HOMENews

ತೀರ್ಥಹಳ್ಳಿಯಲ್ಲಿ ಭೀಕರ ದಾಳಿ: ಪ್ರೀತಿ ಒಪ್ಪದಿದ್ದಕ್ಕೆ ಯುವತಿಗೆ ಇರಿತ

ಪ್ರೇಮ ಪ್ರಸ್ತಾವನೆ ನಿರಾಕರಣೆ ಹಿನ್ನಲೆ: ಯುವಕನ ಹಲ್ಲೆಯಿಂದ ಯುವತಿ ಗಂಭೀರ

ಶಿವಮೊಗ್ಗ: ಪ್ರೇಮಿಗಳ ದಿನದಂದು ನಡೆದ ಭೀಕರ ಘಟನೆ  ಇಂದು ತಡವಾಗಿ ಬೆಳಕಿಗೆ ಬಂದಿದ್ದು, ಪ್ರೇಮ ಪ್ರಫೊಜಲ್  ಬೇಡವೆಂದ  ಹುಡಿಗಿಗೆ ಯುವಕನೊಬ್ಬ ಬಿಯರ್ ಬಾಟಲಿ ಹಾಗೂ ಬೀಯರ್ ಬಾಟಲಿಯ ಗ್ಲಾಸ್  ಚೂರಿನಿಂದ ಚುಚ್ಚಿರುವ  ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಲ್ಮನೆ ಗ್ರಾಮದಲ್ಲಿ ನಡೆದಿದೆ. ಫೆಬ್ರವರಿ 14 ರಂದು ನಡೆದ ಈ ಘಟನೆ ಇದೀಗ ಪೊಲೀಸ್ ದಾಖಲಾತಿಗಳ ಮೂಲಕ ಬಹಿರಂಗವಾಗಿದ್ದು, ಇಬ್ಬರೂ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು ತಿಳಿದು ಬಂದಿದೆ.

ಈ ಘಟನೆಯ ಮಾಹಿತಿಯ ಪ್ರಕಾರ, ಸ್ವರೂಪ್ ಎಂಬ ಯುವಕನು ಪ್ರೇಮಿಗಳ ದಿನದಂದು ಯುವತಿಯನ್ನು ಪ್ರೀತಿಸುತ್ತರುವುದಾಗಿ ಹುಡುಗಿಯ ಬಳಿ ತನ್ನ ಪ್ರೇಮ ನಿವೇದನೆ ಮಾಡಿಕೊಂಡಿದ್ದಾನೆ. ಆದರೆ ಯುವತಿ ಆತನ ಪ್ರಪೋಸಲ್ ಅನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾಳೆ. ಇದರಿಂದ ಅವೇಷಭರಿತನಾದ ಯುವಕನು ಹತ್ತಿರದಲ್ಲಿದ್ದ ಬಿಯರ್ ಬಾಟಲಿಯನ್ನು ಒಡೆದು ಅದರ ಬಾಟಲಿಯ ಗ್ಲಾಸ್ ಚೂರಿನಿಂದ ಯುವತಿಯ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ದಾಳಿಯಲ್ಲಿ ಯುವತಿಯ ಕೈ ಹಾಗೂ ಕುತ್ತಿಗೆ ಭಾಗಗಳಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯರು ತಕ್ಷಣವೇ ಆಕೆಯನ್ನು ತೀರ್ಥಹಳ್ಳಿಯ ಪಟ್ಟಣದಲ್ಲಿರುವ ಜೆ.ಸಿ. ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿಂದ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಸ್ತುತ ಆಕೆಯ ಸ್ಥಿತಿ ಗಮನಾರ್ಹವಾಗಿದ್ದು ವೈದ್ಯಕೀಯ ಐಸಿಯು ನಿಗಾದಲ್ಲಿದ್ದಾಳೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ:- ನಿಖಿಲ್ ಕುಮಾರಸ್ವಾಮಿ ಫೆ.18ರಿಂದ ಮೈಸೂರಿನಲ್ಲಿ ‘ಜನರೊಂದಿಗೆ ಜನತಾ ದಳ ಅಭಿಯಾನ ಆರಂಭ

