HOMEArtical

ನಿನ್ನ ನಾದಿನಿಯು ಮದುವೆಗೆ ಒಪ್ಪದಿದ್ದರೆ ಬೇಡಾ, ನನ್ನ ಸ್ನೇಹಿತರ ಮಗಳಿದ್ದಾಳೆ ಅವರಲ್ಲಿ ಪ್ರಸ್ತಾಪ ಮಾಡುತ್ತೇನೆಂದು ಹೇಳಿ ಸುಧಾಕರನ ಮಾವ ಊರಿಗೆ ಹೋಗುತ್ತಾರೆ

ನನ್ನ ಸ್ನೇಹಿತರ ಮಗಳಿದ್ದಾಳೆ ವಿಚಾರಿಸಿ ಫೋನ್ ಮಾಡುತ್ತೇನೆಂದು ಹೇಳಿ ಸುಧಾಕರನ ಮಾವ ಹೋದ ಬಳಿಕ,

ಸುಧಾಕರನಿಗೆ ಮನಸ್ಸು ಹಗುರವಾದರೂ,  ತನ್ನ ಹೆಲ್ತ್ ಇಶ್ಶೂ ಬಗ್ಗೆ ವನಿತ ಎಲ್ಲರಿಗೂ ಹೇಳಿರುವುದು ಸಹಿಸಲಾರದ ವೇದನೆಯಾಗಿರುತ್ತದೆ, ತಕ್ಷಣ ವನಿತಳಿಗೆ ಫೋನ್ ಮಾಡಿದರೂ ವನಿತ ಫೋನ್ ರಿಸೀವ್ ಮಾಡುವುದೇ ಇಲ್ಲ.‌ ಎರಡನೇ ಸಲ‌ ರಿಂಗಣಿಸಿದಾಗ

ವನಿತಳು ಫೋನ್ ರಿಸೀವ್ ಮಾಡಿ ನಮ್ಮ ತೀರ್ಮಾನವನ್ನು ನಿಮ್ಮ ಸೋದರ ಮಾವನಿಗೆ ಹೇಳಿದ್ದಾಗಿದೆ. ಇನ್ನೇಕೆ ಫೋನ್ ಮಾಡುತ್ತೀರಿ ಭಾವಾ ಎಂದು ವನಿತ ಪ್ರಶ್ನಿಸಿದಾಗ

ಸುಧಾಕರ ಮಾತನಾಡಿ, ವನಿತಾ ಯು ಆರ್ ಇಂಜಿನಿಯರಿಂಗ್ ಗ್ರಾಜುಯೇಟ್ ಬಟ್ ನೋ ಕಾಮನ್ಸ್ ಸೆನ್ಸ್ ಅಟ್ ಆಲ್ ಎಂದ ತಕ್ಷಣ

ವಾಟು ಡು ಯು ಮೀನ್ ಭಾವಾ ಎಂದು ಕೋಪದಿಂದಲೇ ವನಿತ  ಕೇಳುತ್ತಾಳೆ.

ಇನ್ನೊಬ್ಬರ ಆರೋಗ್ಯದ ವಿಷಯವನ್ನು ಬೇರೆಯವರಿಗೆ ಸ್ಪ್ರೆಡ್‌ ಮಾಡಬಾರದೆಂಬ  ಕಾಮನ್ ಸೆನ್ಸ್ ನಿನಗೆ  ಇಲ್ಲವಾ ವನಿತಾ ಎಂದು ಸುಧಾಕರನು ಮಾಡಿದ ತೀಕ್ಷ್ಣವಾದ ಆಕ್ಷೇಪಣೆಗೆ

ಭಾವಾ ಈಗೇನಾಯ್ತೆಂದು ಈ ರೀತಿ ಕೂಗಾಡುತ್ತಿದ್ದೀರಾ? ಓ ನಾನು ನಿಮ್ಮನ್ನು ಮದುವೆಯಾಗಲು ಒಪ್ಪಲಿಲ್ಲವೆಂದು ಕೋಪ ಬಂದಿದೆಯಾ? ಐ ಆಮ್ ಸಾರೀ ಭಾವಾ,,, ವಿಷಯ ತಿಳಿದೂ ನಿಮ್ಮನ್ನು ಮದುವೆಯಾಗುವುದಕ್ಕೆ ನಾನು ಮೂರ್ಖಳಲ್ಲ ಎಂಬ ಮಾತನ್ನು ಕೇಳಿದ ತಕ್ಷಣ

