
ಸ್ನೇಹದ ಹೆಸರಿನಲ್ಲಿ ಸಾ*ನ ನೆರಳು: ಶಿವಮೊಗ್ಗ ಗಾಜನೂರಿನಲ್ಲಿ ಕ್ಷುಲ್ಲಕ ಜಗಳದಿಂದ ಸ್ನೇಹಿತನ ಭೀಕರ ಹ*
ಶಿವಮೊಗ್ಗ, ಫೆ.13: ಮಲೆನಾಡಿನ ಪ್ರಶಾಂತ ವಾತಾವರಣವನ್ನುಅಲ್ಲಿನ ಜನತೆಯನ್ನು ಬೆಚ್ಚಿಬೀಳಿಸುವಂತಹ ಘಟನೆ ಶಿವಮೊಗ್ಗ ತಾಲೂಕಿನ ಗಾಜನೂರಿನಲ್ಲಿ ನಡೆದಿದೆ. ಸಾಮಾನ್ಯವಾಗಿ ಸ್ನೇಹ, ವಿಶ್ವಾಸ ಮತ್ತು ಒಟ್ಟಿಗೆ ಕಳೆದ ಕ್ಷಣಗಳ ನೆನಪುಗಳಿಂದ ಕಟ್ಟಿಕೊಳ್ಳಬೇಕಾದ ಸಂಬಂಧವೇ ಇಲ್ಲಿ ರಕ್ತಪಾತದ ದುರಂತ ಅಂತ್ಯ ಕಂಡಿದೆ. ಸ್ನೇಹಿತರು ಮದ್ಯಪಾನ ಮಾಡಿದ ನಂತರದ ವೇಳೆಯಲ್ಲಿ ಉಂಟಾದ ಕ್ಷುಲ್ಲಕ ಜಗಳವೇ ಕೊನೆಯಲ್ಲಿ ಒಬ್ಬನ ಜೀವವನ್ನು ಕಸಿದುಕೊಂಡಿದ್ದು, ಈ ಘಟನೆ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಶ್ರೀನಿವಾಸ್ (36) ಎಂಬ ಕಾರ್ಮಿಕನು ತನ್ನ ಸ್ನೇಹಿತರ ಕೈಯಲ್ಲಿ ಅಮಾನವೀಯವಾಗಿ ಹತ್ಯೆಯಾಗಿರುವುದು ಸಮಾಜದಲ್ಲಿ ಮತ್ತೊಮ್ಮೆ ಆತಂಕ ಹುಟ್ಟಿಸಿದೆ.
ಶ್ರೀನಿವಾಸ್ ಮೂಲತಃ ಶಿವಮೊಗ್ಗ ನಗರದ ಹೊಸಮನೆ ಪ್ರದೇಶದ ನಿವಾಸಿಯಾಗಿದ್ದರು. ಶ್ರೀನಿವಾಸ್ ತನ್ನ ಜೀವನೋಪಾಯಕ್ಕಾಗಿ ಅವರು ಗಾರೆ ಕೆಲಸ ಮಾಡುತ್ತಿದ್ದರು. ಕಳೆದ ಒಂದು ವರ್ಷದಿಂದ ಗಾಜನೂರಿನಲ್ಲಿ ನೆಲೆಸಿ ಕೆಲಸ ಮಾಡುತ್ತಾ ದಿನನಿತ್ಯದ ತಮ್ಮ ಬದುಕು ಸಾಗಿಸುತ್ತಿದ್ದರು. ಸಾಮಾನ್ಯ ಕಾರ್ಮಿಕನ ಜೀವನದಂತೆ ದಿನವೆಲ್ಲಾ ಶ್ರಮಪಟ್ಟು ಕೆಲಸ ಮಾಡಿ ನಂತರ ಸಂಜೆ ಸ್ನೇಹಿತರ ಜೊತೆ ಕಾಲ ಕಳೆಯುವುದು ಅವರಿಗೆ ಸಾಮಾನ್ಯವಾಗಿತ್ತು . ಆದರೆ ಅದೇ ಜೀವನ ಶೈಲಿ ಸ್ನೇಹಿತರ ಜೊತೆ ಕಳೆದ ಒಂದು ರಾತ್ರಿ ಶ್ರೀನಿವಾಸ್ ರವರ ಜೀವನದ ಕೊನೆಯ ಅಧ್ಯಾಯ ಆಗಿಬಿಟ್ಟಿದೆ.
