
ಪೊಲೀಸರ ತನಿಖೆಯಲ್ಲಿ ಬಯಲಾದ ಭಯಾನಕ ಸತ್ಯ; ಜ್ಯೋತಿಷ್ಯದ ಪ್ರಭಾವವೋ, ಹಣದ ಜಗಳವೋ?
ತುಮಕೂರು, ಫೆ.13: ತಾಯಿಯನ್ನು ಕೊಂ * ಸಹಜ ಸಾ* ಎಂದು ಎಲ್ಲಾರಿಗೂ ತಿಳಿಸಲು ಪ್ರಯತ್ನಿಸಿದ್ದ ಘಟನೆ ಕೊ* ಪ್ರಕರಣವಾಗಿರುವುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದ್ದು, ಕುಟುಂಬವನ್ನೇ ಬೆಚ್ಚಿಬೀಳಿಸಿದೆ. ತಾಯಿಯ ಸಾ* ನ್ನು ಹೃದಯಾಘಾತ ಎಂದು ಹೇಳಿ ವಿಧಿವಿಧಾನ ಮಾಡಲು ಮುಂದಾಗಿದ್ದ ನತದೃಷ್ಠ ಮಗಳ ವಿರುದ್ಧ ಕೊ* ಆರೋಪ ಹೊರಬಿದ್ದಿದೆ. ತುಮಕೂರು ನಗರದ ಬಂಡೇಪಾಳ್ಯ ಸಮೀಪದ ಶ್ರೀನಗರ ನಿವಾಸಿ ಪುಷ್ಪಲತಾ (ಹೆಸರು ಬದಲಾವಣೆ) ಅವರ ಸಾ* ನ ಪ್ರಕರಣ ಇದೀಗ ಗಂಭೀರ ಸ್ವರೂಪ ಪಡೆದಿದ್ದು, ಮಗಳು ಸುಚಿತ್ರಾ ಹಾಗೂ ಆಕೆಯ ಪತಿ ಸುರೇಶ್ ಅವರನ್ನು ಕ್ಯಾತಸಂದ್ರ ಪೊಲೀಸರು ಬಂಧಿಸಿದ್ದಾರೆ.
ಸಿನಿಮೀಯ ಟ್ವಿಸ್ಟ್: ತಾಯಿಯ ಕೊ* ಮುಚ್ಚಿಹಾಕಲು ಮಾಡಿದ ಯತ್ನ ವಿಫಲ
ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಪುಷ್ಪಲತಾ ಕೆಲವು ದಿನಗಳಿಂದ ಮಂಡಿನೋವಿನ ಸಮಸ್ಯೆಯಿಂದ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದರು. ಕುಟುಂಬದವರೊಂದಿಗೆ ವಾಸಿಸುತ್ತಿದ್ದ ಆಕೆ ಫೆಬ್ರವರಿ 11ರ ರಾತ್ರಿ ಅಚಾನಕ್ ಮೃ* ಪಟ್ಟಿದ್ದಾರೆಂದು ಮಗಳು ಸಂಬಂಧಿಕರಿಗೆ ಮಾಹಿತಿ ನೀಡಿದ್ದಳು. ಮಧ್ಯರಾತ್ರಿ ವೇಳೆ ದೂರವಾಣಿ ಕರೆ ಮಾಡಿದ ಸುಚಿತ್ರಾ, ತಾಯಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಳು. ತಾಯಿಯ ಕೊನೆಯ ಆಸೆಯಂತೆ ಮೃತದೇಹವನ್ನು ತಂದೆಯ ಸಮಾಧಿ ಸಮೀಪವೇ ಹೂಳಬೇಕು ಎಂದು ಹೇಳಿ, ತಕ್ಷಣವೇ ಅಂತ್ಯಕ್ರಿಯೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು.
