HOMENews

ಕ್ಷೇತ್ರದ ಶಾಸಕರು ವಿಶ್ವಾಸ ಕಳೆದುಕೊಂಡಿರುವುದರಿಂದ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಜೆಡಿಎಸ್ ಪಕ್ಷ ಸೇರುತ್ತಿದ್ದಾರೆ ಮಾಜಿ ಸಚಿವ ಸಾರಾ ಮಹೇಶ್ ಹೇಳಿಕೆ.

ವರದಿ:-ವಡ್ಡರಕೊಪ್ಪಲು ಶಿವರಾಮು.

ಕೆ ಆ‌ರ್.ನಗರ. ಫೆ. 01:- ಮುಂಬರುವ ವಿಧಾನ ಸಭಾ ಚುನಾವಣೆಗೆ ಮೊದಲೇ ಕುರುಬ ಸಮಾಜದ ಮುಖಂಡರು ಸೇರಿದಂತೆ ಅನೇಕರು ಕಾಂಗ್ರೆಸ್ ತೊರೆದು ಜಾ.ದಳಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ ಎಂದರೆ ಕ್ಷೇತ್ರದ ಶಾಸಕರು ಜನತೆಯ ವಿಶ್ವಾಸ ಕಳೆದು ಕೊಂಡಿದ್ದಾರೆ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಹೇಳಿದರು.

 

ಪಟ್ಟಣದ ಬಸವೇಶ್ವರ ಬ್ಲಾಕ್‌ನಲ್ಲಿರುವ ಜಾ.ದಳ ಕಚೇರಿಯಲ್ಲಿ ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ರಾಜ್ಯ ಜಾ.ದಳ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಆಗಮಿಸಲಿರುವ ಹಿನ್ನೆಲೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರದ ದುರಾಡಳಿತದಿಂದ ಬೇಸತ್ತಿರುವ ಜನತೆ ಕಟುಕುಕರ ಕೈಗೆ ರಾಜ್ಯ ಸರ್ಕಾರ ಅಧಿಕಾರ ಸಿಕ್ಕಿದೆ ಎಂದು ಬೇಸರ ವ್ಯಕ್ತಪಡಿಸಿ ದ್ದಾರೆ. ಆದ್ದರಿಂದ ಮುಂಬರುವ ತಾ.ಪಂ. ಹಾಗೂ ಜಿ.ಪಂ. ಚುನಾವಣೆಗಳಲ್ಲಿ ಶೇಕಡಾ ನೂರಕ್ಕೆ ನೂರಷ್ಟು ಜಾ.ದಳ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಿಷ್ಠಾವಂತ ಜಾ.ದಳ ಕಾರ್ಯಕರ್ತರ ಶ್ರಮದಿಂದ ಇದುವರೆಗೂ ಪಕ್ಷ ಜೀವಂತ ವಾಗಿದ್ದು, ಯುವ ಮುಖಂಡರು ಅಧಿ ಕಾರಕ್ಕೆ ಆಸೆ ಪಡೆದೆ ಪಕ್ಷದ ಉಳಿವಿಗಾಗಿ ಶ್ರಮ ವಹಿಸಬೇಕು. ಗೃಹ ಲಕ್ಷ್ಮಿ ಯೋಜನೆ ಎರಡು ಸಾವಿರ ನೀಡಿ ಏಳು ಲಕ್ಷ ಕೋಟಿ ಸಾಲ ಮಾಡಿ ಪ್ರತಿಯೊಬ್ಬರ ತಲೆಯ ಮೇಲೆ ಒಂದು ಲಕ್ಷ ಸಾಲವನ್ನು ಹೊರಿಸಿದ್ದಾರೆ ಎಂದು ಮತದಾರರಿಗೆ ತಿಳಿಸಿ ಎಂದು ತಿಳಿಸಿದರು.
ನಮ್ಮ ಜೆಡಿಎಸ್ ಪಕ್ಷಕ್ಕೆ ಕಾಂಗ್ರೆಸ್ ಪಕ್ಷದಿಂದ ಬೇಸತ್ತು ಬರುತ್ತಿರುವ ಕುರುಬ ಸಮುದಾಯ ಸೇರಿದಂತೆ ಇತರೆ ಸೂಕ್ಷ್ಮಾತಿ ಸೂಕ್ಷ್ಮ ಸಮಾಜದವರನ್ನು ಅತ್ಯಂತ ಪ್ರೀತಿಯಿಂದ ಗೌರವದಿಂದ ನೋಡುವ ಜೊತೆಗೆ ಅವರ ಬಗ್ಗೆ ಹಗುರವಾಗಿ ಮಾತನಾಡಬೇಡಿ ಈಗಾಗಲೇ ಅವರು ಕಾಂಗ್ರೆಸ್ ಪಕ್ಷದಲ್ಲಿ ನೊಂದು ಬಂದಿದ್ದಾರೆ ಅವರಿಗೆ ಸೂಕ್ತ ಸ್ಥಾನಮಾನ ನೀಡುವ ಕೆಲಸವನ್ನು ಮಾಡಿ ಎಂದು ತಿಳಿಸಿದರು.


