
ವರದಿ:-ವಡ್ಡರಕೊಪ್ಪಲು ಶಿವರಾಮು.
ಕೆ ಆರ್ ನಗರ. ಮಾ. 02:- ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕೆ ಆರ್ ನಗರ ಮತ್ತು ಸಾಲಿಗ್ರಾಮ ತಾಲೂಕಿನ ಭೂಮಾಪಕರುಗಳ ಸಂಘದ ಅಧ್ಯಕ್ಷರಾದ ಮುರಳಿ ಮತ್ತು ಭಾಸ್ಕರ ರವರ ನೇತೃತ್ವದಲ್ಲಿ ಭೂದಾಖಲೆಗಳ ಸಹಾಯಕ ನಿರ್ದೇಶಕರಾದ ಶ್ರೀಕಂಠ ಶರ್ಮರವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಇಂದು ಪಟ್ಟಣದ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಕೆ ಆರ್ ನಗರ ಮತ್ತು ಸಾಲಿಗ್ರಾಮ ತಾಲೂಕಿನ ಭೂಮಾಪಕರಗಳ ಸಂಘದ ವತಿಯಿಂದ ಮನವಿ ಪತ್ರವನ್ನು ಸಲ್ಲಿಸಿ ಮಾತನಾಡಿದ ಎರಡು ತಾಲೂಕಿನ ಅಧ್ಯಕ್ಷರುಗಳಾದ ಮುರಳಿ ಮತ್ತು ಭಾಸ್ಕರ್ ನಮ್ಮ ಬೇಡಿಕೆಗಳನ್ನು ಈಡೇರಿಸುವ ತನಕ ನಾವು ಕರ್ತವ್ಯಕ್ಕೆ ಹಾಜರಾಗದೆ ಸಾಂಕೇತಿಕ ಧರಣಿ ನಡೆಸುತ್ತೇವೆ ಎಂದು ತಿಳಿಸಿದರು.
ರಾಜ್ಯ ಮತ್ತು ಜಿಲ್ಲೆಯಾದ್ಯಂತ ನಮ್ಮ ವಿವಿಧ ಬೇಡಿಕೆಗಳಾದ” ಅಳತೆ ಸ್ವಾಮಿತ್ವ” ದರ ಖಾಸ್ತು ಆಕಾರ ಬಂದು ಡಾಟಾ ಎಂಟ್ರಿ ಹಾಗೂ ಇತರೆ ಎಲ್ಲಾ ಕೆಲಸಗಳನ್ನು ಸ್ಥಗಿತಗೊಳಿಸಿ ಭೂಮಾಪಕರುಗಳು ಅನಿದಿಷ್ಟಾವಧಿ ಮುಷ್ಕರ ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ನಮ್ಮ ವಿವಿಧ ಬೇಡಿಕೆಗಳಾದ ಕೆಲಸವನ್ನು ಕಾಯಂ ಮಾಡುವುದು ಹಾಗೂ ಸೇವಾ ಭದ್ರತೆ ನೀಡುವುದು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವುದು. ಕಾಲ ಕಾಲಕ್ಕೆ ತಕ್ಕಂತೆ ದರ ಪರಿಷ್ಕರಣೆ ಮಾಡುವುದನ್ನು ಸರಿಪಡಿಸುವುದು. ಆರೋಗ್ಯ ಮತ್ತು ಜೀವ ವಿಮೆ ನೀಡುವುದು. ಅಗತ್ಯಕ್ಕೆ ತಕ್ಕಂತೆ ಜವಾನರ ಪುರೈಕೆ ಮಾಡುವುದು. ನಮ್ಮ ಕೆಲಸಗಳಾದ ” ಅಳತೆ ಸ್ವಾಮಿತ್ವ” ದರ ಖಾಸ್ತು ಆಕಾರ್ ಬಂದು ಟಾಟಾ ಎಂಟ್ರಿ ಪೊಡಿ ಮುಕ್ತ ಅಭಿಯಾನ ಕೆರೆ ಅಳತೆ ಭೂ ಸ್ವಾಧೀನ ಸೇರಿದಂತೆ ಇನ್ನಿತರ ಕೆಲಸಗಳಿಗೆ ಸೂಕ್ತ ಸಂಭಾವನೆ ನೀಡಿಲ್ಲದಿರುವುದು ಮತ್ತು ಹಣ ಬಿಡುಗಡೆಗೆ ವಿಳಂಬ ಮಾಡುವುದುನ್ನು ಸರಿಪಡಿಸಬೇಕು. ಸೇರಿದಂತೆ ಇನ್ನೂ ಹಲವು ವಿವಿಧ ಬೇಡಿಕೆಗಳನ್ನು ಹಾಗೂ ನಮ್ಮ ಇಲಾಖೆಯಲ್ಲಿ ನಮ್ಮ ಮೇಲೆ ಮಲತಾಯಿ ಧೋರಣೆ ತೋರುವುದನ್ನು ನಿಲ್ಲಿಸಬೇಕು ಎಲ್ಲಾ ಬೇಡಿಕೆಗಳನ್ನು ಈಡೇರಿಸುವ ತನಕ ನಾವು ಅನಿರ್ದಿಷ್ಟ ಕಾಲ ಮುಷ್ಕರವನ್ನು ಮಾಡುತ್ತಿದ್ದು ಅಲ್ಲಿಯವರಿಗೆ ರೈತರಿಗೆ ತೊಂದರೆಯಾಗದಂತೆ ನಮ್ಮಲ್ಲಿ ಪರವಾನಿಗೆ ಭೂಮಾಪಕರುಗಳ ಮೋಜಿಣಿ ಹಾಗೂ ಆಕಾರ್ ಬಂದು ಲಾಗಿನ್‌ಗಳನ್ನು ” ಡಿ ಆಕ್ಟಿವೇಶನ್ ” ಮಾಡಬೇಕೆಂದು ಜಿಲ್ಲಾ ಭೂ ದಾಖಲೆಗಳ ಉಪನಿರ್ದೇಶಕರಲ್ಲಿ ಮನವಿ ಮಾಡುತ್ತಾ ಈ ಮನವಿ ಪತ್ರವನ್ನು ಸಲ್ಲಿಸುತಿದ್ದೇವೆ ಎಂದು ತಿಳಿಸಿದರು.

ಈ ಮನವಿ ಪತ್ರವನ್ನು ಸಲಿಸುವ ವೇಳೆ ಪರವಾನಗಿ ಭೂ ಮಾಪಕರ ಸಂಘದ ಅಧ್ಯಕ್ಷರುಗಳಾದ ಮುರುಳಿ, ಭಾಸ್ಕರ್, ಭೂ ಮಾಪಕರಾದ ವಿಶ್ವನಾಥ್, ದಿನೇಶ್, ಕೆ.ವಿ.ರಾಮು, ಶಿವಕುಮಾರ್, ಕುಬೇರ, ಶ್ರೀಕಂಠಪಾಟೀಲ್, ಮಣಿಕಂಠ, ಕಿರಣ್, ಸಚಿನ್, ಕೆ.ಎಸ್ ಮಹದೇವ, ಸಿ.ಎಲ್.ಬಸವರಾಜು, ರಾಕೇಶ್, ರೂಪೇಶ್, ಸಿದ್ದರಾಜು, ರಂಗಪ್ಪ, ರತನ್, ಪ್ರಶಾಂತ್, ಶಂಕರ್, ದೋರೆ, ಮಹದೇವಮ್ಮ ಸೇರಿದಂತೆ ಇನ್ನಿತರರು ಹಾಜರಿದ್ದರು.





