
ಮೈಸೂರು: ರಾತ್ರಿ ಭಾರಿ ಅಗ್ನಿ ಅವಘಡ, ಧಗಧಗ ಹೊತ್ತಿ ಉರಿದ ನಾಲ್ಕಕ್ಕೂ ಹೆಚ್ಚು ಗೋದಾಮುಗಳು
ಮೈಸೂರು, ಫೆಬ್ರವರಿ 9:- ಮೈಸೂರಿನ ನಗರದ ಹೊರವಲಯದಲ್ಲಿರುವ ಕೆಸರೆ ಬಡಾವಣೆಯಲ್ಲಿ ಭಾನುವಾರ ರಾತ್ರಿ ಸಂಭವಿಸಿದ ಭಾರಿ ಅಗ್ನಿ ಅವಘಡ ಸ್ಥಳೀಯರಲ್ಲಿ ಆತಂಕ ಮತ್ತು ಗಾಬರಿಯ ವಾತಾವರಣ ನಿರ್ಮಿಸಿತು. ಮೈಸೂರು–ಬೆಂಗಳೂರು ಹೆದ್ದಾರಿ ಸಮೀಪದಲ್ಲಿದ್ದ ಈ ಗೋದಾಮುಗಳನ್ನು ಹಳೆಯ ವಸ್ತುಗಳ ಸಂಗ್ರಹಣೆಗೆ ಬಳಸಲಾಗುತ್ತಿದ್ದ ನಾಲ್ಕಕ್ಕೂ ಹೆಚ್ಚು ಗೋದಾಮುಗಳು ಬೆಂಕಿಗಾಹುತಿಯಾದ ಘಟನೆ ರಾತ್ರಿ ಹೊತ್ತಿನಲ್ಲಿ ಸಂಭವಿಸಿದ್ದು, ಕೆಲಕಾಲ ಪರಿಸರವೇ ಕೆಂಪು ಜ್ವಾಲೆಗಳ ಬೆಳಕಿನಲ್ಲಿ ಆವರಿಸಿಕೊಂಡಿತ್ತು.
ಇಲ್ಲಿನ ಸ್ಥಳೀಯರ ಪ್ರಕಾರ, ರಾತ್ರಿ ವೇಳೆಯಲ್ಲಿ ಏಕಾಏಕಿ ಗೋದಾಮು ಪ್ರದೇಶದಿಂದ ಹೊಗೆ ಎದ್ದಿರುವುದು ಗಮನಕ್ಕೆ ಬಂದಿದೆ. ಕೆಲವೆ ನಿಮಿಷಗಳಲ್ಲಿ ಬೆಂಕಿ ದೊಡ್ಡ ಮಟ್ಟಕ್ಕೆ ವ್ಯಾಪಿಸಿಕೊಂಡು, ಬೆಂಕಿ ಒಂದರ ನಂತರ ಒಂದಾಗಿ ಗೋದಾಮುಗಳನ್ನು ವ್ಯಾಪಿಸಿತು . ಅಲ್ಲಿ ಸಂಗ್ರಹಿಸಲಾಗಿದ್ದ ಹಳೆಯ ಪ್ಲಾಸ್ಟಿಕ್ ವಸ್ತುಗಳು, ಮರದ ಸಾಮಗ್ರಿಗಳು ಹಾಗೂ ಸುಲಭವಾಗಿ ಹೊತ್ತಿ ಉರಿಯುವ ವಸ್ತುಗಳಿದ್ದರಿಂದ ಬೆಂಕಿಯ ತೀವ್ರತೆ ಕ್ಷಣ ಕ್ಷಣಕ್ಕೂ ಹೆಚ್ಚಾಗಿದೆ ಎಂದು ತಿಳಿದುಬಂದಿದೆ. ಸುತ್ತ ದಟ್ಟ ಹೊಗೆ ಸುತ್ತಮುತ್ತಲಿನ ಪ್ರದೇಶವನ್ನು ಬಹು ಬೇಗ ಆವರಿಸಿಕೊಂಡ ಪರಿಣಾಮ ಸ್ಥಳೀಯ ನಿವಾಸಿಗಳು ಆತಂಕಗೊಂಡು ಮನೆಗಳಿಂದ ಹೊರಗೆ ಓಡಿಬಂದ ದೃಶ್ಯ ಕಂಡುಬಂದಿತು.
