
ಮೇಷ: ಸರ್ಕಾರಿ ಕಾರ್ಯದಲ್ಲಿ ಯಶಸ್ಸು ದೊರೆಯುವುದು. ಎದುರಾಳಿಗಳ ಕುತಂತ್ರ ಬಯಲಾಗಲಿದೆ. ತೈಲ ವ್ಯಾಪಾರದಲ್ಲಿ ಅಭಿವೃದ್ಧಿ. ಶುಭಸಂಖ್ಯೆ: 5
ವೃಷಭ: ಆತ್ಮೀಯರ ಆಗಮನದಿಂದ ಮನಸ್ಸಿಗೆ ನೆಮ್ಮದಿ. ತಾಯಿಯ ಆರೋಗ್ಯದಲ್ಲಿ ಸುಧಾರಣೆ. ಪಶು ಪಕ್ಷಿಗಳಿಗೆ ಆಹಾರ, ನೀರು ನೀಡಿ. ಶುಭಸಂಖ್ಯೆ: 9
ಮಿಥುನ: ಅತಿಆತ್ಮವಿಶ್ವಾಸದಿಂದ ಮೈಮರೆವಿನ ಸಾಧ್ಯತೆ. ಉದ್ಯೋಗದಲ್ಲಿ ಬೆಳವಣಿಗೆ. ಪ್ರೀತಿಸುವವರಿಂದ ಸಾಂತ್ವನದ ಮಾತು ಕೇಳಲಿದ್ದೀರಿ. ಶುಭಸಂಖ್ಯೆ: 4
ಕಟಕ: ಖಾಸಗಿ ನೌಕರರಿಗೆ ಮೇಲಧಿಕಾರಿಗಳಿಂದ ಪ್ರಶಂಸೆ. ಬೆನ್ನುನೋವು ನಿವಾರಣೆ. ಕಾರ್ಯಗಳಲ್ಲಿ ಯಶಸ್ಸು. ಧನಾಗಮನದ ಸಾಧ್ಯತೆ. ಶುಭಸಂಖ್ಯೆ: 3
ಸಿಂಹ: ಸಾಮಾಜಿಕ ಗೌರವಾದರ ಪಡೆಯುವಿರಿ. ಸತ್ಪುರುಷರ ದರ್ಶನ ಮಾಡುವಿರಿ. ಚಿನ್ನಾಭರಣ ಖರೀದಿ. ದಾಂಪತ್ಯದಲ್ಲಿ ಸರಸ. ಶುಭಸಂಖ್ಯೆ: 3
ಕನ್ಯಾ: ಸಹಕಾರಿ ಸಂಸ್ಥೆಯಲ್ಲಿ ಉದ್ಯೋಗ ಪ್ರಾಪ್ತಿ. ವಸ್ತ್ರವಿನ್ಯಾಸಕಾರರಿಗೆ ಆರ್ಥಿಕ ಲಾಭ. ಆತ್ಮೀಯರಲ್ಲಿ ಸಂತೋಷ ಹಂಚಿಕೊಳ್ಳಲಿದ್ದೀರಿ. ಶುಭಸಂಖ್ಯೆ: 7
ತುಲಾ: ರೈಲ್ವೆ ಇಲಾಖೆಯ ಉದ್ಯೋಗಿಗಳಿಗೆ ವರ್ಗಾವಣೆ. ಹೊಸವ್ಯವಹಾರದಲ್ಲಿ ಪ್ರಗತಿ. ಹಿರಿಯರಿಗೆ ತೀರ್ಥಕ್ಷೇತ್ರ ದರ್ಶನ ಸಾಧ್ಯತೆ. ಶುಭಸಂಖ್ಯೆ:1
ವೃಶ್ಚಿಕ: ದೂರಪ್ರಯಾಣ ಸಾಧ್ಯತೆ. ಆರೋಗ್ಯದಲ್ಲಿ ಚೇತರಿಕೆ. ವಿವಾಹಾಪೇಕ್ಷಿಗಳಿಗೆ ಕಂಕಣ ಭಾಗ್ಯ. ಉದ್ಯೋಗ ಬದಲಾವಣೆಯಲ್ಲಿ ಆಸಕ್ತಿ. ಶುಭಸಂಖ್ಯೆ: 7
ಧನಸ್ಸು: ಸಹೋದ್ಯೋಗಿಗಳಿಂದ ಮಾರ್ಗದರ್ಶನ. ನಿಮ್ಮ ಪರವಾಗಿ ಇರಲಿದೆ.ರಕ್ಷಣಾ ಕ್ಷೇತ್ರದಲ್ಲಿ ದುಡಿಯುವವರಿಗೆ ಕಠಿಣ ಸವಾಲು. ಶುಭಸಂಖ್ಯೆ:6
ಮಕರ: ಆರ್ಥಿಕ ಸ್ಥಿತಿ ಸುಧಾರಣೆ. ಉದ್ಯೋಗ ಸ್ಥಳದಲ್ಲಿ ದುಡುಕುತನ ಒಳ್ಳೆಯದಲ್ಲ. ಯೋಚಿಸಿಯೇ ನಿರ್ಧಾರ ಕೈಗೊಳ್ಳುವುದು ಉತ್ತಮ. ಶುಭಸಂಖ್ಯೆ:3
ಕುಂಭ: ಅನಿರೀಕ್ಷಿತ ಬೆಳವಣಿಗೆಯಿಂದ ಸಂತೋಷ. ವಿರೋಧಿಗಳಿಂಲೂ ಸೈ ಎನ್ನಿಸಿಕೊಳ್ಳುವಂತಹ ಕಾರ್ಯಸಾಧನೆ. ವೀಸಾ ಸಿಗಲಿದೆ. ಶುಭಸಂಖ್ಯೆ: 2
ಮೀನ: ಸ್ತ್ರೀಯರಿಗೆ ಅನುಕೂಲಕರ ಪರಿಸ್ಥಿತಿ ನಿರ್ವಣವಾಗಲಿದೆ. ಚಿನ್ನಾಭರಣ ಖರೀದಿ ಸಾಧ್ಯತೆ. ಮನೋವ್ಯಾಧಿಗಳು ದೂರವಾಗಲಿದೆ. ಶುಭಸಂಖ್ಯೆ: 7





