News

ವರದಕ್ಷಿಣೆ ಪಡೆದರೂ ತೀರದ ಹಣದ ದಾಹ ಪತಿಯ ಅತಿಯಾದ ಅನುಮಾನ, ನಿರಂತರ ಕಿ*ರು*ಕು*ಳ* ಕ್ಕೆ ಪತ್ನಿ ಆ*ತ್ಮ*ಹ*ತ್ಯೆ

ಹಾಸನದಲ್ಲಿ ಯುವತಿಯ ಸಾ*ವು, ಪತಿ ಸೇರಿ ಮೂವರ ವಿರುದ್ಧ ಪ್ರಕರಣ

ಹಾಸನ, ಫೆಬ್ರವರಿ:- ಪತಿಯ ಅತಿಯಾದ ಅನುಮಾನ, ನಿರಂತರ ಮಾನಸಿಕ ಹಾಗೂ ದೈಹಿಕ ಕಿರುಕುಳ ಮತ್ತು ವರದಕ್ಷಿಣೆಗಾಗಿ ನಡೆಸಿದ ಪೀಡನೆಗೆ ಬೇಸತ್ತು ವಿಷ ಸೇವಿಸಿ ಆ*ತ್ಮ*ಹ*ತ್ಯೆ*ಗೆ ಯತ್ನಿಸಿದ್ದ ಯುವತಿಯೋರ್ವಳು ಚಿಕಿತ್ಸೆ ಫಲಿಸದೆ ಮೃ*ತ ಪಟ್ಟಿರುವ ದುರ್ಘಟನೆ ಹಾಸನ ಜಿಲ್ಲೆಯ ಹೆಚ್. ಮೈಲಳ್ಳಿ ಗ್ರಾಮದಲ್ಲಿ ನಡೆದಿದೆ. ಮೃ*ತ* ಯುವತಿಯನ್ನು ಎಚ್. ಎಲ್. ಇಂದ್ರ (24) ಎಂದು ಗುರುತಿಸಲಾಗಿದೆ. ಮದುವೆಯಾಗಿ ನಾಲ್ಕು ವರ್ಷಗಳಷ್ಟೇ ಆಗಿದ್ದ ಈ ದಾಂಪತ್ಯ ಜೀವನವು ಕೊನೆಯಲ್ಲಿ ದುರಂತದಲ್ಲಿ ಅಂತ್ಯಗೊಂಡಿದೆ.

ಪತಿ ಮನೆಯಲ್ಲಿ ಅತಿಯಾದ ಅನುಮಾನದಿಂದ ಬೇಸತ್ತು ವಿ*ಷ* ಸೇವಿಸಿ ಆ*ತ್ಮ*ಹ* ತ್ಯೆ ಯತ್ನ
ಮೃತ ಇಂದ್ರ ಅವರು ಹೆಚ್. ಮೈಲಳ್ಳಿ ಗ್ರಾಮದಲ್ಲಿರುವ ಪತಿ ಮನೆಯಲ್ಲಿ ಈ ದುರ್ಘಟನೆಗೆ ಯತ್ನಿಸಿದ್ದರು. ವಿಷ ಸೇವಿಸಿದ ಸ್ಥಿತಿಯಲ್ಲಿ ಪತ್ತೆಯಾದ ಅವರನ್ನು ತಕ್ಷಣ ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಶ್ರಮಪಟ್ಟರೂ ದೇಹ ಸ್ಪಂದಿಸದೆ ಚಿಕಿತ್ಸೆ ಫಲಕಾರಿಯಾಗದೆ ಇಂದ್ರ ಅವರು ಕೊನೆ*ಯುಸಿರೆಳೆದಿದ್ದಾರೆ.
ಈ ಸುದ್ದಿ ತಿಳಿದಂತೆ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಆಸ್ಪತ್ರೆ ಆವರಣದಲ್ಲಿ ಸೇರಿದ್ದು, ದುಃಖದ ವಾತಾವರಣ ನಿರ್ಮಾಣವಾಗಿದೆ. ಯುವತಿಯ ಸಾವಿನ ಹಿಂದೆ ಇರುವ ಕಾರಣಗಳು ಒಂದೊಂದಾಗಿ ಬೆಳಕಿಗೆ ಬರುತ್ತಿರುವಂತೆ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ.

