
ಮೈಸೂರು:- ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ. ಹರೀಶ್ ಗೌಡ ರವರು ದಿನಾಂಕ: 24-02-2026, ಮಂಗಳವಾರ ದಂದು ಕ್ಷೇತ್ರದಲ್ಲಿನ ವಿವಿಧ ಕೊಳಗೇರಿ ಪ್ರದೇಶ ನಿವಾಸಿಗಳಿಗೆ ಜೆಎನ್ ನರ್ಮ್ – ಬಿ.ಎಸ್.ಯು.ಪಿ. ಯೋಜನೆಯಡಿ ಏಕಲವ್ಯನಗರದಲ್ಲಿ ನಿರ್ಮಿಸಲಾಗಿರುವ ಮನೆಗಳ ಪೈಕಿ 22 ಮನೆಗಳನ್ನು ಫಲಾನುಭವಿಗಳಿಗೆ ಲಾಟರಿ ಮುಖಾಂತರ ಹಂಚಿಕೆ ಮಾಡಿದರು.

ಶಾಸಕರಾದ ಕೆ. ಹರೀಶ್ ಗೌಡ ರವರು ಈ ಸಂದರ್ಭದಲ್ಲಿ ಮಾತನಾಡಿ ಏಕಲವ್ಯನಗರ ಬಡಾವಣೆಯಲ್ಲಿ ಜೆ.ಎನ್. ನರ್ಮ್ – ಬಿ.ಎಸ್.ಯು.ಪಿ. ಯೋಜನೆಯಡಿಯಲ್ಲಿ ನಿರ್ಮಿಸಲಾಗಿರುವ ಜಿ+3 ಮಾದರಿ ವಸತಿ ಸಮುಚ್ಛಯಗಳಲ್ಲಿ ಖಾಲಿಯಿರುವ ಮನೆಗಳನ್ನು ಹಂಚಿಕೆ ಮಾಡಲು ನಿಯಮಾನುಸಾರ ಫಲಾನುಭವಿಗಳ ಪಟ್ಟಿಯನ್ನು ಸಿದ್ದಪಡಿಸಿದ್ದು, ಸುಮಾರು ವರ್ಷಗಳಿಂದ ಹಂಚಿಕೆ ಮಾಡದ ಕಾರಣ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರನ್ನು ತರಾಟೆಗೆ ತೆಗೆದುಕೊಂಡು, ಈ ದಿನ ಹಂಚಿಕೆ ಮಾಡಿರುವ 22 ಫಲಾನುಭವಿಗಳಲ್ಲದೆ, ಉಳಿಕೆ ಇರುವ ಮನೆಗಳನ್ನು ಸಹ ಫಲಾನುಭವಿಗಳ ಪಟ್ಟಿಯಲ್ಲಿರುವಂತೆ ಪರಿಶೀಲಿಸಿ ಲಾಟರಿ ಮುಖಾಂತರ ಅವರಿಗೂ ಸಹ ಹಂಚಿಕೆ ಮಾಡಲು ಅಗತ್ಯ ಕ್ರಮ ವಹಿಸಲು ಸೂಚಿಸಿದರು.

ಮನೆಗಳನ್ನು ಪಡೆದುಕೊಂಡಿರುವ ಫಲಾನುಭವಿಗಳು ಹಂಚಿಕೆಯಾಗಿರುವ ಮನೆಗಳಿಗೆ ನಿಗಧಿಪಡಿಸಿದ ಹಣವನ್ನು ಪಾವತಿಸಿ, ಎಲ್ಲಾ ದಾಖಲೆಗಳನ್ನು ಪಡೆದುಕೊಂಡು, ಹಂಚಿಕೆಯಾಗಿರುವ ಮನೆಗಳಲ್ಲಿಯೇ ವಾಸಿಸಬೇಕು, ಅದನ್ನು ಇನ್ನೊಬ್ಬರಿಗೆ ಬಾಡಿಗೆ, ಭೋಗ್ಯ ಹಾಕಿ ಪುನಃ ಕೊಳಗೇರಿಗಳಲ್ಲಿ ವಾಸಿಸಬಾರದೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೊರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಕಾರ್ಯಪಾಲಿಕ ಅಭಿಯಂತರರಾದ, ಶ್ರೀ ಮಹಮ್ಮದ್ ಜಫ್ರುಲ್ಲಾ, ಸಹಾಯಕ ಕಾರ್ಯಪಾಲಿಕ ಅಭಿಯಂತರರಾದ ಶ್ರೀ ಜಿ.ಎಸ್. ರಾಮಚಂದ್ರ, ಸಹಾಯಕ ಅಭಿಯಂತರರಾದ ಶ್ರೀ ಝಾನ್ಸಿ ರಾಯ್ ಜೆ ಹಾಗೂ ದೇವರಾಜ ಬ್ಲಾಕ್ ಅಧ್ಯಕ್ಷರಾದ ಶ್ರೀ ನಾಗಭೂಷಣ್ ಡಿ, ಮಾಜಿ ನಗರಪಾಲಿಕೆ ಸದಸ್ಯರು, ಇಂದಿರಾ ಗಾಂಧಿ ಬ್ಲಾಕ್ ಅಧ್ಯಕ್ಷರಾದ ಶ್ರೀ ರವಿ ಮಂಚೇಗೌಡನಕೊಪ್ಪಲು ಹಾಗೂ ಸ್ಥಳೀಯ ಮುಖಂಡರಾದ, ಷಣ್ಮುಗಂ, ವಾರ್ಡ್ ಅಧ್ಯಕ್ಷರಾದ ಶ್ರೀ ಕುಮಾರ್, ತಂಬಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.