ಇದನ್ನೂ ಓದಿ:- ಈ ದಿನದ ರಾಶಿ ಭವಿಷ್ಯ
ಶಿವಮೊಗ್ಗ ಪೊಲೀಸರ ಪ್ರಾಥಮಿಕ ತನಿಖೆಯ ಮಾಹಿತಿಯ ಪ್ರಕಾರ, ಈ ಘಟನೆ ನಡೆದ ದಿನ ರಾತ್ರಿ ಶಿವಮೊಗ್ಗದ ಗಾಜನೂರಿನಲ್ಲಿರುವ ಸ್ನೇಹ ಬಾರ್ ಎದುರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಂಗಳದಲ್ಲಿ ಶ್ರೀನಿವಾಸ್ ಮತ್ತು ಅವರಿಬ್ಬರು ಸ್ನೇಹಿತರು ಸೇರಿ ರಾತ್ರಿ ಮದ್ಯಪಾನ ಮಾಡುತ್ತಿದ್ದರು. ಅಲ್ಲಿದ್ದ ಸ್ಥಳೀಯರು ಹೇಳುವಂತೆ, ಅಲ್ಲಿ ಕೆಲವೊಮ್ಮೆ ಇಂತಹ ಪಾರ್ಟಿಗಳು ನಡೆಯುವುದು ಅಪರೂಪವಲ್ಲ. ಪಾರ್ಟಿ ಆರಂಭವಾದ ಮೊದಮೊದಲು ಎಲ್ಲವೂ ಸಾಮಾನ್ಯವಾಗಿದ್ದರೂ, ಪಾರ್ಟಿಯಲ್ಲಿ ಮಧ್ಯಪಾನ ಅತಿಯಾದಂತೆ ಮಾತಿನ ಚರ್ಚೆ ಕಿರಿಕಿರಿಗೆ ತಿರುಗಿದಂತೆ ಕಾಣುತ್ತದೆ. ಇವರಲ್ಲಿ ಯಾವ ವಿಷಯಕ್ಕೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯ ಉಂಟಾಯಿತು ಎಂಬುದು ಇನ್ನೂ ನಿಖರವಾಗಿ ತಿಳಿದಿಲ್ಲಾ , ಆದರೆ ಇವರಿಬ್ಬರ ಮಾತಿನ ಚಕಮಕಿ ಬಹುಬೇಗ ಜಗಳಕ್ಕೆ ತಿರುಗಿದೆ.
ಕುಡಿತದ ಅಮಲಿನಲ್ಲಿ ಕೋಪದ ಕೈಗೆ ಬುದ್ದಿಕೊಟ್ಟು ಕಳೆದ ರಾತ್ರಿ ಸ್ನೇಹಿತರಿಬ್ಬರು ಶ್ರೀನಿವಾಸ್ ಮೇಲೆ ಮರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ಗಲಾಟೆ ವಿಕೋಪಕ್ಕೆ ತಲುಪಿದಾಗ, ಅವರು ಅಲ್ಲೆ ಬಿದ್ದಿದ್ದ ಕಲ್ಲು ಮತ್ತು ಇತರ ವಸ್ತುಗಳನ್ನು ಬಳಸಿ ಹಲ್ಲೆ ಮಾಡಿದ್ದು, ಘಟನೆಯು ಅಮಾನವೀಯ ತಿರುವು ಪಡೆದುಕೊಂಡಿದೆ. ತನಿಖಾ ಮೂಲಗಳ ಪ್ರಕಾರ, ಆರೋಪಿಗಳು ಶ್ರೀನಿವಾಸ್ ಅವರನ್ನು ನೆಲಕ್ಕೆ ಎತ್ತಿಹಾಕಿ ಕಾಲುಗಳನ್ನು ಮಡಚಿ ಗಾಯಗೊಳಿಸಿದ್ದು ಮಾತ್ರವಲ್ಲದೆ, ಅವಮಾನಕಾರಿ ರೀತಿಯಲ್ಲಿ ಅವರ ಬಟ್ಟೆಗಳನ್ನು ಬಿಚ್ಚಿ ಹಲ್ಲೆ ನಡೆಸಿದ್ದಾರೆ. ಇದು ಸಾಲೆದೆಂಬಂತೆ ಕೊನೆಯಲ್ಲಿ ತಲೆಯ ಮೇಲೆ ಭಾರಿಯಾದ ಕಲ್ಲು ಎತ್ತಿಹಾಕಿ ಹ* ಮಾಡಿದಿರುವ ಶಂಕೆ ವ್ಯಕ್ತವಾಗಿದೆ.
