಶೇಷ ಮಹತ್ವ ಹೊಂದಿದೆ. ಟಿ20 ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸತತ ಎರಡನೇ ಬಾರಿ ಗೆಲುವು ಸಾಧಿಸಿರುವುದು ಗಮನಾರ್ಹವಾಗಿದೆ. ಇದಕ್ಕೂ ಮೊದಲು 2007ರಲ್ಲಿ ನಡೆದ ವಿಶ್ವಕಪ್ ಪಂದ್ಯದಲ್ಲೂ ಜಿಂಬಾಬ್ವೆ ಜಯಗಳಿಸಿತ್ತು. ಸುಮಾರು 18 ವರ್ಷಗಳ ಬಳಿಕ ಮತ್ತೆ ಮುಖಾಮುಖಿಯಾದ ಪಂದ್ಯದಲ್ಲೂ ಜಿಂಬಾಬ್ವೆ ಮೇಲುಗೈ ಸಾಧಿಸಿರುವುದು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.

ಟಿ20 ಮುಖಾಮುಖಿ ದಾಖಲೆಯಲ್ಲೂ ಇದೀಗ ಎರಡೂ ತಂಡಗಳು ಸಮಬಲ ಸಾಧಿಸಿವೆ. ಇದುವರೆಗೆ ನಾಲ್ಕು ಬಾರಿ ಎದುರಾದ ಈ ತಂಡಗಳು ತಲಾ ಎರಡು ಪಂದ್ಯಗಳಲ್ಲಿ ಜಯಗಳಿಸಿವೆ.

ಈ ಗೆಲುವಿನೊಂದಿಗೆ ಜಿಂಬಾಬ್ವೆ ತಂಡ ಟೂರ್ನಿಯಲ್ಲಿ ಪಾಯಿಂಟ್ ಪಟ್ಟಿಯಲ್ಲಿ ಬದಲಾವಣೆ

ಈ ಗೆಲುವಿನೊಂದಿಗೆ ಜಿಂಬಾಬ್ವೆ ತಂಡ ಟೂರ್ನಿಯಲ್ಲಿ ಆಡಿದ ಎರಡೂ ಪಂದ್ಯಗಳನ್ನು ಗೆದ್ದು ಗುಂಪು ಬಿ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ. ಮತ್ತೊಂದೆಡೆ ಆಸ್ಟ್ರೇಲಿಯಾ ಈ ಸೋಲಿನಿಂದ ಮೂರನೇ ಸ್ಥಾನಕ್ಕೆ ಕುಸಿದಿದೆ. ಮುಂದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಬೇಕಾದ ಒತ್ತಡ ಆಸ್ಟ್ರೇಲಿಯಾ ತಂಡದ ಮೇಲೆ ಹೆಚ್ಚಾಗಿದೆ.

ಒಟ್ಟಾರೆ ಪಂದ್ಯದಲ್ಲಿ ಜಿಂಬಾಬ್ವೆ ಸಮತೋಲನದ ಬ್ಯಾಟಿಂಗ್ ಪಂದ್ಯದಲ್ಲಿ ಜಿಂಬಾಬ್ವೆ ಸಮತೋಲನದ ಬ್ಯಾಟಿಂಗ್ ಮತ್ತು ಶಿಸ್ತುಬದ್ಧ ಬೌಲಿಂಗ್ ಪ್ರದರ್ಶಿಸಿ ಜಯ ಸಾಧಿಸಿದೆ. ವಿಶೇಷವಾಗಿ ಮಧ್ಯ ಓವರ್ಗಳಲ್ಲಿ ಬೌಲರ್ಗಳ ನಿಯಂತ್ರಿತ ದಾಳಿ ಪಂದ್ಯ ತಿರುವು ತಂದಿತು. ಆಸ್ಟ್ರೇಲಿಯಾ ತಂಡ ಆರಂಭಿಕ ಹಿನ್ನಡೆಯಿಂದ ಹೊರಬರಲು ವಿಫಲವಾದುದು ಸೋಲಿಗೆ ಪ್ರಮುಖ ಕಾರಣವಾಯಿತು.

ಒಟ್ಟಿನಲ್ಲಿ ಈ ಪಂದ್ಯ ಟೂರ್ನಿಯಲ್ಲಿ ಅಚ್ಚರಿ ಫಲಿತಾಂಶಗಳಲ್ಲಿ ಒಂದಾಗಿ ಪರಿಣಮಿಸಿದ್ದು, ಜಿಂಬಾಬ್ವೆ ತಂಡದ ಸಾಮರ್ಥ್ಯವನ್ನು ಸ್ಪಷ್ಟವಾಗಿ ತೋರಿಸಿದೆ. ಮುಂದಿನ ಪಂದ್ಯಗಳಲ್ಲಿ ತಂಡ ಇದೇ ಲಯ ಮುಂದುವರಿಸುತ್ತದೆಯೇ ಎಂಬುದನ್ನು ಕ್ರೀಡಾಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಇನ್ನೂ ಹೆಚ್ಚಿನ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

 

Leave a Response