HOMEAstrology

19-02-2026 ರ ದಿನ ಭವಿಷ್ಯ

ಮೇಷ: ಆಹಾರ ಸೇವನೆಯಲ್ಲಿ ಎಚ್ಚರಿಕೆ ವಹಿಸಿ. ಭೋಗ ವಸ್ತುಗಳ ಖರೀದಿಯಲ್ಲಿ ಲಾಭ. ಸ್ನೇಹಿತರಿಂದ ಸಂದಭೋಚಿತ ಸಲಹೆ ಸಿಗಲಿದೆ. ಶುಭಸಂಖ್ಯೆ:8

ವೃಷಭ: ಹಿರಿಯರ ಆರೋಗ್ಯದಲ್ಲಿ ಚೇತರಿಕೆ ಕಾಣಿಸುವುದು. ಧಾರ್ವಿುಕ ಕಾರ್ಯಗಳತ್ತ ಒಲವು. ಕೇಂದ್ರ ಸರ್ಕಾರಿ ಕೆಲಸದಲ್ಲಿ ಉತ್ಸಾಹ. ಶುಭಸಂಖ್ಯೆ:5

ಮಿಥುನ: ವೈಯಕ್ತಿಕ ಶ್ರಮದಿಂದ ಯಶಸ್ಸು. ಅನವಶ್ಯಕ ಖರ್ಚು ಉಂಟಾದೀತು. ಇತರರ ಮಾತಿಗೆ ಮರುಳಾಗದಿರಿ. ಆತ್ಮೀಯರ ಅಗಲಿಕೆ. ಶುಭಸಂಖ್ಯೆ:3

ಕಟಕ: ಗೃಹ ಕೈಗಾರಿಕೆಗಳ ಮಾಲೀಕರಿಗೆ ಅನುಕೂಲ. ಮಕ್ಕಳಿಂದ ನೋವು ಉಂಟಾದೀತು. ದೃಢ ನಿರ್ಧಾರದ ಗೊಂದಲ ನಿವಾರಣೆ. ಶುಭಸಂಖ್ಯೆ: 7

ಸಿಂಹ: ಕಚೇರಿಯಲ್ಲಿ ತಾಳ್ಮೆಯಿಂದ ಇರಿ. ಉನ್ನತ ವ್ಯಾಸಂಗದವರಿಗೆ ವಿದೇಶ ಪ್ರಯಾಣ ಸಾಧ್ಯತೆ. ಔಷಧ ವ್ಯಾಪಾರದಲ್ಲಿ ಧನ ಲಾಭ. ಶುಭಸಂಖ್ಯೆ:3

ಕನ್ಯಾ: ಕೃಷಿ ಚಟುವಟಿಕೆಯಲ್ಲಿ ಯಶಸ್ಸು ದೊರೆಯಲಿದೆ. ಕಬ್ಬಿಣ, ಸಿಮೆಂಟ್ ದಾಸ್ತಾನುದಾರರಿಗೆ ಆದಾಯ. ಸೀರೆ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ:4

ತುಲಾ: ಮೆಕ್ಯಾನಿಕ್ ಕೆಲಸದವರಿಗೆ ಹೆಚ್ಚು ಬೇಡಿಕೆ. ವಕೀಲರಿಗೆ ಸಮಾಜದಲ್ಲಿ ಗೌರವ, ಮನ್ನಣೆ. ಧಾರ್ವಿುಕ ಕ್ಷೇತ್ರಗಳಿಗೆ ಭೇಟಿ ಕೊಡುವಿರಿ.ಶುಭಸಂಖ್ಯೆ:8

ವೃಶ್ಚಿಕ: ಕುಟುಂಬದಲ್ಲಿ ಇದ್ದ ಆಸ್ತಿವಿವಾದ ಬಗೆಹರಿಯಲಿದೆ. ದುಬಾರಿವಸ್ತು ಖರೀದಿಗೆ ನಿರ್ಧಾರ. ವಸ್ತ್ರ ವ್ಯಾಪಾರಿಗಳಿಗೆ ಅನಿರೀಕ್ಷಿತ ಲಾಭ. ಶುಭಸಂಖ್ಯೆ:9

ಧನಸ್ಸು: ವೈದ್ಯಕೀಯ ಉದ್ಯೋಗಿಗಳಿಗೆ ವರ್ಗ. ರಿಯಲ್ ಎಸ್ಟೇಟ್ನಲ್ಲಿ ದ್ವಿಗುಣ ಗಳಿಕೆ. ರಾಜಕಾರಣಿಗಳಿಗೆ ಹುದ್ದೆ ಪ್ರಾಪ್ತಿಯಲ್ಲಿ ಮುನ್ನಡೆ.ಶುಭಸಂಖ್ಯೆ:6

ಮಕರ: ವಿದೇಶ ವ್ಯವಹಾರಗಳಿಂದ ಪ್ರಭಾವಿಗಳ ಸಂಪರ್ಕ ಉಂಟಾಗಲಿದೆ. ಅಧಿಕ ಕೆಲಸದಿಂದ ವಿಶ್ರಾಂತಿ ಪಡೆಯಲು ಸೂಕ್ತ ಸಮಯ.ಶುಭಸಂಖ್ಯೆ:3

ಕುಂಭ: ದ್ವಿಚಕ್ರ ವಾಹನ ಮಾರಾಟಗಾರರಿಗೆ ಅನಿರೀಕ್ಷಿತ ಲಾಭ. ಯತ್ನ ಕಾರ್ಯದಲ್ಲಿ ವಿಳಂಬವಾಗುವುದು. ಕ್ರೀಡಾಪಟುಗಳಿಗೆ ಶುಭದಿನ. ಶುಭಸಂಖ್ಯೆ:4

ಮೀನ: ತೈಲ ವ್ಯಾಪಾರದಲ್ಲಿ ತೃಪ್ತಿದಾಯಕ ದಿನ. ಶುಭಕಾರ್ಯ ನಿರ್ವಹಣೆಯಲ್ಲಿ ಯಶಸ್ವಿ. ದಾಂಪತ್ಯ ಜೀವನದಲ್ಲಿ ಶುಭದಾಯಕ ದಿನ. ಶುಭಸಂಖ್ಯೆ: 6

Leave a Response