
ವರದಿ:-ವಡ್ಡರಕೊಪ್ಪಲು ಶಿವರಾಮು.
ಕೆ ಆರ್ ನಗರ. ಫೆ.12:- ನವನಗರ ಅರ್ಬನ್ ಕೋ ಆಪರೇಟಿವ್ ಬ್ಯಾಂಕಿನ ನಾಲ್ಕನೇ ಬಾರಿಗೆ ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಕೆ ಎನ್ ಬಸಂತ್ ನಂಜಪ್ಪನವರನ್ನು ಬ್ಯಾಂಕಿನ ಆಡಳಿತ ಮಂಡಳಿ ಮತ್ತು ಪಟ್ಟಣದ ವಿವಿಧ ಸಂಘ ಸಂಸ್ಥೆಗಳು ಪದಾಧಿಕಾರಿಗಳು ಅಧ್ಯಕ್ಷರು ಅಭಿನಂದಿಸಿ ವಿಜಯೋತ್ಸವವನ್ನು ಆಚರಿಸಿದರು.
ಪಟ್ಟಣದ ನವನಗರ ಅರ್ಬನ್ ಕೋ ಆಪರೇಟಿವ್ ಬ್ಯಾಂಕಿನ ಕೇಂದ್ರ ಕಚೇರಿಯಲ್ಲಿ ಚುನಾವಣಾಧಿಕಾರಿ ಎಂ ಎನ್ ಸೋಮಶೇಖರ್ ಅವರಿಗೆ ಅಧ್ಯಕ್ಷ ಸ್ಥಾನಕ್ಕೆ ಕೆ ಎನ್ ಬಸತ್ ನಂಜಪ್ಪ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮಹಾದೇವಯ್ಯರವರನ್ನು ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದೆ ಇದುದ್ದರಿಂದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಗಳನ್ನು ಅವಿರೋಧ ಆಯ್ಕೆ ಆಗಿದ್ದಾರೆ ಎಂದು ಚುನಾವಣಾಧಿಕಾರಿ ಎಂ ಎನ್ ಸೋಮಶೇಖರ್ ಘೋಷಣೆ ಮಾಡಿದರು.

ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಅವಿರೋಧ ಆಯ್ಕೆಯನ್ನು ಘೋಷಣೆ ಮಾಡುತ್ತಿದ್ದಂತೆ ಕೆ ಎನ್ ಬಸಂತ್ ಮತ್ತು ದಿವಂಗತ ಮಾಜಿ ಸಚಿವ ಎಸ್ ನಂಜಪ್ಪನವರ ಅಭಿಮಾನಿಗಳು ಮತ್ತು ಬ್ಯಾಂಕಿನ ಸದಸ್ಯರು ಆಡಳಿತ ಮಂಡಳಿಯ ಎಲ್ಲಾ ಸದಸ್ಯರು ಕೆ ಎನ್ ಬಸಂತ್ ಮತ್ತು ಮಹದೇವಯ್ಯ ರವರನ್ನು ಅಭಿನಂದಿಸಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.
ಸಂಭ್ರಮಾಚರಣೆಯ ನಂತರ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಕೆ ಎನ್ ಬಸಂತ್ ನಂಜಪ್ಪ ಮಾತನಾಡಿ ನನ್ನನ್ನು ಮತ್ತು ನನ್ನ ಆಡಳಿತ ಮಂಡಳಿಯನ್ನು ಅವಿರೋಧವಾಗಿ ಆಯ್ಕೆ ಮಾಡಿದ 500 ಜನ ಸದಸ್ಯರು ಮತ್ತು ಹಿಂದಿನ ಆಡಳಿತ ಮಂಡಳಿಯಲ್ಲಿದ್ದ ನಿರ್ದೇಶಕರು ಸೇರಿದಂತೆ ಎಲ್ಲಾ ಬ್ಯಾಂಕಿನ ಸಿಬ್ಬಂದಿಗಳು ಮತ್ತು ನಾಗರಿಕರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.
ನಮ್ಮ ಮುಂದಿನ ಗುರಿ ಈಗಿರುವ 820 ಕೋಟಿ ವ್ಯವಹಾರಗಳಿಗಿಂತ ಹೆಚ್ಚು ಅಂದರೆ ಸಾವಿರ ಕೋಟಿ ವ್ಯವಹಾರ ಮಾಡುವ ಗುರಿ ಇದ್ದು ಮುಂದಿನ ದಿನಗಳಲ್ಲಿ ನಮ್ಮ ಬ್ಯಾಂಕಿನ ಸಬ್ ಬ್ರ್ಯಾಂಚ್ ತೆಗೆಯಲು ಚಿಂತಿಸಲಾಗಿದೆ ಹಾಗೂ ಬ್ಯಾಂಕಿನಲ್ಲಿ ವ್ಯವಹಾರ ಮಾಡುವ ವ್ಯವಹಾರರಿಗೆ ದಿನಗೂಲಿ ಮತ್ತು ಫುಟ್ ಬಾತ್ ವ್ಯಾಪಾರಿಗಳಿಗೂ ಸೇರಿದಂತೆ ಮಹಿಳೆಯರು ಹಾಗೂ ಸಣ್ಣಪುಟ್ಟ ವ್ಯಾಪಾರ ಮಾಡುವವರಿಗೂ ಸರಳ ನಿಯಮದಡಿ ಸಾಲ ನೀಡುವ ಚಿಂತನೆ ಇದೆ ಎಂದು ತಿಳಿಸಿದರು.
