HOMENews

ಮೈಸೂರಿನಲ್ಲಿ ಶಾಂತಿ ಮಂದಿರದಲ್ಲೇ ಕ್ರೌರ್ಯ: ನಮಾಜ್ ಮಾಡುವ ವೇಳೆ ಬಾಲಕನ ಮೇಲೆ ಹಲ್ಲೆ

ಮೈಸೂರಿನಲ್ಲಿ ನಮಾಜ್ ಮಾಡುವ ವೇಳೆ ಜಗಳ: ಮಸೀದಿಯೊಳಗೆ ಪುಟ್ಟ ಬಾಲಕನಿಗೆ ಹಲ್ಲೆ

ಮೈಸೂರು: ಜಗತ್ತಿನ್ನಲ್ಲಿ ಮಾನವ ಯಾವಗಳು ಶಾಂತಿ, ಸಹನೆ ಮತ್ತು ಆತ್ಮಪರಿಶೀಲನೆಯ ಕ್ಷಣವಾಗಿರಬೇಕಾದ ಮುಸಲ್ಮನರು ನಮಾಜ್ ಸಮಯದಲ್ಲಿ ಅಪ್ರಾಪ್ತ ಬಾಲಕನ ಮೇಲೆ ಹಲ್ಲೆ ನಡೆದ ಘಟನೆ ಮೈಸೂರು ನಗರದಲ್ಲಿ ತುಂಬಾ ಚರ್ಚೆಗೆ ಕಾರಣವಾಗಿದೆ. ಮೈಸೂರು ನಗರದ ಎನ್.ಆರ್ ಮೊಹಲ್ಲಾ ಪ್ರದೇಶದ ಮಸೀದಿಯೊಳಗೆ ನಡೆದ ಈ ದುರ್ಘಟನೆ ಮಾನವ ಸಮಾಜದ ವಿವಿಧ ವಲಯಗಳಲ್ಲಿ ಭಯ ಹುಟ್ಟಿಸಿದ್ದು, ಅಲ್ಲಿನ ಪೋಷಕರು ಮತ್ತು ಸ್ಥಳೀಯರು ಭದ್ರತೆ ಕುರಿತು ಹಲವು  ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ.

ಏನಿದು ಘಟನೆ ಫೆಬ್ರವರಿ 13ರ ಶುಕ್ರವಾರ ಮಧ್ಯಾಹ್ನ ಮುಸಲ್ಮನರು ನಮಾಜ್ ಮಾಡುವ ಸಮಯದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಪ್ರತೀ ವಾರದಂತೆ ಶುಕ್ರವಾರವೂ ಕೂಡಾ ಪ್ರಾರ್ಥನೆಗೆ ಮಸೀದಿಗೆ ಬಂದಿದ್ದ ಅಪ್ರಾಪ್ತ ಬಾಲಕನು ಅಲ್ಲಿದ್ದ ಕೆಲವರೊಂದಿಗೆ ನಮಾಜ್ ಮಾಡುವ ಸಮಯದಲ್ಲಿ ಮಾತಿನ ಚರ್ಚೆಯಲ್ಲಿ ಇದ್ದಾನೆ ಎಂದು ಪೋಲಿಸರ ಪ್ರಾಥಮಿಕ ಮಾಹಿತಿಗಳು ಸೂಚಿಸುತ್ತವೆ. ಈ ಮಾತಿನ ಜಗಳ ಕ್ಷಣಾರ್ಧದಲ್ಲೇ ತೀವ್ರಗೊಂಡು, ಕೆಲವರು ಬಾಲಕನ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಮಸೀದಿಯೊಳಗೇ ಕಾಲಿನಿಂದ ಒದ್ದಾಡುವುದು, ಅಟ್ಟಾಡಿಸುವುದು ಸೇರಿದಂತೆ ಅಮಾನುಷವಾಗಿ ಪ್ರಾಣಿಗಳಂತೆ ವರ್ತಿಸಿರುವ ಮಸೀದಿಯೊಳಗೆ ಅಳವಡಿಸಿರುವ ಸಿಸಿ ಕ್ಯಾಮೆರಾದಲ್ಲಿ ದೃಶ್ಯಗಳು ದಾಖಲಾಗಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ಇದನ್ನೂ ಓದಿ:- ದಿನ ಭವಿಷ್ಯ