ಆದರೆ ಇವಳ ವರ್ತನೆಯನ್ನು ಗಮನಿಸಿದ ಸಂಬಂದಿಕರು ಪೋಲಿಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ನತದೃಷ್ಟ ತಾಯಿಯ ಅಂತ್ಯಕ್ರಿಯೆ ನಡೆಸಲು ಮುನ್ನವೇ ಪೊಲೀಸರು ಸ್ಥಳಕ್ಕೆ ಆಗಮಿಸಿ ವಿಚಾರಣೆ ಆರಂಭಿಸಿದರು. ಪ್ರಾಥಮಿಕ ಪರಿಶೀಲನೆಯಲ್ಲೇ ಮೃತದೇಹದ ಮೇಲೆ ಕಂಡುಬಂದ ಗುರುತುಗಳು ಹಾಗೂ ಪರಿಸ್ಥಿತಿಗಳು ಸಹಜ ಸಾವು ಎಂಬ ಹೇಳಿಕೆಗೆ ವಿರುದ್ಧವಾಗಿರುವುದಾಗಿ ತೋರಿ, ಪ್ರಕರಣ ಗಂಭೀರ ತಿರುವು ಪಡೆದುಕೊಂಡಿತು.
ತಾಯಿಯ ಸಾ* ಪೋಲಿಸರ ತನಿಖೆಯಲ್ಲಿ ಹೊರಬಂದ ಕೊ* ಆರೋಪ
ಪೊಲೀಸರ ಕಠಿಣ ವಿಚಾರಣೆ ವೇಳೆ ಪುಷ್ಪಲತಾ ಹೃದಯಾಘಾತದಿಂದ ಮ* ಪಟ್ಟಿಲ್ಲ; ಉದ್ದೇಶಪೂರ್ವಕವಾಗಿ ಉಸಿರುಗಟ್ಟಿಸಿ ಕೊ* ಮಾಡಲಾಗಿದೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ. ವಿಚಾರಣೆ ಮುಂದುವರಿದಂತೆ ಮಗಳು ಸುಚಿತ್ರಾ ತಾನೇ ಈ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾಹಿತಿ ಪ್ರಕಾರ, ರಾತ್ರಿ ಊಟದ ಬಳಿಕ ಮಲಗಿದ್ದ ತಾಯಿಯನ್ನು ಮಲಗಿರುವಾಗ ದಿಂಬಿನಿಂದ ಉಸಿರುಗಟ್ಟಿಸಿ ಕೊ* ಮಾಡಿರುವುದಾಗಿ ಹೇಳಲಾಗಿದೆ. ದಾಳಿ ವೇಳೆ ಹಲ್ಲೆ ನಡೆದಿರುವ ಗುರುತುಗಳೂ ಮೃತದೇಹದ ಮೇಲೆ ಕಂಡುಬಂದಿವೆ ಎಂದು ತಿಳಿದುಬಂದಿದೆ.
ಘಟನೆಯ ಬಗ್ಗೆ ತಿಳಿದಿದ್ದರೂ ಪತಿ ಸುರೇಶ್ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪವೂ ಎದುರಾಗಿದೆ. ಇದರಿಂದಾಗಿ ಆತನ ಪಾತ್ರದ ಕುರಿತು ಸಹ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇಬ್ಬರನ್ನೂ ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ತನ್ನ ತಾಯಿಯನ್ನ ಕೊ* ಮಾಡಲು ಜ್ಯೋತಿಷ್ಯದ ಮಾತುಗಳಿಂದ ಹುಟ್ಟಿದ ಅನುಮಾನ
ಈ ಪ್ರಕರಣದಲ್ಲಿ ಮತ್ತೊಂದು ಆಘಾತಕಾರಿ ಅಂಶವೂ ಬೆಳಕಿಗೆ ಬಂದಿದೆ. ಒಂದು ವರ್ಷದ ಹಿಂದೆ ಪುಷ್ಪಲತಾ ಪತಿ ಬಾಬು ನಾಯಕ್ ಆರೋಗ್ಯ ಸಮಸ್ಯೆಯಿಂದ ಮೃತಪಟ್ಟಿದ್ದರು. ತಂದೆಯ ಸಾವಿನಿಂದ ಮನೋವೈಕಲ್ಯಕ್ಕೊಳಗಾದ ಸುಚಿತ್ರಾ ಜ್ಯೋತಿಷಿಯೊಬ್ಬರನ್ನು ಸಂಪರ್ಕಿಸಿದ್ದಾಳೆ ಎನ್ನಲಾಗಿದೆ. ಈ ವೇಳೆ ತಂದೆಯ ಸಾವಿಗೆ ತಾಯಿಯೇ ಕಾರಣ; ಮಾಟಮಂತ್ರ ಮಾಡಿದ್ದಾಳೆ ಹಾಗೂ ನಿನಗೂ ಅಪಾಯ ಇದೆ ಎಂದು ಹೇಳಲಾಗಿದೆ ಎಂಬ ಮಾಹಿತಿ ದೊರೆತಿದೆ.