ಈ ಘಟನೆ ಕುರಿತು ಮಾಹಿತಿ ತಿಳಿದ ನಂತರ ಅಲ್ಲೆ ಇದ್ದ ಸ್ಥಳಿಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡುದರು , ಬೇರೆ ಬೇರೆ ಕೇಂದ್ರಗಳಿಂದ ಸುಮಾರು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದೌಡಾಯಿಸಿವೆ. ಬೆಂಕಿಯ ತೀವ್ರತೆ ಹೆಚ್ಚಾಗಿದ್ದರಿಂದ ಅದನ್ನು ನಿಯಂತ್ರಿಸಲು ಅಗ್ನಿಶಾಮಕ ಸಿಬ್ಬಂದಿ ಸುಮಾರು ಗಂಟೆಗಳ ಕಾಲ ಹರಸಾಹಸ ಪಡಬೇಕಾಯಿತು . ಬೆಂಕಿ ಪಕ್ಕದ ಗೋದಾಮುಗಳಿಗೆ ವ್ಯಾಪಿಸದಂತೆ ತಡೆಗಟ್ಟಲು ಅಗ್ನಿಶಾಮಕ ದಳದವರು ವಿಶೇಷ ಕ್ರಮ ಕೈಗೊಳ್ಳಲಾಗಿದ್ದು, ನೀರಿನ ಸಿಂಪಡಣೆ ಜೊತೆಗೆ ಸುರಕ್ಷತಾ ವಲಯ ನಿರ್ಮಿಸಲಾಯಿತು. ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಯಶಸ್ವಿಯಾಗಿದ್ದು, ದೊಡ್ಡ ಮಟ್ಟದ ದುರಂತ ತಪ್ಪಿದಂತಾಗಿದೆ.
ಇಂದು ಅದೃಷ್ಟವಶಾತ್, ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ. ರಾತ್ರಿ ಸಮಯವಾಗಿದ್ದರಿಂದ ಗೋದಾಮುಗಳಲ್ಲಿ ಕೆಲಸ ಮಾಡುವವರು ಕಡಿಮೆ ಇದ್ದಿದ್ದು, ಮಾನವ ಹಾನಿ ತಪ್ಪಲು ಇದು ಕಾರಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದಾಗ್ಯೂ, ಗೋದಾಮುಗಳಲ್ಲಿ ಸಂಗ್ರಹಿಸಲಾಗಿದ್ದ ವಸ್ತುಗಳು ಸಂಪೂರ್ಣವಾಗಿ ಬೆಂಕಿಗಾಹುತಿ ಅಗಿರುವುದರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ನಷ್ಟ ಸಂಭವಿಸಿರುವ ಸಾಧ್ಯತೆ ವ್ಯಕ್ತವಾಗಿದೆ. ನಷ್ಟದ ನಿಖರ ಪ್ರಮಾಣವನ್ನು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಅಂದಾಜು ಮಾಡುತ್ತಿದ್ದಾರೆ.
ಇಂದು ರಾತ್ರಿ ನಡೆದ ಘಟನೆಯ ಮೂಲ ಕಾರಣದ ಬಗ್ಗೆ ತನಿಖೆ ಮುಂದುವರೆದಿದ್ದು, ಕುಡಿದ ಮತ್ತಿನಲ್ಲಿ ಕೆಲ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಅನುಮಾನ ವ್ಯಕ್ತವಾಗಿದೆ. ಸ್ಥಳೀಯರ ಹೇಳಿರುವ ಪ್ರಕಾರ, ರಾತ್ರಿ ವೇಳೆಯಲ್ಲಿ ಇಲ್ಲಿಅನುಮಾನಾಸ್ಪದ ವ್ಯಕ್ತಿಗಳು ಗೋದಾಮು ಪ್ರದೇಶದ ಸುತ್ತಮುತ್ತ ಕಾಣಿಸಿಕೊಂಡಿದ್ದರು ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಈ ಹಿನ್ನೆಲೆ ಪ್ರಕರಣ ದಾಖಲಿಸಿಕೊಂಡಿರುವ ಎನ್.ಆರ್. ಪೊಲೀಸ್ ಠಾಣೆ ಸಿಬ್ಬಂದಿ ಪರಿಶೀಲನೆ ನಡೆಸುತ್ತಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವ ಕಾರ್ಯ ಪ್ರಗತಿಯಲ್ಲಿದೆ.