ಘಟನೆ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದು, ಘಟನೆ ನಡೆದ ರಾತ್ರಿ ವೇಳೆಯಲ್ಲಿ ಯಾರಿಗೂ ಈ ಘಟನೆ ತಿಳಿಯದೇ ಉಳಿದಿದೆ. ಬೆಳಗ್ಗೆ ಸ್ಥಳೀಯ ಗ್ರಾಮಸ್ಥರು ಆ ಸ್ಥಳದ ಬಳಿ ವ್ಯಕ್ತಿಯೊಬ್ಬರ ಶವ ಬಿದ್ದಿರುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಪೋಲಿಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದೃಶ್ಯವು ಅಲ್ಲಿ ಕಂಡವರಿಗೆ ಮನಕಲಕುವಂತಿತ್ತು. ಸ್ನೇಹದ ನೆನಪುಗಳಿಗಿಂತ ಕ್ರೂರತೆಯ ಗುರುತುಗಳು ಮಾತ್ರ ಉಳಿದಿದ್ದವು.
ಮಾಹಿತಿ ತಿಳಿದ ತಕ್ಷಣ ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಾರಂಭಿಸಲಾಯಿತು. ಇಲ್ಲಿನ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ಮೃ* ನ ಜೊತೆ ಇದ್ದವರು ಯಾರು ಎಂದು ಪತ್ತೆಹಚ್ಚಲು ಪೊಲೀಸರು ಕ್ರಮ ಕೈಗೊಂಡರು. ತಾಂತ್ರಿಕ ಮಾಹಿತಿಗಳು ಹಾಗೂ ಅಲ್ಲಿನ ಸ್ಥಳೀಯರ ಹೇಳಿಕೆಗಳನ್ನು ಆಧರಿಸಿ ಪೊಲೀಸರು ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೃತನ ಕುಟುಂಬದವರು ದುಃಖದ ಸಾಗರದಲ್ಲಿ ಮುಳುಗಿದ್ದಾರೆ. “ನನ್ನ ತಮ್ಮನನ್ನು ಅವನ ಸ್ನೇಹಿತರೇ ಕೊಂದಿದ್ದಾರೆ. ಅವರಿಗೆ ಕಠಿಣ ಶಿಕ್ಷೆ ಆಗಬೇಕು” ಎಂದು ಸಹೋದರಿ ಸುಮಾ ಕಣ್ಣೀರಿಟ್ಟುಕೊಂಡು ನ್ಯಾಯಕ್ಕಾಗಿ ಪೋಲಿಸರಿಗೆ ಆಗ್ರಹಿಸಿದ್ದಾರೆ. ಕುಟುಂಬದವರು ಹೇಳುವಂತೆ, ಶ್ರೀನಿವಾಸ್ ಸರಳ ಸ್ವಭಾವದವನಾಗಿದ್ದು, ಯಾರೊಂದಿಗೂ ವೈಮನಸ್ಸು ಇರಲಿಲ್ಲ. ಅವನ ಸಾವಿನ ಸುದ್ದಿ ಅವರ ಬದುಕಿನ ದೀಪವನ್ನು ಆರಿಸಿದಂತೆ ಆಗಿದೆ.
