
ವರದಿ:-ವಡ್ಡರಕೊಪ್ಪಲು ಶಿವರಾಮು.
ಹೆಚ್.ಡಿ.ಕುಮಾರಸ್ವಾಮಿ ಅವರು ಹೆಲಿಕಾಪ್ಟರ್‌ನಲ್ಲಿ ಆಗಮಿಸುವ ಹಿನ್ನೆಲೆಯಲ್ಲಿ ಪಟ್ಟಣದ ಸರಕಾರಿ ಶಾಲಾ ಮೈದಾನದಲ್ಲಿ ನಿರ್ಮಾಣ ಮಾಡಿದ್ದ ಹೆಲಿಪ್ಯಾಡ್‌ನಲ್ಲಿ ಆಂಬುಲೆನ್ಸ್ ಹಾಗು ಅಗ್ನಿಶಾಮಕ ವಾಹನ ಇಲ್ಲದಿರುವುದನ್ನು ಗಮನಿಸಿದ ಮಾಜಿ ಸಚಿವ, ಜೆಡಿಎಸ್ ನಾಯಕ ಸಾ.ರಾ.ಮಹೇಶ್ ಅವರು ಶಿಷ್ಟಾಚಾರ ಅಧಿಕಾರಿಯೂ ಆದ ಹುಣಸೂರು ಎಸಿ ಕಾವ್ಯರಾಣಿ ಹಾಗು ತಹಸೀಲ್ದಾರ್ ರುಕಿಯಾ ಬೇಗಂ ಅವರ ವಿರುದ್ದ ಕಿಡಿಕಾರಿದರು. ಹೆಲಿಕಾಪ್ಟರ್ ಇಳಿಯಲು ತಯಾರಿ ನಡೆಸುತ್ತಿದ್ದರೂ ವಾಹನ ಬಾರದಿರುವುದಕ್ಕೆ ಸಾ.ರಾ.ಮಹೇಶ್ ಅವರು ಮತ್ತಷ್ಟು ಕೆಂಡಮಂಡಲರಾದರು .ಇನ್ಸ್ಪೆಕ್ಟರ್ ಶಶಿಕುಮಾರ್ ಅವರನ್ನು ಕರೆದ ಸಾ.ರಾ.,ಎಲ್ರಿ ಎಎಸ್‌ಪಿ,ಡಿವೈಎಸ್ಪಿ.ಅವರು ಮುಖ್ಯಮಂತ್ರಿಗಳ ಭದ್ರೆತೆಗೆ ಮಾತ್ರ ಇರೋದೆ.ಬೇರೇ ರಾಜಕಾರಣಿಗಳ ಜೀವ ಮುಖ್ಯವಲ್ಲವೆ.ನೋಡಿ ಹೇಗಿದೆ ಆಡಳಿತ ಎಂದು ತೀವ್ರ ಸಿಟ್ಟು ಹೊರ ಹಾಕಿದರು..ಕೆಲವೆ ಹೊತ್ತಲ್ಲಿ ವಾಹನ ಬರಲಿದೆ ಎಂದು ಪದೆಪದೆ ಪ್ರತಿಕ್ರಿಯಿಸಿ ವಾಹನ ಬಾರದಿದ್ದಾಗ ಅಧಿಕಾರಿಗಳು ತಬ್ಬಿಬ್ಬಾದರು.ಕುಮಾರಸ್ವಾಮಿಯವರು ಕಾರ್ಯಕ್ರಮಕ್ಕೆ ತೆರಳಿದ ಬಳಿಕ ಅಗ್ನಿಶಾಮಕ ವಾಹನ ಹೆಲಿಪ್ಯಾಡ್ ಪ್ರವೇಶಿಸಿತು.
ಕಾರ್ಯಕ್ರಮದಲ್ಲಿ ಎಂಎಲ್‌ಸಿ ಮಂಜೇಗೌಡ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಶಿವಕುಮಾರ್, ಮೈಮುಲ್ ಅಧ್ಯಕ್ಷ ಈರೇಗೌಡ,ನಿರ್ದೇಶಕ ಎ.ಟಿ.ಸೋಮಶೇಖರ್,ತಾಲೂಕು ಜೆಡಿಎಸ್ ಅಧ್ಯಕ್ಷ ಮೆಡಿಕಲ್ ರಾಜಣ್ಣ,ಪ್ರಧಾನ ಕಾರ್ಯದರ್ಶಿ ಪ್ರಸನ್ನ,ಎಪಿಎಂಸಿ ಮಾಜಿ ಅಧ್ಯಕ್ಷ ಸೋಮಶೇಖರ್,ಸಂಘದ ಅಧ್ಯಕ್ಷ ಎಸ್.ಕೆ.ಭರತ್,ಉಪಾಧ್ಯಕ್ಷ ರಾಮನಾಯಕ,ಮಾಜಿ ಅಧ್ಯಕ್ಷರಾದ ಎಸ್.ಕೆ.ಮಧುಚಂದ್ರ,ಎಸ್.ಎ.ಮಹೇಶ್,ನಿರ್ದೇಶಕರಾದ ಕೋಟೇಗೌಡ,ಆನಂದ್,ಕುಮಾರ್,ಹರೀಶ್, ಮಂಜೇಗೌಡ,ಕುಮಾರ,ಶ್ರೀನಿವಾಸ, ಮಂಜುನಾಥ್ ,ಶಿವಯ್ಯ.ಲೀಲಾವತಿ, ಕಾಮಾಕ್ಷಮ್ಮ ಹಾಗು ಸಿಬ್ಬಂದಿ ಇದ್ದರು.





