
ಮೇಷ: ಅಧ್ಯಯನಶೀಲರಿಗೆ ಫಲಪ್ರದ ದಿನ. ಉದ್ಯೋಗ ವ್ಯವಹಾರದಲ್ಲಿ ಜಯ ಲಭಿಸಿದ ತೃಪ್ತಿ. ದಂಪತಿ ಗಳಿಂದ ಜವಾಬ್ದಾರಿಯುತ ನಡೆ. ಶುಭಸಂಖ್ಯೆ: 5
ವೃಷಭ: ಹಳೆಯ ಮಿತ್ರರ ಸಮಾಗಮದಿಂದ ಸಂತೋಷ. ಪಾಲುದಾರಿಕೆ ಕ್ಷೇತ್ರದಲ್ಲಿ ಪ್ರಗತಿ. ಮರದ ಕೆಲಸಗಾರರಿಗೆ ಕೈತುಂಬ ವರಮಾನ. ಶುಭಸಂಖ್ಯೆ: 7
ಮಿಥುನ: ಗಣ್ಯವ್ಯಕ್ತಿಗಳ ಸಂಪರ್ಕ. ವಿದ್ಯಾವಂತರೊಂದಿಗೆ ಸಮಾಲೋಚನೆ. ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷೆಗೂ ಮೀರಿದ ಅಭಿವೃದ್ಧಿ. ಶುಭಸಂಖ್ಯೆ:9
ಕಟಕ: ದೂರ ಪ್ರಯಾಣ ಸಂಭವ. ಧಾರ್ವಿುಕ ವಿಚಾರಗಳಲ್ಲಿ ತಲ್ಲೀನತೆ. ಸ್ವಪ್ರಯತ್ನದ ಧನಾರ್ಜನೆ. ಗೃಹದಲ್ಲಿ ಸಂತಸದ ವಾತಾವರಣ. ಶುಭಸಂಖ್ಯೆ: 1
ಸಿಂಹ: ಆಸ್ತಿ ವಿಚಾರಗಳಲ್ಲಿ ನ್ಯಾಯಾಲಯದಲ್ಲಿ ಮುನ್ನಡೆ ಯಾಗುವುದು. ಪಾಲುದಾರಿಕಾ ವ್ಯವಹಾರಗಳಲ್ಲಿ ಪ್ರಗತಿ. ನಿರೀಕ್ಷಿತ ಧನಾರ್ಜನೆ. ಶುಭಸಂಖ್ಯೆ: 4
ಕನ್ಯಾ: ಆರ್ಥಿಕ ವಿಚಾರಗಳಲ್ಲಿ ಅಭಿವೃದ್ಧಿ. ಆಹಾರ ಪದಾರ್ಥಗಳ ಮಾರಾಟದಲ್ಲಿ ಅಭಿವೃದ್ಧಿ. ಸಂಗಾತಿಯ ಆರೋಗ್ಯದಲ್ಲಿ ಸುಧಾರಣೆ. ಶುಭಸಂಖ್ಯೆ:3
ತುಲಾ: ತಾಯಿಯ ಆರೋಗ್ಯ ವೃದ್ಧಿ. ಸಣ್ಣ ಪ್ರಯಾಣ ಸಂಭವ. ದೇವತಾ ಕಾರ್ಯದಲ್ಲಿ ಭಾಗಿಯಾದ ತೃಪ್ತಿ. ವ್ಯವಹಾರಗಳಲ್ಲಿ ಮುನ್ನಡೆ.ಶುಭಸಂಖ್ಯೆ: 2
ವೃಶ್ಚಿಕ: ಭೂಮಿ ಮತ್ತು ಆಸ್ತಿ ವಿಚಾರದಲ್ಲಿ ಸಹನೆಯಿಂದ ವ್ಯವಹರಿಸಿ ಕಾರ್ಯ ಸಾಧಿಸಿ. ಮಾತನಾಡುವಾಗ ದಾಕ್ಷಿಣ್ಯಕ್ಕೆ ಒಳಗಾಗದಿರಿ. ಶುಭಸಂಖ್ಯೆ: 9
ಧನಸ್ಸು: ಉದ್ಯೋಗ ವ್ಯವಹಾರಾದಿಗಳಲ್ಲಿ ಉತ್ತಮ ಪ್ರಗತಿ. ನಿರೀಕ್ಷೆಗೆ ಸರಿಯಾದ ಧನ ಸಂಪಾದನೆ. ಸರ್ಕಾರಿ ಕೆಲಸದಲ್ಲಿ ಉತ್ತಮ ಪ್ರಗತಿ. ಶುಭಸಂಖ್ಯೆ: 3
ಮಕರ: ಉದ್ಯೋಗ ನಿಮಿತ್ತ ದೂರ ಪ್ರಯಾಣ ಸಂಭವ. ಗೃಹೋಪಕರಣ ವಸ್ತು ಸಂಗ್ರಹ. ನೂತನ ಮಿತ್ರರ ಭೇಟಿ. ಅಧಿಕ ಧನಾರ್ಜನೆ. ಶುಭಸಂಖ್ಯೆ:5
ಕುಂಭ: ಕಲಾವಿದರಿಗೆ ಜನ ಮನ್ನಣೆ. ಕುಲದೇವರ ದರ್ಶನ ಮಾಡುವಿರಿ.ಮಿತ್ರರಿಂದಲೂ ಗಣ್ಯರಿಂದಲೂ ನಿರೀಕ್ಷೆಗೂ ಮೀರಿದ ಸಹಕಾರ. ಶುಭಸಂಖ್ಯೆ: 1
ಮೀನ: ಉತ್ತಮ ಧನಾರ್ಜನೆಗೆ ವಿಪುಲ ಅವಕಾಶ. ಸಾಂಸಾರಿಕ ಸುಖ ವೃದ್ಧಿ. ದೀರ್ಘ ಪ್ರಯಾಣ ಸಂಭವ. ಉದ್ಯೋಗದಲ್ಲಿ ಅಡಚಣೆ. ಶುಭಸಂಖ್ಯೆ: 8