ಹಾಸನ ಜಿಲ್ಲೆಯ ಹೆಚ್. ಮೈಲಳ್ಳಿ ಗ್ರಾಮದಲ್ಲಿ ನಾಲ್ಕು ವರ್ಷಗಳ ಹಿಂದಿನ ಮದುವೆ ಮಾಡಿಕೋಡಲಾಗಿತ್ತು
ಹಾಸನ ಪೊಲೀಸ್ ಮೂಲಗಳ ಪ್ರಕಾರ, ನಾಲ್ಕು ವರ್ಷಗಳ ಹಿಂದೆ ಇಂದ್ರ ಅವರ ವಿವಾಹವು ಹೆಚ್. ಮೈಲಳ್ಳಿ ಗ್ರಾಮದ ಎಂ. ಎಚ್. ಸ್ವಾಮಿ ಅವರೊಂದಿಗೆ ನಡೆದಿತ್ತು. ಮದುವೆ ಸಂದರ್ಭದಲ್ಲಿ ಇಂದ್ರ ಅವರ ಕುಟುಂಬದವರು ತಮ್ಮ ಶಕ್ತಿಗೆ ಮೀರಿ ಹಣ, ಚಿನ್ನಾಭರಣ ಹಾಗೂ ಇತರ ವರದಕ್ಷಿಣೆ ವಸ್ತುಗಳನ್ನು ನೀಡಿದ್ದಾರೆ ಎನ್ನಲಾಗಿದೆ.
ಆದರೆ ಮದುವೆಯ ನಂತರವೂ ವರದಕ್ಷಿಣೆ ವಿಚಾರ ಮುಗಿದಿಲ್ಲ. ಇನ್ನಷ್ಟು ಹಣ ತರುವಂತೆ ಪತಿ ಹಾಗೂ ಆತನ ಕುಟುಂಬದವರು ಇಂದ್ರ ಅವರನ್ನು ಪೀಡಿಸುತ್ತಿದ್ದರೆಂಬ ಆರೋಪಗಳು ಕೇಳಿಬಂದಿವೆ.

ಪತಿಯ ಅತಿಯಾದ ಅನುಮಾನ, ನಿರಂತರ ಮಾನಸಿಕ ಹಾಗೂ ದೈ*ಹಿ*ಕ ಕಿರುಕುಳ
ಇಂದ್ರ ಅವರ ತಾಯಿ ಗೌರಮ್ಮ ನೀಡಿರುವ ದೂರಿನ ಪ್ರಕಾರ, ಪತಿ ಸ್ವಾಮಿ ಅವರಿಗೆ ಪತ್ನಿಯ ಮೇಲಿನ ಅತಿಯಾದ ಅನುಮಾನ ಪ್ರಮುಖ ಕಾರಣವಾಗಿತ್ತು. ಸಣ್ಣಸಣ್ಣ ವಿಚಾರಗಳಿಗೂ ಜಗಳ, ಅವಮಾನ, ನಿಂದನೆ ನಡೆಯುತ್ತಿದ್ದು, ಇದು ದಿನೇ ದಿನೇ ಹೆಚ್ಚಾಗುತ್ತಾ ಹೋಗಿತ್ತು. ಮನೆಯೊಳಗೆ ಪತ್ನಿಗೆ ಮಾನಸಿಕ ನೆಮ್ಮದಿ ಇಲ್ಲದಂತಾಗಿತ್ತು ಎನ್ನಲಾಗಿದೆ. ಇದೇ ವೇಳೆ ಪತಿ ನಡೆಸುತ್ತಿದ್ದ ಬೇಕರಿ ವ್ಯವಹಾರದಲ್ಲಿ ನಷ್ಟ ಉಂಟಾದ ಬಳಿಕ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಹಣಕಾಸಿನ ಒತ್ತಡವನ್ನು ಪತ್ನಿಯ ಮೇಲೆಯೇ ಹೊರಿಸುವುದರ ಜೊತೆಗೆ, ಮತ್ತೆ ಮತ್ತೆ ಹಣ ತರುವಂತೆ ಒತ್ತಡ ಹೇರಲಾಗುತ್ತಿತ್ತು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಎರಡು ಊರಿನ ಗ್ರಾಮದ ಮುಖಂಡರು ಸೇರಿ ಎರಡು ಕುಟುಂಬದವರು ರಾಜಿ ಪಂಚಾಯ್ತಿಯೂ ವಿಫಲ

