ಕಾಂಗ್ರೆಸ್ ಸರ್ಕಾರಕ್ಕೆ ನಿಖಿಲ್ ಕುಮಾರಸ್ವಾಮಿ ಸವಾಲ್: ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲಿ, ಜೆಡಿಎಸ್ ತಾಕತ್ ತೋರಿಸುತ್ತೇವೆ

ವರದಿ :-ವಡ್ಡರಕೊಪ್ಪಲು ಶಿವರಾಮು.
ಕೆ ಆರ್ ನಗರ. ಫೆ. 22:- ಕಾಂಗ್ರೆಸ್ ಪಕ್ಷಕ್ಕೆ ಕಾಂಗ್ರೆಸ್ ಸರ್ಕಾರಕ್ಕೆ ದಮ್ಮು ತಾಕತ್ತಿದ್ದರೆ ಗ್ರಾಮ ಪಂಚಾಯಿತಿ ತಾಲೂಕ್ ಮತ್ತು ಜಿಲ್ಲಾ ಪಂಚಾಯಿತಿ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ನಡೆಸಲಿ ಆಗ ನಮ್ಮ ತಾಕತ್ ಏನು ಎಂಬುದನ್ನು ತೋರಿಸುತ್ತೇವೆ ಎಂದು ಬಹಿರಂಗವಾಗಿ ಕಾಂಗ್ರೆಸ್ ಸರ್ಕಾರಕ್ಕೆ ಯುವ ಜೆಡಿಎಸ್ ಅಧ್ಯಕ್ಷ ಚಿತ್ರನಟ ನಿಖಿಲ್ ಕುಮಾರಸ್ವಾಮಿ ಸವಾಲ್ ಎಸೆದರು. ಸಾರ್ವಜನಿಕರ ತೆರಿಗೆಯ ಹಣವನ್ನು ಲೂಟಿ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ಜೆಡಿಎಸ್ ಪಕ್ಷ ಮತ್ತು ಜೆಡಿಎಸ್ ವರಿಷ್ಠರನ್ನು ಟೀಕಿಸುವ ನೈತಿಕತೆ ಉಳಿಸಿಕೊಂಡಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.
ಅವರು ಪಟ್ಟಣದ ರೇಡಿಯೋ ಮೈದಾನದಲ್ಲಿ ಜನರೊಂದಿಗೆ ಜನತಾದಳ ಮತ್ತು ಸದಸ್ಯತ್ವ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಜೆಡಿಎಸ್ ಪಕ್ಷ ಈಗ 18 ಸ್ಥಾನಗಳಿಸಿದ್ದು ಮುಂದೆ ಎಂಟು ಒಂಬತ್ತು ಸ್ಥಾನ ಗಳಿಸುತ್ತದೆ ಎಂಬ ಹೇಳಿಕೆಯನ್ನು ನೀಡುತ್ತಿರುವ ಕಾಂಗ್ರೆಸ್ ಪಕ್ಷ ರಾಷ್ಟ್ರದಲ್ಲಿ ಎಷ್ಟು ರಾಜ್ಯದಲ್ಲಿ ನಿಮ್ಮ ಪಕ್ಷ ಆಡಳಿತವಿದೆ ಹೇಳಿ ಎಂದ ಅವರು ಮೂರು ರಾಜ್ಯದಲ್ಲಿರುವ ನಿಮ್ಮ ಪಕ್ಷ ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಪಕ್ಷ ಹೋಗಿ ರಾಜ್ಯ ಪಕ್ಷವಾಗಲಿದೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ನಮ್ಮ ಜೆಡಿಎಸ್ ಪಕ್ಷದ ವರಿಷ್ಠರು ಪರಮಪೂಜ್ಯ ಎಚ್ ಡಿ ದೇವೇಗೌಡರು ಆದರೆ ಈ ರಾಜ್ಯದ ಪ್ರಭಾವಿ ನಾಯಕರು ರಾಷ್ಟ್ರದ ಕಾಂಗ್ರೆಸ್ ಅಧ್ಯಕ್ಷರು ಅದ ಮಲ್ಲಿಕಾರ್ಜುನ ಖರ್ಗೆಯವರು ಮಾಧ್ಯಮ ಮಿತ್ರರ ಪ್ರಶ್ನೆಗೆ ಮುಖ್ಯಮಂತ್ರಿ ಬದಲಾವಣೆ ಯಾವಾಗ ಎಂದು ಕೇಳಿದ್ದಕ್ಕೆ ವರಿಷ್ಠರ ಗಮನಕ್ಕೆ ತಂದು ಹೇಳುತ್ತೇನೆ ಎಂದು ಹೇಳುವ ಇವರು ನಮ್ಮ ಜೆಡಿಎಸ್ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ ಎಂದು ಪ್ರಶ್ನಿಸಿದರು.