ಸುಧಾಕರನ ಮನಸ್ಸಿನ ಮೂಲೆಯಲ್ಲಿ ಅಗಾಧವಾದ ಕೋಪ ಎಲ್ಲಿ ಅಡಗಿತ್ತೋ ಒಂದೇ ಸಲ‌ ಮುಂಚೂಣಿಗೆ ಬಂದು ನೀನು ನನ್ನ ಮದುವೆಯಾಗದಿದ್ದರೆ ಮೈ ಫುಟ್ ಮೊದಲು ನೀನು ಸರಿಯಾಗಿರುವುದನ್ನು ಕಲಿತುಕೋ ಎನ್ನುತ್ತಾನೆ.

ವನಿತಳಿಗೂ ಕೋಪ ಬಂದು ಮೈಯ್ಯೆಲ್ವಾ ಉರಿಯುವಂತಾಗಿದ್ದು, ಏನ್ ಭಾವಾ ಮೈ ಫುಟ್ ಎಂದು ಏನೇನೋ ಮಾತನಾಡುತ್ತಿದ್ದೀರಾ? ಏನಾಗಿದೆ ನಿಮಗೆ ಎಂದು ವನಿತ ಕೂಡಾ ಕೋಪದಿಂದಲೇ ಪ್ರಶ್ನಿಸಿದಾಗ

ನನಗೇನೂ ಆಗಿಲ್ಲಾ ಆಗಿರುವುದು ನಿನಗೆ ವನಿತಾ,,, ಇಂಜಿನಿಯರಿಂಗ್ ಮಾಡಿರುವುದರಿಂದ ನಿನ್ನ ತಲೆ ನಿಲ್ಲುತ್ತಿಲ್ಲ ಪಾಪ ನೀನು ತಾನೇ ಏನು ಮಾಡುತ್ತೀಯಾ ಎಂದು ವ್ಯಂಗ್ಯವಾಗಿ ಸುಧಾಕರ ಹೇಳಿದ ಮಾತಿಗೆ

ಭಾವಾ ನಿಮ್ಮದೇಕೋ ಅತಿಯಾಯ್ತು ಈಗ ನಾನೇನು ಮಾಡುದೆನೆಂದು ಈ ಪಾಠೀ ರೇಗಾಡುತ್ತಿದ್ದೀರೀ? ನಿಮ್ಮ ಕೋಪ ತಾಪವೆಲ್ಲವೂ ನನ್ನ ಮುಂದೆ ನಡೆಯುವುದಿಲ್ಲ. ನಿಮ್ಮ ಪತ್ನಿ ವಸುಧಳ ಮುಂದೆ ತೋರಿಸಿದಂತೆ ನನ್ನ ಮುಂದೆ ಕೋಪ ತಾಪ ತೋರಿಸಿದರೆ ನಾನು ಸುಮ್ಮನಿರುವುದಿಲ್ಲ. ಮೊದಲು ಏನಾಯಿತೆಂದು ಹೇಳಿ ನಂತರ ಎಷ್ಟು ಬೇಕಾದರೂ ಕೂಗಾಡಿ ಇಲ್ಲಿ ಯಾರೂ ತಲೆ ಕೆಡಸಿಕೊಳ್ಳುವುದಿಲ್ಲವೆಂದು ಸುಧಾಕರನ ಮಾತಿಗೆ ಎದಿರೇಟು ನೀಡುವಂತೆ ಮಾತನಾಡುತ್ತಾಳೆ

ನನ್ನ ಹೆಲ್ತ್ ಇಶ್ಶೂ ಎಲ್ಲರಿಗೂ ಏಕೆ ಹೇಳಬೇಕಿತ್ತು? ಮನುಷ್ಯನಿಗೆ ಖಾಯುಲೆ ಬರದೆ ಮರಕ್ಕೆ ಬರುತ್ತದಾ? ನಿನ್ನಲ್ಲೂ ಏನು ದೋಷವಿದೆಯೋ ಯಾರಿಗೆ ಗೊತ್ತು? ನೀನು ಹೋಗಿ‌ ಡಾಕ್ಟರ ಬಳಿ ಟೆಸ್ಟ್ ಮಾಡಿಸಿಕೊಂಡರೆ ತಿಳಿಯುತ್ತದೆಂದು ರೋಶಾವೇಷದಿಂದ ಸುಧಾಕರ ಹೇಳಿದ್ದಕ್ಕೆ

