HOMEFilm News

ಈ ವಾರ OTTಯಲ್ಲಿ ಸಿನಿಮಾ ಹಬ್ಬ

ಕನ್ನಡದಿಂದ ಬಾಲಿವುಡ್‌ವರೆಗೆ ಹೊಸ ರಿಲೀಸ್‌ಗಳ ಜಾತ್ರೆ!

ಮಾ.22: ಚಿತ್ರಮಂದಿರಗಳಲ್ಲಿ ‘ಧುರಂಧರ್ 2’ ಮತ್ತು ಪವನ್ ಕಲ್ಯಾಣ್ ಅಭಿನಯದ ‘ಉಸ್ತಾದ್ ಭಗತ್ ಸಿಂಗ್’ ಚಿತ್ರಗಳು ಭರ್ಜರಿ ಪ್ರದರ್ಶನ ಕಾಣುತ್ತಿರುವ ನಡುವೆಯೇ, ಈ ವಾರ OTT ಪ್ಲಾಟ್‌ಫಾರ್ಮ್‌ಗಳಲ್ಲೂ ಸಿನಿಮಾ ಪ್ರಿಯರಿಗೆ ಸಖತ್ ಫೀಸ್ಟ್ ಸಿಕ್ಕಿದೆ. ವಿಶೇಷವಾಗಿ ಕನ್ನಡ ಸಿನಿಮಾಗಳು ಕೂಡ ಗಮನ ಸೆಳೆಯುತ್ತಿದ್ದು, ವಿವಿಧ ಜಾನರ್‌ಗಳ ಸಿನಿಮಾಗಳು ಪ್ರೇಕ್ಷಕರ ಮನೆ ಬಾಗಿಲಿಗೆ ಬಂದಿಳಿದಿವೆ.

‘ವಲವಾರ’ – ಮನಸಿಗೆ ತಾಕುವ ಕಥೆ

ಚಿತ್ರಮಂದಿರದಲ್ಲಿ ಮೆಚ್ಚುಗೆ ಗಳಿಸಿದ್ದ ‘ವಲವಾರ’ ಸಿನಿಮಾ ಈಗ OTTಗೆ ಎಂಟ್ರಿ ಕೊಟ್ಟಿದೆ. ಇಬ್ಬರು ಮಕ್ಕಳು ಮತ್ತು ಹಸುವಿನ ಸುತ್ತ ಹೆಣೆದಿರುವ ಈ ಕಥೆ ಗ್ರಾಮೀಣ ಬದುಕಿನ ಭಾವನಾತ್ಮಕ ನಂಟುಗಳನ್ನು ಸೂಕ್ಷ್ಮವಾಗಿ ತೋರಿಸುತ್ತದೆ. ಸರಳ ಕಥೆ, ನೈಸರ್ಗಿಕ ಅಭಿನಯ ಮತ್ತು ಹೃದಯಸ್ಪರ್ಶಿ ದೃಶ್ಯಗಳು ಚಿತ್ರದ ಪ್ರಮುಖ ಬಲ. ಈ ಸಿನಿಮಾವನ್ನು Sun NXTನಲ್ಲಿ ವೀಕ್ಷಿಸಬಹುದು.

‘ಸೀತಾಪಯಣ’ – ಕುಟುಂಬ ಭಾವನೆಗಳ ಪಯಣ

ಅರ್ಜುನ್ ಸರ್ಜಾ ನಿರ್ದೇಶನದ ‘ಸೀತಾಪಯಣ’ ಸಿನಿಮಾ ಕುಟುಂಬ ಮೌಲ್ಯಗಳು, ಸಂಬಂಧಗಳ ಗಾಢತೆ ಮತ್ತು ಜೀವನದ ತಿರುವುಗಳನ್ನು ಹಿಡಿದಿಡುತ್ತದೆ. ಐಶ್ವರ್ಯಾ ಅರ್ಜುನ್ ನಾಯಕಿಯಾಗಿ ನಟಿಸಿದ್ದು, ನಿರಂಜನ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಸಾಂಪ್ರದಾಯಿಕ ಹಿನ್ನೆಲೆಯಲ್ಲಿರುವ ಕಥೆಯು ಪ್ರೇಕ್ಷಕರಿಗೆ ಭಾವನಾತ್ಮಕ ಅನುಭವ ನೀಡುತ್ತದೆ. ಈ ಚಿತ್ರವೂ Sun NXTನಲ್ಲಿ ಲಭ್ಯ.

