
ವರದಿ:-ವಡ್ಡರಕೊಪ್ಪಲುಶಿವರಾಮು.
ಕೆ ಆರ್ ನಗರ. ಮಾ.18:- ಸಹಕಾರ ಕ್ಷೇತ್ರದಲ್ಲಿ ಸ್ವಹಿತಾಸಕ್ತಿ ಬಿಟ್ಟು ರಾಜಕೀಯ ಬೆರೆಸದೆ ಅಭಿವೃದ್ಧಿಯ ದೃಷ್ಟಿಯಿಂದ ಕರ್ತವ್ಯ ನಿರ್ವಹಿಸಿದರೆ ಆ ಸಹಕಾರ ಸಂಘ ಬೆಳೆಯಲು ಸಹಕಾರಿಯಾಗುತ್ತದೆ ಎಂದು ಮಾಜಿ ಸಚಿವ ಸಾರಾ ಮಹೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ಮಾಜಿ ಸಚಿವ ಸಾರಾ ಮಹೇಶ್ ಅವರನ್ನು ಒಕ್ಕಲಿಗ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ನೂತನ ಆಡಳಿತ ಮಂಡಳಿಯ ಅವರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಮೊಟ್ಟ ಮೊದಲ ಬಾರಿಗೆ ಯಾವುದೇ ವಿರೋಧವಿಲ್ಲದೆ ಎರಡನೇ ಬಾರಿಗೆ ಆಯ್ಕೆಯಾದ ಆಡಳಿತ ಮಂಡಳಿಯನ್ನು ಅಭಿನಂದಿಸುತ್ತ ಈ ಸಹಕಾರ ಸಂಘವು ಮೈಸೂರು ಜಿಲ್ಲೆಯಲ್ಲಿಯೇ ಮಾದರಿ ಸಂಘವನ್ನಾಗಿ ಬೆಳೆಸುವ ಜವಾಬ್ದಾರಿ ನಿಮ್ಮೆಲ್ಲಾ ಆಡಳಿತ ಮಂಡಳಿಯವರ ಮೇಲಿದೆ ಎಂದು ತಿಳಿಸಿದರು.

ನಾನು ತಿಳಿದಿರುವ ಹಾಗೆ ಎರಡನೇ ಬಾರಿ ಅಧ್ಯಕ್ಷರಾಗಿರುವ ಮಿರ್ಲೆ ಶ್ರೀನಿವಾಸಗೌಡ ಉಪಾಧ್ಯಕ್ಷರಾಗಿರುವ ವಡ್ಡರ ಕೊಪ್ಪಲು ಶಿವರಾಮು ಅತ್ಯಂತ ದಕ್ಷ ಮತ್ತು ಪ್ರಾಮಾಣಿಕ ಆಡಳಿತ ನಡೆಸಿರುವುದರಿಂದಲೇ 12 ಲಕ್ಷದಲ್ಲಿ ಪ್ರಾರಂಭವಾದ ಸಹಕಾರ ಸಂಘವು ಇಂದು 70 ಲಕ್ಷಕ್ಕೂ ಹೆಚ್ಚು ಬಂಡವಾಳವನ್ನು ಹೊಂದಿದೆ ಎಂದು ಹೇಳಲು ಹೆಮ್ಮೆಯಾಗುತ್ತಿದೆ ಇದೇ ರೀತಿ ಮುಂದೆಯೂ ಸಹಕಾರ ಸಂಘವು ಅಭಿವೃದ್ಧಿಯಿಂದ ಸಾಗಲಿ ಎಂದು ತಿಳಿಸುತ್ತೇನೆ ಎಂದರು.
ಸಹಕಾರ ಸಂಘದಲ್ಲಿ ಜಾತಿ ಮತ್ತು ರಾಜಕೀಯವನ್ನು ಬೆರೆಸದೆ ಸಮಾಜಮುಖಿ ಮತ್ತು ಸಹಾಯ ಮಾಡುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಿ ಮತ್ತು ಸಹಕಾರ ಸಂಘಕ್ಕೆ ಬರುವ ಸಹಕಾರಿಗಳನ್ನು ಗೌರವ ಮತ್ತು ವಿಶ್ವಾಸದಿಂದ ನೋಡುವ ಮೂಲಕ ಅವರ ಸ್ಪನ್ ಸಮಸ್ಯೆಗೆ ಸ್ಪಂದಿಸುವ ಕೆಲಸವನ್ನು ಮಾಡಿ ಎಂದು ನೂತನ ಆಡಳಿತ ಮಂಡಳಿಗೆ ಸಲಹೆಯನ್ನು ನೀಡಿದರು.
ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಒಕ್ಕಲಿಗ ಕ್ರೆಡಿಟ್ ಕೋ ಆಪರೇಟಿಯಾ ಸೊಸೈಟಿ ಅಧ್ಯಕ್ಷ ಮಿರ್ಲೆ ಶ್ರೀನಿವಾಸ ಗೌಡ ನಮ್ಮ ಸಹಕಾರ ಸಂಘವು ಆರಂಭದಲ್ಲಿ ಕುಂಟುತ್ತಾ ನಡೆದರು ಎರಡು ಮೂರು ವರ್ಷಗಳಲ್ಲಿ ಅತ್ಯಂತ ಹೆಚ್ಚು ಕ್ರಿಯಾಶೀಲವಾಗಿ ಅಭಿವೃದ್ಧಿ ಹೊಂದುತ್ತಿದೆ ಎಂದು ತಿಳಿಸಿದ ಅಧ್ಯಕ್ಷರು ನಮ್ಮ ಈ ಸಹಕಾರ ಸಂಘಕ್ಕೆ ಮಾಜಿ ಸಚಿವರು ಕೆ ಆರ್ ನಗರ ಕ್ಷೇತ್ರದ ಜನಪ್ರಿಯ ನಾಯಕರದ ಸಾರಾ ಮಹೇಶ್ ಸರ್ ಅವರನ್ನು ಗೌರವ ಅಧ್ಯಕ್ಷರನ್ನಾಗಿ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ನಮ್ಮ ಆಡಳಿತ ಮಂಡಳಿಯಲ್ಲಿರುವ ಉಪಾಧ್ಯಕ್ಷರು ಸೇರಿದಂತೆ ಎಲ್ಲರೂ ಸಹ ಸಹಕಾರಿಗಳ ಸಮಸ್ಯೆಗೆ ಸ್ಪಂದಿಸುವ ಜೊತೆಗೆ ಅತ್ಯಂತ ಸರಳ ಮತ್ತು ಶೀಘ್ರವಾಗಿ ಸಾಲವನ್ನು ನೀಡುತ್ತಿದ್ದೇವೆ ಮತ್ತು ಸದಸ್ಯರಲ್ಲದವರಿಗೂ ಬೀದಿಬದಿ ವ್ಯಾಪಾರಿಗಳು ಸಣ್ಣಪುಟ್ಟ ಅಂಗಡಿಗಳು ಸೇರಿದಂತೆ ಅಗತ್ಯ ದಾಖಲೆಗಳೊಂದಿಗೆ ಜನತಾಮಾನ್ಯರಿಗೆ ತೊಂದರೆಯಾಗದಂತೆ ಸಾಲವನ್ನು ನೀಡುತ್ತಿದ್ದೇವೆ ಎಂದು ತಿಳಿಸಿದರು.
ಈಗಾಗಲೇ ನಮ್ಮ ಒಕ್ಕಲಿಗ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಗೆ ಸದಸ್ಯರಾಗಲು ಆಕಾಂಕ್ಷಿಗಳು ಹೆಚ್ಚಿದ್ದು ಮುಂದೆ ನಮ್ಮ ಆಡಳಿತ ಮಂಡಳಿಯ ಸಭೆಯಲ್ಲಿ ಚರ್ಚಿಸಿ ಸದಸ್ಯರಾಗಲು ಬಯಸಿ ಅರ್ಜಿ ನೀಡಿದ ಎಲ್ಲರನ್ನೂ ಸದಸ್ಯರನ್ನಾಗಿ ಮಾಡುವ ಮೂಲಕ ಸಂಘವನ್ನು ಅತ್ಯಂತ ಯಶಸ್ವಿಯಾಗಿ ನಡೆಸುವ ಭರವಸೆಯನ್ನು ನೀಡಿದರು.
ಸದಸ್ಯರು ಹೆಚ್ಚು ಮತ್ತು ಮೂಲ ಬಂಡವಾಳ ಹೆಚ್ಚಾದಂತೆ ನಮ್ಮ ಸಹಕಾರ ಸಂಘಕ್ಕೆ ಸ್ವಂತ ಕಟ್ಟಡ ಹಾಗೂ ಇನ್ನೊಂದು ಸಾಲಿಗ್ರಾಮದಲ್ಲಿ ಹೊಸ ಶಾಖೆಯನ್ನು ತೆರೆಯುವ ಚಿಂತನೆ ಇದ್ದು ಮುಂಬರುವ ವಾರ್ಷಿಕ ಮಹಾಸಭೆಯಲ್ಲಿ ಎಲ್ಲಾ ಸದಸ್ಯರ ಅಭಿಪ್ರಾಯ ಪಡೆದು ಶಾಖೆಯನ್ನು ತೆರೆಯುತ್ತೇವೆ ಮತ್ತು ಮಾಜಿ ಸಚಿವ ಸಾರಾ ಮಹೇಶ್ ಅವರ ಆಸೆಯಂತೆ ಸಹಕಾರದ ಸಂಘದ ಅಭಿವೃದ್ಧಿಗೆ ಅಧಿಕಾರದ ಆಸೆ ಇಲ್ಲದೆ ನಡೆಸುವ ಭರವಸೆಯನ್ನು ನೀಡಿದರು.
ಸನ್ಮಾನ ಕಾರ್ಯಕ್ರಮದಲ್ಲಿ ಸಹಕಾರ ಸಂಘದ ಉಪಾಧ್ಯಕ್ಷ ವಡ್ಡರ ಕೊಪ್ಪಲು ಶಿವರಾಮು ತಾ.ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಸಿಜೆ ಅರುಣ್ ಕುಮಾರ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಲಕ್ಕಿ ಕುಪ್ಪೆ ಶಂಕರೇಗೌಡ ಸಹಕಾರ ಸಂಘದ ಹಿರಿಯ ನಿರ್ದೇಶಕರಾದ ಸಿ ಆರ್ ಉದಯ್ ಕುಮಾರ್ ಹೊಸಹಳ್ಳಿ ಪ್ರಕಾಶ್ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಅನಿಪ್ ಕುಮಾರ್. ಒಕ್ಕಲಿಗ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ವತಿಯಿಂದ ಮಜಿ ಸಚಿವ ಸಾರಾ ಮಹೇಶ್ ಅವರನ್ನು ಸನ್ಮಾನಿಸುತ್ತಿರುವುದು.