ವನಿತಳಿಗೂ ತಡೆಯಲಾರದ ಕೋಪ ಬಂದು ಮಿ. ಸುಧಾಕರ್ ನನ್ನ ವಿಷಯಕ್ಕೆ ಬರಬೇಡಾ ಮೈಂಡ್ ಯುವರ್ ಬಿಸಿನೆಸ್ ಎಂದು ತೀಕ್ಷ್ಣವಾಗಿ ವನಿತ ಪ್ರತಿಕ್ರಿಯಿಸುತ್ತಾಳೆ.

ವಾಟ್ ಏನಂದೆ ವನಿತಾ?  ಮಿ. ಸುಧಾಕರ್ ಎಂದು ಕರೆದೆಯಲ್ಲಾ ನಾನು ನಿನ್ನ ಭಾವ ಮೊದಲು ಮರ್ಯಾದೆ ಕೊಟ್ಟು ಮಾತಾಡುವುದನ್ನು ಕಲಿ ಎಂದು ಸುಧಾಕರ ಹೇಳಿದ‌‌ ತಕ್ಷಣ

ಪುನಃ ವನಿತಾ  ಅದೇ ಧಾಟಿಯಲ್ಲಿ ಮಿ. ಸುಧಾಕರ್ ನನ್ನ ಅಕ್ಕ ಬದುಕಿರುವವರೆಗೂ ನೀವು ನನ್ನ ಭಾವನಾಗಿದ್ರೀ ಈಗ ನನ್ನ ಅಕ್ಕನೇ ಇಲ್ಲ ಇನ್ಯಾಕೆ ನಿಮ್ಮನ್ನು ಭಾವಾ ಎಂದು ಕರೆಯಲೆಂದು  ವ್ಯಂಗ್ಯವಾಗಿ ‌ವನಿತ ಹೇಳಿದ್ದಕ್ಕೆ

ನೋಡು ವನಿತಾ,, ನೀನು ನನ್ನನ್ನು ಭಾವ ಎಂದು ಕರೆಯದೇ ಇದ್ದರೆ ಪ್ರಪಂಚವೇನೂ ಮುಳುಗುವುದಿಲ್ಲ. ಕತ್ತೆ ಬಾಲ‌ ,,,,  ನೀನೇಕೆ ನನ್ನ ಆರೋಗ್ಯದ ವಿಷಯ ಸೋದರಮಾವನಿಗೆ ಹೇಳಿದೆ ಅದಕ್ಕೆ ಮೊದಲು ಉತ್ತರಿಸಿ ನಂತರ ಮಾತಾಡೆಂದು ಸುಧಾಕರನು ಒತ್ತಾಯಿಸಲು

ಅಯ್ಯೋ ಇದರಲ್ಲಿ ತಪ್ಪೇನಿದೆ ಮಿ. ಸುಧಾಕರ್? ನಿಮ್ಮ ಸೋದರ ಮಾವ ನಮ್ಮ ಮನೆಗೆ ಬಂದು ನಿಮ್ಮಪ್ಪ ಅಮ್ಮನೇ ಸುಧಾಕರನ ಜೊತೆ ನಿನ್ನ ಮದುವೆ ಮಾಡಿಕೊಡಲು ಒಪ್ಪಿಕೊಂಡಿದ್ದಾರೆ. ನೀನೇಕೆ ಬೇಡವೆಂದೆ? ನಿನಗೂ ತಿಳಿದಂತೆ ಸುಧಾಕರ ತುಂಬಾ ಒಳ್ಳೆಯವನೆಂದು ಹೇಳಿದರು. ನಾನು ಎಷ್ಟು ಹೇಳಿದರೂ ಕೂಡಾ,,, ಇಲ್ಲಿವರೆಗೆ ನೀವುಗಳು ಒಂದೇ ಮನೆಯವರಂತೆ ಇದ್ದೀರೀ ಅದನ್ನೇ ಮುಂದುವರೆಸಿಕೊಂಡು ಹೋಗಿರೆಂದು ಬಲವಂತ ಮಾಡಿದರು. ನಾನು ಎಷ್ಟು ಹೇಳಿದರೂ ಒಪ್ಪಲೇ ಇಲ್ಲ. ಕಡೆಗೆ ಈ ವಿಷಯ ಹೇಳಿದ ತಕ್ಷಣ ಗಪ್ ಚುಪ್ ಆಗಿ ನಾನಿನ್ನು ಬರುತ್ತೇನೆಂದು ಹೇಳಿ ಹೋದರೆಂದು ವನಿತ ಹೇಳಿದ್ದಕ್ಕೆ,

