HOMENews

ಮಹಾ ಶಿವರಾತ್ರಿ ಅಂಗವಾಗಿ ಹಿರಿಯಾ ನಾಗರಿಕರಿಗರ ಹಣ್ಣು ಹಂಪಲು ನೀಡಿ ಹಬ್ಬ ಅಚರಣೆ” ಹಿರಿಯರ ಸೇವೆ ದೇವರ ಸೇವೆ : ಸಂದೀಪ್ “

ಮೈಸೂರು:- ನಗರದ ಶ್ರೀರಾಂಪುರದಲ್ಲಿರುವ ಬೆಳಕು ವಾತ್ಸಲ್ಯದಾಮದ ಹಿರಿಯ ನಾಗರಿಕ ಬಂಧುಗಳಿಗೆ ಎಸ್ ಪ್ರಕಾಶ್ ಪ್ರಿಯಾದರ್ಶನ ಸ್ನೇಹ ಬಳಗದ ವತಿಯಿಂದ ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಹೊಸ ಸೀರೆ, ಡ್ರೈ ಫ್ರೂಟ್ಸ್,ಹಣ್ಣು ಹಂಪಲನ್ನು ವಿತರಿಸುವ ಸೇವಾ ಕಾರ್ಯದೊಂದಿಗೆ ಸ್ನೇಹ ಬಳಗದ ಸದಸ್ಯರು ಹಿರಿಯರ ಆಶೀರ್ವಾದ ಪಡೆದ ಶಿವರಾತ್ರಿ ಹಬ್ಬದ ಶುಭಾಶಯಗಳುಗಳನ್ನು ಕೋರಿದರು.

ಈ ಸೇವಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶ್ರೀ ರಾಮ ಗೆಳೆಯರ ಬಳಗದ ಅಧ್ಯಕ್ಷ, ಬಿಜೆಪಿ ಮುಖಂಡ ಸಂದೀಪ್ ಹಿರಿಯರ ಸೇವೆ ದೇವರ ಸೇವೆ ಎಂಬ ನಾಣ್ನುಡಿಯಂತೆ ಈ ಮಹಾಶಿವರಾತ್ರಿ ಹಬ್ಬದಂದು ಹಿರಿಯರ ಸೇವಾ ಕಾರ್ಯದೊಂದಿಗೆ ನಾವುಗಳು ಧನ್ಯರಾದೆವು. ಇತ್ತೀಚಿನ ದಿನಗಳಲ್ಲಿ ಆಧುನಿಕತೆಯ ಜೀವನ ಶೈಲಿಯಿಂದ ಮಕ್ಕಳು ಯುವಕರಿಗೆ ಸೂಕ್ತ ಮಾರ್ಗದರ್ಶನ ಸಿಗುತ್ತಿಲ್ಲ
ಹಿರಿಯರು ನೀಡುತ್ತಿದ್ದ ಮಾರ್ಗದರ್ಶನ ಇಂದು ಇಲ್ಲವಾಗಿದೆ, ಹಿರಿಯರನ್ನು ನಿರ್ಲಕ್ಷಿಸುತ್ತಿರುವುದು ನೋವಿನ ಸಂಗತಿಯಾಗಿದ್ದು, ಅವರ ಬದುಕು ಅತಂತ್ರವಾಗಿ ವೃದ್ಧಾಶ್ರಗಳಲ್ಲಿ ಆಶ್ರಯ ಪಡೆಯುವ ಸ್ಥಿತಿ ನಿರ್ಮಾಣವಾಗಿದ್ದು ಇಂತಹ ಹಿರಿಯ ತಾಯಂದಿರನ್ನು ಅತ್ಯಂತ ಕಾಳಜಿ ವಹಿಸಿ ಅವರೆಲ್ಲರಿಗೂ ಆಶ್ರಯ ನೀಡಿ ಹಾರೈಕೆ ಮಾಡುತ್ತಿರುವ ಬೆಳಕು ವಾತ್ಸಲ್ಯದಾಮದ ಸೇವೆ ಅಪಾರ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶ್ರೀರಾಮ ಗೆಳೆಯರ ಬಳಗದ ಅಧ್ಯಕ್ಷ, ಬಿಜೆಪಿ ಮುಖಂಡ ಸಂದೀಪ್,ಮೈಸೂರು ನಗರ ಜೆ.ಡಿ.ಎಸ್. ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯಾದರ್ಶನ್, ಗಾಯಕ ಯಶವಂತ್ ಕುಮಾರ್, ಸಿಂಚನಗೌಡ (ಮಂಗಳಮುಖಿ), ಎಂ ಮಾಧವಿ,ರಾಜೇಶ್ ಕುಮಾರ್,ಮಹೇಶ, ಸುರೇಂದ್ರ,ವಿಕಾಸ್,ಅಭಿನವ್, ದತ್ತ ಇನ್ನಿತರರು ಇದ್ದರು.

Leave a Response