HOMENews

ಮೈಸೂರು ಸಮಾಜ ಕಲ್ಯಾಣ ಇಲಾಖೆಯ ನೌಕರರಿಗೆ ಸಮಗ್ರ ಪ್ರಶಸ್ತಿ

ಮೈಸೂರು:- ಸಮಾಜ ಕಲ್ಯಾಣ ಇಲಾಖೆಯು ಮಾನ್ಯ ಶ್ರೀ HC ಮಹದೇವಪ್ಪ ರವರ ತೀರ್ಮಾನದಂತೆ ಇಲಾಖೆಯ ನೌಕರರ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಪೂರಕವಾಗುವಂತೆ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ನಡೆಸಲು ತೀರ್ಮಾನಿಸಿದ್ದು ಜಿಲ್ಲೆಗಳಿಗೆ ಹಾಗೂ ವಿಭಾಗಗಳಿಗೆ ಅನುದಾನ ಬಿಡುಗಡೆ ಮಾಡಿ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ದೇಶನ ನೀಡಿದೆ…. ನೌಕರರ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗಾಗಿ ಮಾನ್ಯ HC ಮಹದೇವಪ್ಪ ನವರು ಮಂತ್ರಿಗಳಾದ ನಂತರ ಇಲಾಖೆಯ ಬಜೆಟ್ ನಲ್ಲಿ ಸರಿಸುಮಾರು ಒಂದು ಕೋಟಿ ಅನುದಾನ ನೀಡಿದ್ದಾರೆ..


ಪ್ರತಿ ಜಿಲ್ಲೆಗೆ ಜಿಲ್ಲಾ ಮಟ್ಟದಲ್ಲಿ ಕಾರ್ಯಕ್ರಮ ನಡೆಸಲು 1 ಲಕ್ಷ, ಹಾಗು ನಾಲ್ಕು ವಿಭಾಗಗಳಲ್ಲಿ ಕ್ರೀಡಾಕೂಟ ನಡೆಸಲು ಪ್ರತಿ ವಿಭಾಗಕ್ಕೆ 5 ಲಕ್ಷ ಹಾಗೂ ರಾಜ್ಯ ಮಟ್ಟದ ಕ್ರೀಡಾ ಕೂಟ ನಡೆಸಲು 50 ಲಕ್ಷ ನೀಡಿದ್ದಾರೆ…ಇದು ಮಾನ್ಯ ಸಮಾಜ ಕಲ್ಯಾಣ ಸಚಿವರ ನೌಕರರ ಬಗೆಗಿನ ಕಾಳಜಿ ತೋರಿಸುತ್ತದೆ..
ಅದರಂತೆ ಫೆಬ್ರವರಿ ತಿಂಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ, ಹಾಗೂ ವಿಭಾಗ ಮಟ್ಟದಲ್ಲಿ ಸ್ಪರ್ಧೆಗಳನ್ನು ನಡೆಸಲಾಗಿದೆ.. ಮತ್ತು ಮಾರ್ಚ್ 1ನೇ ತಾರೀಕು ರಾಜ್ಯಮಟ್ಟದಲ್ಲಿ ಕ್ರೀಡಾ ಮತ್ತು ಸಾಂಸ್ಕೃತಿಕ ಕೂಟವನ್ನು ನಡೆಸಲಾಗಿದೆ… ಕ್ರೀಡಾ ವಿಭಾಗದಲ್ಲಿ ಗುಂಪು ಕ್ರೀಡೆಗಳಾದ ವಾಲಿಬಾಲ್ ಹೆಣ್ಣು ಮಕ್ಕಳಿಗೆ ತ್ರೋಬಾಲ್ ಕ್ರಿಕೆಟ್,ಶಟಲ್ ಕಾಕ್ ಗಳನ್ನು ಹಮ್ಮಿಕೊಳ್ಳಲಾಗಿತ್ತು ..ಅದೇ ರೀತಿ ಸಾಂಸ್ಕೃತಿಕ ವಿಭಾಗದಲ್ಲಿ ಭಾವಗೀತೆ ಜನಪದ ಗೀತೆ ಕಿರು ನಾಟಕ ಸ್ಪರ್ಧೆ ನಡೆಸಲಾಗಿದೆ.. ಇದರಲ್ಲಿ ಮೈಸೂರು ವಿಭಾಗ ಮಟ್ಟದಲ್ಲಿ ಸ್ಪರ್ಧೆ ನಡೆದಾಗ 8 ಜಿಲ್ಲೆಗಳು ಭಾಗವಹಿಸಿದ್ದವು. 8 ಜಿಲ್ಲೆಗಳ ಪೈಕಿ ಶಟಲ್ ಕಾಕ್ ಹೊರತುಪಡಿಸಿ ಎಲ್ಲಾ ವಿಭಾಗಗಳಲ್ಲೂ ಮೈಸೂರು ಜಿಲ್ಲೆ ಪ್ರಥಮ ಸ್ಥಾನಗಳನ್ನು ಪಡೆದು ರಾಜ್ಯಮಟ್ಟಕ್ಕೆ ಪ್ರವೇಶ ಪಡೆದಿತ್ತು.

ರಾಜ್ಯ ಮಟ್ಟದಲ್ಲೂ ಕೂಡ ಉತ್ತಮ ಪ್ರದರ್ಶನ ನೀಡಿದ ಮೈಸೂರು ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ ನೌಕರರು ಜನಪದ ಗೀತೆಯಲ್ಲಿ ದ್ವಿತೀಯ ಸ್ಥಾನ, ಭಾವಗೀತೆಯಲ್ಲಿ ದ್ವಿತೀಯ ಸ್ಥಾನ, ಕಿರುನಾಟಕ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ಥ್ರೋ ಬಾಲ್ ನಲ್ಲಿ ದ್ವಿತೀಯ ಸ್ಥಾನಗಳನ್ನು ಪಡೆದು ಅತ್ಯುತ್ತಮ ಪ್ರದರ್ಶನ ನೀಡಿದೆ.. ರಾಜ್ಯಮಟ್ಟದಲ್ಲಿ ಮೈಸೂರು ಜಿಲ್ಲೆಯು ನೀಡಿದ ಉತ್ತಮ ಪ್ರದರ್ಶನವನ್ನು ಗುರುತಿಸಿ ಇಡೀ ರಾಜ್ಯದಲ್ಲಿ ಅತ್ಯುತ್ತಮ ಜಿಲ್ಲೆ ಎಂಬ ಟ್ರೋಪಿ ನೀಡಿ ಗೌರವಿಸಲಾಗಿದೆ…ಶ್ರೀ ಮಹದೇವಪ್ಪನವರ ತವರು ಜಿಲ್ಲೆಯಾದ ಮೈಸೂರಿನ ನೌಕರರು ರಾಜ್ಯಮಟ್ಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವುದು ಹೆಮ್ಮೆ ತಂದಿದೆ.. ಮಾನ್ಯ ಸಚಿವರು ಈ ಬಗ್ಗೆ ಅಭಿನಂದನೆ ತಿಳಿಸಿರುತ್ತಾರೆ..

Leave a Reply