HOMENewsPolitical

ರೇಡಿಯೋ ಮೈದಾನದಲ್ಲಿ 5 ಸಾವಿರ ಕಾರ್ಯಕರ್ತರನ್ನು ಸೇರಿಸಿ 22ರಂದು ಜೆಡಿಎಸ್ ಭರ್ಜರಿ ಕಾರ್ಯಕ್ರಮ

ಜನರೊಂದಿಗೆ ಜನತಾದಳ: ಸದಸ್ಯತ್ವ ಅಭಿಯಾನ ವೇಗ

ವರದಿ:-ವಡ್ಡರಕೊಪ್ಪಲು ಶಿವರಾಮು.

ಕೆ ಆರ್ ನಗರ. ಫೆ.17:- ಮುಂಬರುವ ಪುರಸಭಾ ಚುನಾವಣೆಗೆ ತಯಾರಾಗಲು ಹಾಗೂ ಈ ತಿಂಗಳ 22ರ ಭಾನುವಾರದಂದು ನಡೆಯುವ ಜನರೊಂದಿಗೆ ಜನತಾದಳ ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯಕ್ರಮಕ್ಕೆ ಮಾಜಿ ಪುರಸಭಾ ಸದಸ್ಯರು ಆಕಾಂಕ್ಷಿ ಅಭ್ಯರ್ಥಿಗಳು ಪಕ್ಷ ಸಂಘಟನೆಗೆ ತಯಾರಾಗುವಂತೆ ಹಾಗೂ ಕಾರ್ಯಕ್ರಮಕ್ಕೆ ಅತಿ ಹೆಚ್ಚು ಕಾರ್ಯಕರ್ತರನ್ನು ಸೇರಿಸುವಂತೆ ತಾಲ್ಲೂಕ್ ಜೆಡಿಎಸ್ ಅಧ್ಯಕ್ಷ ಹಂಪಾಪುರ ಕುಮಾರ್ ಮನವಿ ಮಾಡಿದರು.

ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಸದಸ್ಯತ್ವ ನೋಂದಣಿ ಅಭಿಯಾನ ಜನರೊಂದಿಗೆ ಜನತಾದಳ ಎಂಬ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು 22ರಂದು ನಡೆಯುವ ಕಾರ್ಯಕ್ರಮವು ಪಟ್ಟಣದ ರೇಡಿಯೋ ಮೈದಾನದಲ್ಲಿ ನಡೆಯಲಿದ್ದು ಈ ಕಾರ್ಯಕ್ರಮಕ್ಕೆ ರಾಜ್ಯ ಯುವ ಜೆಡಿಎಸ್ ಜನತಾದಳದ ಅಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಮಾಜಿ ಸಚಿವರಾದ ಸಾರಾ ಮಹೇಶ್ ಸೇರಿದಂತೆ ಮಾಜಿ ಸಚಿವರು ಶಾಸಕರು ವಿಧಾನ ಪರಿಷತ್ ಸದಸ್ಯರು ಮಾಜಿ ಶಾಸಕರು ವಿವಿಧ ಘಟಕಗಳ ಅಧ್ಯಕ್ಷರೂ ಪದಾಧಿಕಾರಿಗಳು ಭಾಗವಹಿಸಲಿದ್ದು ಈ ಕಾರ್ಯಕ್ರಮಕ್ಕೆ 23 ವಾರ್ಡ್ ಗಳಿಂದ ಸುಮಾರು 5 ಸಾವಿರ ಕಾರ್ಯಕರ್ತರನ್ನು ಸೇರಿಸಬೇಕೆಂದು ಮನವಿ ಮಾಡಿದರು.

ಇದನ್ನೂ ಓದಿ:- ನಿಖಿಲ್ ಕುಮಾರಸ್ವಾಮಿ ಫೆ.18ರಿಂದ ಮೈಸೂರಿನಲ್ಲಿ ‘ಜನರೊಂದಿಗೆ ಜನತಾ ದಳ ಅಭಿಯಾನ ಆರಂಭ

ಈ ಕಾರ್ಯಕ್ರಮಕ್ಕೆ ಕೆಆರ್ ನಗರ ಮತ್ತು ಸಾಲಿಗ್ರಾಮ ತಾಲ್ಲೂಕು ಗಳಿಂದ ಸುಮಾರು 25 ಸಾವಿರ ಕಾರ್ಯಕರ್ತರು ಸೇರುವ ಮೂಲಕ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಬಲವನ್ನು ತೋರಿಸುವ ಜೊತೆಗೆ ರಾಜ್ಯದಲ್ಲಿಯೇ ಅತ್ಯಂತ ದೊಡ್ಡ ಕಾರ್ಯಕ್ರಮವನ್ನು ಮಾಡುವ ಮೂಲಕ ಮುಂಬರುವ ಗ್ರಾಮ ಪಂಚಾಯಿತಿ ತಾಲೂಕು ಮತ್ತು ಜಿಲ್ಲಾ ಪಂಚಾಯತಿ ಪುರಸಭಾ ಚುನಾವಣೆಗೆ ಈಗಿನಿಂದಲೇ ತಯಾರಾಗಿದ್ದೇವೆ ಎಂಬ ಸಂದೇಶವನ್ನು ಪಕ್ಷದ ವರಿಷ್ಠ ರಿಗೆ ತಿಳಿಸಬೇಕಾದ ಕರ್ತವ್ಯ ಕಾರ್ಯಕರ್ತರು ಮತ್ತು ಮುಖಂಡರ ಹೆಗಲಮೇಲಿದೆ ಎಂದು ತಿಳಿಸಿದರು.