ನಮ್ಮ ತಂದೆ ದಿವಂಗತ ಎಸ್ ನಂಜಪ್ಪನವರು ಶ್ರಮದಿಂದ ಸಣ್ಣ ಬಂಡವಾಳದಿಂದ ಸ್ಥಾಪಿತವಾದ ಈ ಬ್ಯಾಂಕ್ ರಾಜ್ಯದಲ್ಲಿಯೇ ಮಾದರಿ ಬ್ಯಾಂಕ್ ಆಗುವ ಜೊತೆಗೆ ಪಿರಿಯಾಪಟ್ಟಣ ಹುಣಸೂರ್ ಮೈಸೂರಿನಲ್ಲಿ ಬ್ರಾಂಚ್ ತೆರೆಯಲಾಗಿದ್ದು ಮುಂದಿನ ದಿನಗಳಲ್ಲಿ ಇನ್ನು ಎರಡು ಮೂರು ತಾಲ್ಲೂಕುಗಳಲ್ಲಿ ಬ್ರಾಂಚ್ ತೆರೆಯಲಾಗುವುದು ಎಂದು ತಿಳಿಸಿದ ಅಧ್ಯಕ್ಷರು ಸಾರ್ವಜನಿಕರು ಮತ್ತು ನಾಗರಿಕರು ಈಗ ನೀಡುತ್ತಿರುವ ಸಲಹೆ ಮತ್ತು ಸಹಕಾರವನ್ನು ಮುಂದೆಯೂ ನೀಡುವಂತೆ ಮನವಿ ಮಾಡಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಬ್ಯಾಂಕಿನ ಉಪಾಧ್ಯಕ್ಷ ಮಹಾದೇವಯ್ಯ ಹಾಪ್ ಕಾಮ್ಸ್ ನಿರ್ದೇಶಕ ಸಂಜಯ್ ಸಾಲಿಗ್ರಾಮ ಯುವ ಜೆಡಿಎಸ್ ಅಧ್ಯಕ್ಷ ಕರ್ತಾಳ್ ಮಧು ಜೆಡಿಎಸ್ ವಕ್ತಾರ ಕೆಎಲ್ ರಮೇಶ್ ಮಾತನಾಡಿದರು ವೇದಿಕೆಯಲ್ಲಿ ಮುಖಂಡರುಗಳಾದ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮನು ಗೌಡ ಹೆಬ್ಬಾಳ ಶಿವಣ್ಣ ಕೃಷ್ಣ ಶೆಟ್ಟಿ ಚಾಮುಂಡೇಶ್ವರಿ ಬಾರ್ ಮಾಲಿಕ ಮನು ಮುಖಂಡರುಗಳಾದ ದೇವೇಂದ್ರ. ಶ್ರೀನಿವಾಸ್. ಮಹಾದೇವ್. ತಿಮ್ಮೇಗೌಡ. ಸಂಪತ್ ಕುಮಾರ್. ಅವಿನಾಶ್ ನಂಜುಂಡೇಗೌಡ ಮಂಜುನಾಥ್ ಸಿದ್ದಪ್ಪ ಬ್ಯಾಂಕಿನ ನೂತನ ಆಡಳಿತ ಮಂಡಳಿಯ ಸದಸ್ಯರುಗಳಾದ ಎಚ್‌ಟಿ ಗೋಪಾಲ್. ಹೆಚ್ಎಸ್ ಲೋಕೇಶ್. ರಮೇಶ್ ರಾವ್. ಚೇತನ್. ಮರಿಲಿಂಗ ಚಾರ್. ಅಶೋಕ್ ಕುಮಾರ್. ಸಿಪಿಎಸ್ ಲೋಕೇಶ್. ಎಲ್ ರಂಗನಾಥ್. ವೀಣಾ ಕುಮಾರ್. ಎಂಪಿ ಸುಮತಿ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಸಿ ಸುರೇಶ್. ಬ್ಯಾಂಕಿನ ವ್ಯವಸ್ಥಾಪಕ ಅಭಿಲಾಶ್ ಸೇರಿದಂತೆ ರಾಜಕೀಯ ಮುಖಂಡರು ಬ್ಯಾಂಕಿನ ಸಿಬ್ಬಂದಿಗಳು ಭಾಗವಹಿಸಿದ್ದರು.



