HOMENews

ರೈತರಿಂದ ಹಣ ಕಸಿಯುವ ದಂಧೆ: ರಾಗಿ ಖರೀದಿ ಕೇಂದ್ರದಲ್ಲಿ ಅಕ್ರಮಗಳ ಆರೋಪ

ವರದಿ: ರವಿಚಂದ್ರ ಬೂದಿತಿಟ್ಟು.

ಪಿರಿಯಾಪಟ್ಟಣ : ತಾಲ್ಲೂಕಿನ ರಾಗಿ ಖರೀದಿ ಕೇಂದ್ರಗಳಲ್ಲಿ ಭ್ರಷ್ಟಚಾರ ನಡೆಯುತ್ತಿದು ಇದರಿಂದಾಗಿ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ಮಾಜಿ ಶಾಸಕ ಕೆ.ಮಹದೇವ್ ಆರೋಪಿಸಿದರು.

ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಇರುವ ರಾಗಿ ಖರೀದಿ ಕೇಂದ್ರಕ್ಕೆ ಭೇಟಿ ನೀಡಿ ರೈತರೊಂದಿಗೆ ಸಮಾಲೋಚನೆ ನಡೆಸಿದ ನಂತರ ಮಾತನಾಡಿದ ಅವರು ತಾಲೂಕಿನಲ್ಲಿ ನಾಲ್ಕು ಹೋಬಳಿಗಳಲ್ಲಿ ರಾಗಿ ಖರೀದಿ ಕೇಂದ್ರವನ್ನು ತೆರೆಯಲಾಗಿದೆ. ಸರ್ಕಾರ ಕೂಡ ರಾಗಿ ಬೆಳೆಗೆ ನಿಗದಿತ ದರ ನಿಗದಿ  ಮಾಡಿದೆ ಆದರೆ ರಾಗಿ ಖರೀದಿ ಕೇಂದ್ರದಲ್ಲಿ  ದಲ್ಲಾಳಿಗಳ ಹಾವಳಿ ಹೆಚ್ಚಾಗಿದೆ.ಖರೀದಿದಾರರು ರೈತರಿಗೆ ಬಹಳ ತೊಂದರೆ ನೀಡುತ್ತಿದ್ದಾರೆ.ರೈತರ ಬಳಿ ಪ್ರತಿ ಕ್ವಿಂಟಲ್ ರಾಗಿಗೆ ನಾಲ್ಕು  ಕೆ ಜಿ ಕಳೆಯುತ್ತಿದ್ದಾರೆ. ರಾಗಿ ತುಂಬಿದ ವಾಹನಗಳನ್ನು ಕೇಂದ್ರದೊಳಗೆ ಬಿಡಲು ಎರಡು ಸಾವಿರದಷ್ಟು ಹಣವನ್ನು ಖರೀದಿದಾರರು ಲಂಚ ಕೇಳುತ್ತಾರೆ.ರಾಗಿ ಮೂಟೆ  ತುಂಬಲು ಕೂಡ  ಹಮಾಲಿಗಳು ನೂರು ರೂ ಕೇಳುತ್ತಾರೆ. ತಾಲೂಕಿನಲ್ಲಿ ಭತ್ತದ ಬೆಲೆ ಕುಸಿತವಾಗಿದೆ.ಅಲ್ಲದೆ ಶುಂಠಿ ಬೆಳೆ ನಾಶವಾಗಿ ತಂಬಾಕಿಗೆ ಸೂಕ್ತ ಬೆಲೆ ಇಲ್ಲದೆ ಹರಾಜು ಪ್ರಕ್ರಿಯೆ ಸ್ಥಗಿತವಾಗಿದ್ದು ತಂಬಾಕು ಬೆಳೆಗಾರರು ಪ್ರತಿನಿತ್ಯ ಸೂಕ್ತ ಬೆಂಬಲ ಬೆಲೆಗೆ ಪ್ರತಿಭಟನೆ ನಡೆಸುತ್ತಿದ್ದಾರೆ.

