HOMENews

ಟಿ.ನರಸೀಪುರದಲ್ಲಿ ಬಲಗೈ ಸಮುದಾಯದ ಒಳಮೀಸಲಾತಿ ವಿರೋಧಿಸಿ ಬೃಹತ್ ಪ್ರತಿಭಟನೆ ರ್ಯಾಲಿ

 

ವರದಿ : ಎಂ. ನಾಗೇಂದ್ರ ಕುಮಾರ್

ಟಿ.ನರಸೀಪುರ : ಜಸ್ಟೀಸ್ ನಾಗಮೋಹನ್ ದಾಸ್ ರವರು ಕಮ್ಯುನಿಸ್ಟರು.ಇವರಿಗೆ ಅಂಬೇಡ್ಕರ್ ವಾದಿಗಳನ್ನು ಕಂಡರೆ ಆಗುವುದಿಲ್ಲ.ಆ ದೃಷ್ಟಿಯಿಂದ ಬಲಗೈ ಸಮುದಾಯದ ಜನಸಂಖ್ಯೆಯನ್ನು ಕಡಿಮೆ ತೋರಿಸಿ ನಮ್ಮನ್ನು ಪ್ರವರ್ಗ ಬಿ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆಂದು ಮುಖಂಡ ಕರೋಹಟ್ಟಿ ಪ್ರಭುಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಶ್ರೀ ಗುಂಜಾನರಸಿಂಹ ಸ್ವಾಮಿ ದೇವಾಲಯದಲ್ಲಿ ಜಮಾಯಿಸಿದ್ದ ಅಪಾರ ಸಂಖ್ಯೆಯ ತಾಲ್ಲೂಕು ಬಲಗೈ ಜಾತಿ ಒಳ ಮೀಸಲಾತಿ ಹೋರಾಟ ಸಮಿತಿ ವತಿಯಿಂದ ಪರಿಶಿಷ್ಟ ಜಾತಿಯ ಬಲಗೈ ಸಮುದಾಯಕ್ಕೆ ಒಳ ಮೀಸಲಾತಿಯಿಂದ ಆಗಿರುವ ಅನ್ಯಾಯವನ್ನು ಖಂಡಿಸಿ ಬೃಹತ್ ಪ್ರತಿಭಟನಾ ರ್ಯಾಲಿಗೆ ಚಾಲನೆ ನೀಡಿ ಮೈಸೂರು – ಕೊಳ್ಳೇಗಾಲ ರಾಷ್ಟ್ರೀಯ ಹೆದ್ದಾರಿ ಮೂಲಕ,ಸರ್ಕಾರಿ ಬಸ್ ನಿಲ್ದಾಣ, ಭಗವಾನ್ ವೃತ್ತ,ಲಿಂಕ್ ರಸ್ತೆ, ಖಾಸಗಿ ಬಸ್ ನಿಲ್ದಾಣದ ಜೋಡಿ ರಸ್ತೆಯ ಮೂಲಕ ವಿದ್ಯೋದಯ ಕಾಲೇಜು ವೃತ್ತದಿಂದ ತಾಲ್ಲೂಕು ಕಚೇರಿಯವರೆವಿಗೂ ನೀಲಿ ಭಾವುಟಗಳನ್ನು ಹಿಡಿದು ಸರ್ಕಾರದ ವಿರುದ್ಧ ದಿಕ್ಕಾರ,ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ಬಂದು ತಾಲ್ಲೂಕು ಕಚೇರಿ ಆವರಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ರವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಂತರ ಮುಖಂಡ ಕರೋಹಟ್ಟಿ ಪ್ರಭುಸ್ವಾಮಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿ ನಾಗಮೋಹನ್ ದಾಸ್ ರವರ ಆಯೋಗವನ್ನು ಸಿದ್ದರಾಮಯ್ಯರವರು ರಚನೆ ಮಾಡಿದಾಗಲೇ ಹಲವಾರು ಮುಖಂಡರು ಸಿದ್ದರಾಮಯ್ಯರವರಿಗೆ ಹೇಳಿದ್ರು ಇವರಿಂದ ಬಲಗೈ ಸಮುದಾಯಕ್ಕೆ ಅನ್ಯಾಯವಾಗುತ್ತೆ ಎಂದು.

