HOMENews

ಸೆಸ್ಕ್ ಪ್ರಧಾನ ಕಚೇರಿಯ ನಾಲ್ಕನೇ ಮಹಡಿ ಕಾರ್ಯಾಲಯ ಉದ್ಘಾಟನೆ

ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರಿಂದ ಲೋಕಾರ್ಪಣೆ

ಮೈಸೂರು, ಮಾ.5, 2026: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಚಾವಿಸನಿನಿ)ದ ಪ್ರಧಾನ ಕಚೇರಿಯಲ್ಲಿ ನಿರ್ಮಿಸಿರುವ ನಾಲ್ಕನೇ ಮಹಡಿ ಕಚೇರಿಯ ಉದ್ಘಾಟನಾ ಸಮಾರಂಭ ಗುರುವಾರ ನಡೆಯಿತು.

ವಿಜಯನಗರದ ಎರಡನೇ ಹಂತದಲ್ಲಿರುವ ನಿಗಮ ಕಾರ್ಯಾಲಯದಲ್ಲಿ ನಡೆದ ಸಮಾರಂಭದಲ್ಲಿ ಚಾವಿಸನಿನಿ ಅಧ್ಯಕ್ಷರು ಹಾಗೂ ಶಾಸಕರಾದ ರಮೇಶ್ ಬಂಡಿಸಿದ್ದೇಗೌಡರು ಹಾಗೂ ಚಾವಿಸನಿನಿ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎಂ. ಮುನಿಗೋಪಾಲ್ ರಾಜು ಅವರು, ನೂತನ ಕಚೇರಿ ಕಟ್ಟಡವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಮೇಶ್ ಬಂಡಿಸಿದ್ದೇಗೌಡ ಅವರು, “ನೂತನ ಕಚೇರಿ ಉದ್ಘಾಟನೆಯಿಂದಾಗಿ ನಿಗಮದ ಆಡಳಿತಾತ್ಮಕ ಕಾರ್ಯಗಳಿಗೆ ಇನ್ನಷ್ಟು ವೇಗ ಮತ್ತು ಸುಗಮತೆ ದೊರೆಯಲಿದೆ. ನಿಗಮದ ಕಾರ್ಯಕ್ಷಮತೆಯನ್ನು ಹೆಚ್ಚು ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಉತ್ತಮ ವಾತಾವರಣದ ಮೂಲಕ ಕೆಲಸದ ಮಾಡಲು ಈ ಕಟ್ಟಡ ನೆರವಾಗಲಿದೆ” ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ವ್ಯಾಪ್ತಿಯ ವಿವಿಧ ಉಪ ವಿಭಾಗಗಳಲ್ಲಿ ಅನುಕಂಪದ ಆಧಾರದಲ್ಲಿ ಉದ್ಯೋಗ ಪಡೆದವರಿಗೆ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರು, ನೇಮಕಾತಿ ಪತ್ರ ವಿತರಿಸಿದರು. ಅದರಂತೆ ಅಶ್ವಿನಿ, ಮಹಾಂತೇಶ್, ಸುಮಂತ್ ರಾಜ್ ಅರಸ್, ಡಿ. ಮನೋಜ್, ಕೆ. ಕವಿತಾ, ಯುವಶ್ರೀ ಹಾಗೂ ವಿಜಯ ಕುಮಾರಿ ಅವರುಗಳು ಸಹಾಯಕರಾಗಿ ನೇಮಕವಾದರೆ. ಕಿರಿಯ ಸಹಾಯಕರಾಗಿ ದೀಕ್ಷಿತ್ ಹಾಗೂ ಸಹಾಯಕ ಪವರ್ ಮ್ಯಾನ್ ಹುದ್ದೆಗೆ ಶ್ರೀಧರ್ ಅವರಿಗೆ ನೇಮಕಾತಿ ಪತ್ರವನ್ನು ವಿತರಿಸಲಾಯಿತು.

ಸಮಾರಂಭದಲ್ಲಿ ನಿಗಮದ ತಾಂತ್ರಿಕ ನಿರ್ದೇಶಕರಾದ ಡಿ.ಜೆ. ದಿವಾಕರ್, ಮುಖ್ಯ ಆರ್ಥಿಕ ಅಧಿಕಾರಿ ಜಿ. ರೇಣುಕಾ, ಪ್ರಧಾನ ವ್ಯವಸ್ಥಾಪಕರಾದ ಲಿಂಗರಾಜಮ್ಮ, ಡಾ.ಬಿ.ಆರ್.ರೂಪ, ಆರ್. ರಾಮಸ್ವಾಮಿ, ಮುಖ್ಯ ಇಂಜಿನಿಯರ್ ಎಲ್. ಲೋಕೇಶ್, ಅಧೀಕ್ಷಕ ಇಂಜಿನಿಯರ್ಗಳಾದ ಸುನೀಲ್ ಕುಮಾರ್, ಸೋಮಶೇಖರ್ ಸೇರಿದಂತೆ ನಿಗಮ ಕಾರ್ಯಾಲಯದ ಅಧಿಕಾರಿಗಳು, ಸಿಬ್ಬಂದಿ ಹಾಗೂ ಮೈಸೂರು ವೃತ್ತದ ಸೆಸ್ಕ್ ಜಾಗೃತ ದಳದ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು.

Leave a Reply