ನನ್ನ ಹೆಲ್ತ್ ರಿಪೋರ್ಟನ್ನು ಕಳ್ಳತನದಿಂದ ಫೋಟೋ ಹಿಡಿದುಕೊಂಡು ಹೋಗಿ ಎಲ್ಲರಿಗೂ ಪ್ರಚಾರ ಮಾಡುತ್ತಿದ್ದೀಯಾ ನಾನ್ಸೆನ್ಸ್ ಎಂದು ಸುಧಾಕರ ಕೋಪದಿಂದ ನುಡಿದಿದ್ದಕ್ಕೆ

ವನಿತ ಅಷ್ಟೇ ತಾಳ್ಮೆಯಿಂದ ಮಿಸ್ಟರ್ ಸುಧಾಕರ್ ನಾನು ನನ್ನ ಅಕ್ಕನ ರಿಪೋರ್ಟ್ ನೋಡಿ ಅದನ್ನು ಸ್ಕಾನ್ ಮಾಡಿ ಪುೋಟೋ ತೆಗೆದುಕೊಂಡಿದ್ದೆ. ಅದರ ಜೊತೆ ನಿಮ್ಮ ರಿಪೋರ್ಟ್ ಇದ್ದದ್ದು ಗೊತ್ತಿರಲಿಲ್ಲ. ನಾನು ಚೆನ್ನಾಗಿ ಬಾಳಿ ಬದುಕಬೇಕಾದರೆ ನನ್ನ ಮಾತನ್ನು ಡಿಫೆಂಡ್ ಮಾಡಿಕೊಳ್ಳಬೇಕಲ್ಲಾ ಅದಕ್ಕೆ ಹೇಳಿದೆ. ಇದರಲ್ಲಿ ತಪ್ಪೇನೆಂದು ವನಿತಳು ಖಾರವಾಗಿ ಪ್ರಶ್ನಿಸಿದಾಗ

ಓ ನೀನು  ಕಂಡೋರ ಮಗುವನ್ನು ಬಾವಿಗೆ ತಳ್ಳಿ ಆಳ ನೋಡುವ ಮನಸ್ಸಿನವಳೆಂದು ಗೊತ್ತಿರಲಿಲ್ಲ‌ ವನಿತಾ,,, ನನ್ನ ಸೋದರ ಮಾವನಿಗೆ ಏನಾದರೂ ಸಬೂಬು ಹೇಳಿ ಈ ವಿಚಾರವನ್ನು ನನ್ನ ಬಳಿ ಹೇಳಿದ್ದರೆ ನಾನೇ ನಮ್ಮಿಬ್ಬರ ಮದುವೆ ತಪ್ಪಿಸಲು ಬೇರೆ ಉಪಾಯ ಮಾಡುತ್ತಿದ್ದೆ ಅದನ್ನು ಬಿಟ್ಟು ನೀನು ಈ ರೀತಿ ಮಾಡುವುದಾ ?ಛೇ,,, ಛೇ,,, ಎನ್ನುತ್ತಾನೆ.

ವನಿತ ವ್ಯಂಗ್ಯದಿಂದ ಕೋಳಿ ಕೇಳಿ ಯಾರೂ ಖಾರ ಅರೆಯಲ್ಲಾ ಮಿಸ್ಟರ್ ಸುಧಾಕರ್ ಎಂದು ದಿಟ್ಚತನದಿಂದ ಹೇಳಿದಾಗ,

ನಿಮ್ಮಂತ ಫೂಲ್ಸ್ ಗೆ ನಾನು ಬುದ್ದಿ ಹೇಳಲು ಹೋದೆನಲ್ಲಾ ನಾನೇ ಮೆಟ್ ತೊಗೊಂಡು ಹೊಡಿಕೋಬೇಕೆಂದು ಕೋಪದಿಂದ ಸುಧಾಕರ ಹೇಳುತ್ತಾನೆ.

