ಅಂಬೇಡ್ಕರ್ ಅವರ ಯಶಸ್ಸಿನ ಹಿಂದಿನ ಶಕ್ತಿಯಾಗಿದ್ದರು ಪ್ರತಿಯೊಬ್ಬ ಮಹಿಳೆಯರ ಆದರ್ಶಮಾತೆ :ಮಾಜಿ ಶಾಸಕರು ಎಲ್ ನಾಗೇಂದ್ರ

ಮೈಸೂರು:- ಕುಕ್ಕರಹಳ್ಳಿಯಲ್ಲಿ ಮಾತೆ ರಮಾಬಾಯಿ ಅಂಬೇಡ್ಕರ್ ಜನ್ಮದಿನಾಚರಣೆ ಇಂದು ನಗರದ ಕುಕ್ಕರಹಳ್ಳಿಯ ಅಂಬೇಡ್ಕರ್ ಪ್ರತಿಮೆಯ ಬಳಿ ಚಾಮರಾಜ ವಿಧಾನಸಭಾ ಕ್ಷೇತ್ರದ ದಲಿತ ಒಕ್ಕೂಟದ ವತಿಯಿಂದ ಮಾತೆ ರಮಾಬಾಯಿ ರವರ ಜನ್ಮದಿನಾಚರಣೆ ನೆರವೇರಿತು
ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಚಾಮರಾಜ ಕ್ಷೇತ್ರದ ಮಾಜಿ ಶಾಸಕರು ನಗರ ಬಿಜೆಪಿ ಅದ್ಯಕ್ಷರಾದ ಎಲ್ ನಾಗೇಂದ್ರ ರವರು ಮಾತನಾಡಿ ಪ್ರಪಂಚದಲ್ಲಿ ಅತ್ಯಂತ ಶ್ರೇಷ್ಠ ಸಂವಿಧಾನ ನಮ್ಮ ಭಾರತದ ಸಂವಿಧಾನ ಅದರ ರಚನಾಕಾರರು ಡಾ. ಬಿ.ಆರ್. ಅಂಬೇಡ್ಕರ್ ಅವರು ಅವರ ಎಲ್ಲಾ ಕೆಲಸಕ್ಕೆ ಸ್ಪೂರ್ತಿದಾಯಕರು ಮಾತೆ ರಮಾಬಾಯಿ ರವರು ಅವರು ತ್ಯಾಗದ ಸಂಕೇತ. ಬಾಬಾಸಾಹೇಬರ ಶಿಕ್ಷಣ ಮತ್ತು ಸಾಮಾಜಿಕ ಹೋರಾಟದ ಹಾದಿಯಲ್ಲಿ ಬಂಡೆಯಂತೆ ನಿಂತು, ದಾರಿದ್ರ್ಯ ಹಾಗೂ ಮಕ್ಕಳ ಅಗಲಿಕೆಯ ನೋವಿನಲ್ಲೂ ಪತಿಗೆ ಬೆನ್ನೆಲುಬಾಗಿದ್ದರು. ‘ರಾಮಾಯಿ’ ಎಂದೇ ಜನಪ್ರಿಯರಾದ ಇವರು, ಅಂಬೇಡ್ಕರ್ ಅವರ ಯಶಸ್ಸಿನ ಹಿಂದಿನ ಶಕ್ತಿಯಾಗಿದ್ದರು ಪ್ರತಿಯೊಬ್ಬ ಮಹಿಳೆಯರ ಆದರ್ಶಮಾತೆ ಎಂದು ಹೆಮ್ಮೆಯ ಮಾತನಾಡಿದರು ಈ ಸಂಧರ್ಭದಲ್ಲಿ ಮಾಜಿ ನಗರಪಾಲಿಕೆ ಸದಸ್ಯೆ ವೇದಾವತಿ,ರಾಜ್ಯ ಎಸ್ ಸಿ ಮೋರ್ಚಾ ಕಾರ್ಯದರ್ಶಿ,ಪರಮಾನಂದ,ನಗರ ಪ್ರಧಾನ ಕಾರ್ಯದರ್ಶಿ ಸೋಮಸುಂದರ್, ಸಿ.ಕೆ.ರುದ್ರಮೂರ್ತಿ, ಬಿ.ಎಂ,ರಘು,ನಗರ ಎಸ್ ಟಿ ಮೋರ್ಚಾ ಅದ್ಯಕ್ಷರಾದ ಪಡುವಾರಹಳ್ಳಿ ಎಂ ರಾಮಕೃಷ್ಣ,ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕರಾದ ಕೆ.ಗಿರೀಶ್,ಆರ್ ಸೋಮಣ್ಣ, ರೈಲ್ವೆ ಸಲಹಾ ಸಮಿತಿಯ ಸದಸ್ಯ ಚೆಲುವ,ನಗರ ಬಿಜೆಪಿ ಕಾರ್ಯದರ್ಶಿ ಇ. ರಮೇಶ್ ಗೌಡ,,ಜಯರಾಮ್, ಎಂ. ಚಿಕ್ಕವೆಂಕಟು,ನಗರ ಎಸ್ ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕಾರ್ತಿಕ್ ಮರಿಯಪ್ಪ,ಚಾಮುಂಡೇಶ್ವರಿ ಮಂಡಲದ ಅದ್ಯಕ್ಷರಾದ ರಾಕೇಶ್ ಭಟ್,,ನವೀನ,ಆಶಾಲಕ್ಷೀ,ಶುಭಲಕ್ಷೀ,ಮಹದೇವು,,ಶಿವಶಂಕರ್,ಪುಷ್ಪ,ಸುನೀಲ್, ಹರೀಶ್, ರಾಕೇಶ್,ಪ್ರಕೃತ್,ಹೇಮರಾಜ್,ಪವನ್,ಪ್ರಮೋದ್ ಮತ್ತಿತರಿದ್ದರು ಕಾರ್ಯಕ್ರಮದ ಆಯೋಜಕರಾದ ಶ್ರೀ ಕೆ.ಗಿರೀಶ್ ರವರು ಎಲ್ಲರಿಗೂ ಸ್ವಾಗತಿಸಿ ವಂದಿಸಿದರು