ಈ ಘಟನೆ ನಡೆದ ವಿಚಾರ ಯುವತಿಯ ಕುಟುಂಬಸ್ಥರು ಮತ್ತು ಪರಿಚಿತರ ಗಮನಕ್ಕೆ ಬಂದ ತಕ್ಷಣ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿತು. ಯುವಕ ಸ್ವರೂಪ್ ಮೇಲೆ ಯುವತಿಯ ಕಡೆಯವರು ಹಲ್ಲೆ ನಡೆಸಿದ ಪರಿಣಾಮ ಅವನಿಗೂ ತಲೆ ಸೇರಿದಂತೆ ದೇಹದ ಹಲವು ಭಾಗಗಳಲ್ಲಿ ಗಾಯಗಳಾಗಿವೆ. ಗಾಯಗೊಂಡ ಯುವಕನನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಹೀಗಾಗಿ ಪ್ರಕರಣ ಎರಡು ಕಡೆಯವರ ಸಂಘರ್ಷದಿಂದ ಪರಿಸ್ಥತಿ ವಿಕೋಪ  ಸ್ವರೂಪ ಪಡೆದಿದ್ದು, ಗ್ರಾಮದಲ್ಲಿ ಕೆಲಕಾಲ ಬಿಸುವಿನ ವಾತಾವರಣ ನಿರ್ಮಾಣವಾಗಿತ್ತು.

ಈ ಘಟನೆಯ ಬಗ್ಗೆ ಮಾಹಿತಿ ಪಡೆದ ತೀರ್ಥಹಳ್ಳಿ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಯಾವುದೇಅಹಿತಕರ ಘಟನೆ ನಡೆಯದಂತೆ ಪರಿಸ್ಥತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಹಲ್ಲೆ ಮಾಡಿದ ಆರೋಪಿಯಾದ ಯುವಕನ ವಿರುದ್ಧ ಹಲ್ಲೆ ಪ್ರಕರಣ ದಾಖಲಿಸಿಕೊಂಡಿದ್ದು, ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರಿದಿದೆ. ಇವರಿಬ್ಬರ ಹೇಳಿಕೆಗಳು, ಸಾಕ್ಷಿಗಳು  ಮಾಹಿತಿ ಹಾಗೂ ವೈದ್ಯಕೀಯ ವರದಿಗಳ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಇಲ್ಲಿನ ಸ್ಥಳೀಯರು ಹೇಳುವಂತೆ, ಪ್ರೇಮ ಪ್ರಫೊಜಲ್  ನಿರಾಕರಣೆಂತಹ ವಿಷಯಗಳು ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದವು. ಇಂತಹ ಸಂದರ್ಭಗಳಲ್ಲಿ ಹಿಂಸಾತ್ಮಕ ಕ್ರಮ ಕೈಗೊಳ್ಳುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಸಮಾಜದಲ್ಲಿ ಸಹನೆ ಹಾಗೂ ಪರಸ್ಪರ ಗೌರವದ ಮೌಲ್ಯಗಳನ್ನು ಉತ್ತೇಜಿಸುವ ಅಗತ್ಯವಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಪ್ರೇಮಿಗಳ ದಿನದಂದೇ ಸಂಭವಿಸಿದ ಈ ಘಟನೆ ಯುವಜನರಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆ ಹಾಗೂ ಆವೇಶದ ಪರಿಣಾಮಗಳನ್ನು ತೋರಿಸುವ ಉದಾಹರಣೆಯಾಗಿ ಪರಿಣಮಿಸಿದೆ. ಪೊಲೀಸ್ ತನಿಖೆ ಮುಂದುವರಿದಿದ್ದು, ಪ್ರಕರಣದ ಕುರಿತು ಇನ್ನಷ್ಟು ಮಾಹಿತಿ ಮುಂದಿನ ದಿನಗಳಲ್ಲಿ ಹೊರಬರುವ ನಿರೀಕ್ಷೆಯಿದೆ.

ಇದನ್ನೂ ಓದಿ:- ಮೈಸೂರು ಸಿನಿಮಾ ಸೊಸೈಟಿ ವತಿಯಿಂದ ಅಂತರರಾಷ್ಟ್ರೀಯ ಕಿರುಚಿತ್ರೋತ್ಸವ

ಗೊಲ್ಲರ ಬೀದಿಯಲ್ಲಿ ಕಿಡಿಗೇಡಿಗಳ ಕೃತ್ಯ: ರಾಗಿ ಹುಲ್ಲಿನ ಮೇದೆಗೆ ಬೆಂಕಿ, ಸಾವಿರಾರು ರೂ. ಮೇವು ಭಸ್ಮ

Leave a Response