ಪತಿ–ಪತ್ನಿ ನಡುವೆ ಉಂಟಾಗಿದ್ದ ಗಂಭೀರ ಕಲಹದ ಹಿನ್ನೆಲೆ, ಗ್ರಾಮದ ಹಿರಿಯರ ಸಮ್ಮುಖದಲ್ಲಿ ಒಂದೆರಡು ಬಾರಿ ರಾಜಿ ಪಂಚಾಯ್ತಿ ಕೂಡ ನಡೆದಿತ್ತು. ಆ ವೇಳೆ ಸ್ವಾಮಿ ತನ್ನ ವರ್ತನೆ ಸರಿಪಡಿಸಿಕೊಳ್ಳುವುದಾಗಿ ಭರವಸೆ ನೀಡಿದ್ದನೆನ್ನಲಾಗಿದೆ. ಆದರೆ ಪಂಚಾಯ್ತಿ ಮುಗಿದ ಕೆಲವೇ ದಿನಗಳಲ್ಲಿ ಮತ್ತೆ ಕಿರುಕುಳ ಆರಂಭವಾಗಿದ್ದು, ಇಂದ್ರ ಅವರ ಜೀವನ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ.

ಮೃ*ತ ಯುವತಿ ಮನೆಯವರು ಸುಮಾರು 1.3 ಲಕ್ಷ ರೂಪಾಯಿ ಹಣ ನೀಡಿದ್ದರೂ ತಪ್ಪದ ಕಿರುಕುಳ

ಕುಟುಂಬಸ್ಥರು ನೀಡಿರುವ ದೂರು ವಿವರಗಳ ಪ್ರಕಾರ, ವರದಕ್ಷಿಣೆ ರೂಪದಲ್ಲಿ ಮೃತ ಯುವತಿಯ ಪತಿ ಸ್ವಾಮಿ ಅವರು 1.3 ಲಕ್ಷ ರೂಪಾಯಿ ಹಣವನ್ನು ಬೇಡಿಕೆ ಇಟ್ಟಿದ್ದರು. ಪತಿಯ ಒತ್ತಡಕ್ಕೆ ಮಣಿದ ಇಂದ್ರ, ತನ್ನ ತಾಯಿ ಗೌರಮ್ಮ ಅವರ ಬಳಿ ಹಣ ಕೇಳಿಕೊಂಡಿದ್ದಾಳೆ. ಮಗಳ ಬದುಕು ಸರಿಯಾಗಲಿ ಎಂಬ ನಿಟ್ಟಿನಲ್ಲಿ ಗೌರಮ್ಮ ಅವರು ಬಡ್ಡಿ ಸಾಲ ಮಾಡಿ ಆ ಹಣವನ್ನು ಒದಗಿಸಿ ಪತಿಗೆ ನೀಡಿದ್ದಾರೆ ಎನ್ನಲಾಗಿದೆ.

ಎಷ್ಟೇ ಹಣ ನೀಡಿದರೂ ಕಿರುಕುಳ ಕಡಿಮೆಯಾಗದೆ, ಇವರ ವರ್ತನೆ ಇನ್ನಷ್ಟು ತೀವ್ರಗೊಂಡಿದೆ ಎಂದು ಮೃ*ತ ಯುವತಿಯ ಕುಟುಂಬಸ್ಥರು ಆರೋಪಿಸಿದ್ದಾರೆ. ಎಷ್ಟೇ ಹಣದ ಕೊಟ್ಟರು ತೀರದ ಧನ ದಾಹವಾಗಿ ಮಾರ್ಪಟ್ಟಿತ್ತು ಎನ್ನುವುದು ಅವರ ನೋವಿನ ಮಾತು.