ನನ್ನನ್ನು ರಾಜಕೀಯ ಕಾರಣಕ್ಕಾಗಿ ಕುರುಬ ಸಮಾಜ ವಿರೋಧಿ ಎಂದು ಕ್ಷೇತ್ರದ ಕೆಲ ಕುರುಬ ಸಮಾಜ ಮುಖಂಡ ಬಿಂಬಿಸುವ ಕೆಲಸ ಮಾಡುತ್ತಿ ದ್ದಾರೆ. ಕೊರೊನಾ ವೇಳೆ ಮೃತಪಟ್ಟಿದಾಗ ತಲಾ 25 ಸಾವಿರ ರೂ. ನೆರವು, ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಣೆ ಸೇರಿದಂತೆ ಅನೇಕ ಜನಪರ ಕಾರ್ಯಕ್ರಮಗಳನ್ನು ನಡೆಸಿದಾಗ ಜಾತಿ ವ್ಯವಸ್ಥೆ ನೋಡಿ ಮಾಡಲಾಗಿತ್ತೇ? ಎಂದು ನೊಂದು ನುಡಿದರು
ಈ ಕಾರ್ಯಕ್ರಮವನ್ನು ಉದ್ದೇಶಿಸಿ ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ಜಿ.ಪಂ.ಮಾಜಿ ಉಪಾಧ್ಯಕ್ಷ ಎ.ಎಸ್.ಚನ್ನಬಸಪ್ಪ, ಮಾಜಿ ಸದಸ್ಯರಾದ ಅಚ್ಯುತಾನಂದ, ಎಂ.ಟಿ.ಕುಮಾರ್, , ಪುರಸಭೆ ಸದಸ್ಯ ಉಮೇಶ್, ದಲಿತ ಮುಖಂಡ ಹನಸೋಗೆ ನಾಗರಾಜ್, ಜಾ.ದಳ ತಾಲ್ಲೂಕು ಅಧ್ಯಕ್ಷರಾದ ಹಂಪಾಪುರ ಕುಮಾರ್, ಮೆಡಿಕಲ್ ರಾಜಣ್ಣ, ತಾ. ಜಾ.ದಳ ವಕ್ತಾರ ಕೆ.ಎಲ್.ರಮೇಶ್, ತಾ.ಯುವ ಜಾ.ದಳ ಅಧ್ಯಕ್ಷ ಡಿ.ವಿ.ಗುಡಿ ಅಧ್ಯಕ್ಷ ಯೋಗೇಶ್ ಮಾತನಾಡಿದರು.
ವೇದಿಕೆಯಲ್ಲಿ
ಪುರಸಭೆ ಮಾಜಿ ಅಧ್ಯಕ್ಷರಾದ ಗೀತಾಮಹೇಶ್, ಕಾಂತರಾಜ್, ತಾ.ಜಾದಳ ಘಟಕದ ಅಧ್ಯಕ್ಷೆ ರಾಜಲಕ್ಷ್ಮಿ, ಯುವ ಜಾ.ದಳ ಜಿಲ್ಲಾ ಗ್ರಾಮಾಂತರ ಉಪಾಧ್ಯಕ್ಷ ಕಗ್ಗರೆ ಕುಚೇಲ, ತಾ.ಪಂ. ಮಾಜಿ ಅಧ್ಯಕ್ಷ ದೊಡ್ಡಕೊಪ್ಪಲು ನಾಗಣ್ಣ, ಕವಿತರವಿ, ಮಂಚನಹಳ್ಳಿ ಗುರು, ಹೆಬ್ಬಾಳ ಶಿವಣ್ಣ ದೇವೇಂದ್ರ, ಅನಿಲ್, ಪುಟ್ಟರಾಜು ಸುರೇಶ್ ಮಹದೇವ ಕೃಷ್ಣ ಶೆಟ್ಟಿ ಮನು ಗೌಡ ಚೌಕಹಳ್ಳಿ ಆನಂದ್ ಸೇರಿದಂತೆ ಸಾವಿರಾರು ಜನರು ಹಾಜರಿದ್ದರು.
ಫೋಟೋ. 01.02:- ಮಾಜಿ ಸಚಿವ ಸಾರಾ ಮಹೇಶ್ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿರುವುದು.