
ಮೈಸೂರು, ಫೆ.26: ನಗರದಲ್ಲಿ ಸ್ವಚ್ಛತೆ, ಪರಿಸರ ಸಂರಕ್ಷಣೆ ಹಾಗೂ ನಾಗರಿಕರಲ್ಲಿ ಜಾಗೃತಿ ಮೂಡಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ದಟ್ಟಗಳ್ಳಿ ಗ್ರೀನ್ ಫೌಂಡೇಶನ್ಗೆ ಮೈಸೂರು ನಗರ ಪಾಲಿಕೆಯ ವತಿಯಿಂದ ಸ್ವಚ್ಛತಾ ಸರ್ವೇಕ್ಷಣ್ ಕಾರ್ಯಕ್ರಮದಡಿ “ಸ್ವಾಚ್ ರೆಸಿಡೆಂಟ್ ವೆಲ್ಫೇರ್ ಅಸೋಸಿಯೇಷನ್” ವಿಭಾಗದ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನಗರದ ವಿವಿಧ ಬಡಾವಣೆಗಳಲ್ಲಿ ಸ್ವಚ್ಛತಾ ಅಭಿಯಾನ, ತ್ಯಾಜ್ಯ ವಿಂಗಡಣೆ ಕುರಿತು ಜಾಗೃತಿ ಕಾರ್ಯಕ್ರಮಗಳು, ಗಿಡ ನೆಡುವ ಕಾರ್ಯಕ್ರಮಗಳು ಹಾಗೂ ಪರಿಸರ ಸಂರಕ್ಷಣಾ ಚಟುವಟಿಕೆಗಳನ್ನು ನಿರಂತರವಾಗಿ ನಡೆಸುತ್ತಿರುವ ದಟ್ಟಗಳ್ಳಿ ಗ್ರೀನ್ ಫೌಂಡೇಶನ್ನ ಸೇವೆಯನ್ನು ಗುರುತಿಸಿ ಈ ಸಾಲಿನ ಪ್ರಶಸ್ತಿಯನ್ನು ಮೈಸೂರು ನಗರ ಪಾಲಿಕೆ ನೀಡಿದೆ.
ನಗರ ಪಾಲಿಕೆ ಆಯುಕ್ತರ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಶ್ರೀ ಎಂ ಎನ್ ನಟರಾಜ್, ನಿವೃತ್ತ ರಾಜ್ಯ ನಿರ್ದೇಶಕರು, ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ಭಾರತ ಸರ್ಕಾರ, ಅಧ್ಯಕ್ಷರು, ದಟ್ಟಗಳ್ಳಿ ಗ್ರೀನ್ ಫೌಂಡೇಶನ್ ಮೈಸೂರು
ಅವರು ಮೈಸೂರು ನಗರ ಪಾಲಿಕೆ ಆಯುಕ್ತರಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು.
ಮೈಸೂರು ನಗರ ಪೊಲೀಸ್ ಸಾಧನೆ: 105 ಪ್ರಕರಣ ಪತ್ತೆ – ಸುಮಾರು ₹2.96 ಕೋಟಿ ಮೌಲ್ಯದ ವಸ್ತು ವಶ
ಈ ಸಂದರ್ಭದಲ್ಲಿ ಫೌಂಡೇಶನ್ ಕಾರ್ಯಾಧ್ಯಕ್ಷ ಆರ್. ನಾಗೇಂದ್ರ ಕುಮಾರ್, ಉಪಾಧ್ಯಕ್ಷ ತೇಜಸ್ವಿನಾಯಕ್, ನಿರ್ದೇಶಕರಾದ ಹರ್ಷ ಹಾಗೂ ನಾಗೇಶ್ ಉಪಸ್ಥಿತರಿದ್ದು ಪ್ರಶಸ್ತಿ ಸ್ವೀಕಾರದಲ್ಲಿ ಭಾಗವಹಿಸಿದರು.
ಪ್ರಶಸ್ತಿ ಸ್ವೀಕರಿಸಿದ ನಂತರ ಮಾತನಾಡಿದ ಅಧ್ಯಕ್ಷ ಎಂ.ಎನ್. ನಟರಾಜ್ ಅವರು, ದಟ್ಟಗಳ್ಳಿ ಪ್ರದೇಶವನ್ನು ಸ್ವಚ್ಛ ಹಾಗೂ ಹಸಿರು ಪ್ರದೇಶವನ್ನಾಗಿ ರೂಪಿಸುವುದು ಫೌಂಡೇಶನ್ನ ಮುಖ್ಯ ಉದ್ದೇಶವಾಗಿದ್ದು, ಸ್ಥಳೀಯ ನಿವಾಸಿಗಳ ಸಹಕಾರದಿಂದ ಹಲವು ಸ್ವಚ್ಛತಾ ಮತ್ತು ಪರಿಸರ ಸಂಬಂಧಿತ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲಾಗುತ್ತಿದೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿಯೂ ತ್ಯಾಜ್ಯ ನಿರ್ವಹಣೆ, ಪ್ಲಾಸ್ಟಿಕ್ ಬಳಕೆ ಕಡಿತ ಹಾಗೂ ಪರಿಸರ ಸಂರಕ್ಷಣೆ ಕುರಿತ ಜಾಗೃತಿ ಕಾರ್ಯಕ್ರಮಗಳನ್ನು ಇನ್ನಷ್ಟು ವಿಸ್ತರಿಸುವ ಯೋಜನೆ ಇದೆ ಎಂದು ತಿಳಿಸಿದರು.
ಮೈಸೂರು ನಗರ ಪಾಲಿಕೆಯ ಸ್ವಚ್ಛತಾ ಸರ್ವೇಕ್ಷಣ್ ಕಾರ್ಯಕ್ರಮದಡಿ ವಿವಿಧ ಸಂಘಟನೆಗಳು ಹಾಗೂ ನಿವಾಸಿ ಸಂಘಗಳಿಗೆ ಪ್ರಶಸ್ತಿ ನೀಡಲಾಗುತ್ತಿದ್ದು, ನಗರವನ್ನು ಸ್ವಚ್ಛ ಮತ್ತು ಸುಂದರವಾಗಿಸಲು ನಾಗರಿಕರ ಸಹಭಾಗಿತ್ವ ಅಗತ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:- ಸರ್ಕಾರಿ ಆಸ್ತಿಯನ್ನು ಉಳಿಸಿದ ಶಾಸಕ ಟಿ.ಎಸ್. ಶ್ರೀವತ್ಸರಿಗೆ ನಾಗರಿಕರಿಂದ ಅಭಿನಂದನೆ
ದಟ್ಟಗಳ್ಳಿ ಗ್ರೀನ್ ಫೌಂಡೇಶನ್ಗೆ ಲಭಿಸಿದ ಈ ಪ್ರಶಸ್ತಿಗೆ ಸ್ಥಳೀಯ ನಿವಾಸಿಗಳು ಸಂತೋಷ ವ್ಯಕ್ತಪಡಿಸಿದ್ದು, ಸಂಸ್ಥೆಯ ಕಾರ್ಯಚಟುವಟಿಕೆಗಳಿಗೆ ಇನ್ನಷ್ಟು ಉತ್ತೇಜನ ದೊರೆಯಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.