ಕೇಂದ್ರ ಸಚಿವರು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಅಧಿಕಾರ ಅವಧಿಯಲ್ಲಿ ಅಧಿಕಾರ ಹೋಗುವಾಗ ತಮ್ಮ ಸಮುದಾಯ ಮತ್ತು ಇತರ ವರ್ಗವನ್ನು ಬಳಸಿಕೊಳ್ಳಲಿಲ್ಲ ಆದರೆ ಈಗಿನ ನಾಯಕರು ನನ್ನ ಅಧಿಕಾರವನ್ನು ಕಿತ್ತುಕೊಳ್ಳುತ್ತಿದ್ದಾರೆ ಅಹಿಂದ ವರ್ಗದ ನಾಯಕ ಅಧಿಕಾರದಲ್ಲಿರಲು ಬಿಡುತ್ತಿಲ್ಲ ಎಂದು ಹೇಳುವಂತ ಕೀಳು ಮಟ್ಟದ ರಾಜಕಾರಣವನ್ನು ಎಂದೂ ಕೂಡ ದೇವೇಗೌಡರ ಕುಟುಂಬ ಮಾಡಲಿಲ್ಲ ಎಂದು ಪರೋಕ್ಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ವಾಗ್ದಾಳಿ ನಡೆಸಿದರು.

ಹಿಂದೆ ಐದು ವರ್ಷ ಈಗ ಮೂರು ವರ್ಷ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯನವರು ಏಳು ಲಕ್ಷದ ಅರವತ್ತು ಕೋಟಿ ಸಾಲ ಮಾಡಿ ಈ ರಾಜ್ಯದ ಜನರ ಮೇಲೆ ಸಾಲದ ಹೊರೆಯನ್ನು ಹೊರಿಸುವುದಲ್ಲದೆ ಸಾಲಗಾರ ಸರ್ಕಾರ ಎಂಬ ಬಿರುದಿನೊಂದಿಗೆ ಅಭಿವೃದ್ಧಿ ಮಾಡದೆ ಅಧಿಕಾರದ ತಿಕ್ಕಾಟದಲ್ಲಿ ಕಾಲ ಕಳೆಯುತ್ತಿದೆ ಎಂದು ಟೀಕಿಸಿದರು.
ರಾಜ್ಯದಲ್ಲಿ 50 ವರ್ಷಗಳ ಸುವರ್ಣ ಮಹೋತ್ಸವವನ್ನು ಆಚರಿಸುವ ಪತ್ರಿಕ ರಂಗಕ್ಕೆ ನಿರ್ಬಂಧ ಹೇರುವ ತೀರ್ಮಾನ ಮಾಡಿರುವ ಈ ಸರ್ಕಾರ ಹಿಂದೆ ಯಾವುದೇ ಸರ್ಕಾರ ತೆಗೆದುಕೊಳ್ಳದ ವಿಧಾನಸಭೆಯಲ್ಲಿ ಪತ್ರಿಕಾ ಮಾಧ್ಯಮದವರಿಗೆ ನಿರ್ಬಂಧ ಹೇರಿ ಮಾಧ್ಯಮದವರು ಕರಾಳ ದಿನವನ್ನಾಗಿ ಆಚರಿಸುವ ಸ್ಥಿತಿಗೆ ಬಂದಿರುವ ಈ ಸರ್ಕಾರ ತಮ್ಮ ಭ್ರಷ್ಟಾಚಾರ ಮತ್ತು ವಿಧಾನಸಭೆಯಲ್ಲಿ ತಮ್ಮ ಸರ್ಕಾರದ ವಿರುದ್ಧ ಪ್ರಚಾರ ಮಾಡಬಾರದೆಂದು ಇಂತಹ ನಿರ್ಣಯವನ್ನು ಕೈಗೊಂಡ ಭ್ರಷ್ಟ ಕಾಂಗ್ರೆಸ್ ಸರ್ಕಾರ ಹಿಂದೆ 30 40 ಪರ್ಸೆಂಟ್ ಕಮಿಷನ್ ಎಂದು ಹೇಳುತ್ತಿದ್ದ ಈ ಸರ್ಕಾರ 50 60% ಕಮಿಷನ್ ಗೆ ಇಳಿದಿದೆ ಎಂದು ಟೀಕಿಸಿದರು.
