HOMENews

ಬನ್ನೂರಿನಲ್ಲಿ ಭಾರತ–ಅಮೆರಿಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ ವಿರೋಧ: ಕಬ್ಬು ಬೆಳೆಗಾರರಿಂದ  ಶಾಂತಿಯುತ ಪ್ರತಿಭಟನೆ

ಬನ್ನೂರು: ಇಂದು ಬನ್ನೂರಿನ ಸಂತೇಮಾಳದಲ್ಲಿ ಕೇಂದ್ರ ಸರ್ಕಾರ ಕೈಗೊಂಡಿರುವ ಭಾರತ–ಅಮೆರಿಕ ಮುಕ್ತ ವ್ಯಾಪಾರ ಒಪ್ಪಂದದ ವಿರುದ್ಧವಾಗಿ ರೈತರಿಂದ ಆಕ್ರೋಶ ಮತ್ತೊಮ್ಮೆ ಭುಗಿಲೆದ್ದಿದ್ದು, ಬನ್ನೂರಿನಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಬನ್ನೂರು ಗ್ರಾಮಾಂತರ ಘಟಕದ ವತಿಯಿಂದ ಶಾಂತಿಯುತ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರ ಮಾಡಿಕೋಂಡಿರುವ ಒಪ್ಪಂದದ ಕರಾರು ಪ್ರತಿಯನ್ನು  ಸುಡುವ ಮೂಲಕ ತೀವ್ರ ವಿರೋಧ ವ್ಯಕ್ತಪಡಿಸಲಾಯಿತು.

ಬನ್ನೂರು ಪಟ್ಟಣದ ಸಂತೆಮಾಳದ ಬಸವೇಶ್ವರ ವೃತ್ತದಲ್ಲಿರೈತರಿಂದ  ಸಂಘಟಿಸಲಾದ  ಈ ಪ್ರತಿಭಟನೆಯಲ್ಲಿ ರೈತ ಸಂಘದ ಪದಾಧಿಕಾರಿಗಳು ಹಾಗೂ ಬನ್ನೂರಿನ ಸ್ಥಳೀಯ ರೈತರು ಭಾಗವಹಿಸಿ ಕೇಂದ್ರ ಸರ್ಕಾರದ ರೈತರ ತೊಂದರೆ ಕೊಡುವ ನೀತಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಅಸಮಾಧಾನ ಹೊರಹಾಕಿದರು. ಭಾರತದ ರೈತರ ಹಿತಾಸಕ್ತಿಗಳನ್ನು ಕಡೆಗಣಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೈಗೊಳ್ಳಲಾಗುತ್ತಿರುವ ವ್ಯಾಪಾರ ವಹಿವಾಟು ಒಪ್ಪಂದಗಳು ಭಾರತಿಯರ ದೇಶೀಯ ಕೃಷಿ ವ್ಯವಸ್ಥೆಗೆ ಮಾರಕಾರಕವಾಗಬಹುದು ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದರು.

ಇದನ್ನೂ ಓದಿ :-  ಡಿವೈಡರ್ ಹಾರಿ KSRTC ಬಸ್ಸಿಗೆ ನೆಲಮಂಗಲ ಬಳಿ ಗುದ್ದಿದ ಕಾರು: ಐದು ಜನರ ಸಾ*

ರೈತರ ಪ್ರತಿಭಟನೆ ವೇಳೆ ಮಾತನಾಡಿದ ರೈತ ಸಂಘದ ಮುಖಂಡರು, ಭಾರತ–ಅಮೆರಿಕ ಮುಕ್ತ ವ್ಯಾಪಾರ ಒಪ್ಪಂದದಿಂದ ದೇಶದಲ್ಲಿನ  ಸಕ್ಕರೆ ಹಾಗೂ ಕಬ್ಬು ಬೆಳೆಗಾರರಿಗೆ ಅತಿ ಹೆಚ್ಚು ಅನ್ಯಾಯವಾಗುವ ಸಾಧ್ಯತೆಗಳು  ಇದೆ ಎಂದು ಆರೋಪಿಸಿದರು. ನಮ್ಮ ದೇಶದಲ್ಲಿ ವಿದೇಶಿ ಉತ್ಪನ್ನಗಳಿಗೆ ಹೆಚ್ಚಿನ ಅವಕಾಶ ನೀಡುವುದರಿಂದ ಸ್ಥಳೀಯ ರೈತರ ಉತ್ಪಾದನೆಗೆ ಕಡಿವಾದ ಬೀಳಬಹುದು, ಇದರ ಪರಿಣಾಮ ರೈತರ ಮೂಲ ಆದಾಯದ ಮೇಲೆ ಬೀಳಬಹುದು ಎಂದು ಅವರು ಅಭಿಪ್ರಾಯಪಟ್ಟರು. ನಮ್ಮ ದೇಶದ ರೈತರೊಂದಿಗೆ ಸಮಾಲೋಚನೆ ಮಾಡದೆ ಕೇಂದ್ರ ಸರ್ಕಾರವು ಈ ರೀತಿಯನಿರ್ಧಾರಗಳನ್ನು ತೆಗೆದುಕೋಳ್ಳಬಾರದು ಎಂದು ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರಾದ ಆತ್ತಹಳ್ಳಿ ಅರುಣ್ ಕುಮಾರ್, ಹೆಗ್ಗೂರು ರಂಗರಾಜು, ಬನ್ನೂರು ಸೂರಿ, ಚೇತನ್, ರಾಮ, ನಟರಾಜ್ ಕೃಷ, ಬನ್ನೂರು ರವಿ, ವೈ ನಟೇಶ್ ಸೇರಿದಂತೆ ಹಲವು ರೈತ ಮುಖಂಡರು ಹಾಗೂ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಳಿಕ ಕೇಂದ್ರ ಸರ್ಕಾರ ಒಪ್ಪಂದದ ಪ್ರತಿಯನ್ನು ಸಂಕೇತಾತ್ಮಕವಾಗಿ ಸುಡುವ ಮೂಲಕ ತಮ್ಮ ವಿರೋಧವನ್ನು ವ್ಯಕ್ತಪಡಿಸಿದರು .