ಪುರಸಭಾ ಮಾಜಿ ಸದಸ್ಯ ಉಮೇಶ್ ಮಾತನಾಡಿ ಪ್ರತಿಯೊಬ್ಬ ಆಕಾಂಕ್ಷಿ ಅಭ್ಯರ್ಥಿಯು ತಮ್ಮ ವೈಯಕ್ತಿಕ ದ್ವೇಷ ಬಿಟ್ಟು ನಾನೇ ಸಾರಾ ಮಹೇಶ್ ನಾನೇ ಪುರಸಭೆ ಅಭ್ಯರ್ಥಿ ಎಂಬುದನ್ನು ತೋರಿಸುವ ಮೂಲಕ ಮತ್ತೊಮ್ಮೆ ಕೆ ಆರ್ ನಗರ ವಿಧಾನಸಭಾ ಕ್ಷೇತ್ರಕ್ಕೆ ಸಾರಾ ಮಹೇಶ್ ಎಂಬುದನ್ನು ತೋರಿಸಬೇಕಿದೆ ಅದಕ್ಕಾಗಿ ಕೆಲವು ಸಮಯ ತ್ಯಾಗಕ್ಕೂ ಸಿದ್ಧರಾಗಿ ತಾಳ್ಮೆಯಿಂದ ದುಡಿದರೆ ಒಂದಲ್ಲ ಒಂದು ದಿನ ಅವಕಾಶ ಸಿಕ್ಕೇ ಸಿಗುತ್ತದೆ ಎಂದು ತಿಳಿಸಿದರು.

ಕಳೆದ ಪುರಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಗಳನ್ನು ಜೆಡಿಎಸ್ ಪಕ್ಷದ ಮುಖಂಡರೆ ಸೋಲಿಸಿಕೊಂಡಿದ್ದು ಇನ್ನು ಕಣ್ಣಿಗೆ ಕಟ್ಟಿದಂತಿದೆ ಸುಮಾರು ಐದರಿಂದ ಆರು ಕ್ಷೇತ್ರಗಳು ನಮ್ಮವವರಿಂದಲೇ ನಮ್ಮ ಅಭ್ಯರ್ಥಿಗಳು ಸೋಲುಂಡರು ಅಂತ ಕೆಲಸವನ್ನು ಈ ಬಾರಿ ಮಾಡದಿರಿ ಏನಾದರೂ ಸರಿ ಈ ಬಾರಿ ಮುಂಬರುವ ಪುರಸಭಾ ಆಡಳಿತವನ್ನು ಹಿಡಿಯುವ ಜವಾಬ್ದಾರಿ ಪಟ್ಟಣದ ಜೆಡಿಎಸ್ ಕಾರ್ಯಕರ್ತರು ಮುಖಂಡರ ಮೇಲಿದೆ ಎಂದು ತಿಳಿಸಿದರು.

ಪುರಸಭಾ ಮಾಜಿ ಅಧ್ಯಕ್ಷ ಕಾಂತರಾಜ್ ಮಾತನಾಡಿ ಪಕ್ಷಕ್ಕೆ ಬಂದವರನ್ನು ಬರುವವರನ್ನು ಬಹಳ ಗೌರವದಿಂದ ಅವರ ಮನಸ್ಸಿಗೆ ನೋವಾಗದಂತೆ ನೋಡಿಕೊಳ್ಳುವ ಜೊತೆಗೆ ಬಹುಸಂಖ್ಯಾತರು ಅಲ್ಪಸಂಖ್ಯಾತರ ಮನವಲಿಸುವ ಕೆಲಸ ಮಾಡಿ ನಮ್ಮ ಆ ನಡವಳಿಕೆಯನ್ನು ನೋಡಿ ವಿರೋಧ ಪಕ್ಷದ ದೌರ್ಜನ್ಯ ಮತ್ತು ಅವರ ನಡವಳಿಕೆಯನ್ನು ನೋಡಿ ನಮ್ಮ ಪಕ್ಷಕ್ಕೆ ನೂರಾರು ಜನ ಮುಖಂಡರು ಸಾವಿರಾರು ಕಾರ್ಯಕರ್ತರು ಜೆಡಿಎಸ್ ಪಕ್ಷ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ ಅವರನ್ನು ಅತ್ಯಂತ ಅಭಿಮಾನದಿಂದ ಬರಮಾಡಿಕೊಳ್ಳೋಣ ಎಂದು ತಿಳಿಸಿದರು.

