HOMEFilm News

ಪವಿತ್ರ ಪ್ರೊಡಕ್ಷನ್ ನ ಹೈಕ್ಳು ಕಿಚ್ಚು ಚಲನಚಿತ್ರದ ಮುಹೂರ್ತಕ್ಕೆ ಚಾಲನೆ

ವರದಿ: ರವಿಚಂದ್ರ ಬೂದಿತಿಟ್ಟು

ಪಿರಿಯಾಪಟ್ಟಣ :- ಪಿರಿಯಾಪಟ್ಟಣದ ಯುವ ಕಲಾವಿದ ನವೀನ್ ರಾಜ್ ಅಭಿನಯದ ಪವಿತ್ರ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಹೈಕ್ಲು ಕಿಚ್ಚು ಚಲನಚಿತ್ರದ ಮುಹೂರ್ತ ಪಿರಿಯಾಪಟ್ಟಣದ ಗ್ರಾಮ ದೇವತೆ ಮಸಣಿಕಮ್ಮ ದೇವಸ್ಥಾನದ ಆವರಣದಲ್ಲಿ ಮೈಮೂಲ್ ಮಾಜಿ ಅಧ್ಯಕ್ಷ ಪಿ.ಎಂ.ಪ್ರಸನ್ನ ಕ್ಲಾಪ್ ಮಾಡುವುದರ ಮೂಲಕ ಮುಹೂರ್ತಕ್ಕೆ ಚಾಲನೆ ನೀಡಿದರು

ನಂತರ ಮಾತನಾಡಿದ ಅವರು ಮಕ್ಕಳು ಮನಸು ಮಾಡಿ ರೊಚ್ಚಿಗೆದ್ದರೆ ವಯಸ್ಸಿನ ವಯೋಮಿತಿ ಇಲ್ಲದೆ ಯಾವುದೇ ಕಾರ್ಯವನ್ನು ಸಾಧಿಸಬಹುದು ಎಂಬ ಗ್ರಾಮೀಣ  ಸೊಗಡಿನ ಚಿತ್ರಕಥೆ ಇದಾಗಿದ್ದು ಪಟ್ಟಣದ ಯುವ ಪ್ರತಿಭೆ ನವೀನ್ ರಾಜ್ ಅಭಿನಯಿಸುತ್ತಿದ್ದು ತಾಲೂಕಿನ ಜನತೆ ಇಂತಹ ಪ್ರತಿಭೆಯನ್ನು ಗುರುತಿಸುವುದರ ಮೂಲಕ ಪ್ರೋತ್ಸಾಹಿಸಬೇಕೆಂದು ಕರೆ ನೀಡಿದರು

ಇದೆ ಸಂದರ್ಭದಲ್ಲಿ ಮಾತನಾಡಿದ ಉದ್ಯಮಿ ಎನ್ ಎಲ್ ಗಿರೀಶ್ ಪಿರಿಯಾಪಟ್ಟಣ ತಾಲೂಕು ಹೆಸರಾಂತ ಚಲನಚಿತ್ರ ನಿರ್ದೇಶಕ ಪುಟ್ಟಣ್ಣ ಕಣಗಾಲ್ ನ ತವರೂರಾಗಿದ್ದು ಈ ತವರಿನಲ್ಲಿ ಈ ಪಟ್ಟಣದ ಯುವ ಪ್ರತಿಭೆಯೊಂದು ಚಲನಚಿತ್ರ ರಂಗಕ್ಕೆ ಬರುತ್ತಿರುವುದು ನಮ್ಮೆಲ್ಲರ ಹೆಮ್ಮೆಯ ಸಂಗತಿ ಆದಷ್ಟು ಬೇಗ ಈ ಚಿತ್ರ ಯಶಸ್ವಿಯಾಗಿ ಮುನ್ನಡೆ ಸಾಧಿಸಿ ಆದಷ್ಟು ಬೇಗ ತೆರೆಗೆ ಬರಲಿ ಎಂದು  ಹಾರೈಸಿದರು ನಾಯಕ ನಟ ನವೀನ್ ರಾಜ್ ಮಾತನಾಡಿ ನಾನು ನಿಮ್ಮ ಊರಿನ ಮಗ ನಾನು ಈಗಾಗಲೇ ಕಾವೇರಿ ತೀರದ ಚರಿತ್ರೆ ಹಾಗೂ ಐಪಿಸಿ ಸೆಕ್ಷನ್ ಚಿತ್ರದಲ್ಲಿ ನಾಯಕ ನಟನಾಗಿ “”ರೂ” ಎಂಬ ಚಿತ್ರದಲ್ಲಿ ವಿಲನ್ ಆಗಿ ನಟಿಸಿದ್ದು ಇದು ನನ್ನ ನಾಲ್ಕನೇ ಅಭಿನಯದ ಚಿತ್ರ ಚಿತ್ರವನ್ನು ಚಲನಚಿತ್ರ ಮಂದಿರದಲ್ಲಿ ವೀಕ್ಷಿಸುವುದರ ಮೂಲಕ ನಮ್ಮ ತಾಲೂಕಿನ ಜನತೆ ನನ್ನನ್ನು ಪ್ರೋತ್ಸಾಹಿಸಬೇಕೆಂದು ಮನವಿ ಮಾಡಿದರು

ನಾಯಕ ನಟಿಯಾಗಿ ದೀಕ್ಷಾ  ನಟಿಸುತ್ತಿದ್ದು ಕಾಂತಾರ  ಚಿತ್ರದಲ್ಲಿ ನಟಿಸಿದ್ದ ಕಲಾವಿದ ಪ್ರವೀಣ್ ಪೂಜಾರಿ ನಾರಾಯಣಸ್ವಾಮಿ ನಾಯ್ಡು ಸೇರಿದಂತೆ ಹಲವು ಬಹುಮುಖ ಪ್ರತಿಭೆಯುಳ್ಳ  ಕಲಾವಿದರು ನಟಿಸುತ್ತಿರುವ ಈ

ಈ ಚಿತ್ರವನ್ನು  ಪಿರಿಯಾಪಟ್ಟಣದವರೆ ಆದ ಏನ್.ಡಿ.ಪುಟ್ಟರಾಜರವರು ನಿರ್ಮಾಪಕ ರಾಗಿ ನಿರ್ಮಿಸುತ್ತಿದ್ದು ಚಿತ್ರಕಥೆ ನಿರ್ದೇಶನವನ್ನು ಅಂಬಾರಿ ಪರಮೇಶ್ ರವರು ನಿರ್ದೇಶಿಸುತ್ತಿದ್ದು ಛಾಯಾಗ್ರಹಣ ಮುಂಜ

Leave a Reply