ArticalHOME

02-03-2026 ರ ದಿನ ಭವಿಷ್ಯ

 

ಮೇಷ: ಸ್ವಪ್ರಯತ್ನದಿಂದ ಕಾರ್ಯ ಕ್ಷೇತ್ರಗಳಲ್ಲಿ ಮುನ್ನಡೆ. ಮಕ್ಕಳ ವಿಚಾರವಾಗಿ ವಿವಾದ. ಅಪರಿಚಿತರೊಂದಿಗೆ ವ್ಯವಹರಿಸುವಾಗ ಎಚ್ಚರ. ಶುಭಸಂಖ್ಯೆ: 3

ವೃಷಭ: ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ. ವಿರೋಧಿಗಳು ಸಹ ಕಾರ್ಯಗಳಲ್ಲಿ ಬೆಂಬಲ ಸೂಚಿಸುವರು. ಸ್ವಲ್ಪ ಎಚ್ಚರ ವಹಿಸಿರಿ. ಶುಭಸಂಖ್ಯೆ: 8

ಮಿಥುನ: ಹಿರಿಯರ ಸಲಹೆಗಳಿಂದ ಅಭಿವೃದ್ಧಿ. ಮಕ್ಕಳ ಆರೋಗ್ಯದ ಕಡೆ ಹೆಚ್ಚಿನ ಗಮನ ಅಗತ್ಯ. ಹಣದ ವ್ಯವಹಾರಗಳಲ್ಲಿ ಉತ್ತಮ ಫಲ. ಶುಭಸಂಖ್ಯೆ: 9

ಕಟಕ: ನಿರ್ಧಾರಗಳನ್ನು ಬದಲಿಸುವ ನಿಮ್ಮ ನಡವಳಿಕೆ ಯಿಂದ ಕುಟುಂಬದಲ್ಲಿ ಅಸಹನೆ. ಸಿಹಿ ಅಂಗಡಿ ಮಾಲೀಕರಿಗೆ ಲಾಭ ಹೆಚ್ಚುತ್ತದೆ. ಶುಭಸಂಖ್ಯೆ:2

ಸಿಂಹ: ಆರೋಗ್ಯದ ವಿಚಾರದಲ್ಲಿ ಆತುರದ ನಿರ್ಧಾರ ಬೇಡ. ಮಹಿಳೆಯರಿಗೆ ಕುಟುಂಬದಲ್ಲಿ ನೆಮ್ಮದಿ. ವೃತ್ತಿಯ ಸಮಸ್ಯೆಗಳಿಗೆ ಪರಿಹಾರ. ಶುಭಸಂಖ್ಯೆ: 2

ಕನ್ಯಾ: ಸ್ನೇಹಿತರೊಂದಿಗಿನ ಭಿನ್ನಾಭಿಪ್ರಾಯ ಶಮನ. ಸಾಲ ಮರುಪಾವತಿಸಿ ಗೌರವ ಉಳಿಸಿಕೊಳ್ಳಿ. ವಸ್ತ್ರ ವ್ಯಾಪಾರಿಗಳಿಗೆ ಆದಾಯ ಹೆಚ್ಚಳ. ಶುಭಸಂಖ್ಯೆ: 6

ತುಲಾ: ಸಂಪನ್ಮೂಲ ಕ್ರೋಡೀಕರಿಸಲು ಮಾಡಿದ ಪ್ರಯತ್ನ ಫಲ ನೀಡಲಿದೆ. ಸ್ವಯಂ ಉದ್ಯೋಗ ಮಾಡುವವರಿಗೆ ಉತ್ತಮ ಆದಾಯ. ಶುಭಸಂಖ್ಯೆ: 6

ವೃಶ್ಚಿಕ: ಅನಿರೀಕ್ಷಿತ ಮೂಲಗಳಿಂದ ಆರ್ಥಿಕ ಸಹಾಯ ಒದಗುವ ಸಾಧ್ಯತೆ ಇದೆ. ಬಾಹ್ಯಾಕಾಶ ಸಂಸ್ಥೆ ಉದ್ಯೋಗಿಗಳಿಗೆ ವರ್ಗಾವಣೆ. ಶುಭಸಂಖ್ಯೆ:8

ಧನುಸ್ಸು: ಕಚೇರಿಯಲ್ಲಿ ಸಮಾಧಾನ ಚಿತ್ತದಿಂದ ವ್ಯವಹರಿಸಿರಿ. ಬ್ಯಾಂಕ್ ವ್ಯವಹಾರ ನಡೆಸುವವರಿಗೆ ವ್ಯವಹಾರದಲ್ಲಿ ಮುನ್ನಡೆ ಇರುತ್ತದೆ. ಶುಭಸಂಖ್ಯೆ:1

ಮಕರ: ಪಾಲುದಾರಿಕೆ ವ್ಯವಹಾರದಲ್ಲಿ ಆಂತರಿಕ ಗೊಂದಲಗಳು ನಿವಾರಣೆಯಾಗುವವು. ಕುಶಲ ಕರ್ವಿುಗಳ ಉದ್ದಿಮೆಗಳಲ್ಲಿ ಪ್ರಗತಿ. ಶುಭಸಂಖ್ಯೆ: 7

ಕುಂಭ: ಕೃಷಿ ಯಂತ್ರ ಹೊಂದಿರುವವರಿಗೆ ಹೆಚ್ಚಿನ ಆದಾಯ ಇದೆ. ಪ್ರೇಮದಲ್ಲಿ ಬಿದ್ದವರಿಗೆ ಹಿನ್ನಡೆ. ರಿಯಲ್ ಎಸ್ಟೇಟ್​ನಲ್ಲಿ ಮುನ್ನಡೆ. ಶುಭಸಂಖ್ಯೆ: 9

ಮೀನ: ಸಾಮರ್ಥ್ಯಕ್ಕೆ ಸರಿಯಾದ ಕೆಲಸ ಸಿಗಲಿದೆ. ಅತಿವಿನಯ ತೋರಿಸುವವರ ಬಗ್ಗೆ ಎಚ್ಚರ. ವೈಯಕ್ತಿಕ ಆರೋಗ್ಯದ ಬಗ್ಗೆ ನಿಗಾ ಇರಲಿ. ಶುಭಸಂಖ್ಯೆ: 3

 

Leave a Reply