HOMENews

ಕೃಷಿ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟಿಜೆನ್ಸಿ) ತಂತ್ರಜ್ಞಾನ ಅಳವಡಿಕೆ ವೀಕ್ಷಣೆ ಮಾಡಲು ಮಹಾರಾಷ್ಟ್ರ ರಾಜ್ಯಕ್ಕೆ ರೈತರ ತಂಡ ತೆರಳಲು ತೀರ್ಮಾನ

ಮೈಸೂರು :-  ಮಹಾರಾಷ್ಟ್ರ ರಾಜ್ಯದಲ್ಲಿ ಕಬ್ಬು ಬೇಸಾಯ ಮಾಡುವ ರೈತರು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಅಳವಡಿಸಿ ವ್ಯವಸಾಯ ಮಾಡುತ್ತಿರುವುದರಿಂದ ಉತ್ಪಾದನಾ ಏರಿಕೆಯಾಗಿದೆ. ಖರ್ಚು ಕಡಿಮೆಯಾಗಿದೆ ಇದರಿಂದ ರೈತರಿಗೆ ಹೆಚ್ಚು ಲಾಭವಾಗುತ್ತಿದೆ ಎಂಬ ಮಾಹಿತಿ ದೊರಕಿರುವುದು ರೈತರಿಗೆ ಸಂತಸವನ್ನುಂಟು ಮಾಡಿದೆ ಈ ಬಗ್ಗೆ ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬುರು ಶಾಂತಕುಮಾರ್ ಕೃತಕ ಬುದ್ಧಿಮತ್ತೆ ಅಳವಡಿಸಿ ಯಶಸ್ವಿಯಾಗಿರುವ ಮಹಾರಾಷ್ಟ್ರ ರೈತರ ಜೊತೆ ದೂರವಾಣಿಯಲ್ಲಿ ಮಾತನಾಡಿ ಈ ಬಗ್ಗೆ ಹೆಚ್ಚು ಅರಿತು ಕೊಳ್ಳಲು ಏಪ್ರಿಲ್ ತಿಂಗಳಲ್ಲಿ ಕರ್ನಾಟಕ ರಾಜ್ಯದ ಕಬ್ಬು ಬೆಳೆಗಾರರ ರೈತರ ತಂಡ ವೀಕ್ಷಣೆಗೆ ಬರಲಿದೆ ಎಂದು ತಿಳಿಸಿದರು ಈ ಬಗ್ಗೆ ಇಂದು ನಡೆದ ರೈತರ ಸಭೆಯಲ್ಲಿ ಪ್ರಸ್ತಾಪಿಸಿದಾಗ ಉತ್ಸಾಹ ಗೊಂಡ ರೈತರು ಎ ಐ ತಂತ್ರಜ್ಞಾನದ ಬೇಸಾಯ ಪದ್ಧತಿ ವೀಕ್ಷಣೆಗೆ ಬರುವುದಾಗಿ ಒಪ್ಪಿದರು. ರಾಜ್ಯದ ಹಿರಿಯ ಪತ್ರಕರ್ತರಾದ ರೈತರ ಹಿತೈಷಿಗಳಾದ ಶ್ರೀಶ ರವರು ಈ ಬಗ್ಗೆ  ಮಾಹಿತಿ ನೀಡಿ. ಉತ್ತೇಜಿಸಿದರು ಎಂದು ಸಭೆಯಲ್ಲಿ ಕುರುಬುರ್ ಶಾಂತಕುಮಾರ್ ತಿಳಿಸಿದರು

ರಾಜ್ಯಾದ್ಯಂತ ಬ್ಯಾಂಕ್ ಸಾಲ ಪಡೆದಿರುವ ರೈತರಿಗೆ ಸರಪೈಸಿ ಕಾಯ್ದೆ ಮರಣ ಶಾಸನವಾಗಿದೆ

ಸರ್ಪೈಸಿ ಕಾಯ್ದೆಯ ವಿರುದ್ಧ ರೈತರ ಹೋರಾಟ ಅವಶ್ಯಕತೆ ಇದೆ ಈ ಕಾಯ್ದೆ ರದ್ದಾಗದಿದ್ದರೆ ರೈತರ ಕೃಷಿ ಭೂಮಿ ಬಂಡವಾಳ ಶಾಹಿಗಳ ಹಾಗೂ ಕಂಪನಿಗಳ ವಶಕೆ ಹೋಗುತ್ತದೆ ಈಗಾಗಲೇ ನೂರಾರು ರೈತರು ಭೂಮಿ ಕಳೆದುಕೊಂಡಿದ್ದಾರೆ ಮುಂದಿನ ತಿಂಗಳು ರಿಸರ್ವ್ ಬ್ಯಾಂಕ್ ಮುಂದೆ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ಗಮನ ಸೆಳೆಯಬೇಕು. ಹಾಗೂ 19 ರಂದು ನವದೆಹಲಿಯಲ್ಲಿ ರಾಮಲೀಲಾ ಮೈದಾನದಲ್ಲಿ ನಡೆಯಲಿರುವ ರೈತರ ಬೃಹತ್ ರ‍್ಯಾಲಿಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ ಕೇಂದ್ರ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ತಿಳಿಸಿದರು ಇಂದು ಮೈಸೂರಿನ ಪಿ.ಡಬ್ಲೂ.ಡಿ ಅತಿಥಿ ಗೃಹದಲ್ಲಿ ನಡೆದ ರಾಜ್ಯ ಕಬ್ಬು ಬೆಳೆಗಾರರ ಸಂಘ ಹಾಗೂ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ  ರೈತರ ಕುಂದು ಕೊರತೆ ಸಭ. ನಡೆಸಲಾಯಿತು.

ಇಂದಿನ ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ  ಬರ್ಡನಪುರ  ನಾಗರಾಜ್. ಮಾರ್ಬಳ್ಳಿ ನೀಲಕಂಠಪ್ಪ . ವರ್ಕೌಡ್ ನಾಗೇಶ್. ಕೆಂಡಗಣ್ಣಪ್ಪ. ರಂಗರಾಜು. ಮಂಜುನಾಥ್. ಮಂಜೇಶ್ ಕಸುವಿನಹಳ್ಳಿ. ಕೂಡನಹಳ್ಳಿ ಸೋಮಣ್ಣ. ಪ್ರಭಾಕರ್. ಕಮಲಮ್ಮ. ಇನ್ನು ಮುಂತಾದವರು ಇದ್ದರು

Leave a Reply