ಈ ಮಾತುಗಳು ಸುಚಿತ್ರಾ ಮನಸ್ಸಿನಲ್ಲಿ ಭಯ ಮತ್ತು ಅನುಮಾನಗಳನ್ನು ಬಿತ್ತಿದ್ದವು ಎನ್ನಲಾಗುತ್ತಿದೆ. ತಾಯಿಯ ಬಗ್ಗೆ ಅಸಹನೆ ಬೆಳೆದು, ಕೊನೆಗೆ ಅದೇ ಕಾರಣದಿಂದ ದಾಳಿಗೆ ಮುಂದಾಗಿದ್ದಾಳೆ ಎಂಬ ಅಂಶವನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಆದಾಗ್ಯೂ, ಜ್ಯೋತಿಷ್ಯದ ಪ್ರಭಾವವೇ ನೇರ ಕಾರಣವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ತಾಯಿಯನ್ನು ಕೊ* ಮಾಡಲು ಹಣದ ವಿಚಾರವೂ ಕಾರಣವಾಗಿರಬಹುದೆಂಬ ಅನುಮಾನ
ತನ್ನ ತಾಯಿಯನ್ನು ಕೊ* ಲು ಆರ್ಥಿಕ ವಿಚಾರವೂ ಪ್ರಕರಣಕ್ಕೆ ಮತ್ತೊಂದು ಆಯಾಮ ನೀಡಿದೆ. ಇತ್ತೀಚೆಗೆ ತಾಯಿಯು ತಮ್ಮ ಜಮೀನು ಮಾರಾಟದಿಂದ ಲಕ್ಷಾಂತರ ರೂಪಾಯಿ ಹಣ ಬಂದಿದ್ದು, ಅದನ್ನು ಪುಷ್ಪಲತಾ ತಾನೇ ಕಾಯ್ದುಕೊಂಡಿದ್ದರು ಎನ್ನಲಾಗಿದೆ. ಜಮೀನಿನಿ ಹಣದ ಹಂಚಿಕೆ ಕುರಿತು ತಾಯಿ ಮತ್ತು ಮಗಳ ಆಗಾಗ್ಗೆ ನಡುವೆ ಜಗಳ ವಾಗ್ವಾದ ನಡೆಯುತ್ತಿತ್ತು ಎಂಬ ಮಾಹಿತಿ ದೊರೆತಿದೆ. ಈ ಕಾರಣವೂ ಕೊ* ಗೆ ಕಾರಣವಾಗಿರಬಹುದೆಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಹೀಗೆ ಈ ಪ್ರಕರಣವನ್ನು ಕೇವಲ ಮೂಢನಂಬಿಕೆಯ ಪರಿಣಾಮವೆಂದು ಮಾತ್ರ ಪರಿಗಣಿಸದೆ, ಹಣಕಾಸು ವ್ಯವಹಾರ, ಕಲಹದ ದೃಷ್ಟಿಯಿಂದಲೂ ತನಿಖೆ ನಡೆಸಲಾಗುತ್ತಿದೆ. ಇದಕ್ಕೆ ನಿಖರ ಕಾರಣ ತನಿಖೆ ಮುಗಿದ ಬಳಿಕವೇ ತಿಳಿಯಲಿದೆ ಏನು ಎಂದು ಪೋಲಿಸ್ ಅಧಿಕಾರಿಗಳು ತಿಳಿಸಿದ್ದಾರೆ.
