HOMENews

ನರೇಗಾ ಯೋಜನೆ ರದ್ದು: ಕೇಂದ್ರದ ನಡೆಗೆ ಕಾಂಗ್ರೆಸ್ ತೀವ್ರ ಖಂಡನೆ – ಸಂಸದ ಸುನಿಲ್ ಬೋಸ್

ವರದಿ:- ಎಂ. ನಾಗೇಂದ್ರ ಕುಮಾರ್

ಟಿ.ನರಸೀಪುರ : ಸಂಘರ್ಷಗಳನ್ನು ಪರಿಹರಿಸಲು ಸತ್ಯ ಮತ್ತು ಅಹಿಂಸೆಯನ್ನು ಅಸ್ತ್ರವನ್ನಾಗಿ ಬಳಸಿ, ವಿಶ್ವಕ್ಕೆ ಹೊಸ ಮಾರ್ಗವನ್ನು ತೋರಿಸಿ, ಸರಳ ಜೀವನ ಮತ್ತು ಉನ್ನತ ಚಿಂತನೆಗೆ ಸಾಕಾರ ಮೂರ್ತಿಯಾಗಿದ್ದ ಮಹಾತ್ಮ ಗಾಂಧಿಯವರ ಹೆಸರಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ನರೇಗಾ ಕಾಯ್ದೆ ಯೋಜನೆಯನ್ನು ರದ್ದು ಪಡಿಸಿರುವ ಕೇಂದ್ರ ಸರ್ಕಾರದ ನಡೆಯನ್ನು ಕಾಂಗ್ರೆಸ್ ಪಕ್ಷ ತೀರ್ವವಾಗಿ ಖಂಡಿಸುತ್ತದೆಂದು ಸಂಸದ ಸುನಿಲ್ ಬೋಸ್ ತಿಳಿಸಿದರು.

ಇದನ್ನೂ ಓದಿ:- ಕಾಂಗ್ರೆಸ್ ಕಾರ್ಯಕರ್ತರಿಗೆ ದ್ರೋಹವೆಂದ ಅಮಿತ್ ದೇವರಹಟ್ಟಿ ಆರೋಪ

ಪಟ್ಟಣದ ಕಾಂಗ್ರೆಸ್ ಪಕ್ಷದ ಕಚೇರಿಯಿಂದ ಸಂಸದ ಸುನಿಲ್ ಬೋಸ್ ನೇತೃತ್ವದಲ್ಲಿ ಹಾಗೂ ಜಿಲ್ಲಾಧ್ಯಕ್ಷ ಬಿ.ಜೆ.ಡಾ.ವಿಜಯಕುಮಾರ್ ಅಧ್ಯಕ್ಷತೆಯಲ್ಲಿ ಅಪಾರ ಸಂಖ್ಯೆಯ ಕಾಂಗ್ರೆಸ್ ಕಾರ್ಯಕರ್ತರು ಕಾಲ್ನಡಿಗೆಯಲ್ಲಿ ಪಾದಯಾತ್ರೆ ಮಾಡುವ ಮೂಲಕ ತಹಶಿಲ್ದಾರ್ ಕಚೇರಿ ಮುಂದೆ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸಂಸದರಾದ ಸುನಿಲ್ ಬೋಸ್ ಮಾತನಾಡಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ನರೇಗಾ ಕಾಯ್ದೆ ಯೋಜನೆಯನ್ನು ರದ್ದು ಪಡಿಸುವ ಔಚಿತ್ಯವಾದರು ಏನಿತ್ತು…? ನಿರುದ್ಯೋಗಿಗಳು ಮತ್ತು ಸಮಾಜದ ಹಿಂದುಳಿದ ವರ್ಗಗಳಿಗೆ ಉದ್ಯೋಗಾವಕಾಶಗಳನ್ನು ಒದಗಿಸುವುದು, ಬಡತನವನ್ನು ನಿವಾರಿಸಲು ಸಹಾಯ ಮಾಡುವುದು, ನಿರುದ್ಯೋಗಿಗಳಿಗೆ ಮತ್ತು ಉದ್ಯೋಗದ ಅಗತ್ಯವಿರುವವರಿಗೆ “ಕೆಲಸ ಮಾಡುವ ಹಕ್ಕನ್ನು” ಖಾತರಿಪಡಿಸುವ ಭಾರತೀಯ ಕಾರ್ಮಿಕ ಕಾನೂನಾಗಿತ್ತು.

