HOMENews

ಸಾಧನೆ ಮಾಡುವ ಮಹಿಳಾ ಮಣಿಗಳಾಗಿ: ರೇವತಿ ಕೃಷ್ಣಪ್ಪ :  ಭೈರವಿ ಗೌಡತಿಯರ ಬಳಗದ ವತಿಯಿಂದ ಮಹಿಳಾ ದಿನಾಚರಣೆ

ಮೈಸೂರು :- ಮಹಿಳೆಯರು ಮಾತನಾಡುವ ಮಹಿಳಾಮಣಿ ಗಳಾಗಬಾರದು ಸಾಧನೆ ಮಾಡುವ ಮಹಿಳಾ ಮಣಿಗಳಾಗಬೇಕು ನೊಂದವರ ಬಾಳಿಗೆ ಬೆಳಕಾಗಿ ತೊಂದರೆಯಲ್ಲಿದ್ದ ಮಹಿಳೆಯರಿಗೆ ಸ್ಪಂದಿಸುವ ಹೃದಯವಂತಿಕೆ ಬೆಳೆಸಿಕೊಳ್ಳಬೇಕು ಎಂದು ಬೈರತಿ ಗೌಡತಿಯರ ಬಳಗದ ಅಧ್ಯಕ್ಷರಾದ ರೇವತಿ ಕೃಷ್ಣಪ್ಪ ಹೇಳಿದರು

ನಗರದ ವಿಜಯನಗರದಲ್ಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ ಭೈರವಿ ಗೌಡ್ತಿಯರ ಬಳಗದಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ   ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಇಬ್ಬರು ಸಾಧಕರಾದ ಮೈಸೂರು ಜಿಲ್ಲಾ ಆಸ್ಪತ್ರೆಯಲ್ಲಿ ದಂತ ವೈದ್ಯರಾಗಿರುವ ಡಾಕ್ಟರ್ ಮೀನಾ ಮಂಜುನಾಥ್ ಅವರು ಹಾಗೂ ಅಂತರಾಷ್ಟ್ರೀಯ ಮಟ್ಟದ ಕ್ರೀಡೆಯಲ್ಲಿ ಭಾಗವಹಿಸುವ  ವಿಜಯ ರಮೇಶ ಅವರಿಗೆ  ಬಳಗದಿಂದ ಗೌರವಿಸಿ ಸನ್ಮಾನಿಸಲಾಯಿತು

ಸಂದರ್ಭದಲ್ಲಿ ಬೈರವಿ ವರ್ಷದ ಮಹಿಳೆ -2026 ರಾಂಪ್ ವಾಕ್ ನಲ್ಲಿ ಸುಮಾರು 45 ಮಹಿಳೆಯರು ಭಾಗವಹಿಸಿದ್ದರು

ಬೈರವಿ ವರ್ಷದ ಮಹಿಳೆಯ ಕಿರೀಟವನ್ನು ರೂಪ ದೇವೇಂದ್ರರವರು ಮೂಡಿಗೆರೆಸಿಕೊಂಡರು. ರನ್ನರ್ ಪ್ ಹಾಗಿ  ಅನಿತಾ ಮಾದೇಗೌಡರು ಹಾಗೂ ಪೂಜಾ ಮತ್ತು ಚೈತ್ರ  ರವರು  ಗೆದ್ದು ಕೊಂಡರು ಮುಖ್ಯ ತೀರ್ಪುಗಾರರಾಗಿ  ಆಶಾ ಬಾಬು, ವೀಣಾ ಜಯಂತ್  ಬಿಂದು ಅವರು ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಭೈರವಿ ಗೌಡತಿಯರ ಬಳಗದ ಅಧ್ಯಕ್ಷ ರೇವತಿ ಕೃಷ್ಣಪ್ಪ ಸನ್ಮಾನಿಸಿ ಮಾತನಾಡಿದರ ಈ ಸಂದರ್ಭದಲ್ಲಿ

ಬಳಗದ ಗೌರವ ಅಧ್ಯಕ್ಷರಾದ  ರಾಧಾ ಲಂಕೇಗೌಡರು ಹಾಗೂ ನಿರ್ದೇಶಕರುಗಳಾದ ಡಾ ಹೇಮಾನಂದೀಶ್, ಕೋಮಲ ವೆಂಕಟೇಶ್ ಹಾಗೂ ಸುಶೀಲಾ ಬಸವರಾಜ ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಆಯೋಜಕರುಗಳಾದ ವಸಂತಕುಮಾರಿ ಹಾಗೂ ಪ್ರಮೀಳ,ಲಲಿತಾ ರಂಗನಾಥ್,ಮಣಿ, ಪ್ರಭಾ ನಾಗರಾಜ್, ಹೇಮಾ ರವಿ, ರೂಪ ಮಹೇಶ್, ವಿಜಯ ರಮೇಶ್, ಸಾವಿತ್ರಿ ಸೋಮಶೇಖರ್, ಲಕ್ಷ್ಮಿ ಹಾಗೂ ಭೈರವಿ ಗೌಡತಿಯರ ಬಳಗದ ನೂರಾರು ಸದಸ್ಯರುಗಳು ಭಾಗಿಯಾಗಿದ್ದರು

Leave a Reply