ರಾಜ್ಯದ ಮುಖ್ಯಮಂತ್ರಿಗಳು, ಸಮಾಜ ಕಲ್ಯಾಣ ಇಲಾಖೆ ಸಚಿವರು ಸೇರಿದಂತೆ ಬಲಗೈ ಸಂಬಂಧಿತ ಜಾತಿಯ ಸಚಿವರು ಮತ್ತು ಶಾಸಕರುಗಳಿಗೆ ಈ ಸಮಾಜವನ್ನು ಕಂಡರೆ ಹೊಟ್ಟೆಕಿಚ್ಚು ಹಾಗೂ ಅಸಹನೆ ಎಂದು ನೇರವಾಗಿ ಪ್ರಶ್ನೆ ಮಾಡಿ ತಾವೆಲ್ಲಾ ಒಂದು ಸಂದರ್ಭವನ್ನು ಜ್ಞಾಪಿಸಿಕೊಳ್ಳಿ ಇಡೀ ಬಲಗೈ ಸಮುದಾಯದ ಎಲ್ಲಾ ಪ್ರಗತಿಪರ ಮುಖಂಡರುಗಳು ನಿಮಗೋಸ್ಕರ ಬಿಸಿಲಲ್ಲಿ ಊರೂರು ಸುತ್ತಿ ಓಟು ಹಾಕಿಸಿ ಗೆಲ್ಲಿಸಿದಕ್ಕೆ ನೀಡುತ್ತಿರುವ ಪ್ರತಿಫಲವೇ ಸ್ವಾಮಿ ಎಂದು ಅಸಹನೆ ವ್ಯಕ್ತಪಡಿಸಿದರು.

ಈ ವರ್ಗೀಕರಣ ಅವೈಜ್ಞಾನಿಕ ಎಂದು ವಿರೋಧ ಬಂದ ಹಿನ್ನೆಲೆ ಸರ್ಕಾರವು ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಂಡು ಐದು ಗುಂಪುಗಳನ್ನು ಮೂರು ಗುಂಪುಗಳಾಗಿ ಪ್ರವರ್ಗ-ಎ, ಪ್ರವರ್ಗ-ಬಿ, ಪ್ರವರ್ಗ-ಸಿ ಎಂದು ವಿಂಗಡಿಸಿ 6:6:5ರ ಅನುಪಾತದಲ್ಲಿ ಒಳಮೀಸಲಾತಿ ನೀಡಲು ಮುಂದಾಗಿ ಬೆಳಗಾವಿ ಅಧಿವೇಶನದಲ್ಲಿ ಮಸೂದೆ ಪಾಸ್ ಮಾಡಿ ರಾಜ್ಯಪಾಲರ ಅಂತತಕ್ಕೆ ಕಳುಹಿಸಿತು. ಇದರಲ್ಲಿನ ಗೊಂದಲ ಮತ್ತು ರಾಜ್ಯ ಉಚ್ಚ ನ್ಯಾಯಾಲಯದಲ್ಲಿನ ಪ್ರಕರಣ ಎರಡನ್ನೂ ಗಮನಿಸಿ ರಾಜ್ಯಪಾಲರು ಈ ಮಸೂದೆಗೆ ಸಹಿ ಮಾಡದೇ ಹಾಗಿಯೇ ಉಳಿಸಿದ್ದರು ಇದರ ನಡುವೆ ಸರ್ಕಾರವು ರೋಸ್ಟರ್ ಬಂದುವನ್ನು ಸಿದ್ಧಪಡಿಸಿ ಆದೇಶ ಹೊರಡಿಸಿತು ಈ ರೋಸ್ಟರ್ ಬಿಂದುವಿನಲ್ಲಿ ಪರಿಶಿಷ್ಟರ ಬಲಗೈ ಸಂಬಂಧಿತ ಜಾತಿಗಳ ಪ್ರವರ್ಗ-ಬಿ 9ನೇ ಸ್ಥಾನಕ್ಕೆ ಹಾಗೂ ಪ್ರವರ್ಗ-ಸಿ ಯನ್ನು 15ನೇ ಸ್ನಾನಕ್ಕೆ ಕಳುಹಿಸುವ ಮೂಲಕ ಈ ಎರಡೂ ವರ್ಗಗಳನ್ನು ಮೀಸಲಾತಿ ಪ್ರಕ್ರಿಯೇಯಿಂದಲೇ ಹೊರಗಿಡುವ ಹುನ್ನಾರವನ್ನು ಈ ಸರ್ಕಾರ ಕೈಗೊಂಡಿರುವುದು ದುರಾದೃಷ್ಟಕರ ವಿಷಯವಾಗಿದೆ. ಆದುದರಿಂದ ಈ ಒಳಮೀಸಲಾತಿ ವರ್ಗೀಕರಣದಲ್ಲಿ ಪರಿಶಿಷ್ಟಜಾತಿ ಬಲಗೈ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಈ ಕೂಡಲೇ ಸರಿಪಡಿಸಬೇಕು ಧೃಢೀಕರಣಪತಗಳನ್ನು ಹಿಂದಿನ ಮಾದರಿಯಲ್ಲಿಯೇ ನೀಡಬೇಕೆಂದು ಬಲಗೈ ಸಮುದಾಯದ ಒಳ ಮೀಸಲಾತಿ ಇದನ್ನು ಸರಿಪಡಿಸುವ ತನಕ ಒಳಮೀಸಲಾತಿಯನ್ನು ಜಾರಿಗೊಳಿಸಬಾರದೆಂದು ಒತ್ತಾಯಿಸಿದರು.

