
ಮೈಸೂರು: ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜನ್ಮದಿನದ ಅಂಗವಾಗಿ ಶಾಸಕ ಟಿ ಎಸ್ ಶ್ರೀವತ್ಸ ಅವರ ನೇತೃತ್ವದಲ್ಲಿ ಬಿ ಎಸ್ ವೈ ಹೆಸರಿನಲ್ಲಿ 101 ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಜನರಿಗೆ ಸಿಹಿ ವಿತರಿಸಲಾಯಿತು.
ಪೂಜಾ ನಂತರ ಮಾತನಾಡಿದ ಶ್ರೀವತ್ಸ ಅವರು,ರೈತರ ಪರ ಹೋರಾಟಗಾರರು ಜನನಾಯಕರು, ರಾಜಕೀಯ ಕ್ಷೇತ್ರದಲ್ಲಿ 50 ವಸಂತಗಳನ್ನು ಪೂರೈಸಿದ ಧೀಮಂತ ನಾಯಕ ಮಾಜಿ ಮುಖ್ಯಮಂತ್ರಿಗಳು ಹಾಗೂ ಕೇಂದ್ರೀಯ ಸಂಸದೀಯ ಮಂಡಳಿಯ ಸದಸ್ಯರಾದ ಬಿ.ಎಸ್ ಯಡಿಯೂರಪ್ಪ ಅವರ 84ನೇ ಹುಟ್ಟುಹಬ್ಬವನ್ನು ಕೃಷ್ಣರಾಜ ಕ್ಷೇತ್ರದ ಬಿಜೆಪಿ ವತಿಯಿಂದ ಆಚರಿಸಿದ್ದೇವೆ ಎಂದು ಹೇಳಿದರು.
ಯಡಿಯೂರಪ್ಪ ಬಂದು ಗುಡುಗಿದರೆ ವಿಧಾನಸೌಧ ನಡುಗುತ್ತದೆ ಎಂಬ ಮಾತಿದೆ,ಅವರು ಧೀಮಂತ ನಾಯಕರು,ಬಗರ್ ಹುಕುಂ ಸಾಗುವಳಿ ಇರಬಹುದು,ಶಿವಮೊಗ್ಗದಿಂದ ಬೆಂಗಳೂರಿಗೆ ಪಾದಯಾತ್ರೆ ಇರಬಹುದು ಅದು ಏನೇ ಇದ್ದರೂ ಎಷ್ಟೇ ಕಷ್ಟವಿದ್ದರೂ ಹಟಹಿಡಿದು ಸಾಧಿಸುವ ಛಲಗಾರರು ಎಂದು ಬಣ್ಣಿಸಿದರು.

ಯಡಿಯೂರಪ್ಪ ನವರು ಅಧಿಕಾರದಲ್ಲಿದ್ದಾಗ ಅನೇಕ ಜನಪ್ರಿಯ ಯೋಜನೆಗಳನ್ನು ರಾಜ್ಯಕ್ಕೆ ಕೊಟ್ಟಿದ್ದಾರೆ.ಹೆಣ್ಣು ಹುಟ್ಟಿದರೆ ಶಾಪ ಎಂಬಂತ ಕಾಲದಲ್ಲಿ ಹೆಣ್ಣು ಶಾಪವಲ್ಲ,ವರ ಎಂಬುದಾಗಿ ಹೇಳಿ ಭಾಗ್ಯಲಕ್ಷ್ಮಿ ಬಾಂಡ್ ತಂದರು. ಜಾತ್ಯತೀತ ಧರ್ಮತೀತವಾಗಿ ಅವರು ರಾಜ್ಯವನ್ನು ಆಳಿದ್ದರು ಎಂದು ಶ್ರೀ ವತ್ಸ ಉದಾಹರಣೆಗಳ ಸಹಿತ ವಿವರಿಸಿದರು.
ಈ ಸಂದರ್ಭದಲ್ಲಿ ಕೆ ಆರ್ ಕ್ಷೇತ್ರದ ಅಧ್ಯಕ್ಷ ಗೋಪಾಲ್ ರಾಜೇ ಅರಸ್, ಮಾಜಿ ಮೇಯರ್ ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಜೈ ಶಂಕರ್ ಜಯರಾಮ್ ನಗರ ಪ್ರಧಾನ ಕಾರ್ಯದರ್ಶಿ ಸೋಮ ಸುಂದರ, ಬಿ.ಎಮ್ ರಘು,ನಗರ ಪಾಲಿಕೆ ಮಾಜಿ ಸದಸ್ಯರಾದ ಮಾ.ವಿ.ರಾಂ ಪ್ರಸಾದ್. ಸೌಮ್ಯ ಉಮೇಶ್,ಪಾರ್ಥಸಾರಥಿ, ಬಿ ವಿ ಮಂಜುನಾಥ್, ಚಂಪಕಾ,ಬಿಜೆಪಿ ಮುಖಂಡರಾದ ವಿಶ್ವೇಶ್ವರಯ್ಯ, ರಾಕೇಶ್ ಗೌಡ, ಪ್ರದೀಪ್ ಕುಮಾರ್, ಗೋಕುಲ್ ಗೋವರ್ಧನ್, ನಿಶಾಂತ್,ಬಿಲ್ಲಯ್ಯ, ನವೀನ್,ಗಿರಿಶ್ ಗೌಡ,ಹೇಮಂತ,ಸಂದೀಪ, ಕೀರ್ತಿ, ಮಂಜುನಾಥ್, ರೇಖ, ಕಾವೇರಿ, ನಾಗಶ್ರೀ, ಜಯಂತಿ ಮತ್ತಿತರ ಅಭಿಮಾನಿಗಳು ಹಾಜರಿದ್ದರು.





