HOMEJob NewsNews

ಕುರಿ, ಮೇಕೆ ಘಟಕಗಳ ಅನುಷ್ಠಾನಕ್ಕಾಗಿ ಅರ್ಜಿ ಆಹ್ವಾನ

ಮೈಸೂರು, ಫೆ.26:- ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ವತಿಯಿಂದ ಅನುಷ್ಟಾನಗೊಳ್ಳಲಿರುವ ಪರಿಶಿಷ್ಟ ಜಾತಿ ಯೋಜನೆ SCP ಮತ್ತು ಗಿರಿಜನ ಉಪಯೋಜನೆ (TSP) ಅಡಿಯಲ್ಲಿ 10+01 ಕುರಿ/ಮೇಕೆ ಘಟಕಗಳ ವಿತರಣೆಗಾಗಿ ಹಾಗೂ ಸಹಾಯಧನ ಪಡೆಯಲು ಮೈಸೂರು ಜಿಲ್ಲೆಯ 18 ರಿಂದ 60 ವರ್ಷ ವಯೋಮಿತಿ ಇರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕೂಲಿ ಕಾರ್ಮಿಕರು, ಕೃಷಿ ಕಾರ್ಮಿಕರು ಮತ್ತು ಪಶು ಸಂಗೋಪನೆಯಲ್ಲಿ ತೊಡಗಿಸಿಕೊಂಡ ಆಸಕ್ತ ರೈತ ಬಾಂಧವರಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಅರ್ಜಿದಾರರು RD ನಂಬರ್ ಇರುವ ಜಾತಿ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಹೊಂದಿರಬೇಕು ಮತ್ತು FRUITS ತಂತ್ರಾಶದಲ್ಲಿ ನೋಂದಾಯಿಸಿಕೊoಡಿರಬೇಕು. ಅರ್ಹ ಫಲಾನುಭವಿಗಳನ್ನು ಕ್ಷೇತ್ರದ ಶಾಸಕರ ಅಧಕ್ಷತೆಯ ತಾಲ್ಲೂಕು ಮಟ್ಟದ ಫಲಾನುಭವಿಗಳ ಆಯ್ಕೆ ಸಮಿತಿ ಮೂಲಕ ಆಯ್ಕೆ ಮಾಡಲಾಗುವುದು.

ನಿಗದಿತ ಅರ್ಜಿ ನಮೂನೆಗಳನ್ನು ಮಾನಂದವಾಡಿ ರಸ್ತೆ, ಚಾಮುಂಡಿಪುರoನಲ್ಲಿರುವ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಸಹಾಯಕ ನಿರ್ದೇಶಕರ ಕಛೇರಿಯಿಂದ ಪಡೆದುಕೊಂಡು ಅಗತ್ಯ ದಾಖಲೆಗಳೊಂದಿಗೆ ಭರ್ತಿಮಾಡಿ ಮಾರ್ಚ್ 10 ರ ಸಂಜೆ 05.00 ಗಂಟೆಯೊಳಗೆ ಕಚೇರಿಗೆ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಆಯಾಯ ತಾಲ್ಲೂಕಿನ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕರು, ಪಶು ಇಲಾಖೆ ಅಥವಾ ಸಹಾಯಕ ನಿರ್ದೇಶಕರ ನಿಗಮದ ಕಛೇರಿಗೆ ಖುದ್ದಾಗಿ ಅಥವಾ ಮೊಬೈಲ್ ಸಂಖ್ಯೆ: 9844916969 ಮೂಲಕ ಸಂಪರ್ಕಿಸಬಹುದು ಎಂದು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

 

 

 

 

Leave a Reply