ಈ ಸಿಸಿ ಕ್ಯಾಮರ ವಿಡಿಯೋ ದೃಶ್ಯಗಳು ಹೊರ ಜಗತ್ತಿಗೆ ಬಿದ್ದ ನಂತರ ಈ ಘಟನೆಗೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಸಾರ್ವಜನಿಕರ ಆಕ್ರೋಶ ಹೆಚ್ಚಾಗಿದೆ. ಪ್ರಾರ್ಥನೆ ನಡೆಯುವ ಸ್ಥಳದಲ್ಲಿ ಈ ರೀತಿಯ ಪೈಶಾಶಿಕ ವರ್ತನೆ ಅಸಹ್ಯಕರ ಹಾಗೂ ಖಂಡನೀಯ ಎಂದು ಸ್ಥಳೀಯ ನಿವಾಸಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಸೀದಿ ಸಮಿತಿಯ ಸದಸ್ಯರು ಕೂಡ ಈ ಘಟನೆಯನ್ನು ತುಂಬಾ ಗಂಭೀರವಾಗಿ ಪರಿಗಣಿಸಿ, ಶಾಂತಿ ಕಾಪಾಡುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ತಿಳಿಸಿದ್ದಾರೆ.

ಹಲ್ಲೆ ನಡೆದ ಬಾಲಕನ ಕುಟುಂಬದವರ ಪ್ರಕಾರ, ಹಲ್ಲೆ ನಡೆಸಿದವರಲ್ಲಿ ಅವೇಜ್, ಪರವೇಜ್, ಜಹೀದ್ ಮತ್ತು ಉಮ್ಮರ್ ಎಂಬವರ ಹೆಸರು ಕೇಳಿಬಂದಿದೆ. ಈ ತಂಡದಲ್ಲಿ ಒಬ್ಬ ರೌಡಿಶೀಟರ್ ಇದ್ದಾನೆ ಎಂಬ ಗಂಭೀರ ಆರೋಪವನ್ನು ಬಾಲಕನ ತಂದೆ ಮಾಡಿದ್ದಾರೆ. “ನಮಾಜ್ ಮಾಡಲು ಹೋಗಿದ್ದಾಗ ನನ್ನ ಮಗನ ಮೇಲೆ ಈ ರೀತಿ ಹಲ್ಲೆ ನಡೆದಿರುವುದು ನಮ್ಮ ಮನೆತನಕ್ಕೆ  ದೊಡ್ಡ ಆಘಾತ ತಂದಿದೆ . ಈ ಘಟನೆಗೆ ಕಾರಣರಾದವರನ್ನು ಬಂದಿಸಿ ನಮಗೆ ಕೋಡಲೆ  ನ್ಯಾಯ ದೊರೆಯಬೇಕು” ಎಂದು ಅವರು ಪೋಲಿಸರನ್ನು ಒತ್ತಾಯಿಸಿದ್ದಾರೆ

ಈ ಪ್ರಕರಣ  ಕುರಿತು ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ನರಸಿಂಹರಾಜ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶೀಘ್ರ ತನಿಖೆ ಆರಂಭಿಸಿದ್ದಾರೆ. ಎನ್ಸಿಆರ್ ದಾಖಲಾದ ಬಳಿಕ ಕಾರ್ಯಾಚರಣೆ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿರುವುದಾಗಿ ತಿಳಿದುಬಂದಿದೆ. ಉಳಿದವರು ಪರಾರಿಯಾಗಿದ್ದು, ಅವರನ್ನು ಪತ್ತೆಹಚ್ಚಲು ಶೋಧ ಕಾರ್ಯ ಮುಂದುವರಿದಿದೆ. ಹಲ್ಲೆ ಸಮಯದಲ್ಲಿ ಆರೋಪಿಗಳು ಮದ್ಯಪಾನದ ನಶೆಯಲ್ಲಿ ಇದ್ದಾರೆಯೇ ಎಂಬ ಅಂಶವನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಪೊಲೀಸರು ಸಿಸಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿ ಘಟನೆ ನಡೆದ ಕ್ರಮವನ್ನು ವಿಶ್ಲೇಷಿಸುತ್ತಿದ್ದಾರೆ. ಹಾಗೂ ಅಲ್ಲಿದ್ದ ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆಗಳನ್ನು ತಿಳಿದು, ಹಲ್ಲೆಗೊಳಗಾದ ಬಾಲಕ ಮತ್ತು ಆರೋಪಿಗಳ ನಡುವಿನ ಹಳೆ ದ್ವೇಷದ ಹಿನ್ನೆಲೆ ಏನಾದರು ಇದೇಯೆ  ಏನೆಂಬುದನ್ನು ಪತ್ತೆಹಚ್ಚುವ ಕೆಲಸವೂ ಪೋಲಿಸರಿಂದ  ನಡೆಯುತ್ತಿದೆ. ಈ ಘಟನೆಗೆ  ಸಂಬಂಧಿಸಿದಂತೆ ಇನ್ನೂ ಕೆಲವರ ಬಂಧನಗಳು ಅಗುವ ಸಾಧ್ಯತೆ ಇರುವುದಾಗಿ ಪೋಲಿಸ್ ಅಧಿಕಾರಿಗಳು ತಿಳಿಸಿದ್ದಾರೆ.

