
ಚುಂಚನಕಟ್ಟೆಯಲ್ಲಿ ಅವಿರೋಧ ಆಯ್ಕೆ ಸಂಭ್ರಮ: ಹಾಲು ಸಂಘದ ಅಧ್ಯಕ್ಷೆ ಅನಿತಾ ಆನಂದ್
ವರದಿ :-ಹೊಸೂರು ಆನಂದ
ಹೊಸೂರು, ಫೆ.16: ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆ ಗ್ರಾಮದ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಇಂದು ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯು ಗ್ರಾಮಸ್ಥರ ಗಮನ ಸೆಳೆದಿದ್ದು, ಸಂಘದ ನೂತನ ಅಧ್ಯಕ್ಷರಾಗಿ ಅನಿತಾ ಆನಂದ್ ಮತ್ತು ಉಪಾಧ್ಯಕ್ಷರಾಗಿ ಬಸಮ್ಮಣಿ ಸೋಮಶೇಖರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘ ಸ್ಥಾಪನೆಯಾಗಿ ಇಂದಿಗೆ ಇಪ್ಪತ್ತು ವರ್ಷಗಳ ಬಳಿಕ ಮೊದಲ ಬಾರಿಗೆ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಹೊಸುರಿನ ಸ್ಥಳೀಯ ಹಾಲು ಉತ್ಪಾದಕರಲ್ಲಿ ವಿಶೇಷ ಉಮ್ಮಸಮ್ಮಸ್ಸು ಹೆಚ್ಚಿಸಿತು.

ಹೊಸೂರು ಸಮೀಪದ ಚುಂಚನಕಟ್ಟೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘವು ಗ್ರಾಮೀಣ ಮಹಿಳೆಯರ ಹಣಕಾಸಿನ ಸಬಲೀಕರಣಕ್ಕೆ ಅತ್ಯುತ್ತಮ ವೇದಿಕೆಯಾಗಿದ್ದು, ಹಾಲು ಉತ್ಪಾದನೆ ಮತ್ತು ಮಾರಾಟದ ವ್ಯವಸ್ಥೆಯನ್ನು ಸುಧಾರಿಸಲು ಪ್ರಮುಖ ಪಾತ್ರವಹಿಸಿದೆ. ಇತ್ತೀಚೆಗೆ ನಡೆದ ನಿರ್ದೇಶಕರ ಆಯ್ಕೆಯಲ್ಲಿ 11 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದು, ಅದರ ಮುಂದುವರಿದ ಭಾಗವಾಗಿ ಹಾಲು ಉತ್ಪಾದಕರ ಸಂಘದ ಕಚೇರಿಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಗಳಿಗಾಗಿ ಚುನಾವಣೆ ನಡೆಸಲಾಯಿತು.
ಇದನ್ನೂ ಓದಿ:- ಮೈಸೂರು ಬಳಿ ಪೆಟ್ರೋಲ್ ಬಂಕ್ ಗೆ ನುಗ್ಗಿ ದರೋಡೆ
ಹೊಸದಾಗಿ ಅಧ್ಯಕ್ಷ ಸ್ಥಾನಕ್ಕೆ ಅನಿತಾ ಆನಂದ್ ಹಾಗೂ ಗಾಯಿತ್ರಮ್ಮ ನಾಮಪತ್ರ ಸಲ್ಲಿಸಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ಬಸಮ್ಮಣಿ ಸೋಮಶೇಖರ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಇನ್ನೂ ಯಾರೂ ನಾಮ ಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಬಸಮ್ಮಣಿ ಅವರನ್ನು ಅವಿರೋಧವಾಗಿ ಆಯ್ಕೆಯಾದರೆಂದು ಚುನಾವಣಾಧಿಕಾರಿಗಳು ಘೋಷಿಸಿದರು. ಅಧ್ಯಕ್ಷ ಸ್ಥಾನಕ್ಕಾಗಿ ಮತದಾನ ನಡೆದಿದ್ದು, ಒಟ್ಟು ಮತ ಎಣಿಕೆಯಲ್ಲಿ ಅನಿತಾ ಆನಂದ್ ಎಂಟು ಮತಗಳನ್ನು ಪಡೆದು ಜಯಶಾಲಿಯಾದರೆ, ಗಾಯಿತ್ರಮ್ಮ ಐದು ಮತಗಳನ್ನು ಪಡೆದು ಪರಾಭವಿಸಿದರು.
ಹಾಲು ಉತ್ಪಾದಕರ ಸಂಘದ ಚುನಾವಣಾ ಪ್ರಕ್ರಿಯೆಯನ್ನು ಸಹಕಾರ ಇಲಾಖೆಯ ಅಧಿಕಾರಿಯಾದ ಗಿರೀಶ್ ಮೇಲ್ವಿಚಾರಣೆ ನಡೆಸಿದ್ದು, ಈ ಎಲ್ಲಾ ಕ್ರಮಗಳನ್ನು ನಿಯಮಾನುಸಾರ ಹಾಗೂ ಪಾರದರ್ಶಕವಾಗಿ ಪೂರ್ತಿಗೊಳಿಸಲಾಯಿತು. ಫಲಿತಾಂಶ ಪ್ರಕಟವಾದ ಬಳಿಕ ಸಂಘದ ಕಚೇರಿ ಆವರಣದಲ್ಲಿ ಸಂಭ್ರಮಾಚರಣೆ ನಡೆಯಿತು. ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಅಭಿನಂದಿಸಲು ಗ್ರಾಪಂ ಮಾಜಿ ಸದಸ್ಯ ಮಧು, ಕುಮಾರ್, ಬೇವಿನಹಳ್ಳಿ ಸತೀಶ್, ಶ್ರೀನಿವಾಸ್ ವಿರೂಪಾಕ್ಷ, ಆನಂದ, ಸೌಮ್ಯ ಸತೀಶ್, ಶ್ರೀರಾಂಪುರ ಮಹೇಶ್, ಸ್ಟುಡಿಯೋ ಲೋಕೇಶ್, ಶಂಕ್ರೇಗೌಡ, ಬಾಬು ರಮೇಶ್, ಚಂದ್ರಣ್ಣ ವಿರೂಪಾಕ್ಷ ಸೇರಿದಂತೆ ಹಲವರು ಆಗಮಿಸಿದ್ದರು. ಪಟಾಕಿ ಸಿಡಿಸಿ, ಸಿಹಿ ಹಂಚಿ, ಹೂಗುಚ್ಛ ನೀಡುವ ಮೂಲಕ ಅಭಿನಂದನೆ ಸಲ್ಲಿಸಲಾಯಿತು.