ತಾಯಿಯ ಶವವನ್ನು ಸಾ* ಸಿ ಬೇರೆಡೆಗೆ ಸ್ಥಳಾಂತರಿಲು ಪ್ರಯತ್ನ
ಕೊ* ನಡೆದ ನಂತರ ಘಟನೆ ಮುಚ್ಚಿಹಾಕಲು ಸುಚಿತ್ರಾ ಕ್ರಮ ಕೈಗೊಂಡಿದ್ದಾಳೆ ಎಂಬುದೂ ಪೋಲಿಸರಿಗೆ ತಿಳಿದುಬಂದಿದೆ. ತಮ್ಮ ಮನೆಯಿಂದ ದೇಹವನ್ನು ಮುಂಜಾನೆ ಸಂಬಂಧಿಕರ ಮನೆಗೆ ಕೊಂಡೊಯ್ದು, ಯಾರಿಗೂ ಅಲ್ಲಿ ಅನುಮಾನ ಬಾರದಂತೆ ತಾಯಿಯ ಸಾ* ವನ್ನು ಅಂತ್ಯಕ್ರಿಯೆ ನಡೆಸಲು ಪ್ರಯತ್ನಿಸಿದ್ದಾಳೆ ಎನ್ನಲಾಗಿದೆ. ಈ ಬೆಳವಣಿಗೆ ಅವರ ಸಂಬಂಧಿಕರಲ್ಲಿ ಆಘಾತ ಮೂಡಿಸಿದೆ.
ಈ ಪ್ರಕರಣಕ್ಕೆ ಪೊಲೀಸರ ಪ್ರವೇಶಕ್ಕೆ ಕಾರಣ
ಇತ್ತೀಚೆಗೆ ತಾಯಿ ಮತ್ತು ಮಗಳ ನಡುವೆ ಜಗಳ ನಡೆದಿದ್ದ ಸಂಗತಿ ಅಕ್ಕಪ್ಕದವರಿಗೆ ತಿಳಿದಿದ್ದ ಹಿನ್ನೆಲೆಯಲ್ಲಿ, ಸಾ* ನ ವಿಚಾರ ಕೇಳುತ್ತಿದ್ದಂತೆಯೇ ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಅಂತ್ಯಕ್ರಿಯೆ ವೇಳೆ ಗಲಾಟೆ ಉಂಟಾದ ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ವಿಚಾರಣೆ ಕೈಗೊಂಡಾಗ ಕೊಲೆ ಪ್ರಕರಣ ಬಹಿರಂಗಗೊಂಡಿದೆ.
ಪ್ರಸ್ತುತ ಸುಚಿತ್ರಾ ಮತ್ತು ಸುರೇಶ್ ಇಬ್ಬರುಬಂಧನದಲ್ಲಿದ್ದು, ನ್ಯಾಯಾಲಯದ ಮುಂದಿನ ಕ್ರಮ ನಡೆಯಲಿದೆ. ಪ್ರಕರಣದ ಹಿಂದೆ ನಿಖರ ಕಾರಣ ಏನು ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ. ಜ್ಯೋತಿಷ್ಯದ ಪ್ರಭಾವ, ಕುಟುಂಬ ಕಲಹ, ಆರ್ಥಿಕ ವಿವಾದ ಸೇರಿದಂತೆ ಎಲ್ಲ ಸಾಧ್ಯತೆಗಳನ್ನೂ ಪರಿಶೀಲಿಸಲಾಗುತ್ತಿದೆ.
ನತದೃಷ್ಟ ತಾಯಿಯ ಈ ಘಟನೆ ಮನೆಯ ಒಳಗಿನ ಅನುಮಾನ, ಭಯ ಮತ್ತು ವೈಮನಸ್ಯ ಎಷ್ಟೊಂದು ದುರ್ಘಟನೆಗೆ ಕಾರಣವಾಗಬಹುದು ಎಂಬುದನ್ನು ಮತ್ತೊಮ್ಮೆ ನೆನಪಿಗೆ ತಂದಿದೆ. ಸಮಾಜದಲ್ಲಿ ಮೂಢನಂಬಿಕೆ, ಮಾನಸಿಕ ಒತ್ತಡ ಹಾಗೂ ಹಣಕಾಸು ಕಲಹಗಳು ಎಂತಹ ಪರಿಣಾಮ ಬೀರುತ್ತವೆ ಎಂಬುದಕ್ಕೆ ಈ ಪ್ರಕರಣ ಉದಾಹರಣೆಯಾಗಿ ಪರಿಣಮಿಸಿದೆ.