ಯುವತಿ ಆ*ಹ* ಗೂ ಮುನ್ನ ತಾಯಿಗೆ ಕರೆ ಮಾಡಿರುವುದಾಗಿ ಹೇಳಿದ್ದಾರೆ
ಘಟನೆಗೆ ಕೆಲವೇ ಗಂಟೆಗಳ ಮೊದಲು ಇಂದ್ರ ಅವರು ತಮ್ಮ ತಾಯಿ ಗೌರಮ್ಮ ಅವರಿಗೆ ದೂರವಾಣಿ ಕರೆ ಮಾಡಿದ್ದರು. “ಇನ್ನು ಈ ಕಿರುಕುಳ ಸಹಿಸಲು ಆಗುತ್ತಿಲ್ಲ, ದಯವಿಟ್ಟು ಬಂದು ಕರೆದುಕೊಂಡು ಹೋಗಿ” ಎಂದು ಅಳಲು ತೋಡಿಕೊಂಡಿದ್ದಾಳೆ ಎಂದು ತಾಯಿ ತಿಳಿಸಿದ್ದಾರೆ.

ಆದರೆ ಅದು ರಾತ್ರಿ ಸಮಯವಾಗಿದ್ದರಿಂದ ತಕ್ಷಣ ಗ್ರಾಮಕ್ಕೆ ತೆರಳಲು ಸಾಧ್ಯವಾಗಿರಲಿಲ್ಲ. ಬೆಳಿಗ್ಗೆ ಹೋಗೋಣ ಎಂದು ತಾಯಿ ನಿರ್ಧರಿಸಿದ್ದಾಗಲೇ, ಮಗಳು ವಿಷ ಸೇವಿಸಿ ಆ*ತ್ಮ*ಹ*ತ್ಯೆ*ಗೆ ಯತ್ನಿಸಿರುವ ಸುದ್ದಿ ಬಂದಿದ್ದು, ಪೋಷಕರ ಪಾಲಿಗೆ ಅದು ಆಘಾತದ ಕ್ಷಣವಾಗಿತ್ತು.

ಪತಿ, ಅತ್ತೆ, ಅತ್ತಿಗೆ ವಿರುದ್ಧ ದೂರು

ಈ ಘಟನೆ ಬೆನ್ನಲ್ಲೇ ಮೃತ ಇಂದ್ರ ಅವರ ತಾಯಿ ಗೌರಮ್ಮ ಅವರು ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಆಧಾರದಲ್ಲಿ ಪತಿ ಎಂ. ಎಚ್. ಸ್ವಾಮಿ, ಅತ್ತೆ ಶಂಕ್ರಮ್ಮ, ಅತ್ತಿಗೆ ಪುಟ್ಟಿ ವಿರುದ್ಧ ವರದಕ್ಷಿಣೆ ಕಿರುಕುಳ ಹಾಗೂ ಆ*ತ್ಮ*ಹ*ತ್ಯೆ* ಗೆ ಪ್ರಚೋದನೆ ಆರೋಪದಡಿ ಪ್ರಕರಣ ದಾಖಲಾಗಿದೆ.

ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದು, ಕುಟುಂಬಸ್ಥರು, ನೆರೆಹೊರೆಯವರ ಹೇಳಿಕೆಗಳನ್ನು ಸಂಗ್ರಹಿಸಲಾಗುತ್ತಿದೆ. ಮೃತ ಯುವತಿಯ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ವರದಿ ನಿರೀಕ್ಷಿಸಲಾಗುತ್ತಿದೆ.

ಸಮಾಜಕ್ಕೆ ಎಚ್ಚರಿಕೆಯ ಪ್ರಕರಣ

ಈ ಘಟನೆ ಮತ್ತೊಮ್ಮೆ ಸಮಾಜದಲ್ಲಿ ಇನ್ನೂ ಜೀವಂತವಾಗಿರುವ ವರದಕ್ಷಿಣೆ ಎಂಬ ಸಾಮಾಜಿಕ ಕಳಂಕವನ್ನು ಬಯಲಿಗೆ ತಂದಿದೆ. ಕಾನೂನು ಇದ್ದರೂ, ಶಿಕ್ಷಣ ಇದ್ದರೂ, ವರದಕ್ಷಿಣೆ ಮತ್ತು ಅನುಮಾನದಿಂದ ಯುವತಿಯರು ಬ*ಲಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ಪೊಲೀಸರು ತನಿಖೆ ಪೂರ್ಣಗೊಳಿಸಿದ ಬಳಿಕ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಇಂತಹ ಘಟನೆಗಳು ಮರುಕಳಿಸದಂತೆ ಸಮಾಜವೂ ಜಾಗೃತವಾಗಬೇಕಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.