ಗ್ರಾಮೀಣ ಪ್ರದೇಶಗಳ ಉದ್ಯೋಗಾವಕಾಶವನ್ನು ಹೆಚ್ಚಿಸಲು ಮತ್ತು ಮೇಲ್ವರ್ಗ ಮತ್ತು ಕೆಳವರ್ಗದ ನಡುವಿನ ಅಂತರವನ್ನು ಕಡಿಮೆ ಮಾಡಲು, ಭಾರತ ಸರ್ಕಾರವು 1991 ರಲ್ಲಿ ಈ ಯೋಜನೆಯನ್ನು ಪರಿಚಯಿಸಿ ವಿಶೇಷವಾಗಿ ಯಾವುದೇ ಆದಾಯವಿಲ್ಲದವರನ್ನು ಗುರಿಯಾಗಿರಿಸಿಕೊಂಡಿತ್ತು ಎಂದರು.

 

ಗ್ರಾಮೀಣ ಪ್ರದೇಶಗಳಲ್ಲಿ ಜೀವನೋಪಾಯ ಭದ್ರತೆಯನ್ನು ಖಾತ್ರಿಪಡಿಸಿ ಯಾವುದೇ ವಯಸ್ಕ ಸದಸ್ಯರಿಗೆ ಜೀವನೋಪಾಯಕ್ಕಾಗಿ ಕೌಶಲ್ಯರಹಿತ ಕೆಲಸ ಮಾಡಲು ಅನುವು ಮಾಡಿಕೊಡುತ್ತಿತ್ತು.ಇಂತಹ ಯೋಜನೆಯನ್ನು ರದ್ದು ಪಡಿಸಿರುವ ಕೇಂದ್ರ ಸರ್ಕಾರ ಬಡವರ,ಕೂಲಿಕಾರ್ಮಿಕರ,ರೈತರ ಹಾಗೂ ದಲಿತ ಹಿಂದುಳಿದ ವರ್ಗಗಳ ವಿರೋಧಿಯಾಗಿದೆ.ಕೂಡಲೇ ರಾಷ್ಟ್ರಪತಿಗಳು ಮದ್ಯೆ ಪ್ರವೇಶಿಸಿ ನ್ಯಾಯ ಹೊದಗಿಸಬೇಕು.

ಸುನಿಲ್ ಬೋಸ್ ಸಂಸದರು

ಚಾಮರಾಜನಗರ ಲೋಕಸಭಾ ಕ್ಷೇತ್ರ

ಇದನ್ನೂ ಓದಿ:- ಮೈಸೂರು ಸಿಸಿಬಿ ಪೊಲೀಸರ ದಾಳಿ: ರೂ.10.30 ಲಕ್ಷ ಮೌಲ್ಯದ ಎಂ.ಡಿ.ಎಂ.ಎ ವಶ – 4 ಆರೋಪಿಗಳ ಬಂಧನ

ಜಿಲ್ಲಾಧ್ಯಕ್ಷ ಬಿ.ಜೆ.ಡಾ.ವಿಜಯಕುಮಾರ್ ಮಾತನಾಡಿ ಮೈಸೂರು ಜಿಲ್ಲೆಯಲ್ಲಿ ಅತ್ಯಂತ ಯಶಸ್ವಿಯಾಗಿ ಪಾದಯಾತ್ರೆ ನಡೆದಿದ್ದು ನಾಳೆ ನಂಜನಗೂಡಿನಲ್ಲಿ ಕೊನೆಯಾಗಲಿದೆ.ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ನರೇಗಾ ಕಾಯ್ದೆ ಯೋಜನೆಯನ್ನು ರದ್ದು ಪಡಿಸಿರುವ ಕೇಂದ್ರ ಸರ್ಕಾರದ ನಡೆಯನ್ನು ಖಂಡಿಸಿ ರಾಷ್ಟ್ರ ವ್ಯಾಪ್ತಿ ಕಾಂಗ್ರೆಸ್ ಪಕ್ಷ ಪಾದಯಾತ್ರೆ ಮಾಡುವ ಮೂಲಕ ತಹಶಿಲ್ದಾರ್ ಮುಖೇನ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ‌ತಾಲ್ಲೂಕಿನ ಕಾಂಗ್ರೆಸ್ ಪಕ್ಷದ ಮುಖಂಡರುಗಳು ಹಾಗೂ ಕಾರ್ಯಕರ್ತರು ಅಪಾರ ಸಂಖ್ಯೆಯಲ್ಲಿ ಹಾಜರಿದ್ದರು.

Leave a Reply