ಮುಂಬರುವ 22ರ ಭಾನುವಾರದಂದು ನಡೆಯುವ ಕಾರ್ಯಕ್ರಮಕ್ಕೆ 23 ವಾರ್ಡ್ ಗಳ ಪ್ರತಿಯೊಬ್ಬ ಸದಸ್ಯರು ಮಾಜಿ ಸದಸ್ಯರು ಆಕಾಂಕ್ಷಿ ಅಭ್ಯರ್ಥಿಗಳು ಅತಿ ಹೆಚ್ಚು ಕಾರ್ಯಕರ್ತರ ಮನವರಿಸುವ ಮೂಲಕ ಕರೆ ತನ್ನಿ ಯಾರು ಹೆಚ್ಚು ಕೆಲಸ ಮಾಡುವರು ಅವರೇ ಮುಂದಿನ ಅಭ್ಯರ್ಥಿಯಾಗಲಿದ್ದಾರೆ ಹಾಗೂ ಮುಂದಿನ ಚುನಾವಣೆಯಲ್ಲಿ ಗೆಲ್ಲಲು ಸಹಾಯವಾಗಲಿದೆ ಎಂದು ತಿಳಿಸಿದರು.

ಬಾಕ್ಸ್ ಕಾಲಂ:- “ಮತ ಪರಿಷ್ಕರಣೆಗೆ ಸಿದ್ದರಾಗಿ:- ಜೆಡಿಎಸ್ ಪಕ್ಷದ ನಗರಾಧ್ಯಕ್ಷ ಮತ್ತು ಪುರಸಭಾ ಮಾಜಿ ಸದಸ್ಯ ಸಂತೋಷ್ ಗೌಡ ಮಾತನಾಡಿ ಪಟ್ಟಣದಲ್ಲಿ ಅತಿ ಹೆಚ್ಚು ಮತದಾರರಿದ್ದು ಅವುಗಳ ಪರಿಷ್ಕರಣೆಯಾಗಬೇಕಾಗಿದೆ ಪ್ರತಿ 23 ವಾರ್ಡುಗಳಲ್ಲಿ ಎರಡೆರಡು ಮೂರು ಜನ ಬೂತ್ ಏಜೆಂಟುಗಳು ಆ ವಾರ್ಡಿನ ಮತದಾರರನ್ನು ಪರಿಶೀಲಿಸಿ ಎರಡು ಕಡೆ ಇರುವವರು ಮೃತರಾದವರು ಹೊಸದಾಗಿ ಸೇರ್ಪಡೆ ಮಾಡುವವರು ಎಲ್ಲವನ್ನು ಪರಿಶೀಲಿಸಿ ಕೈ ಬಿಡುವವರನ್ನು ಕೈ ಬಿಡುವಂತೆ ನಮಗೆ ಮತ್ತು ರಾಜ್ಯದ ಜೆಡಿಎಸ್ ಪಕ್ಷಕ್ಕೆ ಹಾಗೂ ತಾಲೂಕ್ ಚುನಾವಣಾ ಅಧಿಕಾರಿಗಳಿಗೆ ನೀಡುವ ಜೊತೆಗೆ ಮುಂಬರುವ ಚುನಾವಣೆಯಲ್ಲಿ ನೀವೇ ಅಭ್ಯರ್ಥಿಯಾದರೆ ಸಹಾಯವಾಗುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ:- ಸಾಹಿತಿ ಕವಿ ರಾಜಕಾರಣಿ ಹಳ್ಳಿಹಕ್ಕಿ ಹೆಚ್ ವಿಶ್ವನಾಥ್ ರಾಜಕೀಯ ನಡೆ ಯಾವ ಕಡೆ?

ಕಾರ್ಯಕ್ರಮವನ್ನು ಉದ್ದೇಶಿಸಿ ಮಾಜಿ ಪುರಸಭಾ ಅಧ್ಯಕ್ಷ ರಾಜ ಶ್ರೀಕಾಂತ್ ಸದಸ್ಯರುಗಳಾದ ಗಿರೀಶ್ ಕೆ ಎಲ್ ಜಗದೀಶ್ ಕುಮಾರ್ ಯುವ ಜೆಡಿಎಸ್ ಅಧ್ಯಕ್ಷ ಯೋಗೇಶ್ ಮಾತನಾಡಿದರು ವೇದಿಕೆಯಲ್ಲಿ ಜೆಡಿಎಸ್ ವಕ್ತಾರ ಕೆಎಲ್ ರಮೇಶ್ ನಗರ ಕಾರ್ಯದರ್ಶಿ ರುದ್ರೇಶ್ ಹೆಬ್ಬಾಳ್ ಶಿವಣ್ಣ ಕಗ್ಗೆರೆ ಕುಚಲ ಕೃಷ್ಣಶೆಟ್ಟಿ ಭಾಗ್ಯಲಕ್ಷ್ಮಿ ಗೀತಾ ಮಹೇಶ್ ಸಿದ್ದಪ್ಪ ತಿಮ್ಮೇಗೌಡ ಮಂಜುನಾಥ್ ಮುಬಾರಕ್ ರಮೇಶ್ ಚಂದ್ರು ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

Leave a Response