ಚುನಾವಣಾ ಪ್ರಕ್ರಿಯೆಯಲ್ಲಿ ಹಾಲಿ ನಿರ್ದೇಶಕರಾದ ರಾಜಮ್ಮ, ಮೀನಾಕ್ಷಿ, ಪಾರ್ವತಿ, ಶೋಭಾ, ಸುಂದರಮ್ಮ, ಮಾಲತಿ, ಲಕ್ಷ್ಮಮ್ಮ ಹಾಗೂ ನಾಮ ನಿರ್ದೇಶಕರಾದ ಗೌರಮ್ಮ ಉಪಸ್ಥಿತರಿದ್ದರು. ಜೊತೆಗೆ ಮಾರ್ಗ ವಿಸ್ತರಣಾಧಿಕಾರಿ ನೇಮಣ್ಣ ಮಕ್ಕಾನಿ ಸೇರಿದಂತೆ ಸಂಘದ ಸದಸ್ಯರು ಈ ಪ್ರಕ್ರಿಯೆಗೆ ಸಾಕ್ಷಿಯಾಗಿ ಭಾಗವಹಿಸಿದರು. ಹೊಸ ಆಡಳಿತ ಮಂಡಳಿ ಸಂಘದ ಕಾರ್ಯಚಟುವಟಿಕೆಗಳನ್ನು ಇನ್ನು ಹೆಚ್ಚು ಆಭಿವೃದ್ದಿ ಮಾಡಲು ಹಾಗೂ ಹಾಲು ಉತ್ಪಾದಕರ ಸಮಸ್ಯೆಗಳಿಗೆ ಸ್ಪಂದಿಸಲಿದೆ ಎಂಬ ನಿರೀಕ್ಷೆ ಸದಸ್ಯರಲ್ಲಿ ವ್ಯಕ್ತವಾಗಿದೆ.
ಇದನ್ನೂ ಓದಿ:- ಮೈಸೂರಿನಲ್ಲಿ ಶಾಂತಿ ಮಂದಿರದಲ್ಲೇ ಕ್ರೌರ್ಯ: ನಮಾಜ್ ಮಾಡುವ ವೇಳೆ ಬಾಲಕನ ಮೇಲೆ ಹಲ್ಲೆ
ಈ ಸಮಯದಲ್ಲಿ ಮಾತನಾಡಿದ ನೂತನ ಅಧ್ಯಕ್ಷೆ ಅನಿತಾ ಆನಂದ್, “ಸಂಘದ ಮೇಲೆ ಗ್ರಾಮದ ಸದಸ್ಯರು ಇಟ್ಟಿರುವ ಅವರ ನಂಬಿಕೆಗೆ ಯಾವುದೇ ಚುತಿಬಾರದಂತೆ ಸಂಘದ ಕೆಲಸ ಮಾಡುತ್ತೇವೆ. ಸಂಘದ ಮಹಿಳಾ ಸದಸ್ಯರ ಆರ್ಥಿಕ ಪ್ರಗತಿಗೆ ಆದ್ಯತೆ ನೀಡಿ ಹಾಲು ಉತ್ಪಾದನೆ ಹಾಗೂ ಮಾರಾಟ ವ್ಯವಸ್ಥೆಯನ್ನು ಇನ್ನು ಹೆಚ್ಚು ಸುಧಾರಿಸಲು ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದರು. ಸಂಘದ ಉಪಾಧ್ಯಕ್ಷ ಬಸಮ್ಮಣಿ ಸೋಮಶೇಖರ ಕೂಡ ಸಂಘದ ಒಗ್ಗಟ್ಟಿನ ಕಾರ್ಯಾಚರಣೆಗೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಚುಂಚನಕಟ್ಟೆ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ನಡೆದ ಈ ಚುನಾವಣೆಯು ಗ್ರಾಮೀಣ ಸಹಕಾರ ಚಳುವಳಿಗೆ ಹೊಸ ಚೈತನ್ಯ ತುಂಬಿದ್ದು, ಮುಂದಿನ ದಿನಗಳಲ್ಲಿ ಸಂಘದ ಅಭಿವೃದ್ಧಿಗೆ ಹೊಸ ದಿಕ್ಕು ನೀಡಲಿದೆ ಎಂಬ ನಿರೀಕ್ಷೆ ಸಾರ್ವಜನಿಕರಿಗೆ ವ್ಯಕ್ತವಾಗಿದೆ.
ಕಾವೇರಿ ತೀರದ ನೈಸರ್ಗಿಕ ಸೊಬಗಿನಲ್ಲಿ ಮೆರೆಯುವ ಶ್ರೀರಾಮಲಿಂಗೇಶ್ವರ ದೇಗುಲದಲ್ಲಿ ಮಹಾಶಿವರಾತ್ರಿ ಭಕ್ತರಿಂದ ಪೂಜೆ