ಮಿಸ್ಟರ್ ಸುಧಾಕರ್ ನೀನು ಇದೇರೀತಿ ಕೂಗಾಡುತ್ತಿದ್ದರೆ, ನಿನ್ನ ವಿಷಯ ಎಲ್ಲರಿಗೂ ಟಾಂ ಟಾಂ ಮಾಡಬೇಕಾಗುತ್ತದೆಂದು ವನಿತ ಎಚ್ಚರಿಸಿದಾಗ

ಓ ಹೋ ಹೋ ನಿನಗೊಬ್ಬಳಿಗೇ ಅಲ್ಲ ಟಾಂ ಟಾಂ ಮಾಡಲು ಬರುವುದು. ನಾನು ನಿನ್ನ ಮೇಲೆ ಏನು ಬೇಕಾದರೂ ಆರೋಪ ಹೊರೆಸಿ ಟಾಂ ಟಾಂ ಮಾಡಬಲ್ಲೆ ಆದರೆ ಇನ್ನೊಬ್ಬರ ತೇಜೋವಧೆ ಮಾಡಬಾರದೆಂದು ಸುಮ್ಮನಾಗುತ್ತೇನೆ ಎನ್ನುತ್ತಾನೆ.

ನಿಮ್ಮ ಮಾತು ಮುಗಿಯಿತೋ ಅಥವಾ‌ ಇನ್ನೂ ಬಾಕಿ ಇದೆಯೋ ಎಂದು ವನಿತ ತಿರಸ್ಕಾರದಿಂದ ಪ್ರಶ್ನಿಸಿದ್ದಕ್ಕೆ

ನೀನು ಈಗ  ಮಾಡಿರುವ ಕಚಡಾ‌ ಕೆಲಸವನ್ನು  ಇನ್ನುಮುಂದೆ ಮಾಡಿದರೆ ಪರಿಣಾಮ ನೆಟ್ಚಗಿರುವುದಿಲ್ಲವೆಂದು ಎಚ್ಚರಿಸಲು ಹೇಳಿದೆನೆಂದು ಸುಧಾಕರನ ಮಾತಿಗೆ

ಓ ನನಗೇ  ಎಚ್ಚರಿಕೆ ಮಾತು,,,ಈಗ ನಾನು ಮೈ ಫುಟ್‌ ಎನ್ನಲಾ? ಎಂದು ವನಿತಾ ಹೇಳಿದ್ದಕ್ಕೆ

ನೋಡು ವನಿತಾ ಸುಮ್ಮನೆ ನನಗೆ ಕೋಪ ಬರಿಸಬೇಡವೆಂದು ಸುಧಾಕರ ಪುನಃ ಎಚ್ಚರಿಸುತ್ತಾನೆ.

ಮಿಸ್ಟರ್ ಸುಧಾಕರ್ ಒಂದು ಸಲ ಬಾಯಿ ತಪ್ಪಿ ಹೇಳಿದೆ ಓ ಕೆ ಐ ಆಮ್ ಸಾರೀ,,, ಇನ್ನೊಂದು ಸಲ ಇದೇ ವಿಚಾರಕ್ಕೆ

ಏನಾದರೂ ಕ್ಯಾತೆ ತೆಗೆದರೆ ನಾನು ಸುಮ್ಮನಿರೋಲ್ಲವೆಂದು ನಿಷ್ಠೂರವಾಗಿ ವನಿತ ಹೇಳಿದ ಮಾತಿಗೆ

ನಿನ್ನ ಸುದ್ದಿಗಾಗಲೀ ನಿಮ್ಮ ಮನೆಯ ಸುದ್ದಿಗಾಗಲೀ ಯಾವೋನು ಬರುತ್ತಾನೆ ಹೋಗೇಲೇ ಎನ್ನುತ್ತಾ ಸುಧಾಕರನು ಫೋನ್ ಆಫ್ ಮಾಡುತ್ತಾನೆ.