‘ಪೀಕಿ ಬ್ಲೈಂಡರ್ಸ್: ದಿ ಇಮ್ಮಾರ್ಟಲ್ ಮ್ಯಾನ್ – ಗ್ಯಾಂಗ್ಸ್ಟರ್ ಲೋಕದ ಗರ್ಜನೆ

ಜನಪ್ರಿಯ ವೆಬ್ ಸಿರೀಸ್ ಆಧಾರಿತ ಈ ಸಿನಿಮಾ, ಟಾಮಿ ಶೆಲ್ಬಿ ಕಥೆಯನ್ನು ಮತ್ತಷ್ಟು ತೀವ್ರವಾಗಿ ಮುಂದುವರಿಸುತ್ತದೆ. ಆಸ್ಕರ್ ವಿಜೇತ ಕಿಲಿಯನ್ ಮರ್ಫಿ ಅಭಿನಯ ಚಿತ್ರದ ಹೈಲೈಟ್. ಗಾಢ ಕಥಾಹಂದರ, ಸ್ಟೈಲಿಷ್ ಮೇಕಿಂಗ್ ಮತ್ತು ತೀವ್ರ ಡ್ರಾಮಾ ಈ ಸಿನಿಮಾವನ್ನು ವಿಶೇಷವಾಗಿಸುತ್ತದೆ. Netflixನಲ್ಲಿ ವೀಕ್ಷಿಸಬಹುದು.

‘ಬಾರ್ಡರ್ 2’ – ದೇಶಭಕ್ತಿಯ ಜ್ವಾಲೆ

1971ರ ಇಂಡೋ-ಪಾಕಿಸ್ತಾನ ಯುದ್ಧದ ಹಿನ್ನೆಲೆಯ ಮೇಲೆ ನಿರ್ಮಿತವಾದ ‘Border 2’ ಸಿನಿಮಾ ಯುದ್ಧದ ವಾಸ್ತವತೆ ಮತ್ತು ಸೈನಿಕರ ತ್ಯಾಗವನ್ನು ತೆರೆದಿಡುತ್ತದೆ. ಸನ್ನಿ ಡಿಯೋಲ್, ವರುಣ್ ಧವನ್ ಮತ್ತು ದಿಲ್ಜೀತ್ ದೊಸ್ಸಾಂಜ್ ನಟನೆಯು ಚಿತ್ರದ ಶಕ್ತಿಯಾಗಿದೆ. ಭಾರೀ ಭಾವನಾತ್ಮಕ ಕ್ಷಣಗಳು ಮತ್ತು ಯುದ್ಧದ ಸನ್ನಿವೇಶಗಳು ಪ್ರೇಕ್ಷಕರನ್ನು ಸೆಳೆಯುತ್ತವೆ. Netflixನಲ್ಲಿ ಲಭ್ಯ.

‘ಜಟಾಧರ’ – ಮಿಸ್ಟರಿ ಮತ್ತು ಮೈಥಾಲಜಿಯ ಮಿಶ್ರಣ

ತೆಲುಗು ಸಿನಿಮಾ ‘ಜಟಾಧರ’ ಕೊಲೆ ತನಿಖೆ ಹಿನ್ನೆಲೆಯಲ್ಲಿದ್ದರೂ, ಅದರೊಳಗೆ ಪೌರಾಣಿಕ ಅಂಶಗಳನ್ನು ಸೇರಿಸಿಕೊಂಡಿದೆ. ಸುಧೀರ್ ಬಾಬು ಮತ್ತು ಸೋನಾಕ್ಷಿ ಸಿನ್ಹ ಅಭಿನಯಿಸಿರುವ ಈ ಸಿನಿಮಾ ಸಸ್ಪೆನ್ಸ್ ಮತ್ತು ಅಧ್ಭುತ ಅಂಶಗಳ ಸಂಯೋಜನೆಯಾಗಿದೆ. ಕಥೆಯ ತಿರುವುಗಳು ಪ್ರೇಕ್ಷಕರನ್ನು ಕುತೂಹಲದಲ್ಲಿಡುತ್ತವೆ. ZEE5ನಲ್ಲಿ ಸ್ಟ್ರೀಮಿಂಗ್.

‘ಲ್ಯಾಂಡ್‌ಲಾರ್ಡ್’ – ಸಾಮಾಜಿಕ ವಿಷಯಕ್ಕೆ ಸ್ಪರ್ಶ

ದುನಿಯಾ ವಿಜಯ್, ರಚಿತಾ ರಾಮ್ ಮತ್ತು ರಾಜ್ ಬಿ ಶೆಟ್ಟಿ ನಟಿಸಿರುವ ‘ಲ್ಯಾಂಡ್‌ಲಾರ್ಡ್’ ಸಿನಿಮಾ ಭೂಮಿ, ಅಧಿಕಾರ ಮತ್ತು ಸಾಮಾನ್ಯ ಜನರ ಜೀವನದ ಸಂಘರ್ಷವನ್ನು ತೋರಿಸುತ್ತದೆ. ನಿರ್ದೇಶಕ ಜಡೇಶ್ ಹಂಪಿ ಸಾಮಾಜಿಕ ವಿಷಯವನ್ನು ರಿಯಾಲಿಸ್ಟಿಕ್ ರೀತಿಯಲ್ಲಿ ತೆರೆದಿಟ್ಟಿದ್ದಾರೆ. ಬಲವಾದ ಅಭಿನಯ ಮತ್ತು ಕಥಾಹಂದರ ಚಿತ್ರದ ವಿಶೇಷತೆ. ಈ ಸಿನಿಮಾ ZEE5ನಲ್ಲಿ ಲಭ್ಯ.

Leave a Reply