HOMEFilm News

ಮೈಸೂರು ಸಿನಿಮಾ ಸೊಸೈಟಿ ವತಿಯಿಂದ ಅಂತರರಾಷ್ಟ್ರೀಯ ಕಿರುಚಿತ್ರೋತ್ಸವ

ಫೆ.20ರಿಂದ ಮೂರು ದಿನಗಳ ‘ಪರಿದೃಶ್ಯ’ ಕಾರ್ಯಕ್ರಮ

ಮೈಸೂರು, ಫೆ.16: ಮೈಸೂರು ಸಿನಿಮಾ ಸೊಸೈಟಿ ವತಿಯಿಂದ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಫೆಬ್ರವರಿ 20, 21 ಮತ್ತು 22ರಂದು ‘ಪರಿದೃಶ್ಯ’ ಅಂತರರಾಷ್ಟ್ರೀಯ ಕಿರುಚಿತ್ರ ಮತ್ತು ಸಾಕ್ಷ್ಯಚಿತ್ರೋತ್ಸವವನ್ನು ಆಯೋಜಿಸಲಾಗಿದೆ ಎಂದು ಸಂಘದ ಗೌರವಾಧ್ಯಕ್ಷ ಡಾ. ಚಂದ್ರಶೇಖರ್ ತಿಳಿಸಿದ್ದಾರೆ. ಮೂರು ದಿನಗಳ ಕಾಲ ನಡೆಯಲಿರುವ ಈ ಕಾರ್ಯಕ್ರಮವು ಚಿತ್ರಪ್ರಿಯರಿಗೆ ವಿಭಿನ್ನ ದೇಶಗಳ ಸಿನೆಮಾ ಕಣ್ತುಂಬಿಕೊಳ್ಳುವ ಅವಕಾಶ ಒದಗಿಸಲಿದೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಚಿತ್ರೋತ್ಸವಕ್ಕೆ ಜಗತ್ತಿನ 114 ದೇಶಗಳಿಂದ ಸುಮಾರು 3042 ಕಿರುಚಿತ್ರಗಳು ಮತ್ತು ಸಾಕ್ಷ್ಯಚಿತ್ರಗಳು ಪಾಲ್ಗೊಳ್ಳಲಿವೆ ಎಂದು ಹೇಳಿದರು. ವಿವಿಧ ಭಾಷೆಗಳಲ್ಲಿರುವ ಚಿತ್ರಗಳು ಮಾನವೀಯತೆ, ಸಾಮಾಜಿಕ ಬದಲಾವಣೆ, ಪರಿಸರ, ಸಂಸ್ಕೃತಿ ಮತ್ತು ತಂತ್ರಜ್ಞಾನ ಸೇರಿದಂತೆ ಅನೇಕ ವಿಷಯಗಳನ್ನು ಒಳಗೊಂಡಿರಲಿವೆ. ಪ್ರೇಕ್ಷಕರಿಗೆ ವಿಭಿನ್ನ ಸಂಸ್ಕೃತಿಗಳ ಜೀವನಶೈಲಿ ಮತ್ತು ಚಿಂತನೆಗಳನ್ನು ಅರಿಯುವ ವೇದಿಕೆಯಾಗಿ ಈ ಚಿತ್ರೋತ್ಸವ ನೆರವಾಗಲಿದೆ ಎಂದು ವಿವರಿಸಿದರು.

ಫೆಬ್ರವರಿ 20ರಂದು ಬೆಳಗ್ಗೆ 10 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಹಿರಿಯ ನಟ ಹಾಗೂ ರಾಜ್ಯಸಭಾ ಸದಸ್ಯ ಜಗದೀಶ್, ನಿರ್ದೇಶಕ ಪ್ರಕಾಶ್ ಬೆಳವಾಡಿ, ಲೇಖಕ ಜೋಗಿ ಗೀರಿಶ್ ರಾವ್ ಹತ್ವಾರ್, ಸಾಹಿತ್ಯ ಮತ್ತು ಚಲನಚಿತ್ರ ಕ್ಷೇತ್ರದ ತಜ್ಞ ಡಾ.ವಿ. ನಾಗೇಂದ್ರ ಪ್ರಸಾದ್, ನಟಿ ಕಾರುಣ್ಯ ರಾಮ್ಗೌಡ ಹಾಗೂ ಲಾಸ್ಯ ನಾಗರಾಜ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದ ಅವಧಿಯಲ್ಲಿ ಆಯ್ದ ಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದ್ದು, ನಿರ್ದೇಶಕರು ಮತ್ತು ಸಿನಿರಸಿಕರ ನಡುವೆ ಸಂವಾದಕ್ಕೂ ಅವಕಾಶ ಕಲ್ಪಿಸಲಾಗುತ್ತದೆ. ವಿದ್ಯಾರ್ಥಿಗಳು, ಯುವ ಚಿತ್ರ ನಿರ್ಮಾಪಕರು ಮತ್ತು ಸಿನೆಮಾ ಆಸಕ್ತರಿಗೆ ಇದು ಪ್ರೇರಣಾದಾಯಕ ವೇದಿಕೆಯಾಗಿ ಪರಿಣಮಿಸಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಫೆಬ್ರವರಿ 22ರಂದು ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಈ ಸಂದರ್ಭದಲ್ಲಿ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ನಟ ಡಾಲಿ ಧನಂಜಯ, ಹಿರಿಯ ನಟಿ ಜುಮಾಲಮತ್ತು ಅಂತರರಾಷ್ಟ್ರೀಯ ಅತಿಥಿ ಜಿಯಾನಿ ಬಿನ್ಹಿಮ್ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಚಿತ್ರೋತ್ಸವದ ಅಂಗವಾಗಿ ಅತ್ಯುತ್ತಮ ಕಿರುಚಿತ್ರ ಹಾಗೂ ಸಾಕ್ಷ್ಯಚಿತ್ರಗಳಿಗೆ ಸುಮಾರು 30 ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಇದರಿಂದ ಹೊಸ ಪ್ರತಿಭೆಗಳನ್ನು ಉತ್ತೇಜಿಸಲು ಹಾಗೂ ಗುಣಮಟ್ಟದ ಚಲನಚಿತ್ರ ನಿರ್ಮಾಣಕ್ಕೆ ಪ್ರೋತ್ಸಾಹ ನೀಡಲು ಸಾಧ್ಯವಾಗಲಿದೆ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಜಿ.ಆರ್. ಚೇತನ್, ಪದ್ಮಾವತಿ ಎಸ್. ಭಟ್, ಡಾ. ಶೋಭಿತ್ ರಂಗಪ್ಪ, ಜಯಶೇಖರ್ ಹಾಗೂ ಜೋಗಿ ಮಂಜು ಸೇರಿದಂತೆ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಆಯೋಜಕರು ಹೇಳಿದರು.

ಜಾಗತಿಕ ಮಟ್ಟದ ಕಿರುಚಿತ್ರಗಳು ಮತ್ತು ಸಾಕ್ಷ್ಯಚಿತ್ರಗಳನ್ನು ಒಂದೇ ವೇದಿಕೆಯಲ್ಲಿ ಪ್ರದರ್ಶಿಸುವ ‘ಪರಿದೃಶ್ಯ’ ಕಾರ್ಯಕ್ರಮವು ಮೈಸೂರು ನಗರದ ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೊಸ ಮೆರಗು ನೀಡಲಿದ್ದು, ಸಿನಿರಸಿಕರು ಮತ್ತು ವಿದ್ಯಾರ್ಥಿಗಳಿಗೆ ಹೊಸ ಅನುಭವ ನೀಡಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿ

Leave a Response