ಛೇ ಡರ್ಟಿ ಫೆಲೋಸ್ ಸುಮ್ಮ ಸುಮ್ಮನೆ ಫೋನ್ ಮಾಡಿ ತಲೆ‌ ತಿನ್ನುತ್ತಾರೆಂದುಕೊಳ್ಳುತ್ತಿರುವಾಗ, ಅವಳ ಅಪ್ಪ ಬಂದು ಯಾರನ್ನೋ ಡರ್ಟಿ ಫೆಲೋ ಎಂದು ಕರೆಯುತ್ತಿದ್ದೀಯಲ್ಲಾ ಯಾರಿಗಮ್ಮಾ ಎಂದು ಕೇಳಿದಾಗ

ನಿನ್ನ ಮಾಜಿ ಅಳಿಯ ಏನೇನೋ ಕೂಗಾಡುತ್ತಿದ್ದಾನೆ ಅದಕ್ಕೆ ಹೇಳಿದೆ ಅಪ್ಪಾ ಎನ್ನುತ್ತಾಳೆ.

ಅವನೇನು ಹೇಳಿದನೆಂದು ವನಿತಳ ಅಪ್ಪಳ ಪ್ರಶ್ನೆಗೆ ವನಿತ ನಡೆದ ವಿಷಯವನ್ನು ಹೇಳಿದ ನಂತರ ಪುನಃ ಸುಧಾಕರನಿಗೆ‌ ಫೋನ್ ಮಾಡಿಸಿ, ಸುಧಾಕರ ವನಿತಳಿಂದ ಪುನಃ ಫೋನ್ ಬಂದಿದ್ದನ್ನು ನೋಡಿ, ರಿಸೀವ್ ಮಾಡಿ, ಕೋಪ ತಡೆಯಲಾರದೆ ನಾನ್ಸೆನ್ಸ್ ಪುನಃ ಏಕೆ ಫೋನ್ ಮಾಡಿದೆ ಎಂದು ಕೋಪದಿಂದ ಪ್ರಶ್ನಿಸಲು

ವೈಟ್ ವೈಟ್ ನಾನು ವನಿತಳ ಅಪ್ಪ ಮಾತಾಡುತ್ತಿರುವುದು ಕಣಪ್ಪಾ,,, ಮಾತಿನಲ್ಲಿ ಬಿಗಿಯಿರಲಿ, ಮನಸ್ಸಿನಲ್ಲಿ ತಾಳ್ಮೆ ಇರಲೆಂದು ಹೇಳಿದ ತಕ್ಷಣ

ಸುಧಾಕರ ಕೂಲಾಗಿ ಮಾವಾ ನೀವಾ ಎಂದು ಕೇಳಿದ್ದಕ್ಕೆ

ನೋ.. ಈಗ ಮಾವ ಗೀವಾ ಏನೂ ಇಲ್ಲ. ನಾನೀಗ ನಿಮ್ಮ ಮಾವನೂ ಅಲ್ಲ ನೀವು ನನ್ನ ಅಳಿಯನೂ ಅಲ್ಲ. ಆ ಸಂಬಂಧ ವೆಲ್ಲವೂ ನನ್ನ ಮಗಳ ಹಿಂದೆಯೇ ಹೋಯಿತು. ಈ ರೀತಿ ಏನಾದರೂ ಪುನಃ ಪೋನ್ ಮಾಡಿದರೆ ಪೋಲಿಸ್ ಕಂಪ್ಲೇಂಟ್ ಕೊಡಬೇಕಾಗುತ್ತದೆ ಮೈಂಡ್ ಇಟ್ ಎಂದ ತಕ್ಷಣ,