ಇದನ್ನೂ ಓದಿ:- ಅರಮನೆ ಆವರಣದಲ್ಲಿ ಶಿವರಾತ್ರಿ ಸಂಭ್ರಮ: ತ್ರಿನೇಶ್ವರನಿಗೆ ಚಿನ್ನದ ಮುಖವಾಡ ಧಾರ
ಶಿವಮೊಗ್ಗದಲ್ಲಿ ಈ ಘಟನೆ ಮತ್ತೊಮ್ಮೆ ಕುಡಿತದ ಅತಿರೇಕದಿಂದ ಉಂಟಾಗುವ ಹಿಂಸಾತ್ಮಕ ಪರಿಣಾಮಗಳ ಬಗ್ಗೆ ಪ್ರಶ್ನೆಗಳನ್ನು ಎಬ್ಬಿಸಿದೆ. ಸಾಮಾನ್ಯವಾಗಿ ಸಣ್ಣ ಮಾತಿನ ಅಸಮ್ಮತಿ ದೊಡ್ಡ ದುರಂತಕ್ಕೆ ತಿರುಗುವುದು ಕುಡಿತದ ಅಮಲಿನಲ್ಲಿ ಹೆಚ್ಚಾಗಿ ಕಾಣಸಿಗುತ್ತದೆ ಎಂದು ಸಮಾಜಶಾಸ್ತ್ರಜ್ಞರು ಅಭಿಪ್ರಾಯಪಡುತ್ತಾರೆ. ಕುಡಿತದ ಅಮಲಿನಲ್ಲಿ ಕ್ಷಣಿಕ ಕೋಪ ಮತ್ತು ತಾಳ್ಮೆಯ ಕೊರತೆ ಈ ರೀತಿ ಜೀವಗಳನ್ನು ಕಸಿದುಕೊಳ್ಳುವ ಮಟ್ಟಕ್ಕೆ ಹೋಗುವುದು ಸಮಾಜಕ್ಕೆ ಎಚ್ಚರಿಕೆಯ ಗಂಟೆಯಂತೆ ಪರಿಣಮಿಸಿದೆ.
ಶಿವಮೊಗ್ಗ ಈ ಪೊಲೀಸರು ಪ್ರಕರಣದ ಸಂಪೂರ್ಣ ತನಿಖೆಯನ್ನು ಮುಂದುವರೆಸುತ್ತಿದ್ದಾರೆ. ಆರೋಪಿಗಳ ವಿರುದ್ಧ ಕೊಲೆ ಸೇರಿದಂತೆ ವಿವಿಧ ಕಲಂಗಳನ್ನು ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವ ಕ್ರಮ ಕೈಗೊಳ್ಳಲಾಗಿದೆ. ತನಿಖೆಯ ಅಂತಿಮ ವರದಿ ಹೊರಬಂದ ಬಳಿಕ ಘಟನೆಗೆ ಕಾರಣವಾದ ನಿಖರ ಪರಿಸ್ಥಿತಿಗಳು ಬೆಳಕಿಗೆ ಬರಲಿವೆ.
ಶಿವಮೊಗ್ಗದ ಗಾಜನೂರಿನ ಈ ಘಟನೆ ಸ್ಥಳೀಯರ ಅಲ್ಲಿನ ಮನಸ್ಸಿನಲ್ಲಿ ಭಯ,ಅತಂಕ ಮತ್ತು ಚಿಂತನೆ ಮೂಡಿಸಿದೆ. ಸ್ನೇಹದ ಹೆಸರಿನಲ್ಲಿ ಆರಂಭವಾದ ಪಾರ್ಟಿ ಒಂದು ರಾತ್ರಿ, ಕೊನೆಗೆ ಒಂದು ಒಂದು ವ್ಯಕ್ತಿಯ ಜೀವವನ್ನು ಕಳೆದುಕೊಂಡ ಕತ್ತಲೆಯ ಕಥೆಯಾಗಿ ಉಳಿದಿದೆ. ಜೀವನದ ಮೌಲ್ಯ ಎಷ್ಟು ಅಮೂಲ್ಯವೋ ಮತ್ತು ಕ್ಷಣಿಕ ಕೋಪ ಎಷ್ಟು ಅಪಾಯಕಾರಿಯೋ ಎನ್ನುವುದನ್ನು ಈ ಘಟನೆ ಮತ್ತೆ ನೆನಪಿಸಿದೆ. ಸಮಾಜಕ್ಕೆ ಇದು ಕೇವಲ ಸುದ್ದಿ ಅಲ್ಲ, ಎಚ್ಚರಿಕೆಯ ಪ್ರತಿಧ್ವನಿಯಾಗಿದೆ.



