HOMENews

ಪ್ರೀತಿಸಿ ಮದುವೆಯ ಒಂದು ತಿಂಗಳಲ್ಲೇ ಉದ್ಯಮಿ ಆ* ಹ* : ಉಡುಪಿಯಲ್ಲಿ ಸಂಶಯಾಸ್ಪದ ಸಾ*,

 

ಉಡುಪಿ: ಪ್ರೀತಿಸಿ ಮದುವೆಯಾದ ಕೇವಲ ಒಂದು ತಿಂಗಳಲ್ಲೇ ಯುವ ಉದ್ಯಮಿಯೊಬ್ಬ ಆ* ಹ* ಮಾಡಿಕೊಂಡಿರುವ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ. ಈ ಘಟನೆ ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಈಗ ಇಬ್ಬರು ಕುಟುಂಬಗಳ ನಡುವೆ ಆರೋಪ–ಪ್ರತ್ಯಾರೋಪಗಳು ತೀವ್ರಗೊಂಡಿವೆ.

ಮೃ* ವ್ಯಕ್ತಿಯನ್ನು ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಯಾಡಿ ನಿವಾಸಿ ಸುದೀಪ್ ಶೆಟ್ಟಿ (32) ಎಂದು ಗುರುತಿಸಲಾಗಿದೆ. ಇವರು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಉದ್ಯಮ ನಡೆಸುತ್ತಿದ್ದರು. ಕಾರ್ಕಳ ತಾಲೂಕಿನ ಬಂಗ್ಲೆಗುಡ್ಡೆ ನಿವಾಸಿ ಸೌಮ್ಯ ಶೆಟ್ಟಿ (28) ಎಂಬ ಮೇಕಪ್ ಆರ್ಟಿಸ್ಟ್ ಹಾಗೂ ನಾಟಕ ಕಲಾವಿದೆಯೊಂದಿಗೆ ಸುದೀಪ್ ಪ್ರೀತಿಯಲ್ಲಿ ಬಿದ್ದು ಮದುವೆಯಾಗಿದ್ದರು.

ಮಾಹಿತಿಯ ಪ್ರಕಾರ, ಸುದೀಪ್ ಕಳೆದ ಒಂದು ವರ್ಷದಿಂದ ಸಾಮಾಜಿಕ ಜಾಲತಾಣಗಳ ಮೂಲಕ ಸೌಮ್ಯರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದ. ಬಳಿಕ ಸೌಮ್ಯ ಪ್ರತಿಕ್ರಿಯೆ ನೀಡಿದ ನಂತರ ಇಬ್ಬರ ನಡುವೆ ಸ್ನೇಹ ಬೆಳೆದು ಪ್ರೀತಿಗೆ ತಿರುಗಿದೆ. ಮನೆಮಂದಿಯವರನ್ನು ಒಪ್ಪಿಸಿ, ಕೆಲ ತಿಂಗಳ ಹಿಂದೆ ಬೆಳ್ತಂಗಡಿಯಲ್ಲಿ ರಿಜಿಸ್ಟರ್ ಮದುವೆ ನೆರವೇರಿಸಿದ್ದರು.

ಮದುವೆಯಾದ ಬಳಿಕ ಸುದೀಪ್ ಕೆಲ ದಿನಗಳು ಪತ್ನಿಯ ಮನೆಯಲ್ಲಿ ವಾಸವಿದ್ದು, ಬಳಿಕ ತನ್ನ ಮನೆಗೆ ತೆರಳಿದ್ದರು. ಅದಾದ ನಂತರ ಅಚಾನಕ್ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಸೌಮ್ಯಗೆ ಆತಂಕ ಉಂಟಾಗಿದೆ. ನಂತರ ಕಾರ್ಕಳದಲ್ಲಿ ಪತ್ನಿ ಮನೆಗೆ ಬಂದ ಸುದೀಪ್ ಹೊಟ್ಟೆ ನೋವಿನ ನೆಪ ಹೇಳಿ ಅಸ್ವಸ್ಥನಾಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಈ ವೇಳೆ ಆತ ವಿಷ ಸೇವನೆ ಮಾಡಿರುವುದು ತಿಳಿದುಬಂದಿದೆ.

ತಕ್ಷಣವೇ ಕುಟುಂಬಸ್ಥರು ಮಂಗಳೂರಿನ ಯೆನಪೋಯ ಆಸ್ಪತ್ರೆಗೆ ಸಾಗಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಸುದೀಪ್ ಮೃತಪಟ್ಟಿದ್ದಾರೆ.

ಈ ಪ್ರಕರಣದಲ್ಲಿ ಮೃತನ ತಂದೆ, “ಮಗನ ಆತ್ಮಹತ್ಯೆಗೆ ಸೊಸೆಯ ಕಿರುಕುಳ ಮತ್ತು ಮಾನಸಿಕ ಒತ್ತಡವೇ ಕಾರಣ” ಎಂದು ಕಾರ್ಕಳ ಠಾಣೆಯಲ್ಲಿ ದೂರು ನೀಡಿದ್ದಾರೆ. ಇತ್ತ ಪತ್ನಿ ಸೌಮ್ಯ, “ನಮ್ಮ ನಡುವೆ ಯಾವುದೇ ಕಲಹ ಇರಲಿಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ. ಸಾಲದ ಒತ್ತಡ ಹಾಗೂ ಕುಟುಂಬದ ಅಸಮಾಧಾನವೇ ಕಾರಣವಾಗಿರಬಹುದು” ಎಂದು ಪ್ರತಿದೂರು ನೀಡಲು ಮುಂದಾಗಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಕಾರ್ಕಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮೃತನ ಮೊಬೈಲ್ ಮಾಹಿತಿ, ಕುಟುಂಬದ ಹೇಳಿಕೆಗಳು ಹಾಗೂ ವೈದ್ಯಕೀಯ ವರದಿಗಳನ್ನು ಪರಿಶೀಲಿಸುತ್ತಿದ್ದಾರೆ. ಸತ್ಯಾಸತ್ಯತೆ ತನಿಖೆಯ ನಂತರವೇ ಹೊರಬರುವ ಸಾಧ್ಯತೆ ಇದೆ.

ಪ್ರೀತಿಯಿಂದ ಆರಂಭವಾದ ಈ ದಾಂಪತ್ಯ ಜೀವನ ದುರ್ಘಟನೆಯಲ್ಲಿ ಅಂತ್ಯಗೊಂಡಿರುವುದು ಸ್ಥಳೀಯರಲ್ಲಿ ಆಘಾತ ಮೂಡಿಸಿದೆ.

Leave a Reply