HOMENews

ರಾಮ ಸೀತೆ ವೇಷಧರಿಸಿ ರಾಮನವಮಿ ಕಳೆ ಹೆಚ್ಚಿಸಿದ ಮುದ್ದು ಮಕ್ಕಳು : ಸತ್ಯ ತಾಳ್ಮೆ ಧರ್ಮದ ಪ್ರತೀಕ ಶ್ರೀರಾಮ ಟಿ  ಎಸ್ ಶ್ರೀವತ್ಸ

ಮೈಸೂರು:- ನಗರದ  ಶ್ರೀ ರಾಮನು ಸತ್ಯಾ ತಾಳ್ಮೆ ಮತ್ತು ಧರ್ಮದ ಪ್ರತೀಕವಾಗಿದ್ದು ಆತನ ಜೀವನದ ಆದರ್ಶಗಳನ್ನು ಪಾಲಿಸುವುದು ರಾಮನವಮಿಯ ಮುಖ್ಯ ಉದ್ದೇಶವಾಗಿದೆ ಎಂದು ಶಾಸಕ ಟಿ ಎಸ್ ಶ್ರೀವತ್ಸ ಹೇಳಿದರು

ನಗರದ ಕೃಷ್ಣಮೂರ್ತಿಪುರಂನಲ್ಲಿರುವ ಶ್ರೀರಾಮ ಮಂದಿರದಲ್ಲಿ ಕಲಾಉತ್ಸವ ಟ್ರಸ್ಟ್ ಮೈಸೂರು ಹಾಗೂ ಶ್ರೀ ಮಹಾಜನ ಸಭಾ ಟ್ರಸ್ಟ್ ಶ್ರೀರಾಮ ಮಂದಿರ ವತಿಯಿಂದ ಶ್ರೀ ರಾಮನವಮಿ ಅಂಗವಾಗಿ ಆಯೋಜಿಸಿದ ಮಕ್ಕಳಿಗಾಗಿ ಶ್ರೀರಾಮ ಹಾಗೂ ಸೀತೆ ವೇಷಭೂಷಣ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಅವರು

ಪ್ರಸ್ತುತ ಸಮಾಜದಲ್ಲಿ ಶಾಂತಿ ಒಗ್ಗಟ್ಟು ಉಳಿಯಲು ರಾಮರಾಜ್ಯದ ಕಲ್ಪನೆ ಅಗತ್ಯವಿದೆ ರಾಮನವಮಿ ದಿನ ಮಾತ್ರವಲ್ಲದೆ ನಿತ್ಯ ರಾಮನ ಜಪಿಸುವುದರಿಂದ ಬದುಕು ಹಸನಾಗಲಿದೆ, ಇದು ರಾಮನ ಜನ್ಮದಿನ ಮಾತ್ರವಾಗಿರದೆ ವ್ಯಕ್ತಿಯ ಜೀವನಕ್ಕೆ ಅಗತ್ಯವಿರುವ ಸತ್ಯ ಧರ್ಮದ ದಾರಿದೀಪವಾಗಿದೆ ಎಂದರು, ರಾಮನು ಮರ್ಯಾದೆ ಪುರುಷೋತ್ತಮ ಎಂಬ ಪದವಿಯನ್ನು ಪಡೆದಿದ್ದು ಅವನ ಜೀವನದ ಪ್ರತಿಯೊಂದು ಕ್ಷಣವು ನಿಯಮ ಶಿಸ್ತು ಮತ್ತು ಧರ್ಮದ ಅನುಸರಣೆ ಎಂಬ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ ಅವನು ರಾಜಕುಮಾರನಾಗಿದ್ದರೂ ತಂದೆಯ ಮಾತಿಗೆ ಗೌರವ ನೀಡಿ ಅರಣ್ಯ ವಾಸವನ್ನು ಸ್ವೀಕರಿಸಿದಿದ್ದು ಪತ್ನಿ ಸೀತೆಯನ್ನು ರಕ್ಷಿಸಲು ಅನೇಕ ಕಷ್ಟಗಳನ್ನು ಎದುರಿಸುತ್ತಿದ್ದು ಮತ್ತು ಕೊನೆಗೆ ರಾವಣನನ್ನು ಸಂಹರಿಸಿ ಧರ್ಮವನ್ನು ಸ್ಥಾಪಿಸಿದ್ದು ಇವೆಲ್ಲವೂ ಅವನ ಆದರ್ಶ ವ್ಯಕ್ತಿತ್ವದ ಉದಾಹರಣೆಗಳಾಗಿವೆ ಎಂದರು

ಸ್ಪರ್ಧೆಯಲ್ಲಿ 50ಕ್ಕೂ ಹೆಚ್ಚು ಮಕ್ಕಳು ರಾಮ ಸೀತೆ ವೇಷಧರಿಸಿ ಗಮನ ಸೆಳೆದರು ಸ್ಪರ್ಧಿಸಿದ ಎಲ್ಲ ಮಕ್ಕಳಿಗೂ ಪ್ರಮಾಣ ಪತ್ರ ಹಾಗೂ ನೆನಪಿನ ಕಾಣಿಕೆ ವಿತರಿಸಿ ನಂತರ ಪ್ರಸಾದ ವಿತರಿಸಲಾಯಿತು

ಇದೇ ಸಂದರ್ಭದಲ್ಲಿ ಹಿರಿಯ ಸಮಾಜ ಸೇವಕರಾದ ರಘುರಾಮ್ ವಾಜಪಾಯಿ, ಕಾಂಗ್ರೆಸ್ ಮುಖಂಡರಾದ ಎನ್ ಎಂ ನವೀನ್ ಕುಮಾರ್, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ರಾಮ ಮಂದಿರದ ಮಾಧವ ರಾವ್, ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಕಲ ಉತ್ಸವ ಟ್ರಸ್ಟ್ ಅಧ್ಯಕ್ಷ ಅಮಿತ್, ಜಿ ರಾಘವೇಂದ್ರ, ಜಗದೀಶ್, ಎಂ ಆರ್ ಬಾಲಕೃಷ್ಣ , ಟಿ ಎಸ್ ಅರುಣ್, ಚಕ್ರಪಾಣಿ, ನಿರೂಪಕ ಪುರುಷೋತ್ತಮ್,  ವಿ ಎನ್ ಕೃಷ್ಣ, ಸುಚಿಂದ್ರ, ಎಸ್ ಎನ್ ರಾಜೇಶ್, ರಾಕೇಶ್, ದುರ್ಗಾ ಪ್ರಸಾದ್, ಶಿವು ಹಾಗೂ ಇನ್ನಿತರರು ಹಾಜರಿದ್ದರು

Leave a Reply