ರಾಗಿ ಕೇಂದ್ರದ ಈ ಅಕ್ರಮದಲ್ಲಿ ಸ್ಥಳೀಯ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳು ಸಹಕಾರ ನೀಡುತ್ತಿರುವ ಬಗ್ಗೆ ರೈತರು ದೂರುತ್ತಿದ್ದಾರೆ.ಸ್ಥಳೀಯ ಗಿರೀಶ್ ಎಂಬ ವ್ಯಕ್ತಿಯು ದಲ್ಲಾಳಿ ಕೆಲಸ ಮಾಡುತ್ತ ರೈತರಿಗೆ ತೊಂದರೆ ನೀಡುತ್ತಿದ್ದಾನೆ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತ್ತೆ ತಹಸೀಲ್ದಾರ್ ರವರಿಗೆ ಕರೆ ಮಾಡಿ ದೂರು ನೀಡಿದರು.

ಆದ್ದರಿಂದ್ದ ಅತೀ  ಶೀಘ್ರದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಈ  ಸಮಸ್ಯೆಯನ್ನು ಬಗೆಹರಿಸಬೇಕು. ಇಲ್ಲದಿದ್ದಲ್ಲಿ ರಾಗಿ ಖರೀದಿ ಕೇಂದ್ರವನ್ನು ಮುಚ್ಚಿ ರೈತರೊಂದಿಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ರೈತ ಸಂಘದ ರಾಜ್ಯ ಯುವ ಘಟಕದ ಅಧ್ಯಕ್ಷ ಸ್ವಾಮೇಗೌಡ ಮಾತನಾಡಿ ರಾಗಿ ಖರೀದಿ ಕೇಂದ್ರದಲ್ಲಿ ಆಗುತ್ತಿರುವ ಅನ್ಯಾಯವನ್ನು ಕೇಳುವವರಿಲ್ಲದಾಗಿದೆ.ರೈತರು ಬೆಳೆದ ಬೆಳೆಗೆ ಸೂಕ್ತ ಬೆಂಬಲ ಬೆಲೆ ಇಲ್ಲದಾಗಿದೆ.ಸಂಘಟನೆ ವತಿಯಿಂದ ಸಾಕಷ್ಟು ಹೋರಾಟ ಮಾಡಿದ್ದೇವೆ ಆದರೂ ಸಮಸ್ಯೆ ಬಗೆಹರಿದಿಲ್ಲ.ಸ್ಥಳೀಯ ಸಚಿವರು ರೇಷ್ಮೆ ಬೆಳೆ ಬೆಳೆಯಲು ಸೂಚಿಸುತ್ತಿದ್ದಾರೆ. ಆದರೆ ಈ ಬೆಳೆ ಬೆಳೆಯಲು ಎಷ್ಟು ಶ್ರಮವಿದೆ ಎಂಬುದು ಸಚಿವರು ಅರ್ಥಯಿಸಿಕೊಳ್ಳಬೇಕು.ಯಾವುದೇ ಕಾರಣಕ್ಕೂ ರೈತರ ಬಳಿ ರಾಗಿ ಕಳೆಯಬಾರದು ಹಾಗೂ  ರಾಗಿ ಖರೀದಿ ಕೇಂದ್ರಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ನಿಲ್ಲಿಸಬೇಕು ಇಲ್ಲದಿದ್ದರೆ ಖರೀದಿ ಕೇಂದ್ರಕ್ಕೆ ಬೀಗ ಹಾಕಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸಂಘದ ರಾಜ್ಯಾಧ್ಯಕ್ಷ ಮಂಜುನಾಥ್ ಆರ್ ಗೌಡ, ಪುರಸಭೆ ಮಾಜಿ ಸದಸ್ಯರಾದ ಪಿ.ಸಿ.ಕೃಷ್ಣ,ನಿರಂಜನ್,ರಾಗಿ ಖರೀದಿ ಕೇಂದ್ರದ ಯಶವಂತ್,ರೈತ ಮುಖಂಡರಾದ  ಶಂಕರ್,ಪರಮೇಶ್,ಕಾಂತರಾಜ್,ಬಿಲ್ಲಹಳ್ಳಿ ಸುರೇಶ್, ನಾಗೇಂದ್ರ,ಯೊಗೇಶ್, ಪ್ರಭು,ಶಿವರಾಜ್, ಮಹದೇವ್,ದೇವರಾಜ್,ಮನು ಸೇರಿದಂತ್ತೆ ಇತರರಿದ್ದರು

Leave a Reply