
ಬ್ಯಾನರ್–ಫ್ಲೆಕ್ಸ್‌ಗಳಿಂದ ಕಂಗೊಳಿಸಿದ ಕೆ.ಆರ್.ನಗರ: ನಿಖಿಲ್‌ಗೆ ಭರ್ಜರಿ ಬರಮಾಡಿಕೆ
ವರದಿ :-ವಡ್ಡರಕೊಪ್ಪಲು ಶಿವರಾಮು.
ಕೆ ಆರ್ ನಗರ. ಫೆ. 22:- ರಾಜ್ಯ ಜೆಡಿಎಸ್ ಯುವ ನಾಯಕ ಚಿತ್ರನಟ ನಿಖಿಲ್ ಕುಮಾರಸ್ವಾಮಿಯವರನ್ನು ಕೆ ಆರ್ ನಗರ ವಿಧಾನಸಭಾ ಕ್ಷೇತ್ರದ ಜನನಾಯಕ ಮಾಜಿ ಸಚಿವ ಸಾರಾ ಮಹೇಶ್ ಅವರ ನೇತೃತ್ವದಲ್ಲಿ ಅತ್ಯಂತ ಸಡಗರ ಸಂಭ್ರಮದಿಂದ ಅದ್ದೂರಿಯಾಗಿ ಮೆರವಣಿಗೆಯಲ್ಲಿ ಜನರೊಂದಿಗೆ ಜನತಾದಳ ಕಾರ್ಯಕ್ರಮ ನಡೆಯುತ್ತಿದ್ದ ರೇಡಿಯೋ ಮೈದಾನಕ್ಕೆ ವಿವಿಧ ಜಯಗೂಷಗಳೊಂದಿಗೆ ಕರೆತರಲಾಯಿತು.
ಪಟ್ಟಣದಲ್ಲಿ ಮೂರ್ನಾಲ್ಕು ದಿನಗಳಿಂದ ಜೆಡಿಎಸ್ ಪಕ್ಷದ ಅಧ್ಯಕ್ಷರೂ ಪದಾಧಿಕಾರಿಗಳು ತಮ್ಮ ಮನೆಯಲ್ಲಿ ಹಬ್ಬ ಆಚರಿಸುವಂತೆ ಮೈಸೂರು ಹಾಸನ ರಸ್ತೆ ಚಂದ್ರಮೌಳೇಶ್ವರ ರಸ್ತೆ ಬಜಾರ್ ರಸ್ತೆ ಸೇವೆಂತ್ ರಸ್ತೆ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಬ್ಯಾನರ್ ಫ್ಲಕ್ಸ್ ಗಳನ್ನು ಕಟ್ಟುವ ಮೂಲಕ ಆರ್ ನಗರ ವಿಧಾನಸಭಾ ಕ್ಷೇತ್ರ ಜೆಡಿಎಸ್ ಪಕ್ಷದ ತವರು ಕ್ಷೇತ್ರ ಇಲ್ಲಿ ನಮ್ಮದೇ ಎಂದು ತೋರಿಸುವಂತೆ ತಯಾರಿ ಮಾಡಿದ್ದು ಎದ್ದು ಕಾಣುತ್ತಿತ್ತು.

ಜೆಡಿಎಸ್ ಕಾರ್ಯಕರ್ತರಿಂದ ಮನೆ ಮನೆ ಭೇಟಿ
ಜೆಡಿಎಸ್ ಪಕ್ಷದ ಹಿರಿಯ ಮುಖಂಡರು ಯುವಕರು ಯುವ ನಾಯಕನ ಅದ್ದೂರಿ ಸ್ವಾಗತಕ್ಕೆ ಪಟ್ಟಣದ 23 ವಾರ್ಡುಗಳಲ್ಲಿಯೂ ಪ್ರತಿ ಮನೆ ಮನೆಗೆ ತೆರಳಿ ರಾಜ್ಯದ ಜೆಡಿಎಸ್ ಪಕ್ಷದ ಉತ್ತರಾಧಿಕಾರಿಯ ಮತ್ತು ಮುಂದಿನ ಬಾವಿ ಶಾಸಕರು ಭಾವಿ ಸಚಿವರನ್ನು ಅತ್ಯಂತ ಅಭಿಮಾನದಿಂದ ಬರಮಾಡಿಕೊಳ್ಳುವ ಮೂಲಕ ಜನರೊಂದಿಗೆ ಜನತಾದಳ ಎಂಬ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಆಗಮಿಸುವಂತೆ ತಂಡೋಪ ತಂಡವಾಗಿ ಮನವಿ ಮಾಡುತ್ತಿದ್ದ ದೃಶ್ಯಗಳು ಜನರ ಕಣ್ಣು ಕುಕ್ಕುವಂತಿತ್ತು.

ಕಾರ್ಯಕ್ರಮಕ್ಕೆ ಬರುವ ಜೆಡಿಎಸ್ ಕಾರ್ಯಕರ್ತರಿಗೆ ಸ್ವಾಗತ ಕೋರಿದ ಪಟ್ಟಣದ ಪ್ರಮುಖರು
ಸಾಲಿಗ್ರಾಮ ತಾಲೂಕಿನ ಗಡಿಭಾಗದಿಂದ ಕೆ ಆರ್ ನಗರ ಪಟ್ಟಣಕ್ಕೆ ಬರುತ್ತಿದ್ದ ಜೆಡಿಎಸ್ ಕಾರ್ಯಕರ್ತರು ಮುಖಂಡರನ್ನು ರಸ್ತೆ ಮಧ್ಯದಲ್ಲಿ ನಿಂತು ಸ್ವಾಗತ ಕೋರುವ ಜೊತೆಗೆ ಬಂದಂತ ಕಾರ್ಯಕರ್ತರನ್ನು ತಮ್ಮ ಮನೆಗೆ ಆಗಮಿಸುವ ಬಂಧುಗಳು ಮತ್ತು ನೆಂಟರನ್ನು ಸಂತೈಸುವಂತೆ ಅವರಿಗೆ ಊಟೋಪಚಾರ ನೀರು ಟೀ ಕಾಫಿ ಜ್ಯೂಸ್ ಕೊಡಿಸುವ ಜೊತೆಗೆ ಕಾರ್ಯಕ್ರಮ ನಡೆಯುವ ವೇದಿಕೆಗೆ ಕರೆತರುವ ಮೂಲಕ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರ ಔಧರ್ಯ ಮತ್ತು ಸೇವೆಯನ್ನು ಮನತುಂಬಿ ಹೊಗಳುತ್ತಿದ್ದ ಕ್ಷಣಗಳು ಎದ್ದು ಕಾಣುತ್ತಿದ್ದವು.




