HOMENews

ಪ್ರೇಮಿಗಳ ದಾರುಣ ಅಂತ್ಯ : ಪ್ರೇಯಸಿ ಸಾವಿನ ಸುದ್ದಿ ಕೇಳಿ ಪ್ರಿಯಕರನೂ ಆ *ಹ*

ಬಾಗಲಕೋಟೆ: ಪ್ರೇಮ ಸಂಬಂಧದ ವೈಮನಸ್ಸು ಎರಡು ಯುವ ಜೀವಗಳನ್ನು ಕಸಿದುಕೊಂಡ ದಾರುಣ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲ್ಲೂಕಿನಲ್ಲಿ ನಡೆದಿದೆ. ಪರಸ್ಪರ ಪ್ರೀತಿಸುತ್ತಿದ್ದ ಯುವತಿ ಹಾಗೂ ಯುವಕ ಇಬ್ಬರೂ ಬೇರೆ ಬೇರೆ ಸ್ಥಳಗಳಲ್ಲಿ ಆ* ಹ*ಗೆ   ಶರಣಾದ ಘಟನೆ ಸ್ಥಳೀಯರಲ್ಲಿ ಆಘಾತ ಮೂಡಿಸಿದೆ.

ಮೃತರನ್ನು ಬನಹಟ್ಟಿ ನಗರದ ಕೆಹೆಚ್‌ಡಿಸಿ ಕಾಲೋನಿ ನಿವಾಸಿ ಪವಿತ್ರಾ ಒಂಟಿ (19) ಹಾಗೂ ಅಸ್ಕಿ ಗ್ರಾಮದ ಕಾರ್ತಿಕ್ ನಾಯಕ್ (19) ಎಂದು ಗುರುತಿಸಲಾಗಿದೆ. ಇವರಿಬ್ಬರಿಗೂ ಕೆಲವು ತಿಂಗಳಿನಿಂದ ಪರಿಚಯ ಇದ್ದು, ಅದು ಪ್ರೇಮ ಸಂಬಂಧವಾಗಿ ಬೆಳದಿತ್ತು ಎನ್ನಲಾಗಿದೆ.

ಮಂಗಳವಾರ ಇವರಿಬ್ಬರ ಮಧ್ಯೆ ಯಾವುದೋ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದಂತೆ ಜಗಳ ಉಂಟಾಗಿತ್ತು. ಜಗಳದ ಬಳಿಕ ಮನನೊಂದು ಪವಿತ್ರಾ ತನ್ನ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕುಟುಂಬದವರು ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ.

ಈ ಘಟನೆ ಕುರಿತು ಮಾಹಿತಿ ಕಾರ್ತಿಕ್‌ಗೆ ತಲುಪುತ್ತಿದ್ದಂತೆಯೇ ಆತ ಆಘಾತಕ್ಕೊಳಗಾಗಿದ್ದಾನೆ. ಪ್ರೇಯಸಿಯ ಸಾವನ್ನು ತಾಳಲಾರದೆ ಮನನೊಂದು ಕಾರ್ತಿಕ್ ಕೂಡ ತನ್ನ ಗ್ರಾಮ ಅಸ್ಕಿಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಇಬ್ಬರ ಸಾವಿನ ನಡುವೆ ಕೆಲವು ಗಂಟೆಗಳಷ್ಟೇ ಅಂತರವಿರುವುದು ಪ್ರಕರಣದ ದುಃಖವನ್ನು ಇನ್ನಷ್ಟು ಗಂಭೀರಗೊಳಿಸಿದೆ.

ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಬನಹಟ್ಟಿ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರಿದಿದೆ.

ಈ ದಾರುಣ ಘಟನೆ ಪ್ರೇಮ ಸಂಬಂಧಗಳಲ್ಲಿ ಉಂಟಾಗುವ ಸಣ್ಣ ವೈಮನಸ್ಸುಗಳು ಎಷ್ಟು ದೊಡ್ಡ ಪರಿಣಾಮ ಬೀರುತ್ತವೆ ಎಂಬುದಕ್ಕೆ ನಿದರ್ಶನವಾಗಿದೆ. ಯುವಕರು ಭಾವನಾತ್ಮಕ ಕ್ಷಣಗಳಲ್ಲಿ ಆತ್ಮಹತ್ಯೆ ಎಂಬ ತಪ್ಪು ನಿರ್ಧಾರ ಕೈಗೊಳ್ಳದೇ, ಸಮಸ್ಯೆಗಳಿಗೆ ಪರಿಹಾರ ಹುಡುಕಬೇಕು ಎಂಬುದು ಸಮಾಜದ ಒತ್ತಾಯವಾಗಿದೆ.

Leave a Reply