
ವರದಿ :-ವಡ್ಡರಕೊಪ್ಪಲು ಶಿವರಾಮು.
ಕೆ ಆರ್. ನಗರ. ಏ. 17:- ಮಾತೃಭಾಷೆ ಪ್ರೀತಿಸಬೇಕು.ಜೊತೆಗೆ ಅನ್ಯ ಭಾಷೆಯನ್ನು ಗೌರವಿಸಬೇಕು ಆಗ ಮಾತ್ರ ಸಮಾಜದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಕುಪ್ಪಳ್ಳಿ ಸೋಮಶೇಖರ್ ಹೇಳಿದರು.
ಪಟ್ಟಣದ ಕೆಇಬಿ ಬಡಾವಣೆಯಲ್ಲಿ ಬೇಸಿಗೆ ಶಿಬಿರದ ಅಂಗವಾಗಿ ತೆರೆದಿರುವ ಶ್ರೀ ಕೃಷ್ಣ ಟ್ಯುಟೋರಿಯಲ್ ನ ಸ್ಪೋಕನ್ ಇಂಗ್ಲೀಷ್ ತರಗತಿಗಳಿಗೆ ಚಾಲನೆ ನೀಡಿ ಮಾತನಾಡಿದರು. ಆಧುನಿಕ ಯುಗದಲ್ಲಿ ಜಾಗತಿಕ ಭಾಷೆಯಾಗಿರುವ ಇಂಗ್ಲಿಷ್ ಪರಿಣಾಮಕಾರಿ ಕಲಿಕೆ ಅವಶ್ಯಕ. ಕನ್ನಡ ಭಾಷೆ ಜೊತೆಗೆ ಇಂಗ್ಲಿಷ್ ಕಲಿಕೆ ಇಂದಿನ ಅಗತ್ಯ ಎಂದರು.
ಇಂದು ಸ್ಪರ್ಧಾ ಪ್ರಪಂಚದಲ್ಲಿ ಸ್ಪರ್ಧೆ ಒಡ್ಡಬೇಕಾದರೆ ಎಲ್ಲಾ ಭಾಷೆಗಳು ಅವಶ್ಯಕ ಅದರಲ್ಲಿಯೂ ಇಂಗ್ಲೀಷ್ ಭಾಷೆ ಹೆಚ್ಚು ಮಹತ್ವವನ್ನು ಪಡೆದುಕೊಂಡಿದ್ದು ಆ ಭಾಷೆಯಲ್ಲಿ ಹೆಚ್ಚು ಪ್ರಾವಣ್ಯತೆ ಹೊಂದಿದ್ದರೆ ವೃತ್ತಿಪರ ಶಿಕ್ಷಣಕ್ಕೆ ಮತ್ತು ಉದ್ಯೋಗಕ್ಕೆ ಸಹಾಯವಾಗಲಿದೆ ಎಂದು ತಿಳಿಸಿದರು.
ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷ ವಾಸು ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸುಲಲಿತವಾಗಿ ಇಂಗ್ಲಿಷ್ ಕಲಿಕೆಗೆ ನೆರವಾಗುವ ದೃಷ್ಟಿಯಿಂದ ಇದೆ ಮೊದಲ ಬಾರಿಗೆ ಸ್ಪೋಕನ್ ಇಂಗ್ಲಿಷ್ ತರಗತಿಗಳನ್ನು ಪ್ರಾರಂಭಿಸಲಾಗಿದೆ. ಬೆಳಗ್ಗೆ 9 ರಿಂದ 11 ರವರೆಗೆ ನಿತ್ಯ ಮುಂದಿನ 35 ದಿನಗಳ ಕಾಲ ತರಗತಿಗಳು ನಡೆಯಲಿವೆ ಎಂದು ತಿಳಿಸಿದರು.
ಈಗ ಸಾಲಿಗ್ರಾಮ ತಾಲೂಕ್ ಕೇಂದ್ರವಾಗಿ ಘೋಷಣೆಯಾಗಿದ್ದು ಇಲ್ಲಿನ ಮಕ್ಕಳು ಆಂಗ್ಲ ಭಾಷೆ ಸೇರಿದಂತೆ ಇನ್ನಿತರ ಭಾಷೆಗಳ ಕಲಿಕೆಗಾಗಿ ಹೊರ ಜಿಲ್ಲೆಗಳು ಮತ್ತು ಹೊರ ತಾಲೂಕಿಗೆ ಹೋಗುತ್ತಿದ್ದು ಅದನ್ನು ತಪ್ಪಿಸಲು ಈ ಕಲಿಕಾ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ ಹಾಗೂ ಮಕ್ಕಳು ಪೋಷಕರಿಗೆ ಹೊರೆಯಾಗದಂತೆ ನುರಿತ ಶಿಕ್ಷಕರ ಮತ್ತು ಅನುಭವಿ ಉಪನ್ಯಾಶಕರಿಂದ ಶಿಕ್ಷಣವನ್ನು ನೀಡುತ್ತಿದ್ದೇವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯ ಮುಖಂಡರಾದ ಜಯಣ್ಣ ವಿಎಸ್ಎಸ್ ನಿರ್ದೇಶಕರಾದ ಅನಂತ ಪತ್ರಕರ್ತರಾದ ವಡ್ಡರಕೊಪ್ಪಲು ಶಿವರಾಮು. ಕರ್ಪೂರವಳ್ಳಿ ಮಹದೇವ್, ಬಸವರಾಜ , ಶಿಕ್ಷಕರಾದ ಅನಿಲ್ ಭೂಮಿಕಾ, ಅಂಕನಹಳ್ಳಿ ಮಂಜುನಾಥ್ ಕುಮಾರ್ ಚಂದ್ರು ಮಂಜುನಾಥ್ ಸೇರಿದಂತೆ ಸ್ಥಳೀಯ ಮುಖಂಡರು ಮತ್ತು ವಿದ್ಯಾರ್ಥಿಗಳು ಇದ್ದರು.
ಫೋಟೋ. 01:- ಕಾರ್ಯಕ್ರಮವನ್ನು ಎಪಿಎಂಸಿ ಮಾಜಿ ಅಧ್ಯಕ್ಷ ಕುಪ್ಪಳ್ಳಿ ಸೋಮ ಉದ್ಘಾಟಿಸುತ್ತಿರುವುದು.