ಸುಧಾಕರನು ಅದೇ ಧಾಟಿಯಲ್ಲಿ  ಓ ನಿಮಗೊಬ್ಬರಿಗೇ ಅಲ್ಲ ಕಂಪ್ಲೇಂಟ್ ಕೊಡುವುದಕ್ಕೆ ಗೊತ್ತಿರುವುದು ನನಗೂ ತಿಳಿದಿದೆ ಫೋನ್ ಇಡ್ರೀ ಸಾಕು.. ಮಗಳಿಗೆ ಬುದ್ದಿವಾದ ಹೇಳುತ್ತಾರೇನೋ ಎಂದುಕೊಂಡಿದ್ದರೆ ನನಗೇ ಪುನಃ ಅವಾಜ್ ಹಾಕುತ್ತಿದ್ದೀರಾ? ನಿಮ್ಮ ಮೇಲೆ ಕಂಪ್ಲೇಂಟ್ ಕೊಡುವುದಕ್ಕೆ ನನಗೇನು ಗೊತ್ತಿಲ್ಲವೆಂದು ತಿಳಿದಿದ್ದೀರಾ ? ಮಿ. ಯಶವಂತರಾವ್,,, ನೀವು ಸರ್ಕಾರದ ಕ್ವಾರ್ಟರ್ಸ್ ಕಟ್ಚುವುದಕ್ಕೆ, ರೋಡ್ ದುರಸ್ತಿಗೆ ಬ್ರಿಡ್ಜ್‌ಕಟ್ಟಿಸುವಾಗ ಏನೇನು ಗೋಲ್ ಮಾಲ್ ಮಾಡಿದ್ದೀರೆಂದು ನನ್ನ ಬಳಿ ಪ್ರೂಫ್ ಸಮೇತ ಇದೆ. ಈ ಕ್ಷಣ ನಿಮ್ಮ ಮೇಲೆ ಕಂಪ್ಲೇಂಟ್ ಕೊಟ್ಚು ಒಳಗೆ ಹಾಕಿಸಿಬಿಡುತ್ತೇನೆ ಹುಷಾರ್ ಎಂಬ ಸುಧಾಕರನ  ಎಚ್ಚರಿಕೆಯ ಮಾತಿಗೆ, ಅವನ ಮಾವ ಕುಳಿತಲ್ಲೇ ಬೆವರುತ್ತಾ,  ಕರ್ಚೀಪಿನಿಂದ ಹಣೆಯನ್ನು ಒರೆಸಿಕೊಂಡು ಹೋಗಲಿ ಬಿಡಮ್ಮಾ ಅವನ ಸಹವಾಸವೇ ಬೇಡವೆಂದು ಫೋನ್ ಆಫ್ ಮಾಡಿ ಮಗಳ ಕೈಗೆ ಕೊಟ್ಚು ಒಳಗೆ ಹೋಗುತ್ತಾರೆ.

ಸುಧಾಕರನು ಫೋನ್ ಆಫ್ ಮಾಡಿ ಟೇಬಲ್ ಮೇಲೆ ಇಡುವ

ವೇಳೆಗೆ ಸುಧಾಕರನ ಸೋದರ ಮಾವನು ಬಂದು ನನ್ನ ಸ್ನೇಹಿತರು ಅವರ  ಮಗಳನ್ನು ಕರೆದುಕೊಂಡು ಬರುತ್ತಾರಂತೆ ನೀನು ಎಲ್ಲೂ ಹೋಗಬೇಡವೆಂದು ಸುಧಾಕರನಿಗೆ ತಾಕೀತು ಮಾಡಲು

ಆಗಲಿ ಮಾವಾ ಎನ್ನುತ್ತಾ,,,ಅಮ್ಮಾ,,,,ಅಮ್ಮಾ,,,,, ನಾಣೀ ಮಾವಾ ಬಂದಿದ್ದಾರೆ ಎಂದು ಜೋರಾಗಿ ಕೂಗಿ ಹೇಳಿದಾಗ

ಓ ಹೌದೇನೋ ನನ್ನ ನಾಣಿ ಬಂದನಾ ಎನ್ನುತ್ತಾ,, ಅವನ ಅಮ್ಮ ಹೊರಗೆ ಬಂದು, ನಾಣೀ,,,, ಬಂದೆಯಾ? ಈ ಕೆಲಸವೂ ಹಣ್ಣೋ,,,,ಅಥವಾ,,,

ಎಂದು ಹೇಳುವಷ್ಟರಲ್ಲಿ ಮುಂದೆ ಮಾತಾಡಬೇಡಾ‌ ಅಂಬು ನಾನು ಹೋದ ಕೆಲಸ ಹಣ್ಣೇ ಆಗುತ್ತದೆಂದು ಸುಧಾಕರನ ಸೋದರ ಮಾವ ತಾವೇ ಜಂಬಕೊಚ್ಚಿಕೊಳ್ಳುತ್ತಾರೆ.

ಡಾ. ಎನ್.‌ ಮುರಳೀಧರ್ ವಕೀಲರು ಹಾಗೂ ಸಾಹಿತಿ, ನೆಲಮಂಗಲ, ಬೆಂಗಳೂರು ಗ್ರಾಮಾಂತರ ಜಿಲ್ಲೆ. (ಮಂಗಲಧರೆ)

Leave a Reply