ರೈತ ಸಂಘದ ಪ್ರತಿಭಟನಾಕಾರರು ಸರ್ಕಾರಕ್ಕೆ ಮನವಿ ಸಲ್ಲಿಸಿ, ದೇಶದ ರೈತರ ಹಿತಾಸಕ್ತಿಗಳನ್ನು ಪರಿಗಣಿಸಿ ಒಪ್ಪಂದದ ಪರಿಣಾಮಗಳನ್ನು ಕೇಂದ್ರ ಸರ್ಕಾರ ಮರುಪರಿಶೀಲಿಸಬೇಕು ಎಂದು ಒತ್ತಾಯಿಸಿದರು. ರೈತರು ಈಗಾಗಲೇ ಉತ್ಪಾದನಾ ವೆಚ್ಚ ಹೆಚ್ಚಳ, ಬೆಲೆ ಅಸ್ಥಿರತೆ ಹಾಗೂ ಮಾರುಕಟ್ಟೆ ಸವಾಲುಗಳಿಂದ ಸಂಕಷ್ಟ ಅನುಭವಿಸುತ್ತಿದ್ದು, ಇಂತಹ ಒಪ್ಪಂದಗಳು ಪರಿಸ್ಥಿತಿಯನ್ನು ಮತ್ತಷ್ಟು ಘಾಸಿಗೊಳಿಸಬಹುದು  ಎಂದು ಅವರು ಸರ್ಕಾರಕ್ಕೆ ಎಚ್ಚರಿಸಿದರು.

ಪ್ರತಿಭಟನೆ ನಡೆದ ಸ್ಥಳದಲ್ಲಿ ಶಾಂತಿಯುತವಾಗಿ ನಡೆದ ಪ್ರತಿಭಟನೆ ವೇಳೆ ಯಾವುದೇ ಅಹಿತಕರ ಘಟನೆಗಳು ಸಂಭವಿಸಲಿಲ್ಲ. ಬನ್ನೂರು ಪಟ್ಟಣ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಬಂದೋಬಸ್ತ್ ಏರ್ಪಡಿಸಿದ್ದರು. ಪ್ರತಿಭಟನೆಗೆ ಭಾಗವಹಿಸಿದ್ದ ರೈತರು ತಮ್ಮ ಬೇಡಿಕೆಗಳನ್ನು ಸರ್ಕಾರ ಗಮನ ಕೋಡದಿದ್ದರೆ ಮುಂಬರುವ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.

ಇದನ್ನೂ ಓದಿ :-  ಮಗುವಿನ ಕುತ್ತಿಗೆಯಿಂದ ಸರ ಕಿತ್ತು ನುಂಗಿದ ಆರೋಪಿ ಆಸ್ಪತ್ರೆಯಲ್ಲಿ ನಿಗಾ

ಬನ್ನೂರಿನಲ್ಲಿ ನಡೆದ ಈ ಪ್ರತಿಭಟನೆ ರೈತ ಸಮುದಾಯದ ಆತಂಕ ಮತ್ತು ಅಸಮಾಧಾನವನ್ನು ಪ್ರತಿಬಿಂಬಿಸಿದ್ದು, ಭಾರತದ ರೈತರ ಕೃಷಿ ನೀತಿಗಳ ಕುರಿತು ಸರ್ಕಾರ ಮತ್ತು ರೈತರ ನಡುವೆ ಹೆಚ್ಚಿನ ಸಂವಾದ ಅಗತ್ಯವಿದೆ ಎಂಬ ಸಂದೇಶವನ್ನು ಹೊತ್ತೊಯ್ದಂತಾಗಿದೆ. ರೈತರ ಬದುಕು ಹಾಗೂ ಕೃಷಿ ಕ್ಷೇತ್ರದ ಸ್ಥಿರತೆ ಕಾಪಾಡಲು ಸರಕಾರ ಸಮಗ್ರ ಚರ್ಚೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಅಭಿಪ್ರಾಯ ಪ್ರತಿಭಟನಾಕಾರರಿಂದ ವ್ಯಕ್ತವಾಯಿತು.

Leave a Response