ಮುಸ್ಲಿಂ ಸಮಾಜದ ಮುಖಂಡರು ಈ ಪ್ರಕರಣಕ್ಕೆ ಸಂಬಂಧಿಸಿ ಸಾರ್ವಜನಿಕರು ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ. ಮುಸಲ್ಮಾನ್ ಧಾರ್ಮಿಕ ಸ್ಥಳಗಳು ಸಮನ್ವಯ ಮತ್ತು ಆತ್ಮಶಾಂತಿಯ ಕೇಂದ್ರವಾಗಿರಬೇಕು, ನಮಾಜ್ ಮಾಡುವ ವೇಳೆ ಯಾವುದೇ ಹಿಂಸೆಗೆ ಅವಕಾಶ ಕೊಡಬಾರದು ಎಂಬ ಸಂದೇಶವನ್ನು ಅವರು ಒತ್ತಿ ತಿಳಿಸಿದ್ದಾರೆ. ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ಮಸೀದಿ ನಿರ್ವಹಣಾ ಸಮಿತಿಗಳು ಹಾಗೂ ಸ್ಥಳೀಯ ಆಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.

ಪ್ರಕರಣದ ಇದೇ ವೇಳೆ, ಪೊಲೀಸರು ಸಾರ್ವಜನಿಕ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ವ್ಯವಸ್ಥೆಯ ಮಹತ್ವವನ್ನು ಮತ್ತೆ ಒತ್ತಿ ಹೇಳಿದ್ದಾರೆ. ಈ ಪ್ರಕರಣದಲ್ಲಿ ದೃಶ್ಯಗಳು ಲಭ್ಯವಾಗಿರುವುದರಿಂದ ತನಿಖೆಗೆ ನೆರವಾಗಿದೆ. ಇಂತಹ ಘಟನೆಗಳು ಮುಂದೆಯೂ ಈ ರೀತಿಯಾ ತಂತ್ರಜ್ಞಾನವನ್ನುಅಳವಡಿಸಿಕೋಳ್ಳವುದರಿಂದ  ಪರಿಣಾಮಕಾರಿಯಾಗಿ ಬಳಸಿಕೊಂಡು ಕಾನೂನು ಸುವ್ಯವಸ್ಥೆ ಕಾಪಾಡಲಾಗುತ್ತದೆ ಎಂದು ಪೋಲಿಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ:- ಕಾವೇರಿ ತೀರದ ನೈಸರ್ಗಿಕ ಸೊಬಗಿನಲ್ಲಿ ಮೆರೆಯುವ ಶ್ರೀರಾಮಲಿಂಗೇಶ್ವರ ದೇಗುಲದಲ್ಲಿ ಮಹಾಶಿವರಾತ್ರಿ ಭಕ್ತರಿಂದ ಪೂಜೆ

ನಮಾಜ್ ವೇಳೆ ನಡೆದ ಈ ಹಲ್ಲೆ ಘಟನೆ ಮೈಸೂರಿನಲ್ಲಿ ಗಂಭೀರ ಚರ್ಚೆಗೆ ಕಾರಣವಾಗಿದೆ. ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಜೊತೆಗೆ ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ಎಲ್ಲರಿಗೂ ಜಾಗೃತಿ ಮತ್ತು ನಿಯಂತ್ರಣ ಕ್ರಮಗಳನ್ನು ತಿಳಿಹೇಳಬೇಕೆಂಬ ಆಗ್ರಹ ವ್ಯಕ್ತವಾಗುತ್ತಿದೆ. ಮುಂದಿನ ತನಿಖೆಯ ಫಲಿತಾಂಶ ಹಾಗೂ ನ್ಯಾಯಾಂಗ ಕ್ರಮಗಳತ್ತ ಸಾರ್ವಜನಿಕರ ಗಮನ ಕೇಂದ್ರೀಕೃತವಾಗಿದೆ.

 

ಮಗುವಿನ ಕುತ್ತಿಗೆಯಿಂದ ಸರ ಕಿತ್ತು ನುಂಗಿದ ಆರೋಪಿ ಆಸ್ಪತ್ರೆಯಲ್ಲಿ ನಿಗಾ

Leave a Response