ಮಾನಸ ಗಂಗೋತ್ರಿಯ ಮೈಕ್ರೋಬಯಾಲಜಿ ಅತಿಥಿ ಉಪನ್ಯಾಸಕರಾದ ಕೊಳತ್ತೂರು ರಮೇಶ್ ಮಾತನಾಡಿ ಒಳ ಮೀಸಲಾತಿ ವೈಜ್ಞಾನಿಕವಾಗಿ ಇದ್ದಿದ್ದರೆ ಜಾರಿ ಮಾಡಬಹುದಿತ್ತು.ಜನಗಣತಿಯ ಸಮೀಕ್ಷೆಯೇ ಸರಿಯಾಗಿ ನಡೆದಿಲ್ಲ.ಇದರ ಬಗ್ಗೆ ಮುಖ್ಯಮಂತ್ರಿಗಳ ಬಳಿಯೇ ಖುದ್ದಾಗಿ ನಾವು ಮಾತನಾಡಿದಾಗ ಏಯ್ ನನ್ನತ್ರ ಏನಯ್ಯಾ ಇದೆ ಮಹದೇವಪ್ಪ,ಮುನಿಯಪ್ಪ ಏನ್ ತಗೊಂಡ್ ಬರ್ತಾರೆ ಅದಕ್ಕೆ ಸಹಿ ಹಾಕ್ತೀನಿ ಅಂದ್ರು.ಬಲಗೈ ಸಮುದಾಯಕ್ಕೆ ಒಳ್ಳೇದ್ ಮಾಡಿದ್ರೆ ಹೊತ್ಕೊಂಡ್ ಮೆರಿತರೆ,ಕೆಟ್ಟದ್ ಮಾಡಿದ್ರೆ ಏನ್ಬೇಕಾದ್ರು ಮಾಡ್ತರೆ ಎಚ್ಚರವಿರಲಿ ಎಂದು ಹೇಳುತ್ತಾ ನಮಗಾಗಿರುವ ಅನ್ಯಾಯವನ್ನು ಸರಿಪಡಿಸದಿದ್ದರೆ ವಿಧಾನಸೌಧದ ಮುಂದೆಯೇ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

 

ಕಾಲೇಜು ವಿದ್ಯಾರ್ಥಿಗಳ ಮೇಲೆ ಸರ್ಕಾರ ಎಫ್.ಐ.ಆರ್ ಹಾಕಿರುವುದನ್ನು ಕೂಡಲೇ ವಾಪಸ್ಸು ಪಡೆಯಿರಿ.ಬಲಗೈ ಸಮುದಾಯದ ಸಚಿವರು ಮೀಸಲಾತಿ ವಿರುದ್ಧ ಧ್ವನಿ ಎತ್ತುತ್ತಿಲ್ಲ ಯಾಕೆ…ಮಹದೇವಪ್ಪನವರೇ ವಂಶಪಾರಂಪರ್ಯ ರಾಜಕಾರಣ ಮಾಡಿಕೊಂಡು ಬರ್ತಿದ್ದೀರಿ.ಮುಂದೆ ನಿಮ್ಮ ಮೊಮ್ಮಕ್ಕಳು ಬರ್ತಾರೆ ಅವ್ರಿಗೂ ಓಟ್ ಹಾಕ್ತೀವಿ ಎಂದು ವ್ಯಂಗ್ಯ.

 

 

