HOME

25-02-2026 ರ ರಾಶಿ ಭವಿಷ್ಯ

ಮೇಷ: ಸಾಧನೆಗೆ ತಕ್ಕ ಪೋ›ತ್ಸಾಹ. ನೋಂದಣಿ, ಮುದ್ರಾಂಕ ಕೆಲಸಗಾರರಿಗೆ ಮೇಲಧಿಕಾರಿಗಳ ಕಿರಿಕಿರಿ. ಆಸ್ತಿ ಖರೀದಿಯಲ್ಲಿ ಗೊಂದಲ. ಶುಭಸಂಖ್ಯೆ:9

ವೃಷಭ: ಸಿಹಿ ತಿಂಡಿ ಮಳಿಗೆಯ ಮಾಲೀಕರಿಗೆ ಅಧಿಕ ಲಾಭ. ಸರ್ಕಾರಿ ಪರೀಕ್ಷೆಯಲ್ಲಿ ತೇರ್ಗಡೆಯಾಗುವಿರಿ. ಕ್ರೀಡಾಪಟುಗಳಿಗೆ ಶುಭದಿನ. ಶುಭಸಂಖ್ಯೆ: 7 

ಮಿಥುನ: ಯುವ ರಾಜಕಾರಣಿಗಳಿಗೆ ಉತ್ತಮ ಅವಕಾಶ. ಹೈನೋತ್ಪನ್ನ ಮಾರಾಟದಲ್ಲಿ ನಷ್ಟ. ಪೀಠೋಪಕರಣ ಗಳ ಮಾರಾಟದಲ್ಲಿ ಲಾಭ. ಶುಭಸಂಖ್ಯೆ:9

ಕಟಕ: ಧಾರ್ವಿುಕ ವೃತ್ತಿಪರರಿಗೆ ಧನ ನಷ್ಟ. ವಾಹನ ದುರಸ್ತಿಗೆ ಹಣ ವೆಚ್ಚವಾಗಲಿದೆ. ರೇಷ್ಮೆ ಸೀರೆ ಮಾರಾಟದಲ್ಲಿ ಲಾಭವಾಗುವುದು. ಶುಭಸಂಖ್ಯೆ:4

 ಸಿಂಹ: ಆಹಾರ ಪದಾರ್ಥಗಳ ಮಾರಾಟದಲ್ಲಿ ಹಣ ಗಳಿಕೆ. ವಿಚ್ಛೇದನ ಕಟ್ಟಳೆ ಇತ್ಯರ್ಥವಾಗಲಿದೆ. ವಕೀಲ ವೃತ್ತಿಯವರಿಗೆ ಹೆಚ್ಚು ಒತ್ತಡ. ಶುಭಸಂಖ್ಯೆ:2

ಇದನ್ನೂ ಓದಿ:-  ಲಾಟರಿ ಮೂಲಕ 22 ಮನೆಗಳ ವಿತರಣೆ – ಕ್ಷೇತ್ರದ ನಿವಾಸಿಗಳಿಗೆ ಶಾಸಕ ಹರೀಶ್ ಗೌಡ ನೆರವು

ಕನ್ಯಾ: ಸೌಂದರ್ಯ ವರ್ಧಕಗಳ ಮಾರಾಟದಲ್ಲಿ ಲಾಭ. ಆಧ್ಯಾತ್ಮಿಕ ಸಾಧನೆಯಿಂದ ತೃಪ್ತಿ. ಮನೆಯಲ್ಲಿ ಶುಭಕಾರ್ಯದ ಸಂಭ್ರಮ. ಶುಭಸಂಖ್ಯೆ:9

ತುಲಾ: ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ. ವೈದ್ಯಕೀಯ ವೃತ್ತಿಯಲ್ಲಿ ಉತ್ತಮ ಹೆಸರು. ದಿನಾಂತ್ಯದಲ್ಲಿ ಪ್ರಯಾಣ ನಿಗದಿಯಾಗಲಿದೆ. ಶುಭಸಂಖ್ಯೆ:5

ವೃಶ್ಚಿಕ: ಸ್ನೇಹಿತರೊಂದಿಗೆ ಮೋಜು ಮಸ್ತಿಗೆ ಹಣ ವ್ಯಯವಾಗಲಿದೆ. ಆಸ್ತಿ ವಿವಾದಕ್ಕೆ ರ್ತಾಕ ಅಂತ್ಯ. ಆತ್ಮೀಯರ ಜತೆಗೆ ಪ್ರವಾಸ. ಶುಭಸಂಖ್ಯೆ: 8

ಧನಸ್ಸು: ಯಕ್ಷಗಾನ, ನಾಟಕ ಕಲಾವಿದರಿಗೆ ಸಾಮಾಜಿಕವಾಗಿ ಸೂಕ್ತ ಮನ್ನಣೆ ಸಿಗಲಿದೆ. ಹೊಸ ಯೋಜನೆ ಇಂದು ಕಾರ್ಯಗತವಾಗಲಿದೆ. ಶುಭಸಂಖ್ಯೆ:4

ಮಕರ: ಚಿಕ್ಕ ಪ್ರಯಾಣದ ಸಾದ್ಯತೆ. ಕಿರುಚಿತ್ರ ನಿರ್ದೇಶಕರಿಗೆ ಲಾಭ. ಆತ್ಮೀಯ ಸ್ನೇಹಿತನ ಭೇಟಿ. ವಿದೇಶದಿಂದ ಶುಭ ಸುದ್ದಿ ಸಿಗಲಿದೆ. ಶುಭಸಂಖ್ಯೆ:4

ಕುಂಭ: ಶುಭ ಸಮಾರಂಭದ ಆಯೋಜಕರಿಗೆ ಧನ ಲಾಭ. ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲ. ಮನೆ ನವೀಕರಣಕ್ಕೆ ಖರ್ಚು. ಶುಭಸಂಖ್ಯೆ:2

ಮೀನ: ಪರಿಚಿತರಿಂದ ಸಹಾಯ ದೊರೆಯಲಿದೆ. ಅಮೂಲ್ಯ ವಸ್ತು ಕಳೆದುಕೊಳ್ಳುವಿರಿ. ಪುಸ್ತಕ ವ್ಯಾಪಾರಿಗಳಿಗೆ ಲಾಭ. ಆತ್ಮೀಯರ ಭೇಟಿ. ಶುಭಸಂಖ್ಯೆ:1

ನಾಯಕತ್ವ ಚರ್ಚೆಗಳ ಮಧ್ಯೆ ಡಾ. ಜಿ. ಪರಮೇಶ್ವರ್ ಕುಮಾರಸ್ವಾಮಿ ಭೇಟಿ: ರಾಜ್ಯ ರಾಜಕೀಯದಲ್ಲಿ ಹೊಸ ಲೆಕ್ಕಾಚಾರಗಳ ಮಾತು

Leave a Reply