ಹಳೆ ಮೈಸೂರು ಪ್ರಾಂತ್ಯಕ್ಕೆ ಮೀಸಲಾಗದೆ ರಾಜ್ಯ ವ್ಯಾಪ್ತಿ ಸಂಚರಿಸಿ ರೈತರಿಗಾಗಿ ಬಡವರಿಗಾಗಿ ಸ್ಥಾಪನೆ ಮಾಡಿದ ಜೆಡಿಎಸ್ ಪಕ್ಷವನ್ನು ಕಟ್ಟುವ ಜೊತೆಗೆ ಅಧಿಕಾರಕ್ಕೆ ತರಲು ಆಯಾಯ ಭಾಗದಲ್ಲಿ ಸಮಾವೇಶಗಳನ್ನು ಮಾಡುವ ಜೊತೆಗೆ ಕಾಲ್ನಡಿಗೆ ಜಾತವನ್ನು ಹಮ್ಮಿಕೊಳ್ಳುವ ಮೂಲಕ 2028ಕ್ಕೆ ಕರ್ನಾಟಕ ರಾಜ್ಯದಲ್ಲಿ ಸಮಿಶ್ರ ಸರ್ಕಾರವನ್ನು ಆಡಳಿತಕ್ಕೆ ತಂದು ಜನತಾದಳದ ನಾಯಕರದ ಕುಮಾರಣ್ಣನವರ ನೇತೃತ್ವದಲ್ಲಿ ಸರ್ಕಾರ ರಚನೆ ಮಾಡಲಿದ್ದೇವೆ ಎಂದು ತಿಳಿಸಿದರು.
ಕಾರ್ಯಕ್ರಮದ ಕೇಂದ್ರ ಬಿಂದು ಮಾಜಿ ಸಚಿವ ಸಾರಾ ಮಹೇಶ್ ಅವರು ಮಾತನಾಡಿ ಈ ರಾಜ್ಯದಲ್ಲಿ ಅಧಿಕಾರದಲ್ಲಿ ಇರುವ ಕಾಂಗ್ರೆಸ್ ಸರ್ಕಾರ ವರ್ಗಾವಣೆ ಸೇರಿದಂತೆ ಭ್ರಷ್ಟಾಚಾರದಲ್ಲಿ ತೊಡಗಿದ್ದು ಅಧಿಕಾರಕ್ಕಾಗಿ ಹೋರಾಟ ಮಾಡುತ್ತಿದ್ದು ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ ಆದ್ದರಿಂದ ಮುಂಬರುವ ದಿನಗಳಲ್ಲಿ ಪಕ್ಷ ಸಂಘಟನೆ ಮಾಡುವ ಮೂಲಕ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತನ್ನಿ ಎಂದು ಕರೆ ನೀಡಿದರು.
ಕೆ ಆರ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ನಾನು ತಂದ ಅಭಿವೃದ್ಧಿ ಕಾರ್ಯಗಳೆ ಬಣ್ಣ ಹೊಡಿಸಲಾರದ ಈಗಿನ ಶಾಸಕರು ಕಳಪೆ ಕಾಮಗಾರಿ ಮಾಡಿರುವ ಬಗ್ಗೆ ಗ್ರಾಮದ ಸಾರ್ವಜನಿಕರು ಪ್ರತಿಭಟನೆ ಮಾಡಿ ಹೋರಾಟ ಮಾಡಿದರೆ ಇವರು ಬೆಳಿಗ್ಗೆ ಕಾಮಗಾರಿ ಕಳಪೆಯಾಗಿಲ್ಲ ಎಂಬ ಸರ್ಟಿಫಿಕೇಟ್ ಅನ್ನು ಗುತ್ತಿಗೆದಾರ ಮತ್ತು ಅಧಿಕಾರಿಗಳಿಗೆ ನೀಡುತ್ತಾರೆ ಇದು ಈ ಕ್ಷೇತ್ರದ ದುರಂತ ಎಂದು ಬೇಸರ ವ್ಯಕ್ತಪಡಿಸಿದರು.
ಹುಣಸೂರು ಶಾಸಕ ಜಿ ಡಿ ಹರೀಶ್ ಗೌಡ ಮಾತನಾಡಿ ದೇಶದಲ್ಲಿ 25 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿ ರೈತರ ಬಡವರ ಪರ ಅಧಿಕಾರ ನಡೆಸಿದ ಏಕೈಕ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಎಂಬ ಹೆಸರನ್ನು ಪಡೆದಿರುವ ನಮ್ಮ ನಾಯಕರಾದ ಕುಮಾರಸ್ವಾಮಿಯವರ ನೇತೃತ್ವದಲ್ಲಿ 2028ರ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಎಂಟಕ್ಕೆ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರು ಗೆಲ್ಲುವುದು ಸತಸಿದ್ಧ ಹಾಗೆಯೇ ಮೈಸೂರು ಜಿಲ್ಲೆಯ ಸಾರಾ ಮಹೇಶ್ ಅಣ್ಣನವರ ನೇತೃತ್ವದಲ್ಲಿ ಜಿಲ್ಲೆಯಲ್ಲಿಯೂ ಕೂಡ ಅತಿ ಹೆಚ್ಚು ಶಾಸಕರನ್ನು ಗೆಲ್ಲಿಸುವ ಮೂಲಕ ಜೆಡಿಎಸ್ ಪಕ್ಷದ ಶಕ್ತಿ ಏನು ಎಂಬುದನ್ನು ತೋರಿಸಲು ಈಗಿನಿಂದಲೇ ಸನ್ನದರಾಗಿ ಎಂದು ಕರೆ ನೀಡಿದರು.

ಈಗಾಗಲೇ ನಿಖಿಲ್ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ 54 ವಿಧಾನಸಭಾ ಕ್ಷೇತ್ರದ ಪ್ರವಾಸ ಮುಗಿಸಿ ಇಂದು ಕೆ ಆರ್ ನಗರದಲ್ಲಿ ಕಾರ್ಯಕ್ರಮ ಮಾಡುವ ಮೂಲಕ ಇಲ್ಲಿ ನಡೆದಿರುವ ಜನಸಾಗರ ನೋಡಿದರೆ ಇಂಥ ಕ್ಷೇತ್ರವನ್ನು ಕಳೆದುಕೊಂಡವೇ ಎಂಬ ನೋವು ಕಾಡುತ್ತಿದೆ ಸಾವಿರಾರು ಕೋಟಿ ಅನುದಾನವನ್ನು ತಂದು ಅಭಿವೃದ್ಧಿ ಮಾಡಿದ ನಾಯಕನನ್ನು ಕಳೆದುಕೊಂಡ ನೋವನ್ನು ಮರೆಯಬೇಕಾದರೆ ಮುಂದಿನ ದಿನಗಳಲ್ಲಿ ಅತ್ಯಂತ ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸುವಂತೆ ಮನವಿ ಮಾಡಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ವಿಧಾನ ಪರಿಷತ್ ಸದಸ್ಯರಾದ ಮಂಜೇಗೌಡ ಜೆಡಿಎಸ್ ಅಧ್ಯಕ್ಷ ಮಾಜಿ ಶಾಸಕ ಅಶ್ವಿನ್ ಕುಮಾರ್ ಮಾಜಿ ಶಾಸಕರಾದ ಮಹಾದೇವ್ ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷ ಎಎಸ್ ಚನ್ನಬಸಪ್ಪ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ದ್ವಾರಕಿ. ಅಚ್ಚುತಾನಂದ ಅಮಿತ್ ವಿ ದೇವರಟ್ಟಿ ಎಂಟಿ ಕುಮಾರ್ ಜೆಡಿಎಸ್ ಅಧ್ಯಕ್ಷರಾದ ಮೆಡಿಕಲ್ ರಾಜಣ್ಣ ಹಂಪಾಪುರ ಕುಮಾರ್ ನಗರ ಜೆಡಿಎಸ್ ಅಧ್ಯಕ್ಷ ಸಂತೋಷ್ ಗೌಡ ಜೆಡಿಎಸ್ ವಕ್ತಾರ ಕೆಎಲ್ ರಮೇಶ್ ಯುವ ಜೆಡಿಎಸ್ ಅಧ್ಯಕ್ಷ ಕರ್ತಳ ಮಧು ವಕೀಲ ಅಂಕನಹಳ್ಳಿ ತಿಮ್ಮಪ್ಪ ಪುರಸಭಾ ಮಾಜಿ ಸದಸ್ಯರಾದ ಕೆಎಲ್ ಜಗದೀಶ್ ಉಮೇಶ್ ಕುಚಲ ಹಂಪಾಪುರ ಸುರೇಶ್ ಯೋಗೇಶ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.