ಯಾವುದೆ ಸ್ಥಳದಲ್ಲಿ ಅಗ್ನಿ ಅವಘಡದ ಬಳಿಕ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಸುರಕ್ಷತಾ ಕ್ರಮಗಳ ಮಹತ್ವವನ್ನು ಮತ್ತೊಮ್ಮೆ ಒತ್ತಿಹೇಳಿದ್ದಾರೆ. ಹಳೆಯ ವಸ್ತುಗಳನ್ನು ಸಂಗ್ರಹಿಸುವ ಗೋದಾಮುಗಳಲ್ಲಿ ಅಗ್ನಿ ನಿರ್ವಹಣಾ ವ್ಯವಸ್ಥೆಗಳು ಕಡ್ಡಾಯವಾಗಿ ಇರಲೇಬೇಕು ಎಂದು ತಿಳಿಸಿದರು , ಇಲ್ಲಿ ವಿದ್ಯುತ್ ಸಂಪರ್ಕಗಳು ಸರಿಯಾಗಿ ಈ ಸ್ಥಳ ಪರಿಶೀಲನೆಗೊಳಪಡಬೇಕು ಮತ್ತು ಇಲ್ಲಿ ಅಕ್ರಮ ಪ್ರವೇಶ ಮಾಡದಂತೆ ಸೂಕ್ತ ಭದ್ರತಾ ವ್ಯವಸ್ಥೆ ಇರಬೇಕೆಂದು ಸೂಚಿಸಲಾಗಿದೆ. ಇಂದು ನಡೆದ ದುರ್ಘಟನೆಯಿಂದ ಹಾಗೂ ನಿರ್ಲಕ್ಷ್ಯದಿಂದ ಭವಿಷ್ಯದಲ್ಲಿ ದೊಡ್ಡ ದುರಂತಗಳು ಸಂಭವಿಸಬಹುದು ಎಂದು ಎಚ್ಚರಿಕೆ ನೀಡಲಾಗಿದೆ.
ಇಲ್ಲಿನ ಸ್ಥಳೀಯ ನಿವಾಸಿಗಳು ಕೂಡ ಈ ಘಟನೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಹೋಗುವ ಹೆದ್ದಾರಿ ಸಮೀಪದಲ್ಲಿರುವ ಕಾರಣ ಬೆಂಕಿ ಮತ್ತಷ್ಟು ಹರಡಿದರೆ ಇಲ್ಲಿ ವಾಹನ ಸಂಚಾರಕ್ಕೂ ಅಪಾಯ ಅಗುತ್ತಿತ್ತು ಎಂದು ಅವರು ಶಂಕೆ ವ್ಯಕ್ತಪಡಿಸಿದ್ದಾರೆ. ಗೋದಾಮು ಪ್ರದೇಶದಲ್ಲಿ ಅಗ್ನಿ ಸುರಕ್ಷತಾ ಸಲಕರಣೆಗಳು ಹಾಗೂ ಅವುಗಳನ್ನು ಉಪಯೋಗಿಸುವ ಕ್ರಮಗಳನ್ನು ಬಲಪಡಿಸಲು ಸಂಬಂಧಪಟ್ಟ ಇಲಾಖೆ ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆ ವ್ಯಕ್ತವಾಗಿದೆ.
ಇಂದು ನಡೆದ ಘಟನೆಯಲ್ಲಿ, ಈ ಅಗ್ನಿ ಅವಘಡ ಬಹು ದೊಡ್ಡ ಮಟ್ಟದ ಮಾನವ ಹಾನಿ ಉಂಟಾಗದೆ ಸರಿಯಾದ ಸಮಯಾಕ್ಕೆ ಅಗ್ನಿ ಶಾಮಕ ತಂಡಗಳು ಅಗಮಿಸಿದುದರಿಂದ ಯಾವುದೆ ಆಸ್ತಿ ನಷ್ಟ ಮತ್ತು ಆತಂಕದ ನೆರಳು ಸ್ಥಳೀಯರನ್ನು ಬೆಚ್ಚಿಬೀಳುವಂತೆ ಮಾಡಿದೆ. ಘಟನೆಯ ನಿಖರ ಕಾರಣ ಹಾಗೂ ನಷ್ಟದ ಸಂಪೂರ್ಣ ವಿವರಗಳು ತನಿಖೆಯ ಬಳಿಕ ಸ್ಪಷ್ಟವಾಗಲಿದ್ದು, ಅಧಿಕಾರಿಗಳ ಮುಂದಿನ ಕ್ರಮಗಳತ್ತ ಎಲ್ಲರ ಗಮನ ಹರಿದಿದೆ.