ಸೋಸಲೆ ಶಿವಕುಮಾರ್

ಮುಖಂಡ ಮೀಸಲಾತಿ ಜಾರಿ ಮಾಡುವುದು ಸಮಾಜ ಕಲ್ಯಾಣ ಇಲಾಖೆಯಲ್ಲಿ. ಅದರ ಮಿನಿಸ್ಟರ್ ಯಾರು ಮಹದೇವಪ್ಪ.ಮಹದೇವಪ್ಪ ಸಹಿ ಮಾಡದಿದ್ದರೆ ಕಡತ ಮುಂದಕ್ಕೆ ಹೋಗುತ್ತಾ…ಮಹದೇವಪ್ಪರಿಗೆ ಬಲಗೈ, ಎಡಗೈ ಇತರೆ ಎಲ್ಲಾ ಜಾತಿಯ ಓಟು ಬೇಕು ಗೆದ್ದುಕೊಂಡು ರಾಜಕೀಯ ಅಧಿಕಾರ ಹಿಡಿದುಕೊಂಡು ಮಗನನ್ನ ಮಿನಿಸ್ಟರ್ ಮಾಡಿಕೊಂಡು ಓಡಾಡ್ಬೇಕು.ಸಮುದಾಯ ಏನಾದ್ರು ಆಗ್ಲಿ ವಿಧಾನಸೌಧದಲ್ಲಿ ಆರಾಮಾಗಿ ಇದ್ಕೊಂಡ್ ಬಿಡೋಣ ಅಂತ ಪಣ ತೊಟ್ಟಿದ್ದೀರಿ ಅನ್ಸುತ್ತೆ ಯಾವುದೇ ಕಾರಣಕ್ಕೂ ಬಲಗೈ ಸಮುದಾಯ ನಿಮ್ಮನ್ನು ಹಾಗೂ ನಿಮ್ಮ ರಾಜಕೀಯ ಅಸ್ತಿತ್ವವನ್ನು ಬುಡಮೇಲು ಮಾಡೇ ಮಾಡ್ತಾರೆ.

ಸೋಸಲೆ ಶಿವಕುಮಾರ್ ಮುಖಂಡ ಮೈಸೂರಿನಲ್ಲಿ ವರದಿಗಾರರೊಬ್ಬರು ಒಳ ಮೀಸಲಾತಿ ಬಗ್ಗೆ ಚರ್ಚೆ,ಹೋರಾಟಗಳು ನಡೆಯುತ್ತಿದ್ದು ಬಲಗೈ ಸಮುದಾಯದ ವಿದ್ಯಾರ್ಥಿಗಳು ಬೀದಿಯಲ್ಲಿ ನಿಂತಿದ್ದಾರೆಂದು ಮುಖ್ಯಮಂತ್ರಿಗಳನ್ನ ಪ್ರಶ್ನೆ ಮಾಡ್ದಾಗ ಎಂತ ಲೇವಡಿ ಮಾಡಿ ಮಾತಾಡ್ತರೆ ಅಂದ್ರೆ ನೀನೊಬ್ನೆ ಕೇಳಿದ್ರೆ ಹೇಳಕ್ಕಾಗಲ್ಲ ಎಂದು ಮುಂದಕ್ಕೆ ಹೋಗ್ತಾರೆ.ಸಿದ್ರಾಮಯ್ಯನವರೆ ವಿದ್ಯಾರ್ಥಿಗಳು ಓಟಾಕಿಲ್ವಾ ನಿಮ್ಗೆ.ನಾನೂ ದಲಿತ ಸಿಎಂ ಎಂದೇಳುತ್ತೀರಿ ನಮಗೆ ಅನ್ಯಾಯವಾದಾಗ ನಿಮ್ಮಿಂದ ನ್ಯಾಯ ನಿರೀಕ್ಷೆ ಮಾಡುವುದು ತಪ್ಪಾ…?

ಕೊಳತ್ತೂರು ರಮೇಶ್

ಅತಿಥಿ ಉಪನ್ಯಾಸಕರು ಮೈಕ್ರೋಬಯಾಲಜಿ

ಮಾನಸ ಗಂಗೋತ್ರಿ ಮೈಸೂರು

ಈ ಸಂದರ್ಭದಲ್ಲಿ ಲಿಂಗಪ್ಪಾಜಿ,ಡಾ. ಆಲಗೂಡು ಚಂದ್ರಶೇಖರ್, ಬಸವರಾಜು,ಸೋಸಲೆ  ಮಹದೇವಸ್ವಾಮಿ,ರಾಜಶೇಖರ್,ರಾಜಣ್ಣ,ಕುಕ್ಕೂರು ರಾಜು,ವಕೀಲರಾದ ರಾಜಣ್ಣ,ಸಾಮ್ರಾಟ್ ಸುಂದರೇಷನ್,ಬನ್ನಳ್ಳಿ ಪುಟ್ಟಸ್ವಾಮಿ,ಹಸುವಟ್ಟಿ ಸಂಭ್ರಮ್,ಆಲಗೂಡು ಮಂಜು,ಉಮಾಪತಿ,ಸೋಸಲೆ ಮಂಜು,ಕೇಶವಮೂರ್ತಿ,ವಾಟಾಳು ನಾಗರಾಜು,ಮಹದೇವಮ್ಮ,ರೇಣುಕಾ ಸೇರಿದಂತೆ ಇತರರಿದ್ದರು.

 

 

Leave a Reply